ಸುದ್ದಿ

ಇಂದಿರಾ ಕ್ಯಾಂಟೀನ್ ಭವಿಷ್ಯವಿಂದು ಬಿಎಸ್‌ ಯಡಿಯೂರಪ್ಪನ ಕೈಯಲ್ಲಿ, ಮುಂದೆ ಏನಾಗುತ್ತೆ ನೋಡಿ..!

39

ಇಂದಿರಾ ಕ್ಯಾಂಟೀನ್ ಪಾಲಿಕೆಗೆ ಹೊರೆಯಾಗುವುದೋ ಅಥವಾ ಇಲ್ಲವೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿಂತಿದೆ. ಏಕೆಂದರೆ, ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ.

ಇಲಾಖೆಯು ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಹಣ ಮಾತ್ರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಡತ ಪ್ರಸ್ತುತ ಸಿಎಂ ಅವಗಾಹನೆಗೆ ಬಂದಿದ್ದು, ಮುಖ್ಯಮಂತ್ರಿ ಯವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಒಂದು ವೇಳೆ ಹಣಕಾಸು ಇಲಾಖೆಯ ನಿರ್ಧಾರಕ್ಕೆ ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದರೆ ಆಗ ಇಂದಿರಾ ಕ್ಯಾಂಟೀನ್ ಪಾಲಿಕೆಗೆ ದೊಡ್ಡ ಹೊರೆಯಾಗಲಿದೆ. ಆಗ ಪಾಲಿಕೆ ತನ್ನ ವಾರ್ಷಿಕ ಆದಾಯದಲ್ಲಿ ಕನಿಷ್ಠ 100 ಕೋಟಿ ಕ್ಯಾಂಟೀನ್ ನಿರ್ವಹಣೆಗೆ ಮೀಸಲಿಡಬೇಕಾದ ಅಗತ್ಯಬೀಳಲಿದೆ.

2019-20ನೇ ಸಾಲಿಗೆ 210 ಕೋಟಿ ನೀಡುವಂತೆ ಬಿಬಿಎಂಪಿಯು ಸರ್ಕಾರಕ್ಕೆ ಈ ಹಿಂದೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ನಿರ್ವಹಣೆಯ ಒಟ್ಟಾರೆ ವೆಚ್ಚದಲ್ಲಿ ಶೇ.50ರಷ್ಟು ಹಣವನ್ನಾದರೂ ನೀಡುವಂತೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಉತ್ತರಿಸಿರುವ ಹಣಕಾಸು ಇಲಾಖೆ ಯೋಜನೆಗೆ ಶೇ.25 ಹಣವನ್ನು ಮಾತ್ರ ನೀಡಬಹುದು ಎಂಬ ಅಭಿಪ್ರಾಯ ತಿಳಿಸಿದೆ. ಪ್ರಸ್ತತ ಈ ಸಂಬಂಧಿ ಕಡತ ಮುಖ್ಯಮಂತ್ರಿಯವರ ಒಪ್ಪಿಗೆಗೆ  ಸಿಎಂ ಕಚೇರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ಈ ದಿನದ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 22 ಜನವರಿ, 2019 ಬಹಳ ಪ್ರಯೋಜನಕಾರಿ ದಿನವಲ್ಲ- ಆದ್ದರಿಂದ ನಿಮ್ಮ ಹಣದ ಪರಿಸ್ಥಿತಿಯನ್ನು ಪರಿಶೀಲಿಸಿ ಮತ್ತು…

  • ಸಿನಿಮಾ

    ಕನ್ನಡಿಗರಿಗೆ ಚಳ್ಳೆ ಹಣ್ಣು ತಿನ್ನಿಸಿದ್ರಾ ರಶ್ಮಿಕಾ…ಬಯಲಾಯ್ತು ಇವರು ಹೇಳಿದ ಮಹಾ ಸುಳ್ಳು…

    ಕನ್ನಡವನ್ನು ಕಾಲಲ್ಲಿ ಒದ್ದು ಅವಕಾಶಕ್ಕಾಗಿ ಪರಭಾಷೆಯ ಗುಲಾಮಳಾಗಿರುವ ರಶ್ಮಿಕ ಈಗ ಕನ್ನಡಿಗರನ್ನು ಯಾಮಾರಿಸಿದ್ದಾಳೆ.ಕರುನಾಡಿನಲ್ಲಿ ಹುಟ್ಟಿ ಬೆಳೆದರು ಕನ್ನಡ ಮಾತನಾಡುವುದಿಲ್ಲ. ಆದರೆ ಪರ ಭಾಷೆಯ ಬಗ್ಗೆ ಎಲ್ಲಿಲ್ಲದ ವ್ಯಾಮೋಹ. ಆ ಭಾಷೆಯನ್ನು ಮಾತ್ರ ತುಂಬಾ ಚೆನ್ನಾಗಿ ಗೌರವದಿಂದ ಮಾತನಾಡುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಾಗಲೂ , ಮಾಧ್ಯಮಗಳಲ್ಲೂ ಸಹ ಬೇರೆಯ ಭಾಷೆಯನ್ನು ಬರದಿದ್ದರೂ ಕಷ್ಟಪಟ್ಟು ಮಾತನಾಡುತ್ತಾಳೆ ವಿನಹ ಕನ್ನಡವನ್ನು ಮಾತ್ರ ಮಾತನಾಡುವುದಿಲ್ಲ. ಕನ್ನಡದಲ್ಲಿ ಸಂದರ್ಶನ ವಿದ್ದರೂ ಆಂಗ್ಲ ಭಾಷೆಯಲ್ಲಿಯೇ ಮಾತನಾಡುತ್ತಾಳೆ. ಇವಳಿಗೆ ಕನ್ನಡವೆಂದರೆ ಎಲ್ಲಿಲ್ಲದ ತಾತ್ಸಾರ. ಹೀಗಾಗಿ ಕನ್ನಡಿಗರು…

