ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಮದುವೆ ಅನ್ನುವುದೇ ವಿಚಿತ್ರ ನೋಡ್ರಿ.ಯಾರು ಯಾವಾಗ ಯಾರನ್ನ,ಏತಕ್ಕೆ ಮದ್ವೆ ಆಗ್ತಾರೆ ಅಂತ ಹೇಳೋದಕ್ಕೆ ಆಗಲ್ಲ.ಇದು ದೇಶ,ಭಾಷೆ ಸಂಸ್ಕೃತಿ ಎಲ್ಲವನ್ನು ಮೀರಿದ್ದು.
ಇಷ್ಟೆಲ್ಲಾ ಪೀಟಿಕೆ ಯಾಕಂತೀರಾ..ನೋಡಿ,ಚೀನಾ ದೇಶದ ಮಹಿಳೆ, ತನ್ನ ವಯಸ್ಸಿಗಿಂತ 15 ವರ್ಷ ವಯಸ್ಸು ಕಡಿಮೆ ಇರುವ ಯುವಕನನ್ನು ಮದುವೆಆಗಿದ್ದಾರೆ.

ಹೌದು,ಇದು ನಿಜ.ನಿಮ್ಗೆ ಈಗೊಂದು ಪ್ರಶ್ನೆ ಕಾಡ್ತಾಯಿರಬಹುದು. ಆ ಯುವಕ ಈ ಮದುವೆಗೆ ಒಪ್ಪಿದ್ದಾದ್ರು ಹೇಗೆ ಅಂತ ಆಲ್ವಾ.ಕಾರಣ ಇದೆ.
38 ವರ್ಷದ ಮಹಿಳೆ ಆ ಮಹಿಳೆ, 23 ವಯಸ್ಸಿನ ಆ ಯುವಕನನ್ನು ಮದುವೆಆಗಲು ಬರೋಬ್ಬರಿ 5 ಕೋಟಿ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದಾಳೆ.ಇವರು ಜನವರಿ 10 ರಂದು ಮದುವೆಯಾಗಿದ್ದಾರೆ.ಈ ಹೆಂಗಸಿಗೆ ಈಗಾಗಲೇ ಮದುವೆ ಆಗಿದ್ದು, 14 ವರ್ಷದ ಮಗ ಕೂಡ ಇದ್ದಾನೆ.

ಈಕೆಗೆ ಗಂಡ ಇಲ್ಲವಾದ ಕಾರಣ ತನಗಿಂತ ಚಿಕ್ಕವಯಸ್ಸಿನವನನ್ನು ಮದುವೆಯಾಗಲು ಬಯಸಿದ್ದರು.ಹಾಗಾಗಿ ವಯಸ್ಸಿನಲ್ಲಿ ತನಗಿಂತ 15ವರ್ಷ ಚಿಕ್ಕವನಾದ ಯುವಕನೊಂದಿಗೆ ಮದುವೆಯಾಗಲು, ಆ ಯುವಕನಿಗೆ ಪ್ರಸ್ತಾಪ ಮಾಡಿದ್ದರು.

