ಸೌಂದರ್ಯ

ಕಪ್ಪು ವರ್ತುಲಕ್ಕೆ ಕನ್ನಡಿಯಲ್ಲಿಲ್ಲ ಮದ್ದು..!ಇಲ್ಲಿದೆ ಮನೆ ಮದ್ದು…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

266

ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ.

ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು ಕ್ರೀಮುಗಳು ಲಭ್ಯವಿವೆ. ಆದರೆ ಇವು ತಾತ್ಕಾಲಿಕವಾಗಿ ಕಪ್ಪು ವರ್ತುಲವನ್ನು ಹೋಗಲಾಡಿಸಿಯಾವೇ ಹೊರತು ಇದಕ್ಕೊಂದು ಶಾಶ್ವತ ಪರಿಹಾರಬೇಕೆಂದರೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯ.

ಕಪ್ಪು ವರ್ತುಲಕ್ಕೆ ಇವೇ ಕಾರಣಗಳು…

ಸರಿಯಾಗಿ ನಿದ್ದೆ ಮಾಡದಿದ್ದಲ್ಲಿ ಕಣ್ಣಿನ ಮೇಲೆ ಒತ್ತಡ ಉಂಟಾಗಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ದಿನಕ್ಕೆ ಕನಿಷ್ಠ 6 ಗಂಟೆಯಾದರೂ ನಿದ್ದೆ ಮಾಡುವುದರಿಂದ ಕಪ್ಪು ವರ್ತುಲಗಳು ಬರದಂತೆ ತಡೆಯಬಹುದು.

ಕಂಪ್ಯೂಟರ್ ಮುಂದೆ ಕುಳಿತು, ಕಣ್ಣಿಗೆ ವಿಶ್ರಾಂತಿ ನೀಡದೆ ಹೆಚ್ಚು ಹೊತ್ತು  ಕೆಲಸ ಮಾಡುವುದರಿಂದ ಕೂಡ ಕಣ್ಣಿನ ಕೆಳಗಡೆ ಕರ್ಪೂ ವರ್ತುಲಗಳು ಏರ್ಪಡುತ್ತವೆ.ಕಂಪ್ಯೂಟರ್ ಮುಂದೆ ಬಹಳ ಸಮಯ ಕುಳಿತು ಕೆಲಸ ಮಾಡುವವರು ಪ್ರತಿ 2–3 ಗಂಟೆಗೊಮ್ಮೆ ಕಣ್ಣನ್ನು ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕಣ್ಣಿಗೆ ವಿಶ್ರಾಂತಿ ನೀಡಿದಂತಾಗುತ್ತದೆ. ಇದರಿಂದ ಕಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಕಪ್ಪು ವರ್ತುಲ ಬಾರದಂತೆ ತಡೆಯಬಹುದು.

ಕಪ್ಪು ವರ್ತುಲವನ್ನು ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು…

  * ಆದಷ್ಟು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ.

* ಸೌತೆಕಾಯಿ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ 25 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆಯಿರಿ.

  * ಸೊಪ್ಪಿನಿಂದ ತಯಾರಿಸಲಾದ ಪದಾರ್ಥಗಳನ್ನು ಸೇವಿಸುವುದು ಸಹ ಒಳ್ಳೆಯದು.

  * ನಿಂಬೆ ರಸವನ್ನು ಕಣ್ಣಿನ ಸುತ್ತ ಹಚ್ಚಿ 15 ನಿಮಿಷ ಬಿಟ್ಟು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ.

* ಪ್ರತಿದಿನವೂ ರಾತ್ರಿ ಮಲಗುವ ಮೊದಲು 2-4 ಬಾದಾಮಿ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಸೇವಿಸಿ. ಬಾದಾಮಿಯಲ್ಲಿ ಹೆಚ್ಚು  ಪೋಷಕಾಶವಿರುವುದರಿಂದ ಇದು ಕಪ್ಪು ವರ್ತುಲವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಚರ್ಮಕ್ಕೂ ಹೊಳಪು ನೀಡುತ್ತದೆ.

* ದೇಹದಲ್ಲಿ ಬಿಳಿ ರಕ್ತಕಣವನ್ನು ಹೆಚ್ಚಿಸುವಂಥ ಆಹಾರ ಸೇವಿಸಿ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವೂ ಕಡಿಮೆಯಿದ್ದರೆ ಕಪ್ಪುವರ್ತುಲ ಕಾಣಿಸಿಕೊಳ್ಳುತ್ತದೆ ಇದಕ್ಕಾಗಿ ಯಾವುದೇ ರೀತಿಯ ವೈದ್ಯಕೀಯ ಉಪಚಾರಗಳ ಅಗತ್ಯವಿಲ್ಲ. ಪ್ರತಿದಿನವೂ ತಿನ್ನುವ ಆಹಾರದ ಪ್ರಮಾಣವನ್ನೇ ಹೆಚ್ಚಿಸಿ.

* ನಾಲಿಗೆಗೆ ರುಚಿ ಅನ್ನಿಸುವ ಆರೋಗ್ಯಕ್ಕಿಂತ ಯಾವುದು ದೇಹಕ್ಕೆ ಹಿತವೋ ಅದನ್ನೇ ಸೇವಿಸಿ.

*  ಪಪ್ಪಾಯ ಹಣ್ಣಿನ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡರೂ ಒಳ್ಳೆಯದು.

* ನಿಮಗೆ ಚರ್ಮದ ಸಮಸ್ಯೆಯಿಂದಲೇ ಕಪ್ಪು ವರ್ತುಲ ಆರಂಭವಾಗಿದೆ ಅನ್ನಿಸಿದರೆ ಹಸಿ ಸೌತೆ ಕಾಯಿ ಅಥವಾ ಆಲೂಗಡ್ಡೆಯನ್ನು ವೃತ್ತಾಕಾರದಲ್ಲಿ ಹೆಚ್ಚಿಕೊಂಡು ಹದಿನೈದು ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ.

* ಕಪ್ಪು ವರ್ತಲ ಹೋಗಲಾಡಿಸುವುದಕ್ಕಾಗಿ ದುಬಾರಿ ಕ್ರೀಮುಗಳನ್ನು ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದೂ ಅಲ್ಲದೆ, ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಒಣಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಮುಂತಾದವುಗಳ ಸೇವನೆಯಿಂದ ದೇಹ ಶಕ್ತಿಯುತವಾಗುತ್ತದೆ. ಇವು ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಕಾರಿಯಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ತೆಲುಗಿನ ಅಕ್ಕಿನೇನಿಗೆ ಜೋಡಿಯಾಗಿ ಕಿರಿಕ್ ಬೆಡಗಿ..!ತಿಳಿಯಲು ಈ ಲೇಖನ ಓದಿ..

    ಅದೃಷ್ಟ ಅನ್ನೋದು ಯಾರಿಗೆ, ಹೇಗೆ, ಎಲ್ಲಿ ಒಲಿಯುತ್ತೆ ಅಂತ ಹೇಳೋದು ಕಷ್ಟ. ಈ ಮಾತು ಸಿನಿ ರಂಗಕ್ಕೂ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಶಸ್ಸು ಅನ್ನೋದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ. ಕಲರ್‍ಫುಲ್ ದುನಿಯಾಗೆ ಎಂಟ್ರಿಯಾಗಿ ಅದೆಷ್ಟೊ ವರ್ಷಗಳಾದ ಮೇಲೆ ಅದೃಷ್ಟ ಒಲಿದರೆ, ಇನ್ನು ಕೆಲವರಿಗೆ ರಾತ್ರೋ ರಾತ್ರಿ ಸ್ಟಾರ್ ಕಿರೀಟ ದಕ್ಕುತ್ತದೆ. ಹಾಗೇ ಬೇರೆ ಬೇರೆ ಭಾಷೆಗಳಲ್ಲಿ ಕಮಾಲ್ ಕೂಡ ಮಾಡ್ತಾರೆ.

  • ಆರೋಗ್ಯ

    ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನಾಗುತ್ತೆ?

    ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ. ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು…

  • ಸಿನಿಮಾ

    ಖ್ಯಾತಿ ತಿಥಿ ಸಿನಿಮಾದ ಗಡ್ಡಪ್ಪನಿಗೆ ಈಗ ಏನಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ‘ತಿಥಿ’ ಸ್ಟಾರ್ ಗಡ್ಡಪ್ಪ ಹಾಗೂ ಸೆಂಚುರಿಗೌಡ ಸದ್ಯ ಸ್ಯಾಂಡಲ್ ವುಡ್ ನ ‘ಟಾಕ್ ಆಫ್ ದಿ ಟೌನ್’ ಆಗಿದ್ದಾರೆ. ಬಿಗ್ ಸ್ಟಾರ್ ಗಳಂತೆ ಬ್ಯುಸಿಯಾಗಿರುವ ಇವರಿಬ್ಬರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  • ಜ್ಯೋತಿಷ್ಯ

    ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ಉತ್ತಮ…

  • ಸುದ್ದಿ

    ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಆರೋಗ್ಯ ಸ್ಥಿತಿ ಗಂಭೀರ ; ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು..!

    ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸೆ.28ಕ್ಕೆ 90ನೇ ವರ್ಷ ವಸಂತಕ್ಕೆ ಕಾಲಿಟ್ಟಿದ್ದ ಲತಾ ಮಂಗೇಶ್ಕರ್ ಅವರಿಗೆ ಇಂದು ನಸುಕಿನ ಜಾವ 2 ಗಂಟೆ ಸಮಯದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೂಡಲೇ ಕುಟುಂಸ್ಥರು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಹಿಂದಿ ಭಾಷೆಯೊಂದರಲ್ಲೇ ಸುಮಾರು1 ಸಾವಿರಕ್ಕೂ…

  • ಸುದ್ದಿ

    ಬೈಕ್ ಚಾಲನೆ ಮಾಡಿಕೊಂಡು ‘ಸೆಲ್ಯೂಟ್’ ಮಾಡಿದ್ರೆ ಭಾರಿ ದಂಡ ಗ್ಯಾರಂಟಿ…!

    ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…