ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್‍ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್‍ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ ಒಳಗೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಆಯೋಗ ಸೂಚನೆ ನೀಡಿದೆ.

ಬೆಂಗಳೂರಿನ ಲೋಕಸಭಾ ಚುನಾವಣೆಯ ಮತಪೆಟ್ಟಿಗೆ ಭದ್ರವಾಗಿರಿಸಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ತೆಗೆದುಕೊಂಡಿದೆ. ಇವಿಎಂ ಮಿಷನ್ ಇರುವ ಕೊಠಡಿ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗಿದೆ. ಶಾರ್ಟ್ ಸಕ್ರ್ಯೂಟ್, ವಿದ್ಯುತ್ ಸಂಬಂಧಿತ ಸಮಸ್ಯೆ ಆಗದಿರಲು ಈ ಕ್ರಮ ಕೈಗೊಳ್ಳಲಾಗಿದೆ. ಕೊಠಡಿ ಬಾಗಿಲು ಮೇ23 ಕ್ಕೆ ಚುನಾವಣಾ ಆಯೋಗ ನೇಮಕ ಮಾಡಿರುವ ಮೇಲ್ವಿಚಾರಕರ ಸಮ್ಮುಖದಲ್ಲೇ ತೆರೆಯಲಾಗುತ್ತದೆ. ಯಾವುದೇ ಆರೋಪ ಬರಬಾರದೆಂದು ರೂಂ ಕಿಟಕಿ, ಬಾಗಿಲು ಸೀಲ್ ಹಾಕಲಾಗಿದ್ದು, ರೂಂನ ಹೊರಭಾಗ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ.

ಸ್ಟ್ರಾಂಗ್ ರೂಂಗೆ ಸರ್ಪಗಾವಲು:
ಇಡೀ ಕಟ್ಟಡದ ಮೂರು ಸುತ್ತಿನಲ್ಲೂ ಸೆಂಟ್ರಲ್ ಪ್ಯಾರಮಿಲಿಟರಿ ಫೋರ್ಸ್ ಸೆಕ್ಯೂರಿಟಿಯಿಂದ ಭದ್ರತೆ ಒದಗಿಸಲಾಗಿದೆ. ರಾಜ್ಯ ಪೊಲೀಸರಿಂದ ಕಟ್ಟಡ ಹೊರಭಾಗದಲ್ಲಿ, ಜಿಲ್ಲಾ ಪೊಲೀಸರಿಂದ ಕಟ್ಟಡ ಹೊರಗೆ ಭದ್ರತೆ ಒದಗಿಸಲಾಗಿದ್ದು ಇಡೀ ಕಟ್ಟಡ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಸ್ಟ್ರಾಂಗ್ ಒಂದಕ್ಕೆ ಕನಿಷ್ಠ 300 ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಏಜೆಂಟ್ ಗಳು ಬೇಕಾದ್ರೂ ಸ್ಟ್ರಾಂಗ್ ರೂಂ ಕಾವಲು ಕಾಯಬಹುದು ಎಂದು ಆಯೋಗ ತಿಳಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…
ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ. ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ. ಭಗವಂತ ಶಿವನ…
ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ‘ಸುಕನ್ಯಾ ಸಮೃದ್ಧಿ’ ಹೆಸರಿನ ಉಳಿತಾಯ ಖಾತೆಯನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆಗಾಗಿ ಒಂದು ಕುಟುಂಬ ಈ ಖಾತೆಯನ್ನು ತೆರೆಯಬಹುದಾಗಿದೆ. ಸುಕನ್ಯಾ ಸಮೃದ್ಧಿ ಖಾತೆಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಬೇಕು.
ಬೆಳ್ಳಗಿನ ಕೂದಲು ಇರುವ ವ್ಯಕ್ತಿಗಳನ್ನು ಕಂಡರೆ ನಾವು ಅಜ್ಜಿ-ತಾತ ಎಂದು ಸಂಭೋಧಿಸುತ್ತೇವೆ. ಅಂದರೆ ಈ ನರೆ (ಬೆಳ್ಳಗಿನ) ಕೂದಲು ಸಂಭವಿಸುವುದು 50ರ ಮೇಲೆ ಎಂದಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನರೆ ಕೂದಲು 12 ರಿಂದ 20ರ ವಯಸ್ಸಿನಲ್ಲೇ ಕಂಡುಬರುತ್ತಿರುವುದು ಆತಂಕಕಾರಿ ವಿಚಾರ. ಆದರೆ ನರೆ ಕೂದಲು ಇಷ್ಟು ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣವೇನು? ಸಮಸ್ಯೆಗೆ ಪರಿಹಾರ ಅಥವಾ ಮನೆಮದ್ದು ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ. ಬಿಳಿ ಕೂದಲಿಗೆ ಕಾರಣವೇನು? : *ಆನುವಂಶಿಕತೆ, *ವಿಟಿಲಿಗೊ, ಟ್ಯೂಬೆರಸ್ ಸ್ಕ್ಲೆರೋಸಿಸ್,…
ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…
ಚಿಕಿತ್ಸೆಗಾಗಿ ಪರದಾಡುತ್ತಿದ್ದ ಗರ್ಭಿಣಿಯನ್ನು ಸಿಆರ್ ಪಿಎಫ್ ಯೋಧರು ಸುಮಾರು 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು, ನಂತರ ವಾಹನದ ಮೂಲಕ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಛತ್ತಿಸ್‍ಗಢದ ಬಿಜಾಪುರದ ಕಾಡಿನ ಪ್ರದೇಶ ಪಡೇಡಾದಲ್ಲಿ ಘಟನೆ ನಡೆದಿದ್ದು, ಕಾಡಿನ ಮಧ್ಯೆ ರಸ್ತೆ ಸಂಪರ್ಕವಿರದ ಗ್ರಾಮದಲ್ಲಿ ಗರ್ಭಿಣಿ ಚಿಕಿತ್ಸೆಗಾಗಿ ಪರದಾಡುತ್ತಿದ್ದಳು. ಇದನ್ನು ಕಂಡ ಸಿಆರ್ ಪಿಎಫ್ ಯೋಧರು ಆಕೆಗೆ ಸಹಾಯ ಮಾಡಿದ್ದು, ತಕ್ಷಣವೇ ಎಚ್ಚೆತ್ತುಕೊಂಡು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಾರೆ. ಹೊಟ್ಟೆ ನೋವಿನಿಂದಾಗಿ ಮಹಿಳೆ ಹೊರಸಿನ ಮೇಲೆಯೇ…