ಸ್ಪೂರ್ತಿ

ಓ ದೇವ್ರೇ ಇವರೇನಪ್ಪಾ ಭಾರತದಲ್ಲಿರೋ ಯಾವ ಡಿಗ್ರಿಯನ್ನು ಬಿಟ್ಟಿಲ್ಲಾ..!ಇವ್ರು ಮಾಡಿರೋ ಪದವಿಗಳ ಬಗ್ಗೆ ಕೇಳ್ತಾ ಹೋದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ…

1865

ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.

ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ :-

ಹೌದು, ಶ್ರೀಕಾಂತ್ ಜಿಕ್ಖರ್ರವರು ಭಾರತದ ಅತಿ ಹೆಚ್ಚಿನ ವಿದ್ಯಾರ್ಹತೆಯುಳ್ಳ ವ್ಯಕ್ತಿಯಾಗಿ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಅನ್ನು ಹೊಂದಿದ್ದಾರೆ. ಎಮ್. ಬಿ. ಬಿ. ಎಸ್  ಮತ್ತು ಎಮ್. ಡಿ. ಇಂದ ಶುರು ಮಾಡಿದ ಇವರು ಎಲ್. ಎಲ್. ಬಿ ಮಾಡಿ ಕಾನೂನನ್ನು ಕೂಡ ಓದಿದ್ದಾರೆ. ನಂತರ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ(ಎಲ್. ಎಲ್. ಎಮ್) ಯನ್ನು ಪಡೆಯುತ್ತಾರೆ. ಹಾಗೂ ಇವರು ಬಿಸ್ನೆಸ್  ಆಡಳಿತ ಮತ್ತು ಪತ್ರಿಕೋದ್ಯಮದಲ್ಲಿಯು ಮಾಸ್ಟರ್ಸ್ ಅನ್ನು ಹೊಂದಿದ್ದಾರೆ .

ಅಷ್ಟೇ ಅಲ್ಲದೆ ಇವರು ಇನ್ನೂ ಬರೋಬ್ಬರಿ ಹತ್ತು ವಿಷಯಾಗಳ್ಲಲ್ಲಿ ಮಾಸ್ಟರ್ಸ್ ಪದವಿ ಯನ್ನು ಹೊಂದಿದ್ದಾರೆ…

ಎಂ. ಎ. ಸಾರ್ವಜನಿಕ ಆಡಳಿತ ,

ಎಂ. ಎ.ಸಮಾಜ ಶಾಸ್ತ್ರ ,

ಎಂ. ಎ. ಅರ್ಥ ಶಾಸ್ತ್ರ ,

ಎಂ. ಎ. ಸಂಸ್ಕೃತ,

ಎಂ. ಎ. ಇತಿಹಾಸ,

ಎಂ. ಎ. ಆಂಗ್ಲ ಸಾಹಿತ್ಯ ,

ಎಂ. ಎ. ತತ್ವ ಶಾಸ್ತ್ರ ,

ಎಂ. ಎ.ರಾಜ್ಯ ಶಾಸ್ತ್ರ ,

ಎಂ. ಎ.ಪ್ರಾಚೀನ ಭಾರತೀಯ ಇತಿಹಾಸ ,

ಸಂಸ್ಕೃತಿ ಮತ್ತು ಪುರಾತನ ಶಾಸ್ತ್ರ ,

ಎಂ. ಎ.ಮನೋವಿಜ್ಞಾನ . ಮತ್ತು ಇವರು ಯಾವುದೇ ಪದವಿಗಿಂತ ಉನ್ನತ ಪದವಿಯಾದ ಡಿ.ಲಿಟ್ (ಡಾಕ್ಟರ್ ಆಫ್ ಲೆಟರ್ಸ್) ಅನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸಾಕಷ್ಟು ಪದವಿಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಇವರು ಹಲವಾರು ಪದವಿಗಳಲ್ಲಿ ಪ್ರಥಮ ಶ್ರೇಣಿ /ಪ್ರಥಮ ದರ್ಜೆಯನ್ನು ಗಳಿಸಿದ ಹೆಮ್ಮೆ ಇವರದಾಗಿದೆ.

ಐಎಎಸ್ ಮತ್ತು ಐಪಿಎಸ್ :-

1978 ರಲ್ಲಿ ಅವರು ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ (IPS)ಯನ್ನು ಬರೆದು,ಇಂಡಿಯನ್ ಸಿವಿಲ್ ಸರ್ವಿಸ್ (ಐಪಿಎಸ್) ನಲ್ಲಿ ಆಯ್ಕೆಯಾದರು. ನಂತರ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿ,ಮತ್ತೆ 1980ರಲ್ಲಿ ಭಾರತೀಯ ಸಿವಿಲ್ ಸರ್ವೀಸ್ ಪರೀಕ್ಷೆ (IAS) ಪರೀಕ್ಷೆಯನ್ನು ಬರೆದ್ರು.ಅದರಲ್ಲೂ ಕೂಡ  ಐಎಎಸ್ ಆಫಿಸರ್ ಆಗಿ ಆಯ್ಕೆ ಆದ್ರು.ಆದರೆ ನಾಲ್ಕು ತಿಂಗಳ ನಂತರ ತಮ್ಮ ಐಎಎಸ್ ಹುದ್ದೆಗೂ ರಾಜೀನಾಮೆ ನೀಡಿದ್ರು.

