ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದೊಂದು ಊರು ಇದೆ ಅಲ್ಲಿ ಹೆಂಗಸರದ್ದೇ ಕಾರುಬಾರು ! ಅಲ್ಲಿನ ಮನೆಯ ಪ್ರತಿಯೊಂದು ನಿರ್ಣಯಗಳೂ ಕೂಡ ಮಹಿಳಾ ನಿರ್ಧರಿತವಾಗಿರುತ್ತವೆ. ಅದೂ ಸಾಲದೆಂಬಂತೆ ನಮ್ಮ ಕಡೆ ಹುಟ್ಟಿದ ಮಕ್ಕಳ ಹೆಸರಿನ ಜೊತೆಗೆ ತಂದೆಯ ಹೆಸರು ಸೇರಿಸುವುದು ಸಂಪ್ರದಾಯಿಕವಾಗಿದೆ. ಆದರೆ ಆ ಊರಿನಲ್ಲಿ ಮಕ್ಕಳ ಹೆಸರಿನ ಜೊತೆ ತಾಯಿಯ ಹೆಸರನ್ನು ಸೇರಿಸುತ್ತಾರೆ ಎಂಬುದು ಆಶ್ಚರ್ಯಕರ ವಿಚಾರ .

ಅದಲ್ಲದೆ ಈ ಊರಿನ ವಿಚಾರವು ಬಿ.ಬಿ.ಸಿ ಯಂತಹಾ ಅಂತರಾಷ್ಟ್ರೀಯ ಚಾನಲ್ ಗಳಲ್ಲೂ ಕೂಡ ಬಹಳ ಸಲ ಹೊಗಳಲ್ಪಟ್ಟಿದೆ !ಅಂದರೆ “ಈ ಊರಿನಾಗೆ ಹೆಂಗಸ್ರುದೇ ಕಾರುಬಾರು ನೋಡ್ಕಳಿ “ಅಂತೇನೂ ಆ ಚಾನಲ್ಲಿನವರು ಹೊಗಳಿಲ್ಲ ! ಅವರು ಹೊಗಳಿರುವುದು “ಈ ಊರು ಇಡೀ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಊರು ಹಾಗೂ ಅತ್ಯಂತ ಸುಶಿಕ್ಷಿತ ಜನರು “ಎಂದು ಹೊಗಳಿದ್ದಾರೆ .
ಅದಲ್ಲದೆ ಇವರೆಲ್ಲರೂ ಹೊಗಳುವ ಮುಂಚೆಯೇ ಆ ಊರಿಗೆ “ದೇವರ ಸ್ವಂತದ ಉದ್ಯಾನವನ”ಎಂಬ ಹೆಸರು ಅಂಟಿಕೊಂಡಿತ್ತು ! ಸರಿಸುಮಾರು ‘ದೇವರ ಸ್ವಂತ ನಾಡು’ಎಂದು ಹೆಸರು ಪಡೆದಿರುವ ಕೇರಳಕ್ಕೆ ಸಡ್ಡು ಹೊಡೆಯುವಂತಹಾ ನಿಸರ್ಗ ಈ ಊರಿನ ಹೆಮ್ಮೆ !
ಈ ಊರು ಇರುವುದು ಭಾರತದ ಮೇಘಾಲಯದಲ್ಲಿ .ಊರಿನ ಹೆಸರು ಮೌಲಿನ್ನಾಂಗ್ ಎಂದಿದೆ.ಇಂತಹದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಮಹಿಳಾ ಸ್ವಾತಂತ್ರ್ಯ ಇರುವ ಮತ್ತೊಂದು ಸಮುದಾಯವಿದೆ ಅದು ಇರುವುದು ಸಹಾರಾ ಮರುಭೂಮಿಯ ಅಕ್ಕ ಪಕ್ಕ .ಅದರ ಹೆಸರು “ಟೌರೆಗ್” .ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ.

ಈ ಸಮುದಾಯದಲ್ಲಿ ನಾವೀಗ ನೋಡುತ್ತಿರುವಂತೆ ಹೆಂಗಸರೆಲ್ಲಾ ಮುಖ ಮುಚ್ಚುವ ಬುರ್ಕಾ ಹಾಕಿಕೊಂಡು ಜೀವನ ಸಾಗಿಸುವುದಿಲ್ಲ. ಈ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ !ಇವರ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡಬೇಕಿದೆ ,ಹೆಂಗಸರು ತಮಗಿಷ್ಟ ಬಂದಂತಹಾ ಬಟ್ಟೆ ಧರಿಸಿ ಓಡಾಡುತ್ತಾರೆ .

