ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಊಟದ ನಂತರ ತಾಂಬೂಲ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ: ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.
ಸಂಸ್ಕೃತದಲ್ಲಿ ನಾಗವಲ್ಲಿ ಎಂದು ಕರೆಯಲ್ಪಡುವ ಇದು ರುಚಿಯಲ್ಲಿ ಕಟು (ಖಾರ), ತಿಕ್ತ (ಕಹಿ), ಮಧುರ (ಸಿಹಿ) ರಸಗಳಿಂದ ಕೂಡಿದ್ದ ಉಷ್ಣ, ತೀಕ್ಷ್ಣ ಹಾಗೂ ಕ್ಷಾರ ಗುಣವುಳ್ಳದ್ದಾಗಿದೆ.
ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ನಾಗವಲ್ಲಿ ವೃಷ್ಯ ಎಂದರೆ ಕಾಮೋತ್ತೇಜಕವಾಗಿದ್ದು, ಬಸ್ತಿರೋಧಕ, ಮೂತ್ರಪಿಂಡ ಹಾಗೂ ಹೃದಯ ರೋಗಗಳಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ.ತಾಂಬೂಲ ಸೇವಿಸುತ್ತಿದ್ದರು.

ಹಳ್ಳಿಗಳಲ್ಲಿ ಊಟದ ನಂತರ ತಾಂಬೂಲ ಸೇವನಾ ಸಾಮಾನ್ಯ, ಹಳ್ಳಿಗರಿಗೆ ಅದರ ಲಾಭವೂ ಗೊತ್ತಿದೆ, ಊಟದ ನಂತರ ತಾಂಬೂಲ ಸೇವನೆಯಿಂದ ಜೀರ್ಣಕ್ರೀಯೆ ಸುಲಭವಾದರೆ, ಹಲ್ಲುಗಳು ಗಟ್ಟಿಯಾಗುತ್ತವೆ ಎನ್ನುವುದು ಹಳ್ಳಿಗಳಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸಾಮಾನ್ಯ ಸಂಗತಿ.

ಇಷ್ಟೆ ಅಲ್ಲ ತಾಂಬೂಲ ಸೇವನೆಯಿಂದ ನಿಮಗೆ ಗೊತ್ತಿದರ ಅನೇಕ ಲಾಭಗಳೂ ಇವೆ. ಮಧುಮೇಹ ರೋಗವುಳ್ಳವರಿಗೆ ತಾಂಬೂಲ ಸೇವನೆ ಒಂದು ಪಥ್ಯ ಅಭ್ಯಾಸ. ದಿನದಲ್ಲಿ ಎರಡು ಅಥವಾ ಮೂರು ಸಲ, ಊಟವಾದ ನಂತರ ತಾಂಬೂಲ ಸೇವಿಸುವುದು ಹಿತಕರ ಹಾಗೂ ಆರೋಗ್ಯದಾಯಕ.
ಪ್ರತಿದಿನ ತಾಂಬೂಲ ಸೇವನೆ ಮಾಡುವುದರಿಂದ ಶರೀರದ ಉಷ್ಣತೆ ಸಮತೋಲನದಲ್ಲಿದ್ದು, ಮುಖ ಮತ್ತು ಚರ್ಮದ ಕಾಂತಿ ಹೆಚ್ಚಾಗುತ್ತದೆ. ಮನಸ್ಸು ಪ್ರಸನ್ನಗೊಳ್ಳುತ್ತದೆ, ಬುದ್ಧಿ ಚುರುಕಾಗುತ್ತದೆ. ಮುಪ್ಪು ಮುಂದೂಡಲ್ಪಟ್ಟು ಯೌವನ ದೀರ್ಘಕಾಲ ರಕ್ಷಿಸಲ್ಪಡುತ್ತದೆ.

ಇವೆಲ್ಲಕ್ಕಿಂತ ಮೇಲಾಗಿಸ್ತ್ರೀ-ಪುರುಷರಿಬ್ಬರಿಗೂ ತಾಂಬೂಲ ಉತ್ತಮ ಕಾಮೋತ್ತೇಜಕವಾಗಿದ್ದು, ಮುದ ನೀಡುತ್ತದೆ. ವೀಳ್ಯದ ಎಳೆಯಲ್ಲಿ ಕಾಮವನ್ನು ಉತ್ತೇಜಿಸುವ ಅಂಶಗಳಿದ್ದು, ಹಿಂದಿನ ಕಾಲದಲ್ಲಿ ಪತಿ – ಪತ್ನಿಯರು ಮಲಗುವ ಮುನ್ನ ಸಾಮಾನ್ಯವಾಗಿ ತಾಂಬೂಲ ಸೇವಿಸುತ್ತಿದ್ದರು.
ಮಧುಮೇಹದಲ್ಲಿ ಬಾಯಾರಿಕೆ ಹಾಗೂ ಬಾಯಿಂದ ದುರ್ಗಂಧ, ವಾಸನೆ ಇವು ಸಾಮಾನ್ಯ.

