ಆಧ್ಯಾತ್ಮ, ದೇವರು, ದೇವರು-ಧರ್ಮ

ಇಲ್ಲಿದೆ ಪಂಚಮುಖಿ ಆಂಜನೇಯನ ಅವತಾರದ ಕತೆ..!ಹನುಮಂತನ 5 ತಲೆಗಳಿಗಿದೆ ಒಂದೊಂದು ವಿಶೇಷತೆ…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

1579

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಹಲವು ಹೆಸರುಗಳಿಂದ ಕರೆಯಲ್ಪಡುವ ಆಂಜನೇಯನ ವಿಶೇಷತೆ ಮಹತ್ವ ಪೂರ್ಣವಾದದ್ದು. ರಾಮನ ಪರಮ ಭಕ್ತನಾದ ಹನುಮಂತನಿಗೆ ಅಪಾರ ಸಂಖ್ಯೆಯ ಭಕ್ತರು…

ಮೊದಲಿಗೆ ಪಂಚಮುಖಿ ಆಂಜನೇಯನ ಅವತಾರವಾಗಿದ್ದು ಹೇಗೆ ಎಂದು ತಿಳಿಯೋಣ…

ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ
ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ.

ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ ವೇಷ ತಳೆದು ರಾಮ ಲಕ್ಷ್ಮಣರನ್ನು ಅಪಹರಿಸಿ ಪಾತಾಳಲೋಕಕ್ಕೆ ಕರೆದೊಯ್ಯುತ್ತಾನೆ.

ಹನುಮಂತನು ಅವರನ್ನು ಹುಡುಕಿಕೊಂಡು ಪಾತಾಳಲೋಕಕ್ಕೆ ಹೋದನು.ಅಲ್ಲಿ ಅವನಿಗೆ ಐದು ದಿಕ್ಕುಗಳಲ್ಲಿ ಇಟ್ಟಿರುವ ಐದು ದೀಪಗಳು ಗೋಚರಿಸಿದವು.ಅಹಿರಾವಣನ ಪ್ರಾಣವು ಆ ಐದು ದೀಪಗಳಲ್ಲಿ ಇದ್ದು ಐದು ದೀಪಗಳನ್ನು ಒಂದೇ ಸಾರಿ ಆರಿಸಿದಾಗ ಮಾತ್ರ ಅವನ‌ಪ್ರಾಣ ಹೋಗುವುದೆಂದು ತಿಳಿಯಿತು.

ಅಹಿರಾವಣನ್ನು ಸಂಹರಿಸಲು ಪಂಚಮುಖಿ ಅವತಾರ ತಾಳಿದನು .ಐದು ಮುಖಗಳಲ್ಲಿ ಉಳಿದ ನಾಲ್ಕು ಮುಖಗಳು ಯಾವುವೆಂದರೆ.ಹಯಗ್ರೀವ, ನರಸಿಂಹ. ಗರುಡ ಹಾಗೂ ವರಾಹ. ತನ್ನ ಐದು ಮುಖಗಳಿಂದ ಒಟ್ಟಿಗೆ ಐದು ದಿಕ್ಕುಗಳಿಗೂ ಗಾಳಿಯನ್ನು ಊದಿ ಅಲ್ಲಿದ್ದ ಐದು ದೀಪಗಳನ್ನು ಒಟ್ಟಿಗೆ ಆರಿಸಿದನು, ಅಹಿರಾವಣನ ಸಂಹಾರ ಮಾಡಿದನು.

ಕಂಬರಾಮಾಯಣದಲ್ಲಿ ಸುಂದರವಾಗಿ ಹೇಳಲಾಗಿದೆ, ಪಂಚಭೂತಗಳಲ್ಲಿ ಒಬ್ಬನಾದ ವಾಯುವಿನ ಪುತ್ರ ಹನುಮಂತ,ಪಂಚಭೂತಗಳಲ್ಲಿ ಒಂದಾದ ಭೂಮಿಯ ಮಗಳು ಸೀತೆಯನ್ನು ಭೇಟಿಯಾಗಲು, ಪಂಚಭೂತಗಳಲ್ಲಿ ಒಂದಾದ ಆಕಾಶದ ಮೂಲಕ ಪಂಚಭೂತಗಳಲ್ಲಿ ಒಂದಾದ ಸಮುದ್ರವನ್ನು,ದಾಟಿ ಪಂಚಭೂತಗಳಲ್ಲಿ ಒಂದಾದ ಅಗ್ನಿಯ ಮೂಲಕ ಲಂಕೆಯ ದಹನ ಮಾಡಿದನು.

