News

ಗ್ಯಾಜೆಟ್

ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ..? ಕೂಡಲೆ ತೆಗೆದುಬಿಡಿ..!

800

ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್ ಈಗಾಗಲೆ ಬಹಳಷ್ಟು ಮಾಲ್‌ವೇರ್ ಇರುವ ಆಪ್ಸನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಆದರೂ ಇನ್ನೂ ಸಾಕಷ್ಟು ಆಪ್ಸ್ ಇವೆಯಂತೆ. ಅಂತಹವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ. ಇವುಗಳಲ್ಲಿ ಯಾವುದಾದರೂ ಆಪ್‌ನ್ನು ನೀವು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಕೂಡಲೆ ತೆಗೆದುಬಿಡಿ. ಇಲ್ಲದಿದ್ದರೆ ಎಷ್ಟೋ ಬೆಲೆಬಾಳುವ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹ್ಯಾಕರ್‌ಗಳ ಪಾಲಾಗುವ ಅಪಾಯವಿದೆ. ಆ ಆಪ್ಸ್ ಯಾವುದು ಎಂದು ಈಗ ನೋಡೋಣ.

1. ಗೈಡ್ ಫಾರ್ ಫಿಫಾ ಮೊಬೈಲ್ (Guide for FIFA Mobile)

ಗೂಗಲ್ ಪ್ಲೇಸ್ಟೋರ್‌ನಲ್ಲಿ ಇರುವ ಈ ಆಪ್‌‍ನಲ್ಲಿ ವೈರಸ್ ಇದೆ. ಇದನ್ನು ಕೂಡಲೆ ತೆಗೆದುಬಿಡಿ. ಈಗಾಗಲೆ ಇದನ್ನು ಲಕ್ಷದಷ್ಟು ಜನ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ನಿಮ್ಮ ಡಿವೈಸ್‌ನಲ್ಲಿದ್ದರೆ ಕೂಡಲೆ ಅನ್‌ಇನ್‌ಸ್ಟಾಲ್ ಮಾಡಿ.

2. ಗೈಡ್ ಫಾರ್ ಲೆಗೋ ನೆಕ್ಸೋ ನೈಟ್ಸ್ (Guide for LEGO Nexo Knights)
ಪ್ಲೇ ಸ್ಟೋರ್‌ನಲ್ಲಿರುವ ಈ ಆಪ್‌ನಲ್ಲಿ ಮಾಲ್‌ವೇರ್ ಇದೆ. ಇದನ್ನು ಈಗಾಗಲೆ 50 ಸಾವಿರಕ್ಕೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನೀವೂ ಡೌನ್‌ಲೋಡ್ ಮಾಡಿಕೊಂಡಿದ್ದರೆ ಕೂಡಲೆ ರಿಮೂವ್ ಮಾಡಿ.

3. ಗೈಡ್ ಫಾರ್ ರೋಲಿಂಗ್ ಸ್ಕೈ (Guide for Rolling sky)
ಇದನ್ನು 10 ಸಾವಿರ ಮಂದಿ ಬಳಕೆದಾರರು ಈಗಾಗಲೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಈ ಆಪ್ ಸಹ ಅಪಾಯಕಾರಿ. ಆದಕಾರಣ ಇದನ್ನೂ ತೆಗೆದುಬಿಡಿ.

4. ಗೈಡ್ ಫಾರ್ ಲೆಗೋ ಸಿಟಿ ಮೈ ಸಿಟಿ (Guide for LEGO City My City)
ಈ ಆಪ್‌ನ್ನು 50 ಸಾವಿರ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿಯಾದ ಆಪ್. ಕೂಡಲೆ ತೆಗೆದುಬಿಡಿ.

5. ಗೈಡ್ ಫಾರ್ ಪೋಕಿಮಾನ್ ಗೋ (Guide for Pokemon GO)
ಪೋಕಿಮಾನ್ ಗೇಮ್‌ಗೆ ಸೇರಿದ ಗೈಡ್ ಆಪ್ ಆಗಿರುವ ಇದು ಪ್ಲೇಸ್ಟೋರಲ್ಲಿದೆ. ಇದನ್ನು ಲಕ್ಷ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಆದಕಾರಣ ಇದನ್ನು ಅನ್‌ಇನ್‌ಸ್ಟಾಲ್ ಮಾಡಿಬಿಡಿ.

6. ಗೈಡ್ ಡ್ರೀಮ್ ಲೀಗ್ ಸಾಕರ್ (Guide Dream League Soccer)
ಈ ಆಪ್‌ನ್ನು 50 ಸಾವಿರ ಮಂದಿ ಈಗಾಗಲೆ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್‌ನಲ್ಲೂ ಸಹ ಮಾಲ್‌ವೇರ್ ಇದೆ. ಆದಕಾರಣ ಇದನ್ನು ನಿಮ್ಮ ಫೋನ್‌ನಿಂದ ಕೂಡಲೆ ತೆಗೆದುಬಿಡಿ.

7. ಲೀಗೈಡ್ ಲೆಗೋ ಸಿಟಿ ಅಂಡರ್ ಕವರ್ (LEGUIDE LEGO City Undercover)
ಇದು ಸಹ ಅಪಾಯಕಾರಿ ಆಪ್. ಇದನ್ನು ಈಗಾಗಲೆ 50 ಸಾವಿರ ಮಂದಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ನೀವು ಸಹ ಆ ಕೆಲಸ ಮಾಡಿದ್ದರೆ ಕೂಡಲೆ ತೆಗೆದುಬಿಡಿ.

