News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಜ್ಯೋತಿಷ್ಯ

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

701

ಇಂದು ಬುಧವಾರ, 14/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಕೆಲಸ ಕಾರ್ಯಗಳಲ್ಲಿ ಅಡಚಣೆ. ಕಾರ್ಯಸಾಧನೆಗಾಗಿ ಸಂಚಾರದ ಸಾಧ್ಯತೆ. ನಿಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿಯು ಕೈಸೇರುವುದು.ಕುಟುಂಬದಲ್ಲಿ ಮಾತಿನ ಚಕಮಕಿ. ಅಧಿಕಾರಿ ವರ್ಗದವರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿ. ಕೌಟುಂಬಿಕವಾಗಿ ಸಂತೋಷ.

ವೃಷಭ:-

ಬಂಧುಗಳೊಂದಿಗೆ ಮನಸ್ತಾಪ. ಆರ್ಥಿಕ ಸ್ಥಿತಿಯಲ್ಲಿ ಏರುಪೇರು. ಅನವಶ್ಯಕ ವೆಚ್ಚ. ದೂರದ ಪ್ರಯಾಣ ಉಚಿತವಲ್ಲ. ಯೋಗ್ಯ ವಯಸ್ಕರಿಗೆ ಕಂಕಣಬಲ. ಮನೆಯ ಹಿರಿಯರ ಮಾತಿಗೆ ಎದುರಾಡದಿರಿ. ವಿದ್ಯಾರ್ಥಿಗಳಿಗೆ ಆಗಾಗ ನಿರುತ್ಸಾಹ ತರಲಿದೆ. ಆರೋಗ್ಯದಲ್ಲಿ ಏರುಪೇರು.

ಮಿಥುನ:

ವ್ಯಾಪಾರದಲ್ಲಿ ವೃದ್ಧಿ. ಸಂತೋಷದ ಸುದ್ದಿಗಳನ್ನು ಕೇಳಲಿದ್ದೀರಿ. ಹಣಕಾಸಿನ ತೊಂದರೆ ಇರುವುದಿಲ್ಲ.ದಿನಾಂತ್ಯ ಅತಿಥಿಗಳಿಂದ ಶುಭ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ವಿವಾದಗಳಿಂದ ದೂರವಿರಿ.

ಕಟಕ :-

ಸಹೋದ್ಯೋಗಿಗಳಲ್ಲಿನ ಅನುಮಾನ. ಹಣಕಾಸು ಸಕಾಲಕ್ಕೆ ಬರುವುದು. ಬೇಸಾಯ ಕೃಷಿ ಸಂಬಂಧಿತ ವೃತ್ತಿಯವರು ಮುನ್ನಡೆ. ಸಹೋದ್ಯೋಗಿಗಳಲ್ಲಿನ ಅನುಮಾನಗಳು ದೂರವಾಗಿ ಒಳ್ಳೆಯ ವಾತಾವರಣ ಮೂಡಲಿದೆ.

 ಸಿಂಹ:

ಉದ್ಯೋಗ ಕ್ಷೇತ್ರದಲ್ಲಿ ವಿಪರೀತ ಒತ್ತಡ. ಸ್ಥಿರಾಸ್ತಿ ಮಾರಾಟದಲ್ಲಿ ಕಿರಿಕಿರಿ. ಕೌಟುಂಬಿಕ ಶಾಂತಿ ನೆಮ್ಮದಿ. ಕೋರ್ಟು ಕಚೇರಿ ಕಾರ್ಯಗಳಲ್ಲಿ ಅಲೆದಾಟ. ಗೃಹ ಪರಿಕರಗಳಿಗೆ ಖರ್ಚುವೆಚ್ಚ. ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನ.ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕನ್ಯಾ :-

ಪತ್ನಿಯ ಅನಾರೋಗ್ಯದಿಂದ ವಿಪರೀತ ಖರ್ಚು. ಸಂತಸದ ಸುದ್ದಿ ಬರಲಿದೆ. ಕ್ರಯ, ವಿಕ್ರಯಗಳಲ್ಲಿ ಲಾಭ. ಸ್ತ್ರೀಯರಿಂದ ಅಪವಾದ. ಆದಾಯ ಹೆಚ್ಚಾದರೂ ಖರ್ಚುವೆಚ್ಚ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ. ಅಧಿಕಾರಿ ವರ್ಗದವರಿಂದ ಆಗಾಗ ಕಿರಿಕಿರಿ. ಹಿರಿಯರೊಂದಿಗೆ ಉತ್ತಮ ಸಂಬಂಧ ಇರಲಿದೆ.

