ಬ್ರೆಜಿಲ್ ದೇಶಕ್ಕೆ ಹೋಗಿ ಆಗ್ನೇಯ ದಿಕ್ಕಿಗೆ ಹೊರಟರೆ ಬೆಲೋ ಹಾರಿಝಾಂಟ್ ಎಂಬ ಊರು ಸಿಗುತ್ತದೆ ಅಲ್ಲಿಂದ ಪೂರ್ವಕ್ಕೆ ಹೊರಟರೆ ನೊಯಿವಾ -ಡೂ- ಒಡೇರಿಯೋ (Noiva do Cordeiro)ಎಂಬ ಹೆಸರಿನ ಊರಿಗೆ ಹೋಗಬೇಕು.
ಆ ಊರಿನಲ್ಲಿ ಅಂದ ಅನ್ನೋಅಂದಕ್ಕೇನೆ ಹಂಗಿದಂಗಂಗೆ ಉಂಡೆನಾಮ ತಿಕ್ಕಿದಂತೆ ಬೆಳ್ಳಗಾಗಿಸಿ ಮಿರಿಮಿರಿ ಮಿಂಚಿಸಿದಂತಹಾ ಹುಡುಗಿಯರಿದ್ದಾರಂತೆ, ಅದರಲ್ಲೂ ಅವರ ಮೇಲೆ ನಲವತ್ತು ಹಿಡಿ ಮರಳು ಅವರ ಮೇಲೆಸೆದರೂ ಕೆಳಕ್ಕಿಳಿಯದಷ್ಟು ಹುಡುಗಿಯರ ರಾಶಿ ರಾಶಿ ಇದ್ದಾರೆ !

ಬರೀ ಹುಡುಗಿಯರೋ ಅಥವಾ ವಯಸ್ಸಾದವರೋ ಅಂತ ಕೇಳುವ ಹಾಗೆಯೇ ಇಲ್ಲ ಭಾರತೀಯ ಮಾಪನವಾದ ಏಳು ಮಲ್ಲಿಗೆ ತೂಕದ ಹುಡುಗಿಯರಿಂದ ಹಿಡಿದು ಎಲ್ಲಾ ತೂಕದ ಮಲ್ಲಿಗೆಯಂತಾ ಹುಡುಗಿಯರು ಕೂಡ ಇಲ್ಲಿದ್ದಾರೆ. ಇಲ್ಲಿರುವವರಲ್ಲಿ ಹಲವರನ್ನು ನೋಡಿದರೆ ಇಂದ್ರ ಇಲ್ಲಿಂದಲೇ ಆಯ್ಕಂಡ್ ಹೋಗಿರಬಹುದು ಎಂಬ ಸಂದೇಹ ಬರುವಷ್ಟು ಸುರಸುಂದರಿಯವರು ಇವರು.

ಇದ್ಯಾಕೆ ಹೀಗೆ ಅನ್ನೋದು ಬದಿಗಿರಲಿ ಮೊದಲಿಗೆ ಇವರ ಕಾನೂನು ಅನ್ನೋದಕ್ಕಿಂತ ಇವರು ಬದುಕುತ್ತಿರುವ ರೀತಿ ಸ್ವಲ್ಪ ವಿಚಿತ್ರವಿದೆ ಅಂದರೆ ಯಾರಾದರೂ ಹುಡುಗ ಇಲ್ಲಿನ ಹುಡುಗಿಯರನ್ನು ಮದುವೆ ಆಗುವುದಾದರೆ ಹುಡುಗಿ ಒಪ್ಪಿದರೆ ಆಗಬಹುದು .

ಆದರೆ ಮದುವೆಯಾದ ನಂತರ ವಾರಕ್ಕೊಮ್ಮೆ ಮಾತ್ರ ಗಂಡ ಮನೆಗೆ ಬರಬೇಕು ಹಾಗೂ ಜೊತೆಗಿದ್ದು ದುಡಿಮೆಯ ಲೆಕ್ಕ ಕೊಟ್ಟು ಮರುದಿನ ಕೆಲಸಕ್ಕೆ ಹೊರಡುತ್ತಿರಬೇಕು ! ಗಂಡನನ್ನು ಜೊತೆಯಲ್ಲೇ ಇಟ್ಟುಕೊಂಡು ಬದುಕಲು ಇವರಿಗೆ ಇಷ್ಟವಿಲ್ಲ ! ಇನ್ನು ಮಕ್ಕಳಾದಾಗ ಅದು ಗಂಡಾದರೆ ಆ ಹುಡುಗನಿಗೆ ಹದಿನೆಂಟು ವರ್ಷ ವಯಸ್ಸಾದದ್ದೇ ತಡ, ಒದ್ದು ದುಡಿಯಲು ಕಳುಹಿಸುತ್ತಾರೆ .

