ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಲ್ಲೆಯಲ್ಲಿ ಅರಬ್ಬೀ ಸಮುದ್ರ ಬುಡಮೇಲಾಗಿದೆ. ನೀಲಿ ಸಮುದ್ರ ಈಗ ಕಪ್ಪು ಸಮುದ್ರವಾಗಿದೆ. ದಡಕ್ಕೆ ಬರುವ ಅಲೆಗಳು, ನಡು ಸಮುದ್ರದ ಚಿತ್ರಣ ಯುರೋಪಿನ ಸಮುದ್ರವನ್ನು ಹೋಲುತ್ತಿದೆ.

ಮಳೆಯ ರೌದ್ರನರ್ತನದ ಬಳಿಕ ಇದೀಗ ಅರಬ್ಬೀ ಸಮುದ್ರ ಕಪ್ಪುಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಪೂರ್ಣಪ್ರಮಾಣದ ಗಾಳಿಮಳೆಯಾದಾಗ ಸಮುದ್ರ ಪ್ರಕ್ಷುಬ್ಧಗೊಳ್ಳುತ್ತದೆ. ಅಲೆಯ ಅಬ್ಬರವೂ ಜೋರಾಗಿ ಕಡಲ ನೀರು ಸಂಪೂರ್ಣ ಉಲ್ಟಾಪಲ್ಟಾವಾಗುತ್ತದೆ. ಈ ಸಂದರ್ಭದಲ್ಲಿ ಸಮುದ್ರದ ಮರಳು, ಅಲೆಯಲ್ಲಿ ಮಿಶ್ರಣಗೊಂಡಾಗ ಸಮುದ್ರ ಕಪ್ಪು ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತದೆ. ಇದು ನದಿಗಳ ನೀರು ಸಂಗಮಗೊಳ್ಳುವ ಅಳಿವೆ ಬಾಗಿಲ ಬಳಿಯ ಕಡಲು ಸಂಪೂರ್ಣ ಕದಡಿಹೋಗಿದೆ.

ನದಿ ನೀರು ಸಮುದ್ರ ಸೇರುವ ಉಡುಪಿಯ ಪಡುಕೆರೆ, ಕೋಡಿ ಬೆಂಗ್ರೆ, ಗಂಗೊಳ್ಳಿ, ಪಡುಬಿದ್ರೆಯಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿದೆ. ನಿಜವಾಗಿ ಸಮುದ್ರದ ತೀವ್ರತೆ ಮತ್ತು ಭೋರ್ಗರೆತ ಕಣ್ತುಂಬಿಕೊಳ್ಳಬೇಕಾದರೆ ಈಗ ಅರಬ್ಬೀ ಸಮುದ್ರವನ್ನು ನೋಡಬೇಕು.

ಮಾಮೂಲಿಯಾಗಿ ಸಮುದ್ರದ ನೀರು ತಿಳಿಯಾಗಿರುತ್ತದೆ. ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಪಶ್ಚಿಮ ಘಟ್ಟದ ತಪ್ಪಲು ಮತ್ತು ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುಗಿರುವುದಿಂದ ಭಾರೀ ಪ್ರಮಾಣದ ನೀರು ಸಮುದ್ರದತ್ತ ಧುಮ್ಮುಕ್ಕುತ್ತಿದೆ. ಹೀಗಾಗಿ ಸಮುದ್ರ ಪುಡಿಯಾಗಿದೆ. ಹರಿಯುವ ನದಿ ಖನಿಜ, ಲವಣಾಂಶ, ಕೊಳೆತ ತರಗೆಲೆ, ಮರ, ಮಣ್ಣು ಎಲ್ಲವನ್ನೂ ತಂದಿದೆ. ಸಮುದ್ರದ ಉಪ್ಪು ನೀರಿನ ಜೊತೆ ನದಿಯ ಕೆನ್ನೀರು ಸೇರಿ ಕಡಲು ಬಣ್ಣ ಬದಲಿಸಿದೆ.
ನಿಜಾರ್ಥದ ಸಮುದ್ರ ನೋಡುವ ಮನಸ್ಸಿದ್ದವರು ಸಮುದ್ರದ ವೈಭವ ನೋಡುವ ಆಸೆಯಿರುವವರು ಈಗ ಉಡುಪಿಗೆ ಬರಬೇಕು. ಸಮುದ್ರಕ್ಕಿಳಿದು ಆಡುವ ಅವಕಾಶ ಇಲ್ಲದಿದ್ದರೂ ಕಡಲಿನ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892Raghavendrastrology@gmail.com ಮೇಷ(16 ಡಿಸೆಂಬರ್, 2018) ನಾವು ಬುದ್ಧಿವಂತ ಚಟುವಟಿಕೆಗಳ ಮೂಲಕ ಜೀವನಕ್ಕೆ ಅರ್ಥ ನೀಡುತ್ತೇವೆಂದು ನೆನಪಿಡಿ. ನೀವು ಅವರ ಕಾಳಜಿ ವಹಿಸುತ್ತೀರೆಂದುಅವರಿಗೆ ತಿಳಿಯುವಂತೆ ಮಾಡಿ….
ನಾವು ಹುಟ್ಟುವಾಗ ಒಬ್ಬರಾಗಿ ಈ ಪ್ರಪಂಚಕ್ಕೆ ಬರುತ್ತೇವೆ ಮತ್ತು ಸಾಯುವಾಗ ಒಬ್ಬರಾಗಿ ಸಾಯುತ್ತೇವೆ ಮತ್ತು ನಮ್ಮ ಸಾವನ್ನ ಯಾರಿಂದಲೂ ಕೂಡ ತಪ್ಪಿಸಲು ಸಾಧ್ಯವಿಲ್ಲ ಹಾಗೆ ನಮ್ಮ ನೋವನ್ನ ಯಾರು ಭರಿಸಲು ಕೂಡ ಸಾಧ್ಯವಿಲ್ಲ. ನಾವು ಕಷ್ಟದಲ್ಲಿ ಇದ್ದಾಗ ಒಂದು ಹಂತದ ತನಕ ಮಾತ್ರ ಯಾರಾದರೂ ಸಹಾಯ ಮಾಡಬಲ್ಲರು ಆದರೆ ಅದರಿಂದ ಆಚೆ ನಾವೇ ಹೋರಾಡಬೇಕು ಮತ್ತು ನಾವೇ ಬದುಕುವ ದಾರಿಯನ್ನ ಹುಡುಕಾಡಬೇಕು ಯಾಕೆ ಅಂದರೆ ಜೀವನ ಅನ್ನುವುದು ಪ್ರತಿ ಕ್ಷಣದ ಹೋರಾಟ. ಎಲ್ಲಾ ದಾರಿಗಳು ಮುಚ್ಚಿ ಹೋದಾಗ…
ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗಿ ಪತ್ನಿ ಸಾಹಿತ್ಯ ಅವರು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಅವರಿಗೆ ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ನಟ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಂದೆಯಾದ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ…
ಭಾರತದಲ್ಲಿ ಹಲವು ಸ್ಥಳಗಳಿವೆ. ಅವು ಸ್ವರ್ಗವನ್ನು ನೆನಪಿಗೆ ತರುಸುತ್ತದೆ. ಇದು ಪ್ರತಿಭಾನ್ವಿತ ಜನರು ಮತ್ತು ಈ ರೀತಿಯ ಸುಂದರವಾದ ಸ್ಥಳಗಳನ್ನು ಹೊಂದಿರುವ ದೇಶವಾಗಿದೆ.
ಇದುವರೆಗೂ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಅಲ್ಪ ಮೊತ್ತದ ದಂಡ ಪಾವತಿಸಿ ಪಾರಾಗುತ್ತಿದ್ದ ವಾಹನ ಸವಾರರಿಗೆ ಹೊಸ ವರ್ಷದಿಂದ ಶಾಕ್ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಈಗಿರುವ ದಂಡದ ಮೊತ್ತವನ್ನು ಭಾರಿ ಏರಿಕೆ ಮಾಡುವ ಕುರಿತು ಸಾರಿಗೆ ಇಲಾಖೆ, ಪ್ರಸ್ತಾವನೆಯೊಂದನ್ನು ಗೃಹ ಇಲಾಖೆಗೆ ಕಳುಹಿಸಿಕೊಟ್ಟಿದೆ ಎಂದು ಹೇಳಲಾಗಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿದೆ ಎನ್ನಲಾಗಿದೆ. ಈಗ ದಂಡದ ಮೊತ್ತ ಕಡಿಮೆ ಇರುವ ಕಾರಣ ವಾಹನ ಸವಾರರು ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ಕಾರಣ ಈ ಕ್ರಮಕ್ಕೆ…