ಪ್ರೇಮ

ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು – ಒಂದು ಪ್ರೆಮ ಕಥೆ 2 ನಿಮಿಷ ಸಮಯ ವಿದ್ದರೆ ಓದಿ

418
ನನ್ನ ಕಥೆ

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ ತಲುಪಿ ಅಲ್ಲಿಂದ ಬೆಂಗಳೂರಿಗೆ ಹೊರಡುತ್ತದೆ. ಸಾಮಾನ್ಯವಾಗಿ ಯಾವಾಗಲೂ ನನ್ನ ಆಯ್ಕೆ ಅದೇ ಆಗಿರುತ್ತಿತ್ತು.
ಇಡೀ ದಿನದ ಕೆಲಸದ ಒತ್ತಡದಿಂದ ತುಂಬಾ ಆಯಾಸವಾಗಿ ನಿದ್ರೆ ಬರುತ್ತಿತ್ತು. ಅದನ್ನು ತಡೆಯಲು ಅಲ್ಲಿಯೇ ಇದ್ದ COFFEE DAY ಯಲ್ಲಿ ನನ್ನ ಇಷ್ಟದ MEXICAN COFFEE ಕುಡಿಯುತ್ತಾ ಕುಳಿತೆ. WATSAPP OPEN ಮಾಡಿ ಕೆಲವು ಸ್ನೇಹಿತರಿಗೆ ಸಂದೇಶ ಕಳುಹಿಸಿ ಬೇಕಂತಲೇ ಅವರ ನಿದ್ರೆಗೆ ಭಂಗ ಮಾಡಿ ಗೋಳಾಡಿಸಿದೆ.
ವಿಮಾನ ಸರಿಯಾದ ಸಮಯಕ್ಕೆ ಬಂದಿತು.EMIRATES ನ ಆ ಬೃಹತ್ ಅಂತರರಾಷ್ಟ್ರೀಯ ವಿಮಾನದಲ್ಲಿ ದೆಹಲಿಯ ಪ್ರಯಾಣಿಕರೇ ಹೆಚ್ಚಿಗೆ ಇದ್ದು ಬಹುತೇಕರು ಅಲ್ಲಿಯೇ ಇಳಿದರು. ಕೇವಲ 60 ಜನ ಮಾತ್ರ ಬೆಂಗಳೂರಿನತ್ತ ಹೊರಟೆವು. ಆರಾಮವಾಗಿ ಖಾಲಿ ಇದ್ದ ಸೀಟಿನಲ್ಲಿ ಕುಳಿತು ನಿದ್ರೆಗೆ ಜಾರಿದೆ. ಬೆಂಗಳೂರಿಗೆ ಸುಮಾರು 2 ಗಂಟೆ 20 ನಿಮಿಷದಷ್ಡು ಪ್ರಯಾಣ.
ವಿಮಾನ TAKE OFF ಆಗಿ 20 ನಿಮಿಷವೂ ಆಗಿರಲಿಲ್ಲ. ನನ್ನ ಮುಂದಿನ ಸೀಟಿನಿಂದ ಒಂದು ಹೆಣ್ಣು ಧ್ವನಿ UNEASINESS ನಿಂದ ನರಳುತ್ತಿರುವುದು ಕೇಳಿಸಿತು. ತಕ್ಷಣ ಎದ್ದು ನನ್ನಿ೦ದ ಏನಾದರೂ ಸಹಾಯ ಬೇಕೆ ಎಂದು ಕೇಳಿದೆ. ಆಕೆ ನನಗೆ ಸ್ವಲ್ಪ ಉಸಿರಾಟದ ತೊಂದರೆಯಾಗಿದೆ ಎಂದಳು. ನಾನು ಅಲ್ಲಿನ ಪರಿಚಾರಕಿಯರಿಗೆ ಹೇಳಬೇಕು ಎನ್ನುವಷ್ಟರಲ್ಲಿ ನಾನು ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಅಲ್ಲಿನ ಎಸಿಯ ತೊಂದರೆಗಾಗಿ ಇರಲಿ ಎಂದು OTRIVIN ADULT NOSE DROPS

ತಗೆದುಕೊಂಡು ಹೋಗಿರುತ್ತೇನೆ. ಈಗ ಅದರ ನೆನಪಾಗಿ ಬ್ಯಾಗಿನಿಂದ ಅದನ್ನು ತೆಗೆದುಕೊಟ್ಟೆ. ಆಕೆ ಅದನ್ನು ಉಪಯೋಗಿಸಿದ ಕೆಲ ನಿಮಿಷಗಳಲ್ಲೇ ನಿರಾಳ ಉಸಿರಾಟ ಸಾಧ್ಯವಾಯಿತು. ಆಕೆ ಅತಿ ಎನಿಸುವಷ್ಟು ಕೃತಜ್ಙತೆ ಅರ್ಪಿಸಿದಳು.