ಇಲ್ಲಿ ಓದಿ:62ಅಡಿ ಉದ್ದದ ಹನುಮಂತನ ಬೃಹತ್ ಏಕಾಶಿಲಾವಿಗ್ರಹ ಬಂದಿದ್ದು ಎಲ್ಲಿಂದ.?ಶಿಲ್ಪಿ ಯಾರು.?ಆ ಶಿಲೆ ಸಿಕ್ಕಿದ್ದು ಹೇಗೆ.!ಇಲ್ಲಿದೆ ಸಂಪೂರ್ಣ ಮಾಹಿತಿ…

ಈ ಪಂಚಮುಖಿ ಆಂಜನೇಯನ ಐದು ಮುಖಗಳು ಮತ್ತು ಅವುಗಳ ವಿಶೇಷತೆ ಏನು ಅನ್ನೋದನ್ನ ಮುಂದೆ ನೋಡಿ…

ಹನುಮಂತ:

ಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.

ನರಸಿಂಹ:

ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.

ಗರುಡ:

ಇದು ಪಶ್ಚಿಮದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.

ಇಲ್ಲಿ ಓದಿ:ಶನಿ ದೇವರ ಕಾಟದಿಂದ ಪಾರಾಗಲು ಅಂಜನೇಯ ಸ್ವಾಮಿಯನ್ನು ಪೂಜಿಸುವುದು ಹೇಗೆ..?

ವರಾಹ:

ಇದು ಉತ್ತರದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.

ಹಯಗ್ರೀವ:

ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.

ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.

    ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….

  • ಆರೋಗ್ಯ, ತಂತ್ರಜ್ಞಾನ

    ಜಗತ್ತಿನಲ್ಲೇ ಮೊದಲ ಬಾರಿ ‘ಡಿಜಿಟಲ್ ಮಾತ್ರೆ’ ನೀಡಲು ಮುಂದಾದ ದೇಶ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಮಾನವನ ದೇಹದೊಳಗೆ ಪ್ರವೇಶಿಸಿದ ಮಾತ್ರೆಯು ಅಲ್ಲಿ ತಾನು ನಡೆಯುವ ಕ್ರಿಯೆಗಳನ್ನು ವೈದ್ಯನಿಗೆ ಕಳುಹಿಸಿಕೊಡುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಅನುಮತಿ ನೀಡಿದೆ.! ವಿಶ್ವದಲ್ಲಿಯೇ ಇಂತಹದೊಂದು ಡಿಜಿಟಲ್ ಮಾತ್ರೆ ಇದೀಗ ಜನ ಬಳಕೆಗೆ ಬಂದಿದ್ದು, ಇದು ಎಲ್ಲರಿಗೂ ಆಶ್ಚರ್ಯವಾಗಿದೆ.!

  • ಸುದ್ದಿ

    ಔಟ್ ಡೇಟೆಡ್ ನೂಡಲ್ಸ್ ನಿಂದ ಮನೆ ಕಟ್ಟಿ ಮಲಗಿದ ಭೂಪ..!

    ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ. ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ. ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ…

  • ಪ್ರೇಮ

    ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು – ಒಂದು ಪ್ರೆಮ ಕಥೆ 2 ನಿಮಿಷ ಸಮಯ ವಿದ್ದರೆ ಓದಿ

    ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು.

  • ಸುದ್ದಿ

    ಜಿಯೋ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನು ಕೊಟ್ಟ ಜಿಯೋ ಕಂಪನಿ,..!!ಇಲ್ಲಿದೆ ನೋಡಿ ಮಾಹಿತಿ,.!

    ಜಿಯೋ ಕಂಪನಿ; ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದ ರಿಲಯನ್ಸ್ ಜಿಯೋ ಇದೀಗ ಇತರೆ ನೆಟ್​ವರ್ಕ್​ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಮಾಡಲಿದೆ ಎಂದು ತಿಳಿಸಿದ್ದಾರೆ . ಈ ಹೊಸ ನಿಯಮವು ಇವತ್ತಿನಿಂದಲೇ  ಜಾರಿಗೆ ಬರಲಿದೆ ಎಂದು  ಹೇಳಿದ್ದಾರೆ. ಅಂದರೆ ಇನ್ಮುಂದೆ ಜಿಯೋ ಟು ಏರ್​ಟೆಲ್ ಅಥವಾ ವೊಡಾಫೋನ್ ಸೇರಿದಂತೆ ಇನ್ನಿತರ ನೆಟ್​ವರ್ಕ್​ಗಳಿಗೆ ಕರೆ ಮಾಡಿದರೆ ಶುಲ್ಕ ಅನ್ವಯವಾಗಲಿದೆ. ಇದರ ಹೊರತಾಗಿ ಡೇಟಾ ಸೌಲಭ್ಯವನ್ನು ಉಚಿತವಾಗಿ ನೀಡುವುದಾಗಿ ಜಿಯೋ ಕಂಪೆನಿ ಹೇಳಿಕೊಂಡಿದೆ. ಇತರೆ ಜಿಯೋ…

  • ಸುದ್ದಿ

    ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಹಣ ಹಂಚಿದ್ರಾ ಜೆಡಿಎಸ್ ಮುಖಂಡ..!?

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‍ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ…