ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಡಕ್ಟರಿಲ್ಲದ ಕೆಎಸ್ಆರ್ಟಿಸಿ bus

ವಿರಾಜಪೇಟೆಯಿಂದ ಮೈಸೂರಿಗೆ ಪ್ರಯಾಣ ಹೊರಟೆ. ಸುಖಕರ ಹಾಗು ಸುರಕ್ಷಿತ ಪ್ರಯಾಣಕ್ಕೆ KSRTC ಬೆಸ್ಟ್. ಅಂದ ಮಾತ್ರಕ್ಕೆ ಬಸ್ ಹತ್ತಿ ಕಿಟಕಿಯ ಆಸನವನ್ನೇ ಆರಿಸಿ ಕುಳಿತುಕೊಂಡೆ. ನಾಲ್ಕೈದು ನಿಮಿಷದ ನಿಲುಗಡೆಯ ನಂತರ ಚಾಲಕ ಬಸ್ ಚಲಾಯಿಸಿದ. ಸಾಮಾನ್ಯವಾಗಿ ಬಸ್ ತಲುಪಿಸುವುದು ಚಾಲಕನಾದರೂ ಪ್ರಯಾಣಿಕರನ್ನು ನಿಭಾಯಿಸುವುದು ನಿರ್ವಾಹಕರು ತಾನೆ? ಅದೆ ನಮ್ಮ ಕಂಡಕ್ಟರ್.

ಬಸ್ 500 ಮೀಟರ್ ಮುಂದೆ ತಲುಪಿತು. ಪ್ರಯಾಣಿಕರೆಲ್ಲರೂ ಮೊಬೈಲ್, ಮಾತುಕತೆಗಳಲ್ಲಿ ನಿರತರಾಗಿದ್ದಾರೆ. ಆಸನಗಳು ಭರ್ತಿಯಾದ ಬಸ್ಸಿನಲ್ಲಿ ಕಂಡಕ್ಟರ್ ಇಲ್ಲವೆಂದು ಯಾರಿಗೂ ಭಾಸವಾಗಲಿಲ್ಲ.
ಸಾರ್ ಕಂಡಕ್ಟರ್ ಇಲ್ಲ ಎಂದು ಯುವಕನೊಬ್ಬ ಕೇಕೆ ಹಾಕಿದ. ಕೇಕೆ ಚಾಲಕನ ಕಿವಿಗೆ ಕೇಳದಿದ್ದರೂ ಕೇಳಿದ ಪ್ರಯಾಣಿಕರೆಲ್ಲರೂ ದಬ್ಬಿಬ್ಬಾಗಿ ಪರಸ್ಪರ ಮುಖ ನೋಡಿ ನಗು ಶುರುಮಾಡಿದರು. ಚಾಲಕನಿಗೆ ವಿಷಯದ ಪರಿವೇ ಇಲ್ಲ. ಪಟ್ಟಣದಲ್ಲಿ ವಾಹನಗಳ ದಟ್ಟಣೆ ಇರುವುದರಿಂದ ನಿಧಾನವಾಗಿ ಚಲಾಯುಸುತ್ತಿದ್ದಾನೆ. ಎಲ್ಲಿಯಾದರೂ ಸ್ಟೋಪ್ ಮಾಡಬೇಕಾದರೆ ಕಂಡಕ್ಟರ್ ನ ಪೀಪಿಯ ಪೀ….. ಶಬ್ಧ ಕೇಳಬೇಕಲ್ಲವೇ..!?
ಹಿಂದಿನಿಂದ ಬಂದ ಯುವಕನೊಬ್ಬ ಚಾಲಕನ ಬಳಿ ತೆರಳಿ ಕಂಡಕ್ಟರ್ ಇಲ್ಲ ಎಂದು ಜೋರಾಗಿ ಕೂಗಿದ. ತಟ್ಟನೆ ಹಿಂದೆ ತಿರುಗಿದೆ ಚಾಲಕ ನಗುತ್ತಾ ಬಸ್ ಬದಿಗೆ ನಿಲ್ಲಿಸಿದ. ಕತ್ತು ತಿರುಗಿಸಿ ಪ್ರಯಾಣಿಕರೊಂದಿಗೆ
ಎಲ್ಲಿ ಹೋದ ಇವ ? ಎಂದು ಕೇಳಿದ. ಹ್ನೇ…. ಕಾಲ್ ಮಾಡಿ ನೋಡು ಎಂದರು ಪ್ರಯಾಣಿಕರು. ನನ್ನತ್ರ ನಂಬರ್ ಇಲ್ಲ ಎಂದ. ಕೇಳಿದ ಪ್ರಯಾಣಿಕರಿಗೆ ಇದೇನೋ ಹಾಸ್ಯ ನಾಟಕದಂತೆ. ಹಾಗಾದ್ರೆ ಸ್ವಲ್ಪ ವೈಟ್ ಮಾಡಿ ಕಂಡಕ್ಟರ್ ಈಕಡೆ ಕಾಲ್ ಮಾಡ್ತಾನೆ ಎಂದರು ಪ್ರಯಾಣಿಕರು. ಇಲ್ಲ ಅವನತ್ರ ನನ್ನ ನಂಬರೂ ಇಲ್ಲಾರೀ ಎಂದನು ಚಾಲಕ.
ನಾವಿಬ್ಬರೂ ಈ ಬಸ್ಸಲ್ಲಿ ಹೊಸಬರು, ಇವತ್ತು ಬೆಳಿಗ್ಗೆ ನೇಮಕವಾಗಿದ್ದಷ್ಟೆ. ಪರಿಚಯವಾಗಲು ಬಿಡುವು ಸಿಗಲಿಲ್ಲ. ಪ್ರಯಾಣಿಕರಿಗೆ ಟಿಕೆಟ್ ಇಲ್ಲದೆ ಮೈಸೂರು ತಲುಪಬಹುದೆಂಬ ಆಸೆಯೇನೋ ಎಲ್ಲರೂ ಫುಲ್ ಖುಷಿಯಲ್ಲಿ.