ಸಮೃದ್ಧಿ

ಸಮಸ್ಯೆ ಪ್ರಾರಂಭವಾಗಿದ್ದು ಇಲ್ಲಿಂದಲೇ. ಆಕೆಯ ಸುಮಧುರ ಧ್ವನಿ ಆಕರ್ಷಕ ರೂಪ ಮಲ್ಲಿಗೆ ಹೂವಿನಂತ ನಗು ಸೌಮ್ಯತೆಯ ಮಾತಿನ ಮೋಡಿಗೆ ನನ್ನ ನಿದ್ರೆ ಹಾರಿ ಹೋಗಿತ್ತು. ಕನಸಿನ ಕನ್ಯೆ ಧರೆಗಿಳಿದು ಬಂದಂತ ಸೌಂದರ್ಯ ಅವಳಲ್ಲಿ ತುಂಬಿತ್ತು. ನೀಲಿ ಜೀನ್ಸ್ ಸ್ಕರ್ಟ್, ಸ್ಲೀವ್ ಲೆಸ್ MILK WHITE T SHIRT ತೊಟ್ಡಿದ್ದ ಆಕೆ CURLY HAIR ನಿಂದಾಗಿ ನನಗೆ ಸಾಕ್ಷಾತ್ ಮರ್ಲಿನ ಮೆನ್ರೋ ತರ ಕಾಣುತ್ತಿದ್ದಳು.
ಒಂದಷ್ಡು ಸಂಕೋಚ ಸ್ವಭಾವದ ನಾನು ನಾಚಿಕೆಯಿಂದಲೇ ಆಕೆಯೊಂದಿಗೆ ಮಾತಿಗಿಳಿದೆ.
ಆಕೆಯ ಹೆಸರು ಸಮೃದ್ಧಿ. ಬೆಂಗಳೂರಿನವರು..ಇಂಗ್ಲೆಂಡಿನ OXFORD SCHOOL OF ECONOMICS ನಲ್ಲಿ GRADUATION ಮಾಡಿ ಈಗತಾನೆ ಅಲ್ಲಿಂದ CONVOCATION CERTIFICATE ಪಡೆದು ನೇರ ಬೆಂಗಳೂರಿನ ಅವಳ ಮನೆಗೆ ಹೊರಟಿದ್ದಳು. ಆಕೆಯ ಅಪ್ಪ ನಿವೃತ್ತ ಕರ್ನಲ್. ಅಮ್ಮ GYNOCALOGIST. ಮನೆ ಜೆ ಪಿ ನಗರದಲ್ಲಿ. ಮುಂದೆ ಬೆಂಗಳೂರಿನಲ್ಲಿಯೇ SERVICE ORIENTED BUSINESS ಮಾಡಬೇಕೆಂಬ ಯೋಜನೆಯಿದೆ.
ನನ್ನನ್ನು ಸಣ್ಣದಾಗಿ ಪರಿಚಯಿಸಿಕೊಂಡೆ. LANDINGS ANNOUNCEMENT ಬಂದಾಗಲೇ ನಾನು ಈ ಲೋಕಕ್ಕೆ ಬಂದದ್ದು. ವಿಮಾನದ ಪೈಲೆಟ್ ಏನಾದರೂ ನನ್ನ ಸ್ನೇಹಿತನಾಗಿದ್ದಿದ್ದರೆ ಏನೋ ಒಂದು ನೆಪ ಹೇಳಿ ವಿಮಾನವನ್ನು ಮತ್ತೆ ದೆಹಲಿಗೇ ತಿರುಗಿಸು ಎಂದೇಳುತ್ತಿದ್ದೆ. ಅಷ್ಟರ ಮಟ್ಟಿಗೆ ಆಕೆಯ ಮೋಹಕ್ಕೆ ಒಳಗಾಗಿದ್ದೆ.
ಇಬ್ಬರೂ ಒಟ್ಟಿಗೆ ಕೆಳಗಿಳಿದು BAGGAGE COUNTER ಗೆ ಕಾಯುತ್ತಾ ನಿಂತಿರುವಾಗ ಆಕೆ ಕೇಳಿದಳು ನೀವು ಇರುವುದೆಲ್ಲಿ. ನಾನು R T NAGAR. ಎಂದು ಹೇಳಿದೆ. ಹೇಗೆ ಹೋಗುವಿರಿ ಕೇಳಿದಳು. TAXI ಎಂದೆ. ಬೇಡ ನನಗೆ ಅಪ್ಪಾ ಅವರ ಸಹಾಯಕನ ಜೊತೆ ಕಾರು ಕಳಿಸಿದ್ದಾರೆ. ಹೇಗೂ ನಾನು ಹಾಗೆಯೇ ಹೋಗಬೇಕು DROP ಮಾಡುತ್ತೇನೆ ಎಂದಳು. ನಾನು ಸೌಜನ್ಯಕ್ಕೂ ಬೇಡ ಎನ್ನದೆ ಒಪ್ಪಿಕೊ೦ಡೆ.
