ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನ್ಯಾಯಬೆಲೆ ಅಂಗಡಿಗಳಲ್ಲಿಯೇ ಇನ್ನುಮುಂದೆ ಬಸ್, ರೈಲು ಹಾಗೂ ವಿಮಾನ ಟಿಕೆಟ್ ಕಾಯ್ದಿರಿಸಬಹುದಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ಮೊಬೈಲ್ ರಿಚಾರ್ಜ್ ಸೇವೆಗಳು ಲಭ್ಯವಾಗಲಿವೆ. ರಾಜ್ಯ ಸರ್ಕಾರದ ಈ ಮಹತ್ವಕಾಂಕ್ಷಿ ಯೋಜನೆಗೆ ಬುಧವಾರ (ಆ. 2) ಚಾಲನೆ ದೊರೆಯಲಿದೆ.
“ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ಸೇವಾ ಸಿಂಧು ಕೇಂದ್ರಗಳಾಗಿ ಪರಿವರ್ತಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕ”ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಜೊತೆಗೆ ಬಸ್, ರೈಲು, ವಿಮಾನ ಟಿಕೆಟ್ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು.
ಕೇಂದ್ರ ಸರ್ಕಾರ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ ಎಸ್ಪಿವಿ) ಏಜೆನ್ಸಿ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ ಉಚಿತವಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಿ ಕೊಡಲಾಗುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಆದಾಯ ಬರುತ್ತದೆ. ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಯವರಿಗೆ ನೀಡುವ ಕಮಿಷನ್‌ನನ್ನು ಮೂರು ವರ್ಷಗಳವರೆಗೆ ಸಿಎಸ್ಸಿ ಎಜೆನ್ಸಿಗೆ ನೀಡಲಾಗುವುದು ಎಂದು ಹೇಳಿದರು..
ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಒಟ್ಟು 10 ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೇವೆ ಪ್ರಾರಂಭಗೊಳ್ಳಲಿವೆ. ಬೊಮ್ಮಸಂದ್ರ, ಮತ್ತಿಕೆರೆ, ರೆಹಮತ್ನಗರ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಎಲ್ಲ ಸೇವೆಗಳನ್ನು ಆಹಾರ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.ನ್ಯಾಯಬೆಲೆ ಅಂಗಡಿ ಎಂದರೆ ಕೇವಲ ಪಡಿತರ ವಿತರಣೆ ಮಾತ್ರವಲ್ಲ, ವಿವಿಧ ಸೇವೆಗಳು ಲಭ್ಯವಾಗುವಂತೆ ಮಾಡಬೇಕು. ಆ ಮೂಲಕ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಮುಖ ಹೆಜ್ಜೆಯನ್ನು ಇರಿಸಲಾಗುತ್ತಿದೆ. ಇದು ದೇಶದ ಇತಿಹಾಸದಲ್ಲಿಯೇ ಮೊದಲ ಪ್ರಯತ್ನ ಎನ್ನಲಾಗಿದೆ.
ರಾಜ್ಯದಲ್ಲಿ ಒಟ್ಟು 24 ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಹಂತಹಂತವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೂ ಯೋಜನೆ ವಿಸ್ತರಿಸಲು ಉದ್ದೇಶಿಸಲಾಗಿದೆ. ಸಾರಿಗೆ, ವಿಮಾನಯಾನ, ಬೆಸ್ಕಾಂ ಹಾಗೂ ಜನರ ನಡುವಿನ ಕೊಂಡಿಯಾಗಿ ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಸಂಬಂಧಪಟ್ಟ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಫ್ರಾಂಚೈಸಿ ಪಡೆದುಕೊಳ್ಳಲಿವೆ. ಬೆಂಗಳೂರು ಒನ್ ಮಾದರಿ ಸೇವೆಗಳು ಇಲ್ಲಿ ಲಭ್ಯವಾಗಲಿವೆ.
ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಇದು ದೊಡ್ಡ ವರದಾನವಾಗಲಿದೆ. ಬಸ್ ಹಾಗೂ ರೈಲು ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲು ನಗರ ಪ್ರದೇಶಗಳಿಗೆ ಬರುವ ಅನಿವಾರ್ಯತೆಯನ್ನು ತಪ್ಪಿಸಲು ಸರ್ಕಾರ ಈ ಸೌಲಭ್ಯ ನೀಡುತ್ತಿದೆ.ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಲ್ಲ ಸೇವೆಯೂ ಒಂದೆಡೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದು ಬಹು ವಿಶೇಷ ಯತ್ನ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಮಾಜ ಅಂದಮೇಲೆ ಅವರಲ್ಲಿ ಜನರ ನಡುವೆ ಎಂಥ ಸಂಬಂಧ ಇರಬೇಕು, ಎಂತೆಂಥ ನೀತಿಗಳಿರಬೇಕು ಅನ್ನೋ ವಿಷಯದ ಬಗ್ಗೆ ಎಲ್ಲಾ ಅವರು ತುಂಬಾ ಬರೆದಿಟ್ಟು ಹೋಗಿದ್ದಾರೆ.
ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಯಾಯ್ವರು ಸಾಕಷ್ಟು ಏಳು ಬೀಳುಗಳ ನಡುವೆಯೂ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಈಗೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ದೂರು ಪುರಸ್ಕರಿಸಿರುವ ನ್ಯಾಯಾಲಯ, ದೂರಿನ ವಿಚಾರಣೆಯನ್ನು ಬರುವ ಮೇ 2ಕ್ಕೆ ಮುಂದೂಡುವಂತೆ ಮಂಗಳವಾರ ಆದೇಶಿಸಿದೆ.ಕಳೆದ 2018ರಲ್ಲಿ ನಡೆದ ವಿಧಾನಸಭಾ…
ಸ್ಯಾಂಡಲ್ವುಡ್ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಜೀವನದಲ್ಲಿ ಮುದ್ದಾದ ಹೆಣ್ಣು ಮಗು ಎಂಟ್ರಿ ಕೊಟ್ಟು ಮೂರು ತಿಂಗಳಾಗಿದೆ. ಮೂರು ತಿಂಗಳಾದರೂ ಯಶ್ ಹಾಗೂ ರಾಧಿಕಾ ತಮ್ಮ ಮಗಳ ನಾಮಕರಣವನ್ನು ಮಾಡಲಿಲ್ಲ. ಈಗ ಅಭಿಮಾನಿಗಳು ಸೂಚಿಸಿದ ಹೆಸರನ್ನೇ ತಮ್ಮ ಮಗಳಿಗೆ ನಾಮಕರಣ ಮಾಡುತ್ತಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಹೆಣ್ಣು ಮಗುವಿಗೆ ತಂದೆ-ತಾಯಿ ಆಗಿದ್ದಾರೆ ಎಂಬ ಸುದ್ದಿ ಹೊರ ಬರುತ್ತಿದ್ದಂತೆ, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮಗಳಿಗೆ ಹೆಸರು ಸೂಚಿಸಲು ಪ್ರಾರಂಭಿಸಿದ್ದಾರೆ. ಯಶ್…
ಪಕ್ಷಕ್ಕಿಂತಲೂ ದೇಶ ದೊಡ್ಡದು. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಕ್ ಮೇಲೆ ವಾಯು ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ಇಂದು ರಾಜಸ್ಥಾನದ ಚುರುವಿನಲ್ಲಿ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದರು. ಇಂದು ನಿಮ್ಮೆಲ್ಲರ ಜೋಶ್ ನನಗೆ ಅರ್ಥವಾಗುತ್ತಿದೆ. ಇಂದು ನಮ್ಮ ದೇಶ ಸುರಕ್ಷಿತವಾಗಿದ್ದು, ಸುರಕ್ಷಿತರ ಕೈಯಲ್ಲಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು. 2014ರಲ್ಲಿ ಮೊದಲ ಬಾರಿಗೆ ನನ್ನ ಹೃದಯದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ….
ದೇಶದಲ್ಲಿ ನಡೆಯುತ್ತಿರುವ ಮೊಬೈಲ್ ಡೇಟಾ ಕ್ರಾಂತಿ ಇಡೀ ವಿಶ್ವವನ್ನು ನಮ್ಮ ಕಡೆಗೆ ತಿರುಗುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಗೂಗಲ್-ಫೇಸ್ಬುಕ್ ಸೇರಿದಂತೆ ಎಲ್ಲಾ ದೈತ್ಯ ಕಂಪನಿಗಳು ಭಾರತದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಾರತೀಯರಿಗಾಗಿಗೇ ಸೇವೆಗಳನ್ನು ನೀಡಲು ಮುಂದಾಗಿವೆ.
ಜಾಗತಿಕ ತಾಪಮಾನ ಏರಿಕೆ ಈ ಮೊದಲು ಊಹಿಸಿದ್ದಕ್ಕಿಂತಲೂ ಮೂರು ಪಟ್ಟು ಭೀಕರವಾಗಿರಲಿದೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ 2050ರ ವೇಳೆಗೆ ವಿಶ್ವದ ಪ್ರಮುಖ ಕರಾವಳಿ ನಗರಗಳು ಭೂಪಟದಿಂದಲೇ ಅಳಿಸಿ ಹೋಗಲಿವೆಯಂತೆ. ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಸಮುದ್ರ ಮಟ್ಟದಲ್ಲಿರುವ ವಿಶ್ವದ ಹಲವಾರು ನಗರಗಳು ಜಲಸಮಾಧಿಯಾಗಲಿವೆ. ಅಮೆರಿಕದ ನ್ಯೂ ಜೆರ್ಸಿ ನಗರದ “ಕ್ಲೈಮೇಟ್ ಸೆಂಟ್ರಲ್” ಎಂಬ ವಿಜ್ಞಾನ ಸಂಸ್ಥೆಯು ಈ ಹೊಸ ಸಂಶೋಧನೆ ನಡೆಸಿ ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್”ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ. ಸಂಶೋಧಕರು ಈ ಹಿಂದಿನ…