ಹೌದು, ಈತನಿಗೆ 12 ಸಾವಿರ ವರ್ಷ ಜೈಲು ಶಿಕ್ಷೆ!ಏನು ಕಾಮಿಡಿ ಮಾಡುತ್ತಿದ್ದೇವೆ ಅನುಸುತ್ತೆ ಆಲ್ವಾ?ಅನ್ನಿಸಲೇಬೇಕು. ಯಾಕಂದ್ರೆ ಈಗಂತೂ ಒಬ್ಬ ಮನುಷ್ಯ ಬದುಕೋದು 60 ವರ್ಷನಾ 70ವರ್ಷನಾ ಅಂತ ಗ್ಯಾರಂಟಿ ಇಲ್ಲ. ಇನ್ನೂ 12 ಸಾವಿರ ವರ್ಷ ಅಂದ್ರೆ ನಗು ಬರದೆ ಇರುತ್ತಾ!

ಆದರೆ ಮಲೆಷ್ಯಾದ ನ್ಯಾಯಾಲಯ ಒಂದು ಹೀಗೆ ತೀರ್ಪು ಕೊಟ್ಟಿದೆ. ಏಕೆ ಗೊತ್ತಾ ಮುಂದೆ ಓದಿ…

ನಿಮಗೆ ಗೊತ್ತಿರುವ ಹಾಗೆ ತಂದೆ ಮಗಳ ಸಂಬಂಧ ಎಷ್ಟು ಪವಿತ್ರವಾದದ್ದು ಎಂಬುದು , ಆದರೆ ಇಂತ ಸಂಬಂಧಕ್ಕೆ ಮಸಿ ಬಳಿದಿರುವಂತ ವಿಕೃತ ಕೃತ್ಯಕ್ಕೆ ಈ ಶಿಕ್ಷೆಯನ್ನು ಮಲೆಷ್ಯಾದ ಕೋರ್ಟ್ ಕೊಟ್ಟಿದೆ.

36 ವರ್ಷದ ಒಬ್ಬ ತಂದೆ ಇಂತಹ ಕೃತ್ಯವನ್ನು ಎಸಗಿದ್ದಾನೆ. ಈತನಿಗೆ ವಿವಾಹ ವಿಚ್ಛೆದನವಾಗಿದ್ದು, ಈತನ ಹದಿನೈದು ವರ್ಷದ ದೊಡ್ಡ ಮಗಳು ಈತನ ಜೊತೆಯಲ್ಲೇ ಇದ್ದಳು ತನ್ನ ಮಗಳಿಗೆ ಸತತ 599 ಬಾರಿ ಬಲಾತ್ಕಾರ ಮಾಡಿದ್ದಾನೆ. ಇದರಿಂದ ನೊಂದ ಮಗಳು ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ.

ಮಲೇಷ್ಯಾದಲ್ಲಿ ಅತ್ಯಾಚಾರ ಕೃತ್ಯಕ್ಕೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹಾಗಾಗಿ ಈತನ ವಿರುದ್ಧ 599 ಅತ್ಯಾಚಾರ ಕೇಸು ಹಾಗು 30 ಲೈಂಗಿಕ ದೌ ರ್ಜನ್ಯ ಆರೋಪಗಳು ಸಾಬೀತಾಗಿದ್ದು ಈ ಒಂದು ಪ್ರಕರಣಕ್ಕೆ ಕೋರ್ಟ್ 12 ವರ್ಷ ಜೈಲು ಶಿಕ್ಷೆ ಕೊಟ್ಟಿದೆ.

ಇಂತಹ ಕಾನೂನು ನಮ್ಮ ದೇಶದವರು ಮಾಡಿದ್ರೆ ನಮ್ಮಲಿ ನಡೆಯುವ ಅನೇಕ ಅತ್ಯಚಾರಗಳಿಗೆ ಸ್ವಲ್ಪ ಆದ್ರೂ ಕಡಿವಾಣ ಬೀಳಬಹುದು….