ನಾವು ಹೊರಗೆ ಬರುತ್ತಿದ್ದಂತೆ ಆಕೆಯ ಕಾರು ನಮ್ಮ ಮುಂದೆ ನಿಂತಿತು. ಬೆಳಗಿನ ಸಮಯದಲ್ಲಿ AIRPORT ನಿಂದ ನನ್ನ ಮನೆ ತಲುಪಲು ಸುಮಾರು 30 ನಿಮಿಷ ಬೇಕಾಗುತ್ತದೆ. ಆ ಸಮಯದಲ್ಲಿ ನಮ್ಮ ನಡುವೆ ಫೋನ್ ನಂಬರ್ WATSAPP, FACEBOOK MAIL ID ಎಲ್ಲಾ ವಿನಿಮಯವಾಯಿತು. ಬೇಡವೆಂದರೂ ಮನೆಯ ಹತ್ತಿರವೇ ಕಾರು ನಿಲ್ಲಿಸಿ, ಕೆಳಗಿಳಿದು SHAKE HAND ಮಾಡಿ ಮೊನಲಿಸಾಳಂತೆ ಒಂದು ಸುಂದರ ನಗು ಬಿಸಾಡಿ ಟಾಟಾ ಮಾಡುತ್ತಾ ಹೊರಟು ಹೋದಳು.
ಮನಸ್ಸು ಒದ್ದಾಡತೊಡಗಿತು. ಮನೆಯಲ್ಲಿ ಸ್ವಲ್ಪ ನಿದ್ದೆ ಮಾಡೋಣ ಎಂದು ಮಲಗಿದೆ. ನಿದ್ದೆ ಹತ್ತಿರ ಸುಳಿಯಲಿಲ್ಲ. ಏನೋ ಒಂಥರ ಚೇತೋಹಾರಿ. ಎದ್ದು ಎಂದಿನಂತೆ GYM ಗೆ ಹೊರಟೆ. CORDIO ಮಾಡಲು TRED MILL ಮೇಲೆ ಓಡತೊಡಗಿದೆ. ಸಾಮಾನ್ಯವಾಗಿ ಪ್ರತಿದಿನ ಗಂಟೆಗೆ 12 ಕಿ.ಮೀ ವೇಗದಲ್ಲಿ 45/50 ನಿಮಿಷ ಓಡುತ್ತೇನೆ. ಇಂದು 5 ನಿಮಿಷವೂ ಸಾಧ್ಯವಾಗಲಿಲ್ಲ. ಕೆಳಗಿಳಿದು WEIGHT LIFT ಮಾಡಲು ಮುಂದಾದೆ. ಶಕ್ತಿಯೇ ಇರಲಿಲ್ಲ. ಮನಸ್ಸಿನ ತುಂಬಾ ಸಮೃಧ್ಧಿಯೇ ತುಂಬಿಕೊಂಡಿದ್ದಳು. GYM INSTRUCTOR ಗೆ ಏನೋ ನೆಪ ಹೇಳಿ ಮನೆಗೆ ವಾಪಸ್ ಬಂದೆ.
OFFICE ಗೆ ರೆಡಿಯಾಗಲು BATH ROOM ಹೊಕ್ಕೆ. ಅಲ್ಲಿರುವ FM RADIO ದಲ್ಲಿ ರಾಜ್ ಕುಮಾರ್ ಅವರ ಚಿತ್ರದ “ಆಗುಂಬೆಯಾ ಪ್ರೇಮ ಸಂಜೆಯಾ ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ ” ಹಾಡು ಬರುತ್ತಿತ್ತು. ಅದನ್ನು ಆಸ್ವಾದಿಸುತ್ತಾ ಎಂದಿನ 20 ನಿಮಿಷದ ಸ್ನಾನಕ್ಕೆ ಬದಲು BATH TUB ನಲ್ಲಿ ಖುಷಿ ಖುಷಿಯಾಗಿ ಒಂದು ಗಂಟೆ ಕಳೆದೆ.