ತಕ್ಷಣ ಹಿಂದಿನಿಂದ ಜೋರು ಹಾರ್ನ್ ಶಬ್ದ. ತಿರುಗಿ ನೋಡಿದಾಗ ಅತಿವೇಗದಿಂದ ಬಂದ ಆಟೋದಿಂದ ನಗುತ್ತಾ ಇಳಿದು ಬಸ್ಸತ್ತಿದ ಕಂಡಕ್ಟರ್ ಮಾಮ. ಏನಿದ್ದರೂ ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
Shafi Anvaari
Kodagarahalli
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್ಲರಿಗೂ ರಕ್ಷಣೆಯೊದಗಿಸುವುದು ಪೊಲೀಸರ ಕರ್ತವ್ಯ… ಅದನ್ನು ನಮ್ಮ ಪೊಲೀಸರು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ… ತಾವು ಕಷ್ಟ ಅನುಭವಿಸಿದರೂ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಪೊಲೀಸರು… ಇಲ್ಲಿ ಎಂದಲ್ಲ ವಿಶ್ವದ ಯಾವ ಮೂಲೆಗೆ ಹೋದರೂ ಪೊಲೀಸರ ಕರ್ತವ್ಯ ನಿರ್ವಹಣೆ, ದ್ಯೇಯ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ, ಕೆಲವೊಮ್ಮೆ ಈ ಕರ್ತವ್ಯ ನಿರ್ವಹಣೆಯ ನಡುವೆ ಸಂಭವಿಸುವ ವಿದ್ಯಮಾನಗಳು ವಿಚಿತ್ರ ಮತ್ತು ವಿಶಿಷ್ಟವೆನಿಸುತ್ತವೆ. ಅಂತಹ ವಿಶಿಷ್ಟ ವಿದ್ಯಮಾನದಲ್ಲಿ ಇದೂ ಒಂದು. ಏವನ್ ಮತ್ತು ಸೋಮರ್ಸೆಟ್ ಕಾನ್ಸ್ಟಾಬ್ಯುಲರಿಯ ಅಧಿಕಾರಿಯೊಬ್ಬರು ಕೆಲಸ ನಿರ್ವಹಿಸಿ ಮನೆಗೆ ಹೋಗುವ…
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮೊಬೈಲ್ ಸಿಮ್ ಪಡೆಯುವುದಕ್ಕಾಗಲಿ, ಯಾವುದೇ ಬ್ಯಾಂಕ್ ಗಳಲ್ಲಿ ಅಕೌಂಟ್ ತೆರೆಯಲು ಆಧಾರ್ ಅವಶ್ಯಕವಾಗಿತ್ತು. ಇದರ ಬಗ್ಗೆ ಅನೇಕ ಗೊಂದಲಗಳು ಕೂಡ ಇದ್ದವು. ಆದರೆ ಈಗ ಆಧಾರ್ ಕಡ್ಡಾಯ ಕುರಿತಂತೆ ಇದ್ದ ನಾನಾ ಗೊಂದಲಗಳಿಗೆ ತೆರೆ ಎಳೆಯಲಾಗಿದೇ. ಇನ್ಮುಂದೆ ಬ್ಯಾಂಕ್ ಖಾತೆ ಮಾಡಿಸುವುದಕ್ಕಾಗಲಿ ಅಥವಾ ಮೊಬೈಲ್ ಸಂಪರ್ಕಗಳಿಗೆ ಆಧಾರ್ ಕಡ್ಡಾಯವಲ್ಲ. ಹೌದು, ಆಧಾರ್ ಕುರಿತಂತೆ ಈಗ ಇರುವ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರೊಂದಿಗೆ ಇನ್ಮುಂದೆ ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್…
ಗುರು ಅಂದರೆ ಬರಿ ಶಿಕ್ಷಣವನ್ನು ನೀಡುವವರು ಮಾತ್ರ ಅಲ್ಲ. ತಂದೆ ತಾಯಿಗಳ ರೀತಿಯಲ್ಲಿ ಸಹಕರಿಸುವವರು ಎನ್ನಲಾಗುತ್ತದೆ. ಪ್ರತಿಯೊಂದು ಹಂತಕ್ಕೂ ದಾರಿಯನ್ನು ತೋರಿಸುವವರು ಹಾಗು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕ ಬೇಕು ಅನ್ನೋದನ್ನ ಕಲಿಸಿ ಕೊಡುವವರು. ಈ ಪ್ರಪಂಚದಲ್ಲಿ ಶಿಕ್ಷಕರಿಗೆ ಒಂದು ಸ್ಥಾನವಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್ ಹಾಗೂ ಸ್ಟೌ ನೀಡುವ ‘ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆ ಇದೇ ವರ್ಷದ ಡಿಸೆಂಬರ್ 1 ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಸಹನೆಯೇ ನಿಮ್ಮ ದೊಡ್ಡ ಅಸ್ತ್ರವಾಗಿದೆ. ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ ಮತ್ತು ನಿಮ್ಮ ಸಹಾಯವನ್ನು ಯಾಚಿಸುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ…