ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ .

22 ವರ್ಷ ವಯಸ್ಸಿನ ಯೆಲ್ಲಮ್ಮ ಅವರು 18 ವಯಸ್ಸಿನಲ್ಲಿ ಮದುವೆಯಾಗಿದ್ದರು. ಆದರೆ ಇಂದು ಅವರ ಜೊತೆ ಪತಿ ಇಲ್ಲ. ತನ್ನ ಜೀವನ ತುಂಬಾನೇ ಕಷ್ಟಕರವಾಗಿದೆ. ಜೀವನ ನಡೆಸಲು ತನ್ನ ಸಂಬಂದಿಕರ ಬೆಂಬಲ ಪಡೆಯದೇ ತಾನು ಸ್ವಾವಲಂಬಿಯಾಗಿ ಜೀವನ ನಡೆಸ ಬೇಕು ಹಾಗು ಬಡತನದಲ್ಲಿ ಎಷ್ಟೋ ಜನ ಕಷ್ಟ ಪಡುತ್ತಿದ್ದಾರೆ. ನನ್ನ ಜೀವನ ಕಥೆಗಿಂತ ಬೇರೆಯವರು ಒಂದೊತ್ತಿನ ಊಟಕ್ಕೂ ಎಷ್ಟೋ ವ್ಯಥೆ ಪಡುತ್ತಿದಾರೆ. ಅಂತಹ ನೊಂದವರ ಬಾಳಿಗೆ ನಾನು ಬೆಳಕಾಗಬೇಕು ಅನ್ನೋ ಅಸೆ ಇವರದ್ದು. ತಾನು ಕಷ್ಟ ಪಟ್ಟು ತನ್ನ ಜೀವನಕ್ಕಾಗಿ ಚಿಕ್ಕವಯಸ್ಸಿನ ಮಗನೊಂದಿಗೆ ಆಟೋ ಓಡಿಸುವ ವೃತ್ತಿಯನ್ನು ಪ್ರಾರಂಭಿಸಿದ್ದಾರೆ.

ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 8 ರವರೆಗೆ ಆಟೋ ಓಡಿಸುತ್ತಾರೆ. ಬಿಡುವಿನ ಸಮಯದಲ್ಲಿ ನ್ಯೂಸ್ ಪೇಪರ್ ಹಾಗು ನಿಯತಕಾಲಿಕೆಗಳನ್ನು ಓದುತ್ತಾರೆ. ತಾನು ಐಎಎಸ್ ಅಧಿಕಾರಿಯಾದರೆ ತನ್ನ ರೀತಿಯಲ್ಲಿರುವ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸಹಾಯ ಮಾಡಬಹುದು ಅನ್ನುತ್ತಾರೆ.ತಾನು ಹೆಣ್ಣು ಆಗಿರುವುದರಿಂದ ತನಗೆ ಬಾಡಿಗೆಗೆ ಆಟೋ ಕೊಡಲು ಯಾರು ಮುಂದೆ ಬರುವುದಿಲ್ಲ. ಆದರೂ ಹೇಗೋ ಮಾಡಿ ದಿನದ ಲೆಕ್ಕಕ್ಕೆ 130 ಬಾಡಿಗೆಯ ರೀತಿಯಲ್ಲಿ ಆಟೋ ಪಡೆಯುತ್ತಾರೆ.