ಮತ್ತೆ ರೆಡಿಯಾಗಿ BREAKFAST TABLE ಗೆ ಬರುವಷ್ಟರಲ್ಲಿ ಗುರುವಾರದ TIMETABLE ನಂತೆ ಅಮೆರಿಕನ್ ಶೈಲಿಯ BREAD – OMLET – CORNFLEX – FRUIT SALAD ಮತ್ತು AFRICAN TEA ಸಿದ್ದವಿತ್ತು. ಆದರೂ ತಿನ್ನುವ ಮನಸ್ಸಾಗಲಿಲ್ಲ. ಒಂದೆರಡು APPLE AND GRAPES ಪೀಸ್ ಬಾಯಿಗೆ ಹಾಕಿಕೊಂಡು ಅಷ್ಟರಲೇ ಮುಗಿಸಿ ನಾನೇ ಕಾರ್ ಡ್ರೈವ್ ಮಾಡಿಕೊಂಡು OFFICE ಗೆ ಹೊರಟೆ.
TRAFFIC ದಿನವೂ IRRITATE ಮಾಡುತ್ತಿತ್ತು. ಆದರೆ ಇವತ್ತು ಅಸಹನೆ ಮೂಡಲೇ ಇಲ್ಲ. ಕಾರಿನ ಗ್ಲಾಸ್ ಕ್ಲೋಸ್ ಮಾಡಿ ಸಮೃಧ್ಧಿಯ ನೆನಪಿನಲ್ಲೇ ಸಾಗುತ್ತಿದ್ದೆ. FM ON ಮಾಡಿದೆ. ಯಾವುದೋ ಸಿನಿಮಾದ ಹಾಡು ” ಒಪ್ಕೊಂಡ್ ಬಿಟ್ಲು ಕಂಡ್ಲ ಪ್ರೀತಿ ಮಾಡೋಕೆ ” ಬರುತ್ತಿತ್ತು. ಅದರ ಜೊತೆಗೆ ಹಾಡುತ್ತಾ ಒಳಗೊಳಗೆ ಹುಚ್ಚನಂತೆ ಒಬ್ಬನೇ ನಗುತ್ತಾ OFFICE ತಲುಪಿದೆ.
ನನ್ನ ಕ್ಯಾಬಿನ್ ನಲ್ಲಿ ಕುಳಿತು ಮಾಡಿದ ಮೊದಲ ಕೆಲಸವೆಂದರೆ ಆಕೆಗೆ FACEBOOK FRIEND REQUEST ಕಳಿಸಿದ್ದು. ಆಮೇಲೆ WATSAPP CONNECT ಮಾಡಿ ಒಂದು ಪ್ರೀತಿಯ QUOTE ಇದ್ದ BEAUTIFUL GOOD MORNING MESSAGE ಕಳುಹಿಸಿದೆ.
ಅಷ್ಟರಲ್ಲಿ OFFICE ಸಹಾಯಕಿ ತಂದಿಟ್ಟ ಅರೇಬಿಯನ್ ಟೀ ಕುಡಿಯುತ್ತಾ – ಕಿಟಕಿಯಾಚೆಗಿನ ದಿಗಂತವನ್ನು ನೋಡುತ್ತಾ ಪ್ರತಿ ಗುಟುಕಿನಲ್ಲೂ ಸಮೃಧ್ಧಿಯ ನೆನಪನ್ನು ಆಸ್ವಾದಿಸುತ್ತಾ ಮೈಮರೆತಿದ್ದೆ.
OFFICE ನಲ್ಲಿ ಮಾಡಲು ಬಹಳಷ್ಟು ಕೆಲಸವಿತ್ತು. ಆಂತರಿಕವಾಗಿ ದೃಢ ಮನಸ್ಸಿನ ಕೆಲಸದಲ್ಲಿ ಅಪಾರ ನಿಷ್ಠೆ, ಪ್ರಾಮಾಣಿಕತೆ ,ಶ್ರದ್ಧೆ ಮತ್ತು HARD WORKER ಆದ ನಾನು ಇಂದೇಕೋ ಸಂಪೂರ್ಣ ಬದಲಾಗಿದ್ದೆ . ಹಗುರ ವಿವರಿಸಲಾಗದ ಮನಸ್ಸಿನ ಅಲೆಯಲ್ಲಿ ತೇಲುತ್ತಿದ್ದೆ.