ಈ ತೊಂದರೆಗಳ ನಿವಾರಣೆಗೆ ತಾಂಬೂಲ ಸೇವನೆ ಉತ್ತಮ ಉಪಚಾರ ಎನ್ನಲಾಗಿದೆ. ತಾಂಬೂಲ ಸೇವನೆಯನ್ನು ಯಾವಾಗಲೂ ಊಟದ ನಂತರ ಮಾಡಬೇಕು. ಎಲೆ, ಅಡಿಕೆ, ಸುಣ್ಣಗಳನ್ನು ಚೆನ್ನಾಗಿ ಅಗಿದ ಮೇಲೆ ಸುಗಂಧ ದ್ರವ್ಯಗಳಾದ ಲವಂಗ, ಜಕಾಯಿ, ಗಂಧ ಮೆಣಸು, ಏಲಕ್ಕಿ, ನಾಗಕೇಸರಿ ಮುಂತಾದ ದ್ರವಗಳನ್ನು ಜತೆಗೆ ಸೇರಿಸಿಕೊಂಡು, ತಾಂಬೂಲವನ್ನು ಚೆನ್ನಾಗಿ ಅಗಿಯಬೇಕು. ಇದು ಬಾಯಿಯ ರುಚಿಯನ್ನು
ಹೆಚ್ಚು ಮಾಡುವುದೇ ಅಲ್ಲದೆ ಮನಸ್ಸಿಗೆ ಆಹ್ಲಾದವನ್ನು ನೀಡುತ್ತದೆ. ಸಮೋತ್ತೇಜಕವಾಗಿದ್ದು, ಯೌವನವನ್ನು ಕಾಪಾಡುತ್ತದೆ.
ತಾಂಬೂಲ ಸೇವನೆಯಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ತಾಂಬೂಲವು ಬಾಯಿಗೆ ನಿರ್ಮಲತೆ ಮತ್ತು ಪರಿಮಳ ಕೊಟ್ಟು ಮುಖದಲ್ಲಿ ಕಾಂತಿ ಮತ್ತು ಪ್ರಸನ್ನತೆಯನ್ನುಂಟುಮಾಡುತ್ತದೆ. ದವಡೆ ಹಲ್ಲು, ವಸಡುಗಳಿಗೆ ಬಲ, ನಾಲಿಗೆಗೆ ರುಚಿ ಕೊಡುತ್ತದೆ. ಸ್ವರವನ್ನು ಸ್ವಚ್ಛಗೊಳಿಸಿ, ಮಲಬದ್ಧತೆ ನಿವಾರಿಸುತ್ತದೆ. ಬಾಯಿ ಮತ್ತು
ಗಂಟಲುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ನೆಗಡಿ, ಗಂಟಲು ನೋವು ಮುಂತಾದ ರೋಗಗಳು ಉಂಟಾಗದಂತೆ ತಡೆಯುತ್ತದೆ.

ಜೀರ್ಣಾಂಗಗಳನ್ನು ಉದ್ದೀಪನಗೊಳಿಸಿ ಅಗ್ನಿಮಾಂದ್ಯ, ಅಜೀರ್ಣ ರೋಗಗಳನ್ನು ನಿವಾರಿಸುತ್ತದೆ.
ಗರದಿಕ್ಷ ಗುಲ್ಮ ಮುಂತಾದ ರೋಗಗಳಿಗೆ ಒಳ್ಳೆಯದು.
ತಾಂಬೂಲದ ಮೂರನೆ ಮುಖ್ಯ ಘಟಕವೇ ಸುಣ್ಣ. ಸುಧಾ, ಕ್ಷಾರ ಎಂದು ಕರೆಯಲ್ಪಡುವ ಇದು ತೀಕ್ಷ್ಣ ಉಷ್ಣ, ಕ್ಷಾರ ಗುಣಗಳಿಂದ ಕೂಡಿದ್ದು, ವಾತ ಕಫಾ ದೋಷಗಳನ್ನು
ನಾಶಮಾಡುತ್ತದೆ.

ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣವುಳ್ಳ ಸುಣ್ಣ ಒಳ್ಳೆಯ ಜೀರ್ಣಕಾರಕ ಹಾಗೂ ಕ್ರಿಮಿನಾಶಕವಾಗಿದೆ. ಮೂಳೆ ಮತ್ತು ದಂತಗಳ
ಬೆಳವಣಿಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತವೆ. ತಾಂಬೂಲದ ಜತೆ ಉಪಯೋಗಿಸುವ ಲವಂಗ, ಏಲಕ್ಕಿ, ಜಾಕಾಯಿ, ಜಾಪತ್ರೆ, ಪಚ್ಚ ಕರ್ಪೂರ ಮುಂತಾದ ಸುಗಂಧ
ದ್ರವ್ಯಗಳು ತಾಂಬೂಲಕ್ಕೆ ಪರಿಮಳ ಮತ್ತು ರುಚಿಯನ್ನು ಕೊಡುವುದೇ ಅಲ್ಲದೆ ಅನೇಕ ಉತ್ತಮ ಔಷದ ಗುಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಣೆಗೆ ಪೂರಕವಾಗುತ್ತವೆ.
ನಿಮ್ಮ ಆರೋಗ್ಯಕ್ಕೆ
ಇಂತಹ ಅಮೂಲ್ಯ ಔಷದ ಗುಣಗಳಿಂದ ಕೂಡಿರುವ ತಾಂಬೂಲ ಸೇವನೆಗೆ ನಮ್ಮ ಪ್ರಾಚೀನ ಆಯುರ್ವೇದ ವೈದ್ಯಶಾಸ್ತ್ರ ಬಹಳ ಮಹತ್ವ ನೀಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.
ಈಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಗಲ್ಲಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯದ್ದೇ ಮಾತುಕತೆ. ಅಷ್ಟೇ ಅಲ್ಲದೇ ಯಾವ ಪಕ್ಷ ಗೆಲ್ಲುತ್ತೆ? ಯಾರು ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ?ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ ಎಂಬ ವಾದ ವಿವಾದಗಳು ಜೋರಾಗಿಯೇ ನಡೆಯುತ್ತಿವೆ. ಈಗ ಹಾಲಿ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ಪ್ರಧಾನಿ ರೇಸ್ ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರ ಎಂಬುದರ ಬಗ್ಗೆ ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು ಮತದಾರ ಪ್ರಭು ಏನು…
ಕನ್ನಡ ಬಿಗ್ಬಾಸ್ ಇನ್ನೇನು ಮೂರೂ ವಾರಗಳ ಕಾಲ ನಡೆಯಲ್ಲಿದ್ದು ಮುಕ್ತಾಯಗೊಳ್ಳಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಗಲಭೆ ಸೃಷ್ಟಿಯಾಗಿದೆ. ಹೌದು ಅಡುಗೆ ಮನೆಯಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ನಡುವೆ ಮಾತಿನ ಚಕಮುಕಿ ನಡೆದಿದೆ. ಅಡುಗೆ ಮನೆಯಲ್ಲಿ ಎಲ್ಲರೂ ಸೇರಿ ಅಡುಗೆ ಮಾಡುತ್ತಿದ್ದಾಗ, ದೀಪಿಕಾ ಮತ್ತು ಚಂದನ್ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ಸೃಷ್ಠಿಯಾಗಿದೆ. ದೀಪಿಕಾ ದಾಸ್ ಅವರು ಚಂದನ್ ಗೆ ನಾಳೆ ನೀವು ಅಡುಗೆ ಮಾಡಿ, ನಾಳಿದ್ದು…
ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯನನ್ನ ಕಂಡರೆ ಮನುಷ್ಯನಿಗೆ ಆಗುವುದಿಲ್ಲ. ಒಬ್ಬರನ್ನ ಕಂಡು ಇನ್ನೊಬ್ಬರು ಹೊಟ್ಟೆ ಕಿಚ್ಚು ಪಡುವುದೇ ಹೆಚ್ಚು.
ಹಿಂದೆ ಕೇವಲ ವಯಸ್ಸಾದರವರಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದಾಗಿ ಬಿಳಿಕೂದಲು ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೂಡ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.
ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…