8. ಗೈಡ್ ಫರ್ ಕಾಡಿಲ್ಲಾಕ್ಸ್ (Guide for Cadillacs)
ಇದನ್ನು 10 ಸಾವಿರ ಮಂದಿವರೆಗೂ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ವೈರಸ್ ಇರುವುದಾಗಿ ಗುರುತಿಸಲಾಗಿದೆ. ಆದಕಾರಣ ಇದನ್ನು ಇನ್‌ಸ್ಟಾಲ್ ಮಾಡಿಕೊಂಡಿರುವವರು ಕೂಡಲೆ ತೆಗೆದುಬಿಡಿ.

9. ಲೀ ಗೈಡ್ ಲೆಗೋ ಸಿಟಿ ಮೈ ಸಿಟಿ (LEGUIDE LEGO City My City)
ಇದನ್ನು 10 ಸಾವಿರ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಇದು ಸಹ ಅಪಾಯಕಾರಿ ಆಪ್. ಇದನ್ನು ಕೂಡಲೆ ತೆಗೆದುಬಿಡಿ.

10. ಗೈಡ್ ಫಾರ್ ಫೀಫಾ 17 (Guide For FIFA 17)
ಈ ಆಪ್ ಸಹ 50 ಸಾವಿರ ಮಂದಿ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲೂ ಮಾಲ್‍ವೇರ್ ಇದೆ. ಆದಕಾರಣ ಇದನ್ನೂ ಸಹ ತೆಗೆದುಬಿಡಿ.

11. ಗೈಡ್ ಫಾರ್ ಸ್ಲಿತರ್.ಐಓ (Guide for slither.io)
ಸುಮಾರು 1 ಲಕ್ಷ ಮಂದಿ ಬಳಕೆದಾರರು ಈ ಆಪನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆ ರೀತಿ ನೀವು ಮಾಡಿದ್ದರೆ ಕೂಡಲೆ ಈ ಆಪನ್ನು ತೆಗೆದುಬಿಡುವುದು ಒಳ್ಳೆಯದು.

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಮನರಂಜನೆ

    BB ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ!’ನನ್ನ ಕಂಡರೆ ನಿಮಗೆ ಏನನಿಸುತ್ತೆ?

    ಬಿಗ್‌ ಬಾಸ್‌ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್‌ ಇವೆಲ್ಲಾ ಮಾಮೂಲಿ.ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್‌ ಪಡೆದು ನಾಮಿನೇಶನ್‌ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್‌ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಶೈನ್‌ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್‌ ವಿಚಾರವನ್ನು ತೆರೆದಿಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ ಬಳಿಕ ಶೈನ್‌ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ…

  • ಸುದ್ದಿ

    ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

    ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.

  • ಆರೋಗ್ಯ

    ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನಾಗುತ್ತೆ?

    ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ. ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು…

  • ಸರ್ಕಾರದ ಯೋಜನೆಗಳು

    ಈಗ ವಿದ್ಯಾರ್ಥಿಗಳಿಗೆ 1 ಜಿ.ಬಿ. ಉಚಿತ ಡೇಟಾ ಸಿಗಲಿದೆ..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕನಿಷ್ಠ 1 ಜಿ.ಬಿ. ಡೇಟಾವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಆಗಸ್ಟ್ 15 ರೊಳಗೆ ಸೌಲಭ್ಯ ನೀಡಲು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ

  • ಸೌಂದರ್ಯ

    ಸೌತೆಕಾಯಿಯಲ್ಲಿದೆ ತೇವಾಂಶಭರಿತವಾದ ತ್ವಚೆಯ ಗುಟ್ಟು.! ತಿಳಿಯಲು ಈ ಲೇಖನ ಓದಿ..

    ಸೌತೆ ಕಾಯಿ ತೇವಾಂಶಭರಿತವಾದದ್ದು ಇದು ಎಲ್ಲಾರಿಗೂ ತಿಳಿದಿರುವ ವಿಷಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೆವಿಸುವುದು ಒಳ್ಳೆಯದು ಏಕೆಂದರೆ ಇದು ದೇಹದ ಉಷ್ಣಾಂಶವನ್ನ ಕಡಿಮೆ ಮಾಡುತ್ತದೆ. ಇದನ್ನ ಚಳಿಗಾಲದಲ್ಲಿ ತಿಂದರೆ ಶೀತವಾಗುತ್ತದೆ ಎಂದು ಎಲ್ಲರು ನಂಬುತ್ತಾರೆ, ಆದರೆ ಇದು ಚಳಿಗಾಲದಲ್ಲಿ ನಮ್ಮ ತ್ವಚೆಯಣ್ಣ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

  • ಉಪಯುಕ್ತ ಮಾಹಿತಿ

    ನಿಮ್ಮ ಪಾನ್‌ಕಾರ್ಡ್‌ ಆಧಾರ್‌ ಜೊತೆ ಲಿಂಕ್ ಆಗಿದೆಯೇ? ತಿಳಿಯೋದು ಹೇಗೆ? ಇಲ್ಲಿದೆ ವಿವರ

    ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ  (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ  1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…