  • ಸುದ್ದಿ

    ಮತ್ತೆ ಪ್ಲೇ ಸ್ಟೋರ್‌ನಲ್ಲಿ ನಕಲಿ ಆ್ಯಪ್ಸ್ ಕಾಟ,ಯಾವ ಆ್ಯಪ್ಸ್ ಮಾಹಿತಿ ಕದಿಯುತ್ತಿವೆ,ತಿಳಿದುಕೊಳ್ಳಿ…!

    ಗೂಗಲ್‌ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಆ್ಯಪ್ಸ್ಒದಗಿಸುವ ಪ್ಲೇ ಸ್ಟೋರ್ ಈಬಾರಿ ಮತ್ತೆ ಸುದ್ದಿಯಾಗಿದೆ. ಪ್ಲೇಸ್ಟೋರ್ ತುಂಬಾ ಇರುವ ಆ್ಯಪ್‌ಗಳ ಪೈಕಿ ಬಹುತೇಕಆ್ಯಪ್ಸ್ ನಕಲಿ ಮತ್ತು ಮಾಹಿತಿಕದಿಯುವ ಕೆಲಸ ಮಾಡುತ್ತಿವೆ. ಮಾಲ್ವೇರ್ಮತ್ತು ವೈರಸ್ ಹೊಂದಿರುವ ಆ್ಯಪ್ಸ್ಬಗ್ಗೆ ಗೂಗಲ್ ಪ್ಲೇ ಸ್ಟೋರ್ ಮತ್ತೆಸುದ್ದಿಯಲ್ಲಿದೆ.  ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಭದ್ರತೆ, ಸುರಕ್ಷತೆ ಒದಗಿಸುವ ಸೈಮಂಟೆಕ್ ಸಂಸ್ಥೆ ಹೊಸದಾಗಿ ಪ್ರಕಟಿಸಿರುವ ವರದಿಯಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿನ ಕೆಲವೊಂದು ಆ್ಯಪ್ಸ್ ನಕಲಿಯಾಗಿದ್ದು, ಗ್ರಾಹಕರ ಮಾಹಿತಿ ಕದಿಯುವ ಕೆಲಸದ ಜತೆಗೆ, ಪಾಪ್‌ ಅಪ್‌ ಜಾಹೀರಾತಿನ ಮೇಲೆ ಕ್ಲಿಕ್ ನೀಡುವ ಕೆಲಸ ಮಾಡುತ್ತಿವೆ ಎಂದು…

  • ಮನರಂಜನೆ

    ಕೊನೆಗೂ ಕಾಮನ್ ಮ್ಯಾನ್’ಗೆ ಸಿಗದ ಬಿಗ್ ಬಾಸ್ ಪಟ್ಟ..!ಕೇವಲ ಒಂದು ಲಕ್ಷ ಕೊಟ್ಟಿದ್ದು ಸರಿಯೇ..?ಏನಾಯ್ತು ಮುಂದೆ ನೋಡಿ…

    ಕೊನೆಗೂ ಬಿಗ್ ಬಾಸ್ ಕನ್ನಡ ಸಂಚಿಕೆ 5 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ತೆರೆ ಬಿದ್ದಿದೆ.ಈ ಸಲದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಮಾನ್ ಮ್ಯಾನ್’ಗೂ ಕೂಡ ಕಲರ್ಸ್ ಕನ್ನಡ ವಾಹಿನಿಯವರು ಅವಕಾಷ ಕೊಟ್ಟಿದ್ದರು.ಕಾಮಾನ್ ಮ್ಯಾನ್’ಗಳಾಗಿ ದಿವಾಕರ್,ಸಮೀರ್ ಆಚಾರ್ಯ ಮತ್ತು ರಿಯಾಜ್ ರವರು ಭಾಗವಹಿಸಿ

  • ಜೀವನಶೈಲಿ

    ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

    ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ.

  • ಸುದ್ದಿ

    ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

    ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….