ಅವರ ಪ್ರೀತಿ ಪಾತ್ರವಾದ ಹೆಣ್ಣು ಹುಟ್ಟಿದರೆ ಅವರಂತೆಯೇ ನಿರಾತಂಕವಾಗಿ ಹೊಲದಲ್ಲಿ ಕೆಲಸ ಮಾಡುತ್ತಾ ಲೇಡಿ ರೈತರಂತೆ ಬದುಕಬಹುದು. ಅಲ್ಲಿನ ಪ್ರಮುಖ ಕೆಲಸವೇ ಕೃಷಿ ಹಾಗಂದ ಮಾತ್ರಕ್ಕೆ ಅದಾವುದೋ ಹಳೇ ನೈಟಿ ತೊಟ್ಟು ಹೊಲದಲ್ಲಿ ಕೆಲಸ ಮಾಡುವುದಿಲ್ಲ .ಫುಲ್ಲೀ ಅಪಡೇಟೇಡ್ ನಯಾ ನಯಾ ಡ್ರೆಸ್ ಧರಿಸಿ ಟಿಪ್ ಟಾಪಾಗಿ ಇರುವ ಟ್ರೆಂಡೀ ಹುಡುಗಿಯವರು ಇವರು.

ಅಸಲಿಗೆ ಇವರು ಹೀಗಾಗಿದ್ದಕ್ಕೆ ಕಾರಣ ಏನು ಅಂತ ಹಿನ್ನೆಲೆ ತಿಳಿಯಲು ನೋಡಿದರೆ ಹಿಂದೆಮ್ಮೆ 1891 “ಮರಿಯಾ ಸನ್ಹೋರಿಯಾ”ಎಂಬ ಹುಡುಗಿಗೆ ಮದುವೆ ಮಾಡಲು ಮುಂದಾದಾಗ ಆ ಹುಡುಗಿಗೆ ಹುಡುಗ ಇಷ್ಟವಾಗದೆ ಮದುವೆಗೆ ಒಪ್ಪುವುದಿಲ್ಲ ಆಗ ಹುಡುಗಿ ಮನೆಯವರೂ ಕೂಡ ಸುಮ್ಮನಾಗುತ್ತಾರೆ ಆದರೆ ಆ ಊರಿನ ಜನ ಈ ಹುಡುಗಿಯ ವಿರುದ್ಧ ತಿರುಗಿಬಿದ್ದು ಗಡೀಪಾರು ಮಾಡುತ್ತಾರೆ ಆ ಹುಡುಗಿ ಅಲ್ಲಿಂದ ಹೊರಬಂದು ಊರ ಹೊರಗಿನ ಜಾಗದಲ್ಲಿ ಹೊಸ ಊರನ್ನು ಸೃಷ್ಟಿಸುತ್ತಾಳೆ .

ಆನಂತರ ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ ಎಂಬಂತೆ ಇದೇ ಊರಿನಲ್ಲಿ ಮದುವೆ ವಿರೋಧಿಸಿದವರೆಲ್ಲಾ ಇವರಳ ಊರಿಗೆ ಸೇರಿ ಇವರದ್ದೇ ಸ್ವಂತ ನೆಲೆಯಾಗಿಸಿಕೊಳ್ಳುತ್ತಾ ಸಾಗುತ್ತಾರೆ ಅದೇ ಈ ಊರು ನೊಯಿವಾ -ಡೂ- ಒಡೇರಿಯೋ.

ಈಗ ಪ್ರಶ್ನೆ ಅವರ ಅಕ್ಕ ಪಕ್ಕ ಊರಿನವರು ಈ ಹುಡುಗಿಯರನ್ನ ಮದುವೆ ಆಗಬಹುದಲ್ಲ ಎಂದು .ಆದರೆ ಸಂಭಂದದ ರೀತಿ ನೋಡಿದರೆ ಇಲ್ಲಿರುವ ಶೇ 90 ರಷ್ಟು ಹುಡುಗಿಯರು ಅಕ್ಕಪಕ್ಕದ ಊರಿನವರಿಗೆ ಅಕ್ಕ.ತಂಗಿಯರಾಗಬೇಕಂತೆ ಇದು ಸಮಸ್ಯೆ.
ಕೃಪೆ: ಉಮೇಶ್ ಆಚಾರ್