ತಾನು ಮಾಡುವ ವೃತ್ತಿ ಯಲ್ಲಿ ಎಷ್ಟೋ ಕಷ್ಟ ಬಂದರು ಕುಗ್ಗದೆ, ಪ್ರತಿದಿನ ತನ್ನ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ತಾನು ಹೆಣ್ಣಾಗಿರುವ ಕಾರಣಕ್ಕೆ ಕೆಲ ಜನ ಇವರನ್ನು ಬೇರೆಯ ರೀತಿಯಲ್ಲಿ ನೋಡುತ್ತಾರೆ ಅಲ್ಲದೆ ಕೆಲವರು ಇವರು ಮಾಡುವ ಕೆಲಸಕ್ಕೆ ಗೌರವಿಸುತ್ತಾರೆ. ಇವೆಲ್ಲವುಗಳ ನಡುವೆ ತನ್ನ ಗುರಿಯನ್ನು ಮುಟ್ಟುವ ಪ್ರಯತ್ನ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇರುತ್ತಾರೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗಿದೆ.ಈಗಾಗಲೆ ಚಿತ್ರಕ್ಕೆ ‘ಮೂರ್ತಿ’ ಎಂದು ಟೈಟಲ್ ಇಡಲಾಗಿದೆ. ಆದರೆ ಈಗ ಪ್ರೇಕ್ಷಕರಲ್ಲಿ ಸುಧಾ ಮೂರ್ತಿ ಪಾತ್ರದಲ್ಲಿಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸುಧಾಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ…
ಮತದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡದಿರಿ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳಂತೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಎನ್.ಜಿ.ಓ.ಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿವೆ. ಇಂತಹ ವಂಚನೆ ಪ್ರಕರಣಗಳಿಂದ ಸಾರ್ವಜನಿಕರು ಜಾಗರೂಕರಾಗಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಚುನಾವಣಾ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳಂತೆ ಹಾಗೂ ಐ.ಟಿ ತಂತ್ರಾAಶಗಳ ಮೂಲಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದೂರುಗಳು ಮತ್ತು…
ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.
ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಪ್ರತಿ ದಿನ 1.5 ಜಿಬಿ ಡೇಟಾದಿಂದ 4 ಜಿಬಿ ಡೇಟಾವರೆಗೆ ಬೇರೆ ಬೇರೆ ಸಿಂಧುತ್ವದ ಪ್ಲಾನ್ ಶುರು ಮಾಡಿದೆ. ಇದ್ರ ಜೊತೆ ಅನಿಯಮಿತ ಸ್ಥಳೀಯ ಹಾಗೂ ಎಸ್ಡಿಡಿ ಕರೆಗಳು ಲಭ್ಯವಾಗಲಿವೆ. ಜಿಯೋದ ಹೊಸ ಪ್ಲಾನ್ ಕಾಂಬೋ ಪ್ಯಾಕ್ ಆಗಿದೆ. ಇದ್ರಲ್ಲಿ 197 ರೂಪಾಯಿ ಪ್ಲಾನ್ ಗ್ರಾಹಕರನ್ನು ಸೆಳೆದಿದೆ. 197 ರೂಪಾಯಿ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದ್ದು, 2ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಸೌಲಭ್ಯದ…
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…
ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಮೂವರು ವೇಶ್ಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿರುವ ವಿದ್ರಾವಕ ಘಟನೆ ನಡೆದಿದೆ. ದೆಹಲಿಯ ಲಜಪತ್ ನಗರದ ಮೆಟ್ರೋ ನಿಲ್ದಾಣದ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದಾಗ ಓಲಾ ಕ್ಯಾಬ್ ನ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಬಂದ ಇಬ್ಬರು ಗಿರಾಕಿಗಳ ಸೋಗಿನಲ್ಲಿ ಮಹಿಳೆಯರನ್ನು ಸಂಪರ್ಕಿಸಿದ್ದಾರೆ. 3000 ಸಾವಿರ ರೂಗಳಿಗೆ ಡೀಲ್ ಮಾಡಿಕೊಂಡ ದುಷ್ಕರ್ಮಿಗಳು ಮಹಿಳೆಯರನ್ನು ನೊಯ್ಡಾದ ಸೆಕ್ಟರ್ 18ಗೆ ಬರುವಂತೆ ಹೇಳಿ 3600 ರೂ ಮುಂಗಡ ಹಣವನ್ನೂ ನೀಡಿದ್ದಾರೆ. ಬಳಿಕ ಮಹಿಳೆಯರನ್ನು…