ನೋಡ ನೋಡುತ್ತಿದ್ದಂತೆ 1.30.ಊಟದ ಸಮಯ. ನನ್ನ ಟೇಬಲ್ ಗೆ ಮಂಗಳೂರು ಶೈಲಿಯ ಊಟದ ಥಾಲಿ ತಂದಿಟ್ಟರು. ANJAL FRY, ಬಾಂಗ್ ಡ ಕರಿ, WHITE PAMPLET ತವಾ ಪ್ರೈ, ನೀರ್ ದೋಸೆ ಮತ್ತು BOILED RICE. ಊಟಕ್ಕೆ ಕುಳಿತರೇ ಹಸಿವೇ ಇಲ್ಲ. ಸಮೃಧ್ಧಿಯೊಂದಿಗೆ ಮನ ವಿಹರಿಸುತ್ತಿತ್ತು. ಕೆದಕಿ ಕೆದಕಿ ಸ್ವಲ್ಪ ಅಂಜಲ್ ತಿಂದೆ. ಹಾಗೇ ಎದ್ದು ಬಿಟ್ಟೆ.
ನಿಧಾನವಾಗಿ ಅರ್ಥವಾಗತೊಡಗಿತು. ಪ್ರೀತಿಯ ಸೆಳೆತಕ್ಕೆ ಸಿಲುಕಿರಬಹುದೆಂದು. ಅರೆ ಕೇವಲ ಒಂದು ಭೇಟಿಯಿಂದಲೇ ಪ್ರೀತಿ ಮೂಡುತ್ತದೆಯೇ. ಇಲ್ಲ ಇಲ್ಲ ಇದು ನನ್ನ ಕಲ್ಪನೆ ಇರಬೇಕು ಎಂದು ಯೋಚಿಸುತ್ತಾ FACEBOOK OPEN ಮಾಡಿದೆ. ಆಕೆ REQUEST ACCEPT ಮಾಡಿದ್ದಳು. ನನ್ನ NOSE DROPS ಸಹಾಯಕ್ಕಾಗಿ ಮತ್ತೆ ಕೃತಜ್ಞತೆ ಸಲ್ಲಿಸಿ I LIKE YOUR HELPING NATURE AND LOOKING SMART TOO ಎಂದು INBOX MESSAGE ಬೇರೆ ಇತ್ತು. ಸ್ವರ್ಗಕ್ಕೆ ಮೂರೇ ಗೇಣಿದೆ ಎಂದು ಭಾವಿಸಿದೆ. ಅದಕ್ಕೆ ನನ್ನದೇ ಭಾಷೆಯಲ್ಲಿ ಉತ್ತರಿಸಿ WATSAPP OPEN ಮಾಡಿದೆ. ಅವಳೂ ಸುಂದರ ಸಂದೇಶದ GOOD MORNING MESSAGE ಕಳಿಸಿದ್ದಳು. ” ನಾನು ಒಬ್ಬಳೇ ನಡೆಯುತ್ತಿರುವಾಗ ದಾರಿ ಬೇಗ ಕೊನೆಯಾಗಲಿ ಎನಿಸುತ್ತಿತ್ತು ಈಗ ನೀನು ಜೊತೆಯಾಗಿರುವಾಗ ದಾರಿ ಎಂದೆಂದಿಗೂ ಮುಗಿಯದಿರಲಿ ಎನಿಸುತ್ತಿದೆ. ” ವಾ ವಾ ಎಂತ ಅತ್ಯಮೋಘ ಸಂದೇಶ. ಪ್ರೀತಿ ಪ್ರೇಮ ಮಾನವೀಯ ಸಂಬಂಧದ ತುತ್ತ ತುದಿ…….