ಆಚ್ಚರಿ ಎಂಬಂತೆ 38ವರ್ಷದ ಆಕೆಯನ್ನು ಮದುವೆಯಾಗಲು ಆ ಯುವಕ ಕೂಡ ಒಪ್ಪಿದ್ದನು.ಆದರೆ ಮೊದ ಮೊದಲು ಆ ಯುವಕನ ಪೋಷಕರು ಇದಕ್ಕೆ ಒಪ್ಪಿರಲಿಲ್ಲ.ಆದರೆ ನೋಡಿ ಹಣ ಏನೆಲ್ಲಾ ಮಾಡುತ್ತೆ ಅಂದ್ರೆ,ಅವರು 50ಲಕ್ಷ ಹಣ ಕೊಡುವುದಾಗಿ ಹೇಳಿದ ತಕ್ಷಣ ಪೋಷಕರು ಸಹ ಒಪ್ಪಿದ್ದಾರೆ.ನಂತರ ಎರಡೂ ಕಡೆ ಪರಸ್ಪರ ಒಪ್ಪಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಇವರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ಹೆಣ್ಣು ಬಿಳಿ ಬಣ್ಣದ ಗೌನ ಧರಿಸಿದ್ದಾರೆ. ಜೊತೆಗೆ ಚಿನ್ನದ ಬಳೆಗಳು, ನೆಕ್ಲೇಸ್ ಮತ್ತು ಓಲೆಯನ್ನು ಧರಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…
ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.
ಮಹಿಳಾ ಟೆಕ್ಕಿಯೊಬ್ಬರು ಜೀನ್ಸ್ ಧರಿಸಿದ್ದರೆಂದು ಅವರ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡದಿರುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ಮಹಿಳಾ ಟೆಕ್ಕಿಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಈಕೆಗೆ ಕೆಕೆ ನಗರ್ ಆರ್‌ಟಿಓ ಡ್ರೈವಿಂಗ್ ಟೆಸ್ಟ್ ಗೆ ನಿರಾಕರಣೆ ಮಾಡಿದೆ. ಪವಿತ್ರಾ ಧರಿಸಿರುವ ಬಟ್ಟೆಯಿಂದಾಗಿಯೇ ಆಕೆಗೆ ನಿರ್ಬಂಧ ಹೇರಲಾಗಿತ್ತು. ನಾನು ಜೀನ್ಸ್ ಹಾಗೂ ಸ್ಲೀವ್ ಲೆಸ್ ಟಾಪ್ ಧರಿಸಿದ್ದೆ. ನನಗೆ ಅರ್ಜೆಂಟಾಗಿ ಲೈಸೆನ್ಸ್ ಬೇಕಿತ್ತು. ಹೀಗಾಗಿ ಡ್ರೈವಿಂಗ್ ಟೆಸ್ಟ್ ಗೆ ಅವಕಾಶ ನೀಡಲ್ಲ ಎಂದಾಗ ಕೂಡಲೇ ಮನೆಗೆ ತೆರಳಿ ಚೂಡಿದಾರ…
ಉಪ್ಪು ಎಷ್ಟು ಅನಿವಾರ್ಯ ಎಂಬುದು ತಿಳಿದ ವಿಷಯವೇ. ಆದರೆ ಕಪ್ಪು ಉಪ್ಪು ಸಹ ಭಾರತೀಯರಲ್ಲಿ ಹಿಂದಿನಿಂದಲೂ ಬಳಕೆಯಲ್ಲಿದೆ. ಈ ಕಪ್ಪು ಉಪ್ಪು ಸಹ ಔಷಧೀಯ ಗುಣಗಳ ಆಗರವೇ ಆಗಿದೆ. ಹಿಮಾಲಯದ ಕಪ್ಪು ಉಪ್ಪು ಅಥವಾ ಆಂಗ್ಲ ಭಾಷೆಯಲ್ಲಿ ಹೇಳುವುದಾದರೆ ಭಾರತೀಯ ಕಪ್ಪು ಉಪ್ಪು ಎಂದೇ ಪ್ರಚಲಿತದಲ್ಲಿದೆ.
ನೀವು ಮನೆ ಖರೀದಿಸುವ ಯೋಚನೆಯಲ್ಲಿದ್ದೀರಾ? ನಿಲ್ಲಿ …..? ಸರ್ಕಾರ ಜಿಎಸ್ಟಿ ವ್ಯವಸ್ಥೆ ಜಾರಿಗೊಳಿಸುವವರೆಗೂ ನಿಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿ. ಜುಲೈ ಒಂದರಿಂದ ಆರಂಭವಾಗುವ ಹೊಸ ತೆರಿಗೆ ವ್ಯವಸ್ಥೆಯಲ್ಲಿ, ದೊಡ್ಡ ಪ್ರಮಾಣದ ತೆರಿಗೆ ಹಣವನ್ನು ನೀವು ಉಳಿಸಬಹುದು.
ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ. ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು…