ಆರೋಗ್ಯ

ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ಈ ವಿಧಾನಗಳನ್ನು ಅನುಸರಿಸಿ…….

457

ಕಾಲ ಕಾಲಕ್ಕೆ ಬದಲಾಗುವ ವಾತಾವರಣದ ಜೊತೆಗೆ ಆರೋಗ್ಯದ ಹೊಂದಾಣಿಕೆ ಮಾಡಿಕೊಳ್ಳುವುದು ಸಾಹಸವೇ ಸರಿ. ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಒಸರುವ ಬೆವರು ನೀಡುವ ಬಾಧೆಯಂತು ಹೇಳತೀರದು.

ಅದರಲ್ಲೂ ದೇಹದಿಂದ ಹೊರಸೂಸುವ ವಾಸನೆ ಕಚೇರಿಯಲ್ಲಿ, ಬಸ್ಸಿನಲ್ಲಿ ಮದುವೆ ಸಮಾರಂಭಗಳಲ್ಲಿ ಹಿಂಸೆ ನೀಡಿದರೆ, ಕಂಕುಳ ದುರ್ವಾಸನೆಯಿಂದ ಬಹಳಷ್ಟು ಮಂದಿ ಮುಜುಗರಪಡುವುದು ಸಾಮಾನ್ಯವೇ ಆಗಿದೆ.

ಆದರೆ ಇವುಗಳಿಗೆಲ್ಲ ಸುಲಭ ಪರಿಹಾರ ಕಂಡುಕೊಳ್ಳುವ ಬದಲು. ರಸಾಯನಿಕಗಳಿಂದ ತಯಾರಿಸಿದ ವಸ್ತುಗಳ ಮೇಲೆ ಮಾರು ಹೋಗಿ ಹಣ ವ್ಯರ್ಥ ಮಾಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಕಳೆದುಕೊಳ್ಳುವ ಅಪಾಯಗಳಿಗೂ ಸಿಲುಕುವ ಬದಲು ಸುಲಭ ಪರಿಹಾರಗಳನ್ನು ಹುಡುಕುವುದು ಉತ್ತಮ.

ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ನೀವು ಈ ಕೆಳಗೆ ನೀಡಿರುವ ಸುಲಭ ಪರಿಹಾರೋಪಾಯಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ.

  • ಶುಚಿತ್ವ ಹಾಗೂ ನೈರ್ಮಲ್ಯತೆ:-

ಬೇಸಿಗೆ ಕಾಲದಲ್ಲಿ ದೇಹವಿಡೀ ಬೆವರುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಸಾಬೂನಿನಿಂದ ಹಾಗೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಮುಖ್ಯವಾಗಿ ಕಂಕುಳಗಳನ್ನು ಚೆನ್ನಾಗಿ ತೊಳೆಯಿರಿ. ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ದೂರವಿದ್ದು, ಶುಚಿತ್ವ ಹಾಗೂ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ. ರೇಷ್ಮೆಯಂತಹ ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟ ವಸ್ತ್ರಗಳು ತೇವಾಂಶವನ್ನು ಹೀರಿ ಚರ್ಮವನ್ನು ತೇವರಹಿತವಾಗಿಡುತ್ತದೆ.

  • ಆಹಾರ ನಿರ್ಬಂಧಗಳು:-

ನಮ್ಮ ದೈನಂದಿನ ಆಹಾರಗಳಲ್ಲಿಯೂ ಸಾಧ್ಯವಾದಷ್ಟು ಮಟ್ಟಿಗೆ ಗಮನಹರಿಸಬೇಕಾಗಿದೆ. ಕಾಫೀ, ಖಾರದ ತಿನಿಸುಗಳು, ಕೊಬ್ಬಿನಾಂಶವಿರುವ ಆಹಾರಗಳು ಹಾಗೂ ಧೂಮಪಾನದಿಂದ ದೂರವಿದ್ದು, ಕಂಕುಳದ ವಾಸನೆಯಿಂದ ದೂರವಿರಬಹುದು.

  • ದ್ರವಣಗಳು:-

ಡಿಯೋಡ್ರಂಟ್ ಬದಲು ಹತ್ತಿಯನ್ನು ಆ್ಯಪಲ್ ಸೈಡರ್ ವಿನೆಗರ್ ನಿಂದ ಒದ್ದೆ ಮಾಡಿ ಕಂಕುಳಕ್ಕೆ ಹಚ್ಚಿರಿ.

 

  • ನಿಂಬೆ ಹಣ್ಣು :-

ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಲ್ಲಿ ನಿಂಬೆ ಹಣ್ಣು ಕೂಡಾ ಪ್ರಭಾವಶಾಲಿಯಾಗಿದೆ. ನಿಂಬೆ ಹಣ್ಣು ನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಕಂಕುಳಕ್ಕೆ ಉಜ್ಜಿ ಅದರ ರಸವು ಕಂಕುಳದಲ್ಲಿಯೇ ಒಣಗಲು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ಸ್ನಾನ ಮಾಡಿ. ಕಂಕುಳದ ವಾಸನೆ ಸಂಪೂರ್ಣವಾಗಿ ಮಾಯವಾಗುವ ತನಕ ಪ್ರತಿದಿನಕ್ಕೊಂದು ಬಾರಿ ಮಾಡಿರಿ.

 

  • ತುಳಸಿ ಮತ್ತು ಬೇವು:-

ಬ್ಯಾಕ್ಟೀರಿಯಾಗಳನ್ನು ಶಮನ ಮಾಡುವುದರಲ್ಲಿ ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ತುಳಸಿ ಮತ್ತು ಬೇವು ಬಹಳ ಪರಿಣಾಮಕಾರಿಯಾಗಿದೆ. ಸ್ವಲ್ಪ ತುಳಸಿ ಹಾಗೂ ಬೇವಿನ ಸೊಪ್ಪನ್ನು ಅರೆದು ಪೇಸ್ಟ್ ತರ ಮಾಡಿ ಕಂಕುಳಗಳಿಗೆ ಹಚ್ಚಿರಿ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ಇದನ್ನು ವಾರಕ್ಕೆ ಮೂರು ಸಲ ಮಾಡಿದಲ್ಲಿ ಪರಿಣಾಮ ಕಾಣಬಹುದು.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