ರಾಜಕೀಯ

ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ……

133

ಪರಿಶಿಷ್ಟ  ಜಾತಿ ಮತ್ತು ಪಂಗಡದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಅನುಸೂಚಿತ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯ ರಾಜ್ಯ ಪರಿಷತ್‌ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.

ಇದಕ್ಕಾಗಿ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣದಲ್ಲಿ 105 ಕೋಟಿ ರೂ. ಮೀಸಲಿಡಲು ಸಭೆಯಲ್ಲಿ  ನಿರ್ಧರಿಸಲಾಯಿತು.

ಈ ಮುನ್ನ  ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌ ನೀಡಲಾಗುತ್ತಿತ್ತು. ರಾಜ್ಯ ಸರ್ಕಾರ ಶೇ.50 ರಷ್ಟು, ಅಂಬೇಡ್ಕರ್‌ ಹಾಗೂ ವಾಲ್ಮೀಕಿ ನಿಗಮದಿಂದ ಶೇ.25 ಹಾಗೂ ವಿದ್ಯಾರ್ಥಿಗಳು ಶೇ.25 ರಷ್ಟು ಭರಿಸುತ್ತಿದ್ದರು.

ಆದರೆ, ಪ್ರಸಕ್ತ ಸಾಲಿನಿಂದ ಸಂಪೂರ್ಣವಾಗಿ ಉಚಿತವಾಗಿ ಬಸ್‌ ಪಾಸ್‌ ನೀಡಬೇಕು. ಎಸ್‌ಸಿಪಿ, ಟಿಎಸ್‌ಪಿ ಹಣದಲ್ಲಿ ವೆಚ್ಚ ಭರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ.

ವಿಶೇಷ ಘಟಕ ಯೋಜನೆಯಡಿ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಗಳನ್ನು ಸಕಾಲದಲ್ಲಿ ಜಾರಿಗೊಳಿಸಿ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಾಕೀತು ಮಾಡಿದರು.

2015-16 ನೇ ಸಾಲಿನ ಉಳಿಕೆ 751 ಕೋಟಿ ರೂ. ಸೇರಿದಂತೆ ಪ್ರಸಕ್ತ ಸಾಲಿನಲ್ಲಿ 27,703 ಕೋಟಿ ರೂ. ಅನುದಾನ ಲಭ್ಯವಿದೆ. ಅದೇ ರೀತಿ 2016-17 ನೇ ಸಾಲಿನಲ್ಲಿ 1,782 ಕೋಟಿ ರೂ. ವೆಚ್ಚವಾಗಿಲ್ಲ.

ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿರುವ ಎಲ್ಲ ಯೋಜನೆಗಳನ್ನು ಮುಂದಿನ ವರ್ಷದ ಮಾರ್ಚ್‌ ಒಳಗೆ ಕಡ್ಡಾಯವಾಗಿ ಅನುಷ್ಠಾನಗೊಳಿಸಿ ಶೇ.100ಕ್ಕೆ 100 ರಷ್ಟು ಸಾಧನೆ ಮಾಡಲೇಬೇಕು ಎಂದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ತರಕಾರಿ,ಹಣ್ಣು ಸಿಪ್ಪೆ ಬಿಸಾಡಬೇಡಿ – ಇದರಿಂದಾಗುವ ಉಪಯೋಗಗಳು…..

    ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ. ನಿಂಬೆ ಸಿಪ್ಪೆ : ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ. ಕಲ್ಲಂಗಡಿ ಸಿಪ್ಪೆ : ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ…

  • ಸುದ್ದಿ

    ಹೆಸರಿಗೆ ತಕ್ಕಂತೆ ಶ್ವೇತ ಸೌಂದರ್ಯ ತುಂಬಿಕೊಂಡ ಶ್ವೇತಾದ್ರಿ ಪರ್ವತ.! ಪ್ರವಾಸಿಗರಿಗೆ ಸುಂದರ ತಾಣ….

    ಪೂರ್ವ ಮತ್ತು ಪಶ್ಚಿಮ ಘಟ್ಟಗಳಬೆಸೆಯುವ ಸೇತುವೆ ಎಂದೇ ಕರೆಸಿಕೊಳ್ಳುವಹಾಗೂ ಬಿಳಿ ಬಣ್ಣವನ್ನು ಹೊದ್ದುಕೊಂಡಿರುವಸ್ವಚ್ಛಂದ ಶ್ವೇತ ವರ್ಣದ ಬೆಟ್ಟದಹೆಸರೇ ಶ್ವೇತಾದ್ರಿ.ಇಂತಹದೊಂದು ಅಪರೂಪವಾದ ಪ್ರಕೃತಿ ರಮಣೀಯವಾದ ಪ್ರೇಕ್ಷಣೀಯಸ್ಥಳ ಇರುವುದು ಚಾಮರಾಜನಗರ ಜಿಲ್ಲೆಹಾಗೂ ತಾಲೂಕಿನಲ್ಲಿ. ಹಸಿರು ಸೀರೆಯುಟ್ಟ ನಾರಿಯಂತೆಕಾಣುವ ಆ ಹಚ್ಚಹಸಿರಾದ ಬೆಟ್ಟನೋಡಲು ಕಣ್ಣೆರಡು ಸಾಲದು. ಅಂದ ಚೆಂದದ ಬೆಟ್ಟದ ಸಾಲುಗಳ ಮಧ್ಯೆ ನುಸುಳುವಗಾಳಿಗೆ ಮೈ ಒಡ್ಡಿದರೆ ಆಹಾಸ್ವರ್ಗದ ಸುಖ.ತೇಲುವ ಮೋಡಗಳ ಮಧ್ಯೆ ಬೆಟ್ಟದ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ರೀತಿಯ ಆಹ್ಲಾದಕರ. ಪ್ರಕೃತಿ ಸೊಬಗನ್ನು ಹೊದ್ದು ಮಲಗಿದಂತೆ ಕಾಣುವ ಈ ಶ್ವೇತಾದ್ರಿ…

