ಕರ್ನಾಟಕ

ಕಲ್ಲಡ್ಕ ಶಾಲೆಯ ಸ್ವಾಭಿಮಾನಿ ಮಕ್ಕಳ ನೆರವಿಗೆ ನಿಂತ ಹೆಣ್ಣು ಮಗಳು…! ಹೇಗೆ ಎಂದು ತಿಳಿಯಲು ಈ ಲೇಖನ ಓದಿ ….

267

ಹೌದು ಸರ್ಕಾರದಿಂದ  ಕಲ್ಲಡ್ಕ ಶಾಲೆಗೆ ಸಿಗುತಿದ್ದ ಅನುದಾನ ನಿಲ್ಲಿಸಿದ್ದು ಎಲ್ಲರಿಗೂ ತಿಳಿದೇ ಇದೆ.. ಹೀಗಿರುವಾಗ ಹಲವಾರು ಮಂದಿ ಶಾಲೆಯ ನೆರವಿಗೆ ಬಂದರು..

 

ಅದೇ ರೀತಿಯಾಗಿ ಸುನಿತಾ ಮಂಜುನಾಥ್ ರವರು ಕೂಡ ತಮ್ಮ ಚನ್ನಕೇಶವ ಶಿಕ್ಷಣ ಟ್ರಸ್ಟ್ ಮೂಲಕ ಶಾಲೆಗೆ ಅಹಾರ ಧಾನ್ಯ ಪೂರೈಸುತ್ತಿದ್ದಾರೆ..

ಇದೇ ಗುರುವಾರ ಅಕ್ಟೋಬರ್ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲ್ಲೂಕಿನ , ಕಲ್ಲಡ್ಕದಲ್ಲಿ ,ಶ್ರೀ ಡಾಕ್ಟರ್ ಕಲ್ಲಡ್ಕ ಪ್ರಭಾಕರ ಭಟ್ಟರವರು ನಡೆಸುತ್ತಿರುವ “ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ” ನೂತನ ಶಿಶುಮಂದಿರವನ್ನು ಲೋಕಾರ್ಪಣೆ ಮಾಡುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಸುನಿತಾ ಮಂಜುನಾಥ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ದೇಶ ಸೇವೆಗೆ ಕಂಕಣ ಬದ್ದರಾಗಿ ನಿಲ್ಲಲು ನಾನೆಂದೂ ಸಿದ್ಧ ಎಂದು ಹೇಳಿದ್ದಾರೆ..

ಇದೇ ಸಂಧರ್ಭದಲ್ಲಿ ಶಾಲೆಗೆ ತಮ್ಮ ಚನ್ನಕೇಶವ ಶಿಕ್ಷಣ ಟ್ರಸ್ಟ್ ಕಡೆಯಿಂದ ಆಹಾರ ಧಾನ್ಯ ಒದಗಿಸಿ.. ಇದು ನನ್ನ ಅಳಿಲು ಸೇವೆ ಅಷ್ಟೇ ಎಂದು, ಶಾಲೆಯ ಅನ್ನ ಕಿತ್ತುಕೊಂಡ ಕರ್ನಾಟಕ ಸರ್ಕಾರದ ವಿರುದ್ಧ ಗುಡುಗಿದ್ದಾರೆ..

ಸ್ವಾಭಿಮಾನಿ ಮಕ್ಕಳು ತಾವೇ ಭತ್ತ ಬೆಳೆಯುತ್ತಿರುವುದ ಕಂಡು ಭಾವುಕರಾದ ಸುನಿತಾ ಮಂಜುನಾಥ್ ಮಕ್ಕಳು ದೇವರ ಸಮಾನ ಈ ದೇವರುಗಳ ಸೇವೆಗೆ ನಾನೆಂದು ಸಿದ್ಧವುರುವುದಾಗಿ ತಿಳಿಸಿ.. ಅಲ್ಲೇ ನಡೆಯುತ್ತಿದ್ದ ಗೋ ಪೂಜೆಯಲ್ಲಿ ಭಾಗವಹಿಸಿ..ನನ್ನ ಜೀವನದಲ್ಲಿ ಸಾರ್ಥಕ ಭಾವ ಮೂಡಿಸಿದ ಕಾರ್ಯಕ್ರಮಗಳಲ್ಲಿ ಇದೂ ಕೂಡ ಒಂದು ಎಂದು ಧನ್ಯವಾದವನ್ನು ತಿಳಿಸಿದ್ದಾರೆ..

