ವಿಚಿತ್ರ ಆದರೂ ಸತ್ಯ

ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ..!ತಿಳಿಯಲು ಈ ಲೇಖನ ಓದಿ…

638

ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.  ಆದರೆ ಕಾಲಿನಿಂದ ಸೂಜಿ ಹೊರಬರುವುದೆಂದರೆ? ಇದು ನೈಸರ್ಗಿಕವಂತೂ ಆಗಿರಲಿಕ್ಕಿಲ್ಲ.

ಆಕೆಯೇ ತಾನೇ ಚುಚ್ಚಿಕೊಂಡು ಬಳಿಕ ಇದು ದೇಹದೊಳಗಿನಿಂದ ಬರುತ್ತಿದೆ ಎನ್ನುತ್ತಿದ್ದಾಳೆಯೇ? ಈ ಪ್ರಶ್ನೆಗೆ ಆಕೆ ಸ್ಪಷ್ಟವಾಗಿ ನಿರಾಕರಿಸುತ್ತಾ ಇವೆಲ್ಲವೂ ತಾವೇ ತಾವಾಗಿ ಹೊರಬರುತ್ತಿವೆ ಎಂದು ಹೇಳುತ್ತಾಳೆ. ಇದಲ್ಲೇನೋ ಮೋಸ ಇದೆ. ಈ ಮಹಿಳೆಯೇ ಮೋಸ ಮಾಡುತ್ತಿರಬಹುದು ಅಥವಾ ಮೋಸದಿಂದ ಆಕೆಯ ದೇಹದಲ್ಲಿ ಬೇರೆ ಯಾರೋ ಸೂಜಿಗಳನ್ನು ಚುಚ್ಚಿರಬಹುದು ಎಂಬ ಅನುಮಾನ ಕಾಡುತ್ತದೆ.

ಈಕೆ ಈ ಸ್ಥಿತಿಯಿಂದ ಬಳಲಲು ತೊಡಗಿ ಬಹುಕಾಲವೇ ಆಗಿದೆ:-

ಅನುಸೂಯ್ಯಾ ದೇವಿ ಎಂಬ ಹೆಸರಿನ ಈ ಮಹಿಳೆ ಉತ್ತರಪ್ರದೇಶ ರಾಜ್ಯದ ಫತೆಹ್ ಪುರ್ ಜಿಲ್ಲೆಯ ಒಂದು ಪುಟ್ಟ ಗ್ರಾಮದ ನಿವಾಸಿಯಾಗಿದ್ದಾಳೆ. ಈಕೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜುಗಳು ಹಾಗೂ ಪಿನ್ನುಗಳು ಹೊರಬರುವುದು 2012 ರಿಂದ ಪ್ರಾರಂಭವಾಯಿತು ಎಂದು ವಿವರಿಸಿದ್ದಾಳೆ.

ಈಕೆ ವೈದ್ಯಕೀಯ ನೆರವು:-

ಸುಮಾರು ಐದು ವರ್ಷಗಳಿಂದಲೂ ಸತತವಾಗಿ ಸೂಜಿಗಳ ಯಾತನೆಯಿಂದ ಬಳಲಿದ ಈಕೆ ಮೊದಮೊದಲು ನೋವನ್ನು ಸಹಿಸಿಕೊಳ್ಳಲು ಶಕ್ತಳಿದ್ದರೂ ಈಗ ಹೆಚ್ಚೂ ಕಡಿಮೆ ಸೋತು ಹೋಗಿದ್ದಾಳೆ. ನೋವಿಲ್ಲದೇ ನಡೆಯಲು, ಕುಳಿತುಕೊಳ್ಳಲು ಅಥವಾ ನಿಲ್ಲಲೂ ಆಕೆಗೆ ಸಾಧ್ಯವಿಲ್ಲ. ಈ ನೋವನ್ನು ವಿವರಿಸಿ ಆಕೆ ಹಲವಾರು ವೈದ್ಯರ ನೆರವನ್ನೂ ಯಾಚಿಸಿದ್ದಳು.

ಈಕೆಯ ವಿವರಣೆಯ ಪ್ರಕಾರ:-

ಈ ಸ್ಥಿತಿ ಹೇಗೆ ಎದುರಾಯಿತು ಎಂಬ ಪ್ರಶ್ನೆಗೆ ಆಕೆ ಹೀಗೆ ಹೇಳುತ್ತಾಳೆ: “ನನಗೆ ಈ ತೊಂದರೆ ಕಳೆದ ಐದು ವರ್ಷಗಳಿಂದಲೂ ಇದೆ. ಸೂಜಿಗಳು ನನ್ನ ಕಾಲಿನಿಂದ ಹೊರಬರುತ್ತವೆ. ಇದು ಹೇಗೆ, ಏಕೆ ಎಂದು ನನಗೆ ವಿವರಿಸಲು ಸಾಧ್ಯವಿಲ್ಲ. ಇವು ಹೇಗೆ ಒಳಗೆ ಬಂದವು ಎಂದು ನನಗೆ ಗೊತ್ತಿಲ್ಲ. ಆದರೆ ಈ ನೋವಿನಿಂದಂತೂ ಜರ್ಝರಿತಳಾಗಿದ್ದೇನೆ, ಇನ್ನು ಸಹಿಸಲು ಸಾಧ್ಯವಿಲ್ಲ”