  • ರಾಜಕೀಯ

    ದೇಶವನ್ನು ನಡೆಸುವ ಪ್ರಮುಖ ವ್ಯಕ್ತಿಗಳ ತಿಂಗಳ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ದೇಶವನ್ನು ನಡೆಸಕ್ಕೆ ಒಂದಿಷ್ಟು ಜನ ತುಂಬಾನೆ ಮುಖ್ಯ, ಈ ಗಣ್ಯ ವ್ಯಕ್ತಿಗಳ ಸಂಬಳ ಎಷ್ಟು ಅಂತ ನಿಮಗೆ ಗೊತ್ತಾ? ಪ್ರಧಾನಿ, ರಾಷ್ಟ್ರಪತಿ ಹೀಗೆ ಎಲ್ಲರಿಗೂ ಇಂತಿಷ್ಟು ಅಂತ ತಿಂಗಳಿಗೆ ಸಂಬಳ ಇರತ್ತೆ ಜೊತೆಗೆ ಆಯಾ ಹುದ್ದೆಗೆ ತಕ್ಕಂತೆ ರಿಯಾಯತಿ ಸಹ ಇರತ್ತೆ.

  • ಸುದ್ದಿ

    ಯುವತಿ ಸ್ನಾನ ಮಾಡೋವಾಗ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್‍ಮೇಲ್ ಮಾಡಿ ಅತ್ಯಾಚಾರ…!

    34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಡದ ರಾಜ್‍ನಂದ್‍ಗಾಂವ್‍ನಲ್ಲಿ ನಡೆದಿದೆ. 22 ವರ್ಷದ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರವಿ ಕನ್ನೌಜೆ ಎಂದು ಗುರುತಿಸಲಾಗಿದ್ದು, ಈತ ಚ್ಚುಯಿಖಾದನ್ ಪಟ್ಟಣದ ಪುರೈನಾ ಗ್ರಾಮದ ಮೂಲದವಾಗಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ಪೊಲೀಸ್ ಅಧಿಕಾರಿ ನರೇಂದ್ರ…

  • ಜ್ಯೋತಿಷ್ಯ, ಭವಿಷ್ಯ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪ್ಪಲಿ ಸೇರಿದಂತೆ ಬೇರೆಯವರ ಈ ನಾಲ್ಕು ವಸ್ತುಗಳನ್ನು ಎಂದೂ ಬಳಸಬೇಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

    ದಿನ ನಿತ್ಯದ ಜೀವನದಲ್ಲಿ ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ  ಅನೇಕ ವಸ್ತುಗಳನ್ನು ನಾವು ಬಳಸುತ್ತಿರುತ್ತೇವೆ.ನಾವು ಹೀಗೆ ಬಳಸುವ ವಸ್ತುಗಳು ನಮ್ಮ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪ್ರಭಾವವನ್ನು ಬೀರುತ್ತವೆ. ನಾವು ಸಾಮಾನ್ಯವಾಗಿ ನಮ್ಮ ಸ್ನೇಹಿತರ,ಸಂಭಂದಿಕರ ವಸ್ತುಗಳನ್ನು ಅದಲು ಬದಲು ಮಾಡಿಕೊಂಡು ಉಪಯೋಗಿಸುತ್ತಿರುತ್ತೇವೆ.ಆದರೆ ಜ್ಯೋತಿಷ್ಯದಲ್ಲಿ ಹೇಳಿರುವ ಪ್ರಖಾರ ಬೇರೆಯವರ ಕೆಲವೊಂದು ವಸ್ತುಗಳನ್ನು ಉಪಯೋಗಿಸುವುದರಿಂದ ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಅಂತ ಹೇಳಲಾಗಿದೆ. ಹಾಗಾದ್ರೆ ಬೇರೆಯವರ ಯಾವ ವಸ್ತುಗಳನ್ನು ಉಪಯೋಗಿಸುವುದರಿಂದ ನಮ್ಮ ಮೇಲೆ ಕೆಟ್ಟ…