 

*ಈಗಿನ ಕಾಲದಲ್ಲಿ ಹೆತ್ತವರ ಸೇವೆಯನ್ನೇ ಮಾಡದ ಎಷ್ಟೋ ಮಕ್ಕಳ ನಡುವೆ ಸಂಸಾರದ ಜೊತೆಗೆ ದೇಶ ಸೇವೆಗೆ ಸಿದ್ಧರಾಗಿ ನಿಂತಿರುವ “ಸುನಿತಾ ಮಂಜುನಾಥ್” ವಿಶೇಷವೇ ಸರಿ.. ಶುಭವಾಗಲಿ ನಿಮಗೆ.. ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ತಿಂಗಳಿಗೆ 35 ಸಾವಿರ ದುಡಿಯುತ್ತಿರುವ 3 ನೇ ತರಗತಿ ಓದಿರುವ ಹುಡುಗ, ಹೇಗೆ ಗೊತ್ತಾ.

    ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು…

  • ಸುದ್ದಿ

    ಜಾರಿಯಾಯ್ತು ಕೇಂದ್ರ ಸರ್ಕಾರದ ಹೊಸ ರೂಲ್ಸ್ ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ, ಇಲ್ಲಿದೆ ನೋಡಿ ಮಾಹಿತಿ,.!

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ,ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….ಶೇರ್ ಮಾಡಿ…

    ಮೇಷ ಹಳೆಯ ಷೇರುಗಳ ಮಾರಾಟ ಅಥವಾ ಖರೀದಿಗೂ ಮುನ್ನ ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಹಾಕಿ. ಪೂರ್ವ ಯೋಜನೆಯಿಲ್ಲದೆ ಹಣ ಹೂಡಿದಲ್ಲಿ ಅಧಿಕ ಹಾನಿಯನ್ನು ಅನುಭವಿಸುವಿರಿ. ವೃಷಭ ಕೆಲಸದ ಸ್ಥಳದಲ್ಲಿ ಉತ್ಸಾಹದಾಯಕ ಹಾಗೂ ಚೈತನ್ಯದಾಯಕ ಪ್ರಚೋದಕ ಬೆಳವಣಿಗೆಗಳು ಉಂಟಾಗುವವು. ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಮುಂದೆ ಉತ್ತಮ ದಿನಗಳಿವೆ. ಮಿಥುನ ಆರೋಗ್ಯದ ವಿಷಯದಲ್ಲಿ ಉದಾಸೀನ ಬೇಡ. ಸಣ್ಣಪುಟ್ಟ ಜ್ವರಾದಿಗಳು ಬಂದರೂ ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ….

  • ಜ್ಯೋತಿಷ್ಯ

    ರಾಘವೇಂದ್ರಸ್ವಾಮಿಯ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗ… ನಿಮ್ಮ ರಾಶಿ ಇದೆಯಾ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ಸಮಾಜದ ಎಲ್ಲಾ ಮಂದಿಯ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಪಡೆಯುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ…

  • ಸುದ್ದಿ

    ಮೋದಿ ಹುಟ್ಟುಹಬ್ಬಕ್ಕೆ ಜೆಡಿಎಸ್ ಶಾಸಕರಿಂದ ವಿಶೇಷ ಪೂಜೆ….!

    ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮೊದಲಾದವರು ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಈ ಪೂಜೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಮಾಜಿ ಸಚಿವ ಜಿ.ಟಿ. ದೇವೇಗೌಡ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಜೆಡಿಎಸ್ ನಾಯಕರನ್ನು ಟೀಕಿಸುತ್ತಲೇ ಬಿಜೆಪಿ ಹತ್ತಿರವಾಗುತ್ತಿದ್ದಾರೆ. ರಾಜಕೀಯ…