ಸಮಯ 4 ಗಂಟೆಯಾಯಿತು. ನನ್ನ ಟೀ ಟೇಬಲ್ ಮೇಲೆ ಕ್ಯೂಬನ್ ಕಾಫಿ ಮತ್ತು ಪಾಕಿಸ್ತಾನದ ಕರಾಚಿ ಬೇಕರಿಯ ರುಚಿಯಾದ ಸಿಹಿಯಾದ DRY FRUIT BISCUIT ಇತ್ತು. ಆದರೆ ಸಮೃಧ್ಧಿಯ ನೆನಪಿನ ಸಿಹಿಯ ಮುಂದೆ ಅದು ರುಚಿಸಲಿಲ್ಲ. ಸ್ವಲ್ಪ ಮಾತ್ರ ಕಾಫಿ ಕುಡಿದೆ. OFFICE ನಲ್ಲಿ ಇರಲಾಗಲಿಲ್ಲ. ನೇರ ಮನೆಗೆ ಬಂದೆ. ಮನಸ್ಸು ನಿಯಂತ್ರಣದಲ್ಲಿರಲಿಲ್ಲ. ಸಂಜೆ ಎಂದಿನಂತೆ ಯೋಗ ಮತ್ತು ಧ್ಯಾನ ಕ್ಲಾಸ್ ಗೆ ಹೊರಟೆ.
ಧ್ಯಾನದ ಸಮಯದಲ್ಲಿ ಉಸಿರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದೆ. ಆದರೆ ಆ ಉಸಿರಿನಲ್ಲಿ ಸಮೃಧ್ಧಿಯೇ ಆಮ್ಲಜನಕವಾಗಿದ್ದಳು. ಅದರ ಪ್ರಮಾಣ ಎಷ್ಟಿತ್ತೆದಂರೆ ಯೋಗ ಟೀಚರ್ ಒಂದೆರಡು ಬಾರಿ ಭುಜ ಮುಟ್ಡಿ ಎಚ್ವರಿಸಬೇಕಾಯಿತು. ಹೇಗೋ ಅದನ್ನು ಒಂದು ಗಂಟೆ ಮುಗಿಸಿ ಮನೆಗೆ ಬಂದು ಊಟ ಮುಗಿಸಿ ಬೇಗ ಮಲಗೋಣ ಎಂದು DINING ಗೆ ಹೋದೆ ಚೀನೀ ಶೈಲಿಯ ಊಟ ಟೇಬಲ್ ಅಲಂಕರಿಸಿತ್ತು MIXED VEGETABLE SOUP, BOILD EGG, BROWN NOODLES AND GREEN TEA ಇತ್ತು.
ಎಲ್ಲಿಯ ಹಸಿವು ಎಲ್ಲಿಯ ಊಟ. ಬೆಳಗಿನಿಂದ ವಿಶ್ವದ ಬೇರೆ ಬೇರೆ ಪ್ರದೇಶದ ಊಟ ತಿಂಡಿ ಕಾಫಿ ಟೀ ಇದ್ದರೂ ಮನಸ್ಸು ಮಾತ್ರ ಭಾರತೀಯವಾಗೇ ಇತ್ತು. ಕೇವಲ ಗ್ರೀನ್ ಟೀ ಕುಡಿದು ಹಾಸಿಗೆಯ ಮೇಲೆ ಹೊರಳಿದೆ. ನಿದ್ದೆ ಹತ್ತಲಿಲ್ಲ. ಟಿವಿ ON ಮಾಡಿದೆ. ಯಾವುದೋ ಚಾನಲ್ ನಲ್ಲಿ ಶಾರುಕ್ ಖಾನ್ ಮತ್ತು ಕಾಜೋಲ್ ಅಭಿನಯದ ” DILVALE DULHANIYA LEJAYENGE ” ಸಿನಿಮಾ ಪ್ರಸಾರವಾಗುತ್ತಿತ್ತು. ಅದನ್ನು ಬಹಳಷ್ಟು ಬಾರಿ ನೋಡಿದ್ದರೂ ಇಂದು ಏನೋ ಹೊಸ ಹೊಸ ಅರ್ಥ ಮೂಡಿಸುತ್ತಿತ್ತು. ಮನಸ್ಸು ಹಗುರಾಗುತ್ತಿತ್ತು. ಕಣ್ಣು ಮಬ್ಬಾಗಿತ್ತಿತ್ತು. ಆಗ WATSAPP SOUND ಮಾಡಿತು‌
.” HI SWEET HEART. HAVE A SWEET DREAMS ” ಸಮೃಧ್ಧಿಯ ಮೆಸೇಜ್ ……………………

