ಸುದ್ದಿ

ಇಂದಿರಾ ಕ್ಯಾಂಟೀನ್ ಭವಿಷ್ಯವಿಂದು ಬಿಎಸ್‌ ಯಡಿಯೂರಪ್ಪನ ಕೈಯಲ್ಲಿ, ಮುಂದೆ ಏನಾಗುತ್ತೆ ನೋಡಿ..!

36

ಇಂದಿರಾ ಕ್ಯಾಂಟೀನ್ ಪಾಲಿಕೆಗೆ ಹೊರೆಯಾಗುವುದೋ ಅಥವಾ ಇಲ್ಲವೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿಂತಿದೆ. ಏಕೆಂದರೆ, ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ.

ಇಲಾಖೆಯು ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಹಣ ಮಾತ್ರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಡತ ಪ್ರಸ್ತುತ ಸಿಎಂ ಅವಗಾಹನೆಗೆ ಬಂದಿದ್ದು, ಮುಖ್ಯಮಂತ್ರಿ ಯವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಒಂದು ವೇಳೆ ಹಣಕಾಸು ಇಲಾಖೆಯ ನಿರ್ಧಾರಕ್ಕೆ ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದರೆ ಆಗ ಇಂದಿರಾ ಕ್ಯಾಂಟೀನ್ ಪಾಲಿಕೆಗೆ ದೊಡ್ಡ ಹೊರೆಯಾಗಲಿದೆ. ಆಗ ಪಾಲಿಕೆ ತನ್ನ ವಾರ್ಷಿಕ ಆದಾಯದಲ್ಲಿ ಕನಿಷ್ಠ 100 ಕೋಟಿ ಕ್ಯಾಂಟೀನ್ ನಿರ್ವಹಣೆಗೆ ಮೀಸಲಿಡಬೇಕಾದ ಅಗತ್ಯಬೀಳಲಿದೆ.

2019-20ನೇ ಸಾಲಿಗೆ 210 ಕೋಟಿ ನೀಡುವಂತೆ ಬಿಬಿಎಂಪಿಯು ಸರ್ಕಾರಕ್ಕೆ ಈ ಹಿಂದೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ನಿರ್ವಹಣೆಯ ಒಟ್ಟಾರೆ ವೆಚ್ಚದಲ್ಲಿ ಶೇ.50ರಷ್ಟು ಹಣವನ್ನಾದರೂ ನೀಡುವಂತೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಉತ್ತರಿಸಿರುವ ಹಣಕಾಸು ಇಲಾಖೆ ಯೋಜನೆಗೆ ಶೇ.25 ಹಣವನ್ನು ಮಾತ್ರ ನೀಡಬಹುದು ಎಂಬ ಅಭಿಪ್ರಾಯ ತಿಳಿಸಿದೆ. ಪ್ರಸ್ತತ ಈ ಸಂಬಂಧಿ ಕಡತ ಮುಖ್ಯಮಂತ್ರಿಯವರ ಒಪ್ಪಿಗೆಗೆ  ಸಿಎಂ ಕಚೇರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಕನ್ನಡ ಭಾಷೆಯಲ್ಲೇ2 ಸಾವಿರ ತೀರ್ಪು ನೀಡಿದ ‘ಮಿಟ್ಟಲಕೋಡ ‘ ಭಾಷಾ ಪ್ರೇಮದ ಬಗ್ಗೆ ನಿಮಗೆಷ್ಟು ಗೊತ್ತು..?ತಿಳಿಯಲು ಈ ಲೇಖನ ಓದಿ…

    ನ್ಯಾಯಾಲಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲೇ ಪ್ರಕರಣಗಳ ತೀರ್ಪು ನೀಡಬೇಕು ಎಂದು ಇತ್ತೀಚೆಗಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೇಳಿದ್ದರು.

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಆರೋಗ್ಯ

    ಚಹಾ ಮತ್ತು ಕಾಫಿ ಪ್ರಿಯರಿಗೆ ಶಾಕಿಂಗ್ ಸುದ್ದಿ, ಓದಿ ಆರೋಗ್ಯ ಕಾಪಾಡಿಕೊಳ್ಳಿ.

    ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ನಾವು ಚಹಾ ಮತ್ತು ಕಾಫಿಗೆ ಒಂದು ವಿಶೇಷವಾದ ಸ್ಥಾನವನ್ನ ಕೊಟ್ಟಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಾಫಿ ಮತ್ತು ಚಹಾ ಕುಡಿಯುವುದನ್ನ ನಾವು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೇವೆ ಅಂದರೆ ಅದನ್ನ ಸೇವಿಸದೇ ಇದ್ದರೆ ನಮಗೆ ವಿಪರೀತ ತಲೆ ಬರುತ್ತದೆ ಅನ್ನುವಷ್ಟು. ಇನ್ನು ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡಿದರೆ ದೇಹದಲ್ಲಿ ಏನೋ ಶಕ್ತಿ ಬಂದಷ್ಟು ಖುಷಿಯಾಗುತ್ತದೆ, ಇನ್ನು ಕೆಲಸದ ಒತ್ತಡದ ಸಮಯದಲ್ಲಿ ನಮ್ಮ ದೇಹಕ್ಕೆ ಮತ್ತು…

  • ಸುದ್ದಿ

    ಹಾಸನಾಂಬೆ ದೇವಿಯಾ ದರ್ಶನೋತ್ಸವಕ್ಕೆ ಇಂದು ಕೊನೆ…!

    ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಇಂದು ಗಣ್ಯರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಮಧ್ಯಾಹ್ನ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಇಂದು ಗಣ್ಯರು ಹಾಗೂ…

  • ವಿಚಿತ್ರ ಆದರೂ ಸತ್ಯ

    ಈ ವಿಮಾನದಲ್ಲಿ ಪ್ರಯಾಣಿಸಲು ಬಟ್ಟೆ ಬಿಚ್ಚಿ ಹೋಗ ಬೇಕು..!ತಿಳಿಯಲು ಈ ಲೇಖನ ಓದಿ..

    ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್‌ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.