ಇದು ಸಂಪ್ರದಾಯ ಎನ್ನುವುದಕ್ಕಿಂತ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುವುದು ಸೂಕ್ತ. ಯಾಕಂದರೆ ಈ ಗಂಡಸರು ಮುಖ ಮುಚ್ಚಿಕೊಳ್ಳುವುದು ಎಲ್ಲಿ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ಹಾಕಿಕೊಂಡು ಹೋಗಿ ಏನಾದ್ರೂ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಹಾಗೆ ಮುಸುಗು ಧರಿಸುವುದು !
ಕಿಡ್ನಾಪ್ ಮಾಡಿದ ಈ ಟೌರೆಗ್ ಹೆಂಗಸರು ಕೇವಲ ಒಬ್ಬರೇ ಕಿಡ್ನಾಪ್ ಮಾಡದೇ ಹತ್ತು ಹದಿನೈದು ಹುಡುಗಿಯರು ಒಟ್ಟಾಗಿ ಸೇರಿ ಕಿಡ್ನಾಪ್ ಮಾಡುತ್ತಾರೆ ಎಂಬ ವಿಚಾರವಿದೆ.

ಈ ಮುಸ್ಲಿ ಸಮುದಾಯವು ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಮನಬಂದಂತೆ ಹೇಳುತ್ತಿದ್ದಾರಾದರೂ ದಾಖಲೆಗಳೊಂದೂ ಲಭ್ಯವಿಲ್ಲ ಆದರೂ ಈ ಮಹಿಳೆಯರು ಮಾತ್ರ ಬುರ್ಖಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಮಾತ್ರ ಕಿಡ್ನಾಪ್ ಮಾಡುವುದು ಮಾತ್ರ ದಾಖಲೆ ಸಹಿತ ಇತಿಹಾಸದಲ್ಲಿ ದಾಖಲೆಯಾಗಿದೆ .

ಅದರಲ್ಲಿಯೂ ಇಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬ ಕಾನೂನು ಇದೆ ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ ಇದರ ಜೊತೆಗೆ ಗಂಡಸರು ಸಂಜೆಯಾಗುತ್ತಿದ್ದಂತೆಯೇ ಹೊರಹೋದರೆ ಅದಾವ ಹುಡುಗಿ ನಮ್ಮನ್ನು ಅಟ್ಟಾಸಿಕೊಂಡು ಬಟ್ಟೆ ಹರಿದು ಅತ್ಯಾಚಾರ ಮಾಡಿಬಿಡುತ್ತಾಳೋ ಎಂಬ ಭಯವೂ ಇದೆ !

ಮತ್ತೊಂದು ಆಶ್ಚರ್ಯದ ವಿಚಾರ ಏನೆಂದರೆ ಈ ಹುಡುಗಿಯರು ಊರಿನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಭಂದ ಇಟ್ಟುಕೊಳ್ಳಬಹುದು. ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂದು ಮಕ್ ಮಕ್ಕೆ ಕುಟ್ಟಿಬಿಡುತ್ತಾರೆ ಎಂಬುದೂ ಕೂಡ ಇತಿಹಾಸ ಕಂಡ ಸತ್ಯ.
ಹೀಗೆ ಗಂಡನಾದವನು ತನ್ನ ಈ ಅಪರೂಪದ ಅನೈತಿಕ ಸಂಭಂದದ ವಿರುದ್ಧ ಎಗರಾಡಿದ್ದೇ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿಗೆ ತಿಳಿಸಿ ತನ್ನ ಅಪರೂಪದ ಸಂಭಂದ ಹದಗೆಡಿಸುತ್ತಿರೋ ಈ ಗಂಡ ನನಗೆ ಬೇಡ ಎಂದು ಬೈಯ್ದು ಡೈವೋರ್ಸ್ ಕೊಡುತ್ತಾಳೆ.

ಈ ಡೈವೋರ್ಸ್ ಪ್ರೋಗ್ರಾಮನ್ನು ಅಕ್ಕಪಕ್ಕದ ಎರಡೂ ಊರುಗಳಲ್ಲಿ ಹಬ್ಬ ಎಂದು ಆಚರಿಸುತ್ತಾರೆ, ಏಕೆಂದರೆ ಈ ಅಮಾಯಕ ಹೆಂಡತಿಯು ಕೆಟ್ಟ ಗಂಡನಿಂದ ದೂರವಾಗಿದ್ದಾಳೆ ಹಾಗಾಗಿ ಈ ಯುವತಿಯನ್ನು ಯಾರು ಬೇಕಿದ್ದರೂ ‘ಕೂಡಾಣಿಕೆ’ ಮಾಡಿಕೊಳ್ಳಬಹುದು ಎಂದು ಈ ಹಬ್ಬ ಅಷ್ಟೇ !
ಈ ಡೈವೋರ್ಸ್ ಕೇಸಿನಲ್ಲಿ ಬಹಳ ಚೆಂದ ಇರುವ ವಿಚಾರ ಏನೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೊಕ್ಕರೆ ನಂತರ ಗಂಡನಾದವನೇ ತನ್ನ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ಬಿಟ್ಟು ಹೆಂಡತಿ ಏನಾದರೂ ತನಗೆ ಈ ಕೆಟ್ಟ ಗಂಡ ಬೇಡವೆಂದರೆ ಸಾಕು ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗುತ್ತದೆ !