ಪುಟ್ಟ ಮಗುವಿನಿ೦ದ ವೃಧ್ಧರವರೆಗೂ ಎರಡು ಭಿನ್ನ ಲಿಂಗಗಳ ಪ್ರೀತಿಯ ಆಕರ್ಷಣೆ ಸೃಷ್ಟಿಯ ಜೀವನೋತ್ಸಾಹದ ಕುರಹಾಗಿ ಉಳಿದಿದೆ. ಸೃಷ್ಡಿ ಇರುವವರೆಗೆ ಪ್ರೀತಿಯೂ ಅಮರ…………………
ನಿಜ ಪ್ರೀತಿಯ ಮನಸ್ಸುಗಳಿಗಾಗಿ ………..
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ .
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ
ಇದು ಮನಸ್ಸುಗಳ ಅಂತರಂಗದ ಚಳುವಳಿ.
ವಿವೇಕಾನ೦ದ. ಹೆಚ್.ಕೆ.

About the author / 

admin

Categories

Date wise

 • ಕೆಂದೆಳನೀರು

  ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

 • ಉಪಯುಕ್ತ ಮಾಹಿತಿ

  ಜೀನ್ಸ್ ಪ್ಯಾಂಟುಗಳಲ್ಲಿ ಈ ರೀತಿಯ ಚಿಕ್ಕ ಜೇಬುಗಳು ಏಕೆ ಇರುತ್ತದೆ ಗೊತ್ತಾ, ಈ ಜೇಬಿನ ರಹಸ್ಯ ನೋಡಿ.

  ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಫಾಶಿಯನ್ ಕಡೆಗೆ ಹೆಚ್ಚಿನ ಗಮನವನ್ನ ಕೊಡುತ್ತಾರೆ ಮತ್ತು ನಾವು ಚಂದವಾಗಿ ಕಾಣಲು ವಿವಿಧ ರೀತಿಯ ಹೊಸ ಹೊಸ ಉಡುಗೆಗಳನ್ನ ಧರಿಸುತ್ತಾರೆ. ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನ ಬಳಸುತ್ತಿದ್ದರು ಆದರೆ ಈಗಿನ ಯುವಕರು ಹತ್ತಿಯ ಬಟ್ಟೆಗಳನ್ನ ಹೆಚ್ಚಾಗಿ ಬಳಸದೆ ನಮ್ಮ ದೇಹದ ಕೆಟ್ಟ ಪರಿಣಾಮವನ್ನ ಭೀರುವ ಬಟ್ಟೆಗಳನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕ ಮತ್ತು ಯುವತಿಯರು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಗಳನ್ನ ಬಳಕೆ ಮಾಡುವುದನ್ನ ನಾವು…

 • ದೇಶ-ವಿದೇಶ

  ಇತಿಹಾಸ ನಿರ್ಮಿಸಿದ ಇಸ್ರೋ…..

  ಕಡಿಮೆ ವೆಚ್ಚದಲ್ಲಿ ಮಂಗಳಯಾನ, ಒಟ್ಟಿಗೆ 104 ಉಪಗ್ರಹಗಳನ್ನು ಹಾರಿಸಿ ವಿಶ್ವದಾಖಲೆ ಸ್ಥಾಪಿಸಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಇದೀಗ ಇನ್ನೊಂದು ದಾಖಲೆಯನ್ನು ನಿರ್ಮಿಸಿದೆ

 • ಸುದ್ದಿ

  ಪಿಂಚಣಿಗಾಗಿ ರೈಲ್ವೆ ಸಿಬ್ಬಂದಿ ಮಗ ಲಿಂಗ ಬದಲಿಸಿಕೊಂಡ…!