ತುಲಾ:

ಸರ್ಕಾರದಿಂದ ದೊರೆಯಬೇಕಾದ ಅನುಕೂಲತೆಗಳು ಸಕಾಲದಲ್ಲಿ ಲಭ್ಯ. ನಿತ್ಯದ ವ್ಯವಹಾರದಲ್ಲಿ ಪ್ರಗತಿ. ಸ್ಥಿರ ವಸ್ತುಗಳ ಖರೀದಿ. ಆರ್ಥಿಕವಾಗಿ ಉನ್ನತಿ. ವೈವಾಹಿಕ ಜೀವನದಲ್ಲಿ ಕೆಲವು ತಪ್ಪುಗ್ರಹಿಕೆಗಳು ಕಂಡುಬರಬಹುದು, ಇದನ್ನೇ ನೀವೇ ಬುದ್ದಿವಂತಿಕೆಯಿಂದ ನಿವಾರಿಸಿಕೊಳ್ಳಿ.

ವೃಶ್ಚಿಕ :-

ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಹಿತಮಿತ್ರರ ಆಗಮನದಿಂದ ಸಂತಸ ತಂದೀತು. ಮಂಗಳ ಕಾರ್ಯಗಳಲ್ಲಿ ಭಾಗಿ. ಹಣ ಹೂಡಿಕೆಗಳಲ್ಲಿ  ಅವಸರ ಬೇಡ. ಅಧಿಕ ಖರ್ಚು.

ಧನಸ್ಸು:

ವ್ಯವಹಾರದಲ್ಲಿ ಮೋಸ ಹೋಗವ ಸಾಧ್ಯತೆ ಇದೆ. ಚಿನ್ನಾಭರಣಗಳ ಖರೀದಿ. ಧನಾಗಮನದಿಂದ ಕಾರ್ಯಸಿದ್ಧಿ.ಅಪರೂಪದ ವ್ಯಕ್ತಿಯೊಬ್ಬರ ಭೇಟಿ. ದಾಂಪತ್ಯದಲ್ಲಿ ಶುಭಸಮಾಚಾರ. ಕೌಟುಂಬಿಕ ಜೀವನದಲ್ಲಿ ನೀವು ದೂರವಾದಂತೆ ಅಥವಾ ಬದ್ದತೆ ಕಡಿಮೆಯಾದಂತೆ ಭಾಸವಾಗುವುದನ್ನು ದೂರವಿಡಬೇಕು. ಸಂಚಾರದಲ್ಲಿ ಜಾಗ್ರತೆ ಇರಲಿ.

ಮಕರ :-

ಆತ್ಮವಿಶ್ವಾಸ ವೃದ್ಧಿ. ಸಹೋದ್ಯೋಗಿಗಳಲ್ಲಿ ಹರ್ಷ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ವಿರಲಿ. ಮಾನಸಿಕ ಒತ್ತಡ. ಮನೆಯವರೊಂದಿಗೆ ದೇವತಾ ದರ್ಶನ. ಉದ್ಯೋಗಿಗಳಿಗೆ ಲಾಭ. ವಾಹನ ಖರೀದಿ.

ಕುಂಭ:-

ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ.ಶ್ರಮವರಿಯದ ಕೆಲಸ ಕಾರ್ಯಗಳು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ, ವಾಹನಾದಿಗಳಂದ ಲಾಭ. ತುರುಸಿನ ಓಡಾಟ ಮಾಡಬೇಕಾದ ಅನಿವಾರ್ಯತೆ. ದೇಹಾರೋಗ್ಯದ ಸುಧಾರಣೆ.

ಮೀನ:-

ಆರೋಗ್ಯದ ಕಡೆ ಗಮನ ಇರಲಿ.ಗುರು ಹಿರಿಯರ ಅವಗಣನೆ ಬೇಡ. ಅತಿಯಾದ ಕೆಲಸ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತೆ. ಉನ್ನತ ಶಿಕ್ಷಣಕ್ಕೆ ಅಡಚಣೆ. ವೃತ್ತಿರಂಗದಲ್ಲಿ ಅಪವಾದ ಭೀತಿ. ರಿಯಲ್ ಎಸ್ಟೇಟ್‍ನವರಿಗೆ ಲಾಭ. ಹಿರಿಯರ ಮಾರ್ಗದರ್ಶನದಿಂದ ಸಮಾಧಾನ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