ಇದೆಲ್ಲದರ ಹೆನ್ನೆಲೆ ಹುಡುಕಿದರೆ “ಟಿನ್ ಹಿನಾನ್”ಎಂಬ ಹೆಸರಿನ ನಾಲ್ಕನೇ ಶತಮಾನದಲ್ಲಿ ಬದುಕಿದ್ದ ರಾಣಿ ಈ ಕಾನೂನು ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ !ಆ ರಾಣಿಯ ಚಿತ್ರ ಲಭ್ಯವಿಲ್ಲ ಆದರೂ ನಾವೆಲ್ಲ ಆ ರಾಣಿಯ ಮುಖವನ್ನೊಮ್ಮೆ ನೋಡಿಕೊಂಡು ಧನ್ಯರಾಗಬೇಕಿತ್ತು !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿಗೆ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಅಂಗಾಂಗಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಉಡುಪಿಯ ಬ್ರಹ್ಮಾವರದವಾರ ಸಂದೀಪ್ ಪೂಜಾರಿ ಮೇ 27ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಿ ಮರುದಿನ ಮೇ 28ರಂದು ವೈದ್ಯರು ಸಂದೀಪ್ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೊಷಿಸಿದ್ದಾರೆ. ಆಗ ಅವರ ಸೋದರರಾದ ಪ್ರದೀಪ್ ಪೂಜಾರಿ ತನ್ನ ಸೋದರನ ಅಂಗಾಂಗ ದಾನಕ್ಕೆ ಸಮ್ಮತಿಸಿದ್ದಾರೆ. ಅಂಗಾಂಗ ದಾನಕ್ಕೆ ಒಪ್ಪಿಗೆ ಸಿಕ್ಕ…
ದಿನದ ಆರಂಭ ಶುಭವಾಗಿದ್ದರೆ ದಿನ ಪೂರ್ತಿ ಶುಭವಾಗಿರುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ದಿನ ಶುಭವಾಗಿರಲು ಆರಂಭದಲ್ಲಿ ಯಾವ ಕೆಲಸವನ್ನು ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಜೊತೆಗೆ ಯಾವ ಕೆಲಸ ಮಾಡಿದ್ರೆ ದಿನಪೂರ್ತಿ ಕೆಟ್ಟದಾಗಿರುತ್ತದೆ ಎಂಬುದನ್ನೂ ಹೇಳಲಾಗಿದೆ.
ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಮೂವರು ಮೃತಪಟ್ಟು, 20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವರ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಲುಂಬಿನಿ ಗಾರ್ಡನ್ ಸಮೀಪದ ಜೋಗಪ್ಪ ಲೇಔಟ್‌ನಲ್ಲಿ ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಬಿದ್ದಿತ್ತು. ಈ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವ ಕೃಷ್ಣ ಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು….
ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ. ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ.
ಹೊಟ್ಟೆ ಹಾಳಾಗಿದ್ದರೂ ತೊಂದರೆಯಿಲ್ಲ, ಮುಖ ಚೆನ್ನಾಗಿ ಕಾಣಬೇಕು ಎಂಬುದು ಬಹುತೇಕ ಈಗಿನ ಜನರ ಮನಃಸ್ಥಿತಿಯಾಗಿದೆ. ಅದರಲ್ಲೂ ಹೆಚ್ಚಿನ ಮಹಿಳೆಯರಿಗೆ ಮುಖ ಬಿಳಿಹಾಳೆಯಂತೆ ಪೂರ್ತಿ ಸಮನಾಗಿರಬೆಕು ಎಂಬ ಆಸೆ. ಆದರೆ ಮುಖದ ಮೇಲಿನ ಕಪ್ಪು ಕಲೆ ಈ ಬಯಕೆಗೆ ತಣ್ಣೀರೆರಚಿ ಮಾನಸಿಕ ಹಿಂಸೆ ನೀಡುತ್ತದೆ. ಆ ಕಪ್ಪು ಕಲೆಗಳನ್ನು ಹೋಗಲಾಡಿಸಿ, ಮುಖ ಅರಳುವಂತೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಯೋಣ. ಉಷ್ಣವಾಗಿ ಮುಖದ ಮೆಲೆ ಕಪ್ಪುಕಲೆಗಳಾಗುತ್ತಿದ್ದರೆ ಸೊಗದೆ ಬೇರನ್ನು ನಿಯತವಾಗಿ ಬಳಸಬೇಕು. ಕುದಿಯುತ್ತಿರುವ ನೀರಿಗೆ ಒಂದು ಚಮಚ ಸೊಗದೆಬೇರಿನ…
ಪಿ.ಯು.ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.ಮಾರ್ಚ್ 1 ರಿಂದ 17 ರ ವರೆಗೆ ದ್ವಿತೀಯ ಪಿ.ಯು.ಸಿ. ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ವಿಶೇಷ ಸೌಲಭ್ಯ ಕಲ್ಪಿಸಿದೆ.