  ರೈಲ್ವೆ ಇಲಾಖೆ ಕೇಂದ್ರ ಸರ್ಕಾರಕ್ಕೊಂದು ಪತ್ರ ಬರೆದಿದೆ. ರೈಲ್ವೆ ಇಲಾಖೆಯಲ್ಲಿ ಕುಟುಂಬ ಪಿಂಚಣಿ ವ್ಯವಸ್ಥೆಯಿದೆ. ಅದಕ್ಕೆ ಕೆಲವೊಂದು ನಿಯಮಗಳಿವೆ. ಆದ್ರೆ ಒಂದು ವರ್ಷದ ಹಿಂದೆ ರೈಲ್ವೆ ಸಿಬ್ಬಂದಿ ಪುತ್ರ ಈಗ ಪುತ್ರಿಯಾಗಿರುವ ವ್ಯಕ್ತಿ ಕುಟುಂಬ ಪಿಂಚಣಿಗಾಗಿ ಪತ್ರ ಬರೆದಿದ್ದಾನೆ. ಇದೇ ವಿಚಾರ ಸದ್ಯ ಕೇಂದ್ರದ ಮೆಟ್ಟಿಲೇರಿದೆ. 2017ರಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಅವ್ರ 32 ವರ್ಷದ ಮಗ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಾಸ್ತವವಾಗಿ ಸಿಬ್ಬಂದಿ ಹಣವನ್ನೇ ಕುಟುಂಬ ಆಶ್ರಯಿಸಿಕೊಂಡಿದ್ದರೆ ಮಾತ್ರ ಪಿಂಚಣಿ ನೀಡಲಾಗುತ್ತದೆ. 25 ವರ್ಷದೊಳಗಿನ ಮದುವೆಯಾಗದ…

 • ಸುದ್ದಿ

  ‘ಕುರಿ’ ಪ್ರತಾಪ್ ಲೈಫಲ್ಲಿ ಫಸ್ಟ್‌ ಟೈಮ್ ಏನೇನೋ ಆಗ್ತಿದೆ..! ಏನೇನ್ ಆಗ್ತಿದೆ ಗೊತ್ತಾ?

  ‘ಕುರಿ’ ಪ್ರತಾಪ್‌ ಈಗ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ, ಬಿಗ್ ಬಾಸ್‌. ಅಲ್ಲದೆ, ಕನ್ನಡ ಚಿತ್ರರಂಗದ ಬೇಡಿಕೆಯ ಈ ಹಾಸ್ಯನಟನ ಬದುಕಲ್ಲಿ ಈಗ ಫಸ್ಟ್ ಟೈಮ್ ಏನೇನೋ ಆಗ್ತಿದೆಯಂತೆ! ನಟ ಕುರಿ ಪ್ರತಾಪ್ ವೃತ್ತಿಜೀನವ ಆರಂಭಿಸಿದ್ದು ಕಿರುತೆರೆ ಮೂಲಕ. ಆನಂತರ ಅವರು ಬೆಳ್ಳಿತೆರೆಯಲ್ಲಿ ಬೇಡಿಕೆಯ ಹಾಸ್ಯನಟರಾಗಿ ಮಿಂಚಿದರು. ಬಳಿಕ ಮತ್ತೆ ‘ಮಜಾ ಟಾಕೀಸ್‌’ ಮೂಲಕ ವೀಕ್ಷಕರಿಗೆ ಕಾಮಿಡಿ ಕಚಗುಳಿ ನೀಡಿದರು. ಇದೀಗ ಅವರು ‘ಬಿಗ್ ಬಾಸ್‌’ ಮನೆ ಸೇರಿಕೊಂಡಿದ್ದಾರೆ. ಜತೆಗೆ ಅವರ ಲೈಫಲ್ಲಿ ಫಸ್ಟ್ ಟೈಮ್‌ ಏನೇನೋ ಆಗ್ತಿದೆ!…

 • ಸುದ್ದಿ

  ರಷ್ಯಾ ಅಭಿಮಾನಿಯ ವಿಡಿಯೋ ನೋಡಿ ಬೆರಗಾದ ಕಿಚ್ಚ ಸುದೀಪ್,.!

  ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ  ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ  ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ . ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು…

 • ಸುದ್ದಿ

  ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ನಂತರ ಏನಾಯ್ತು ಗೊತ್ತಾ ?ತಿಳಿದರೆ ಶಾಕ್ ; ತಾಯಿಯ ಕೊನೆ ಆಸೆ ತೀರಿಸಿದ ಮಗಳು..!

  ಇಂಗ್ಲೆಂಡ್‌ನ ಲೀಸೆಸ್ಟರ್ ಶೈರ್‌ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗ ಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮಅಂತ್ಯಸಂಸ್ಕಾರ ಹೇಗೆ ನಡೆಯ ಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತ ದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟುಅಂತ್ಯ ಸಂಸ್ಕಾರ ಮಾಡಿ ಎಂದು ತಮ್ಮಆಸೆ…