ವೈದ್ಯರ ವಿವರಣೆ:-

ವೈದ್ಯರು ಇದೊಂದು ಮಾನಸಿಕ ರೋಗ ಎಂದು ಊಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿ ತನಗೆ ಅರಿವೇ ಇಲ್ಲದಂತೆ ಕೆಲವು ಮೊನಚಾದ ವಸ್ತುಗಳನ್ನು ತನ್ನ ದೇಹದೊಳಗೆ ತೂರಿಸಿಕೊಳ್ಳುವುದು ಒಂದು ಮಾನಸಿಕ ವ್ಯಾಧಿಯ ಲಕ್ಷಣವಾಗಿದೆ. ಈ ಮಹಿಳೆಯೂ ಇಂತಹ ಯಾವುದೋ ಮಾನಸಿಕ ವ್ಯಾಧಿಗೆ ತುತ್ತಾಗಿದ್ದು ತನಗರಿವಿಲ್ಲದಂತೆಯೇ ಚೂಪಾದ ವಸ್ತುಗಳನ್ನು ತನ್ನ ಕಾಲುಗಳ ಒಳಗೆ ಚುಚ್ಚಿಕೊಳ್ಳುತ್ತಿದ್ದರಬಹುದು. ಆದರೆ ಈ ಆರೋಪವನ್ನು ಅನುಸೂಯ್ಯಾ ಸ್ಪಷ್ಟವಾಗಿ ತಳ್ಳಿ ಹಾಕಿ ತನಗಾವುದೇ ರೋಗವಿಲ್ಲ ಹಾಗೂ ತಾನು ತನ್ನ ಕಾಲುಗಳಿಗೆ ಚುಚ್ಚಿಕೊಂಡಿಲ್ಲ ಎಂದೇ ವಾದಿಸುತ್ತಾಳೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ, ದೇವರು, ದೇವರು-ಧರ್ಮ

    ಪರಮಪೂಜ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ.

    ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ…

  • ಸುದ್ದಿ

    ಸಿಲಿಕಾನ್ ಸಿಟಿ ಜನರೆ ಹುಷಾರ್ ದಟ್ಟಣೆ ತಟ್ಟಲಿದೆ ಬಿಸಿ ; ರಸ್ತೆಗಿಳಿಯುವ ಮುನ್ನ ಎಚ್ಚರ..ಎಚ್ಚರ…..!

    ಸಿಲಿಕಾನ್ ಸಿಟಿ ಜನರಿಗೆ ಇಂದು ಸಂಚಾರ ದಟ್ಟಣೆ ಬಿಸಿ ತಟ್ಟಲಿದೆ. ನೆರೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಜೆಡಿಎಸ್ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೂಡಲೇ ನೆರೆ ಪರಿಹಾರ ಹಣ ಬಿಡುಗಡೆಗೆ ಅಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ ಅವರು ಹೇಳಿದ್ದು, ಇವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯು ಸಂಗೊಳ್ಳಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ,ಈ ದಿನದ ರಾಶಿ ಭವಿಷ್ಯದಲ್ಲಿ ರಾಜಯೋಗವಿದ್ದು ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 13 ಜನವರಿ, 2019 ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ನಿಮ್ಮ…

  • ವಿಚಿತ್ರ ಆದರೂ ಸತ್ಯ

    ಇದು ಸಾಮಾನ್ಯದ ಸಾವಿನ ಕಥೆಯಲ್ಲ!ಗಂಡನಿಗೋಸ್ಕರ ಹೆಂಡತಿ!ಶಾಕ್ ಆಗ್ತೀರಾ…ಈ ಲೇಖನ ಓದಿ…

    ಪತಿ-ಪತ್ನಿ ಸಂಭಂದ ಬಿಡಿಸಲಾರದ ಅನುಭಂದ ಅಂತ ಹೇಳ್ತಾರೆ. ಅದರಲ್ಲೂ ನೀನು ಸತ್ತರೆ ನಾನು ಬದುಕಿರುವುದಿಲ್ಲ. ನಾನು ನಿಮ್ಮ ಜೊತೆ ಸಾಯುತ್ತೇನೆ ಎಂದು ಹಲವಾರು ಪತಿ ಪತ್ನಿಯರು ಹೇಳುತ್ತಾರೆ.ಆದರೆ ನಿಜವಾಗಲೂ ಅದನ್ನು ಎಷ್ಟು ಜನ ಪಾಲಿಸುತ್ತಾರೆ.

  • ಸುದ್ದಿ

    ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ one plus 7t…!

    ಒನ್‌ಪ್ಲಸ್‌ನ ಜನಪ್ರಿಯ  ಸ್ಮಾರ್ಟ್‌ಫೋನ್ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಮಾರುಕಟ್ಟೆಯಲ್ಲಿ ವಿಶೇಷವಾಗಿ ಸದ್ದು ಮಾಡಿದ್ದು, ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂಬ ಹೆಸರು ಕೂಡ ಗಳಿಸಿದೆ. ಒನ್‌ಪ್ಲಸ್ 7 ಸರಣಿಯ ಬಳಿಕ ಒನ್‌ಪ್ಲಸ್ 7T ಮತ್ತು 7T Pro ಎಂಬ ಎರಡು ನೂತನ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.  ಹೊಸ ಸ್ನ್ಯಾಪ್‌ಡ್ರ್ಯಾಗನ್ 855 Plus ಚಿಪ್‌ಸಹಿತ ನೂತನ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 7T ಮತ್ತು 7T Pro ಬಿಡುಗಡೆಯಾಗುವ ನಿರೀಕ್ಷೆಯಿದೆ.  ಈಗಾಗಲೇ ಒನ್‌ಪ್ಲಸ್ ಈ ಕುರಿತು ಸಿದ್ಧತೆ ನಡೆಸಿದ್ದು, ಸೋರಿಕೆಯಾದ ಚಿತ್ರದ ಪ್ರಕಾರ,…