ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.

ರಾಜಸ್ಥಾನದ ಜೈಪುರ ಮೂಲದವರಾದ ಓಂ ಶಾಂತಿ ಶರ್ಮಾ ಎಂಬುವರು ಧರಣಿ ನಡೆಸುತ್ತಿದ್ದು, ತನ್ನ ಮಾನಸಿಕ ಸ್ಥಿತಿ ಚೆನ್ನಾಗೇ ಇದೆ ಎಂದು ಕೂಡ ಆಕೆ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ನನಗೆ ವಿವಾಹವಾಗಿದ್ದು, ಸಂಭಂದ ಹದಗೆಟ್ಟ ಕಾರಣ, ನಾನು ಒಬ್ಬಂಟಿಗಳಾಗಿದ್ದೇನೆ ಎಂದು ಹೇಳಿದ್ದಾರೆ.. ಪ್ರಧಾನಿ ಮೋದಿ ಅವರೂ ಒಂಟಿಯಾಗಿದ್ದು,ಪ್ರಧಾನಿ ಮೋದಿಗೆ ಸೇವೆ ಸಲ್ಲಿಸಬೇಕು ಎಂದು ಆಕೆ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಒಂಟಿಯಾಗಿದ್ದು, ಸಾಕಷ್ಟು ಮದುವೆ ಪ್ರಸ್ತಾಪಗಳನ್ನ ನಿರಾಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಮೊದಿಯವರನ್ನೇ ಏಕೆ ಮದುವೆಯಾಗಬೇಕೆಂದು ಕೇಳಿದಕ್ಕೆ, ಅವರು ಒಂಟಿಯಾಗಿದ್ದು, ಅವರ ಕೆಲಸಗಳಲ್ಲಿ ಸಹಾಯ ಮಾಡಲು ಅವರನ್ನು ಮದುವೆಯಾಗಬೇಕೆಂದು ಹೇಳಿದ್ದಾರೆ.
ಇವರು ಹೇಳುವ ಪ್ರಕಾರ ಮೋದಿಯವರ ಮೇಲಿರುವ ಮೋಹದಿಂದ ಮದುವೆಯಾಗುತ್ತಿಲ್ಲವಂತೆ,ಅವರನ್ನು ನಾನು ಗೌರವಿಸುತ್ತೇನೆ, ಮತ್ತು ಅವರ ಕೆಲಸ ಕಾರ್ಯಗಳಲ್ಲಿ ನನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಅವರೇ ಹೇಳುವ ಪ್ರಕಾರ, ಇವರಿಗೆ ಸಾಕಷ್ಟು ಹಣ ಮತ್ತು ಜೈಪುರದಲ್ಲಿ ಸಾಕಷ್ಟು ಜಮೀನು ಇದೆ ಎಂದು ಹೇಳಿದ್ದಾರೆ. ಇದಲ್ಲದೆ ಇವರಿಗೆ 20 ವರ್ಷದ ಮಗಳಿದ್ದು, ಆಕೆಯ ಬಗ್ಗೆ ನಾನು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.ತನ್ನಲ್ಲಿರುವ ಸ್ವಲ್ಪ ಜಮೀನನ್ನು ಮಾರಿ ಮೋದಿಗೆ ಉಡುಗೊರೆ ಕೊದಬೇಕೆನ್ದುಕೊಂಡಿದ್ದಾರಂತೆ.
ಮೋದಿಯವರು ನನ್ನನ್ನು ಭೆಟಿಯಾಗುವವರೆಗೂ, ಈ ಸ್ಥಳದಿಂದ ಕದಲುವುದಿಲ್ಲ, ಎಂದು ಹೇಳಿರುವ ಶಾಂತಿಯವರು,ಅಲ್ಲಿನ ಗುರುದ್ವಾರಗಳಲ್ಲಿ ಊಟ ಮಾಡಿ, ಸಾರ್ವಜನಿಕ ಶೌಚಾಲಯ ಬಳಸಿಕೊಂಡು ಧರಣಿ ನಿರತರಾಗಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಂಟೆಕ್ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…
ನಿಮಗೆ ನೀವು ಬೇರೆಯವರಿಗಿಂತ ವಿಭಿನ್ನ ಅಂತ ಅನಿಸುತ್ತೀರಾ? ನಿಮ್ಮನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅನ್ನಿಸುತ್ತಾ?
ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ.
ಇಂದು ಮುಂಜಾನೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಗಳಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ , ಪವರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ ನಿರ್ಮಾಪಕರುಗಳಾದ ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ಮಾಪಕರಾದ ಕಿರಂಗದೂರ್ ವಿಜಯ್, ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆಯ ಮೇಲೂ ಸಹ ದಾಳಿ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಆಗಿ ಬದಲಾವಣೆ…
ರಸ್ತೆ ಮೇಲೆ ಚಲಿಸುವ ಕಾರುಗಳು ಗಗನದಲ್ಲಿ ಹಾರುವಂತಿದ್ದರೆ..? ನೀವು ಹಾಲಿವುಡ್ ಸಿನಿಮಾಗಳಲ್ಲಿ ಅದರಲ್ಲೂ ಜೇಮ್ಸ್ಬಾಂಡ್ ಚಿತ್ರಗಳಲ್ಲಿ ಇದನ್ನು ನೋಡಿರುತ್ತೀರಿ. ಜಪಾನ್ನಲ್ಲಿ ನಿರ್ಮಾಣಗೊಂಡಿರುವ ಫ್ಲೈಯಿಂಗ್ ಕಾರು ತನ್ನ ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿದೆ. ಈ ವಿಶ್ವ ಬಹು ಕಾತುರದಿಂದ ನಿರೀಕ್ಷಿಸುತ್ತಿರುವ ಹಾರುವ ಕಾರುಗಳು ಇನ್ನು ಕೆಲವೇ ತಿಂಗಳುಗಳಲ್ಲಿ ವಾಣಿಜ್ಯ ಮಾರಾಟಕ್ಕೆ ಲಭ್ಯವಾಗಲಿದೆ. ಜಪಾನಿನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ತಯಾರಿಕೆ ಸಂಸ್ಥೆ ಎನ್ಇಸಿ ಕಾಪೆರ್ರೇಷನ್ ಅಭಿವೃದ್ದಿಗೊಳಿಸಿರುವ ಪುಟ್ಟ ಹಾರುವ ಕಾರಿನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಇದನ್ನು ಇದೇ ಮೊದಲ ಬಾರಿ ಪ್ರಯೋಗಕ್ಕೆ…
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು
ಮುಖದ ಮೇಲೆ ಒಂದು ಕಪ್ಪು ಮಚ್ಚೆಯಿದ್ರೆ ಅದು ಸೌಂದರ್ಯವನ್ನು ವೃದ್ಧಿಸುತ್ತದೆ. ಆದ್ರೆ ಮುಖವೆಲ್ಲ ಕಲೆಯಾದ್ರೆ ಸೌಂದರ್ಯ ಹಾಳಾಗುತ್ತದೆ. ಕಲೆ ಹೋಗಲಾಡಿಸಿ ಸುಂದರ ಮುಖಕ್ಕಾಗಿ ಜನರು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಅದ್ರ ಬದಲು ದಿನದಲ್ಲಿ 5 ನಿಮಿಷ ಈ ಮನೆ ಔಷಧಿ ಬಳಸಿದ್ರೆ ಮುಖ ಸುಂದರವಾಗಿ, ಆಕರ್ಷಕವಾಗಿ ಕಾಣುತ್ತದೆ. ಮೂಲಂಗಿ :- ಮುಖದ ಮೇಲಿರುವ ಕಪ್ಪು ಕಲೆಗಳನ್ನು ಮೂಲಂಗಿ ದೂರ ಮಾಡುತ್ತದೆ. ಪ್ರತಿ ದಿನ ಮೂಲಂಗಿ ರಸವನ್ನು ಮುಖಕ್ಕೆ ಹಚ್ಚಿ. ಕೆಲ ಸಮಯ ಬಿಟ್ಟು ಮುಖ ತೊಳೆಯಿರಿ. ಮಜ್ಜಿಗೆ…