ಕಿರಿಯ ವಯಸ್ಸಿನ ಎಂಎಲ್ಎ :-

1980ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ,ತಮ್ಮ ಮೊದಲ ಸಾರ್ವತ್ರಿಕ ಚುನಾವಣೆಯಲ್ಲೇ ಗೆದ್ದು, ತಮ್ಮ 26ನೇ ವಯಸ್ಸಿನಲ್ಲೇ,ಎಂಎಲ್ಎ ಆಗಿ  ಆಯ್ಕೆ ಆದ್ರು.ಹಾಗೂ ಭಾರತದಲ್ಲೇ ಅತೀ ಕಿರಿಯ ವಯಸ್ಸಿನ ಎಂಎಲ್ಎ ಎಂಬ ಹೆಸರಿಗೆ ಪಾತ್ರರಾದ್ರು ಕೂಡ. ತರುವಾಯ ಆ ಸಮಯದಲ್ಲಿ  14 ಶಾಸಕಾಂಗಗಳನ್ನು ಹೊಂದಿರುವ ಸರ್ಕಾರದ, ಅತ್ಯಂತ ಶಕ್ತಿಶಾಲಿ ಸರ್ಕಾರಿ ಮಂತ್ರಿಯಾದರು.

ಭಾರತದಲ್ಲಿ 52,000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯಗಳಲ್ಲಿ ಇವರದು ಒಂದು ವೈಯುಕ್ತಿಕ ಗ್ರಂಥಾಲಯ ಸೇರಿದೆ.ಶ್ರೀಕಾಂತ್ ಜಿಕ್ಖರ್ರವರು ಒಬ್ಬ ಶಿಕ್ಷಣತಜ್ಞ, ವರ್ಣಚಿತ್ರಕಾರ, ವೃತ್ತಿಪರ ಛಾಯಾಗ್ರಾಹಕ, ಮತ್ತು ನಟರು ಕೂಡ ಆಗಿದ್ದರುಇವರು 1992-98ರವರೆಗೆ ಭಾರತ ರಾಜ್ಯಾಂಗದ ಸದಸ್ಯರಾಗಿದ್ದರು. ಅವರು 1992 ರಲ್ಲಿ ನಾಗಪುರದಲ್ಲಿ ಸಂದಿಪಾನಿ ಎಂಬ ಶಾಲೆ ಸ್ಥಾಪಿಸಿದರು.ದುರದೃಷ್ಟಕರ ಎಂದರೆ ತಮ್ಮ 49ನೇ ವಯಸ್ಸಿನಲ್ಲಿ ಕಾರ್ ಅಪಘಾತವೊಂದರಲ್ಲಿ ತೀರಿಕೊಂಡ್ರು.

 

About the author / 

admin

Categories

Date wise

 • ಕೆಂದೆಳನೀರು

  ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

 • ಉಪಯುಕ್ತ ಮಾಹಿತಿ

  ನಿಮ್ಮ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ(RTE) ಈ ದಾಖಲೆಗಳು ಇದ್ರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ..!ನಿಮ್ಮ ಒಂದು ಶೇರ್ ಎಷ್ಟೋ ಬಡ-ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಬಲ್ಲದು…

  ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ

 • ಸುದ್ದಿ

  ನಾಯಿ ಸಾಕಾಣಿಕೆ ಇಂದ ಹೃದಯ ಆರೋಗ್ಯವಾಗಿ ಇರುತ್ತಂತೆ!

  ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ. ಕಾರಣ ಸಾಕಿದ…

 • ಸುದ್ದಿ

  ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ ಸುಮಲತಾ ರವರು ಮಾಡಿರುವ ಈ ಗಂಭೀರ ಆರೋಪ..!

  ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಜೆಡಿಎಸ್ ನಾಯಕರ ವಿರುದ್ಧ ಮಾಡಿರುವ ಆರೋಪ, ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸುಮಲತಾ ಅಂಬರೀಶ್, ಹತಾಶೆಗೊಳಗಾಗಿರುವ ಜೆಡಿಎಸ್ ನಾಯಕರು ಈಗ ತಮ್ಮ ವಿರುದ್ಧ ವೈಯಕ್ತಿಕ ಜೀವನದ ಕುರಿತು ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕಾಗಿ ಫೋಟೋ ಹಾಗೂ ವಿಡಿಯೋ ಮಾರ್ಫ್ ಮಾಡುವ ಕುರಿತು ಅವರುಗಳು ಸಮಾಲೋಚನೆ…

 • ಸುದ್ದಿ

  ಬೆಳಕೇ ಇಲ್ಲದೆ ಕತ್ತಲಲ್ಲಿದ್ದ ದೊಡ್ಡಿಗಳಿಗೆ ಬೆಳಕಿನ “ಸೌಭಾಗ್ಯ”ರೂಪಿಸಿದ ಮೋದಿ…..!

  ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್‌ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…

 • Cinema

  ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಬರುತ್ತಿರುತ್ತಾರೆ ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

  ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ. ಕೆಲ ದಿನಗಳ ಹಿಂದೆ ಸ್ವತಃ ರಜನಿ ಅವರೇ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರು.

 • ಕ್ರೀಡೆ

  ರಾತ್ರೋ ರಾತ್ರಿ ಇಂಟರ್ ನೆಟ್ ಸ್ಟಾರ್ ಆದ RCB ಗರ್ಲ್..!

  ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಯೊಬ್ಬರು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಎಂಬವರು ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‍ಸ್ಟಾಗ್ರಾಮ್‍ನಲ್ಲಿ 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದರೆ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ದೀಪಿಕಾ ತಮ್ಮ…