ಸುದ್ದಿ

ಅವನ್ಯಾವನೋ ಯಶ್ ಅಂತೆ.. ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ? ಎಂದು HDKಯಿಂದ ಧಮಕಿ..!

267

ಮಂಡ್ಯ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಂತಕ್ಕೆ ಬಂದಿದ್ದು, ಕೊನೆ ಕ್ಷಣದಲ್ಲಿ ಮಾತಿನ ಸಮರ ಜೋರಾಗಿದೆ.

ಇಷ್ಟು ದಿನ ಜೋಡೆತ್ತುಗಳೆಂದು ದರ್ಶನ್ ಮೇಲೆ ಮುಗಿಬಿದ್ದಿದ್ದ ಸಿಎಂ ಕುಮಾರಸ್ವಾಮಿ, ಡಿ ಬಾಸ್ ಅಂತೆ ಎಂದೆಲ್ಲಾ ಟೀಕಿಸಿದ್ದರು. ಇಂದು ನಟ ಯಶ್ ವಿರುದ್ಧ ಕೆಂಡಕಾರಿದ್ದಾರೆ.

ನಾನು ಕಲಾವಿದರೆಂದು ಗೌರವ ಕೊಟ್ಟಿದ್ದೆ. ಅವನ್ಯಾವನೋ ನನ್ನ ಪಕ್ಷವನ್ನೇ ಟೀಕಿಸುತ್ತಾನೆ ಎಂದಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಸಿಎಂ, ನನ್ನ ಪಕ್ಷವನ್ನು ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನಮ್ಮ ಪಕ್ಷ ಟೀಕಿಸುತ್ತಾನೆ. ನಮ್ಮ ಕಾರ್ಯಕರ್ತರು ಸುಮ್ಮನೆ ಇರೋದು ನನಗೆ ತೊಂದರೆ ಆಗ್ತದೆ ಅಂತ. ನನಗೋಸ್ಕರ ಕಾರ್ಯಕರ್ತರು ಬಾಯಿ ಮುಚ್ಕೊಂಡು ಇದ್ದಾರೆ ಎಂದು ಹೇಳಿದ್ದಾರೆ.

ನಾನು ನಿರ್ಮಾಪಕನೇ, ಇಂಥವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಿರ್ಮಾಪಕರು ಇದ್ದರೇನೆ ಇವರೆಲ್ಲ ಬದುಕುವುದು. ಸಿನಿಮಾದಲ್ಲಿ ಬರೋದೆಲ್ಲ ನಿಜವಲ್ಲ, ಸಿನಿಮಾದಲ್ಲಿ ಬರೋದು ನಂಬಬೇಡಿ. ಅವನ್ಯಾವನೋ ಯಶ್ ಅಂತೆ. ಅವನಿಗೆ ಇನ್ನೂ ಗೊತ್ತಿಲ್ಲ. ನಮ್ಮಂತಹ ನಿರ್ಮಾಪಕರಿದ್ದರೆ ಇವರೆಲ್ಲ ಬದುಕುವುದು ಎಂದು ಹೇಳಿದ್ದಾರೆ.

ಪರದೆ ಮೇಲೆ ನೋಡಿದ್ದನ್ನೆಲ್ಲ ಸತ್ಯವೆಂದು ನಂಬಬೇಡಿ, ನಿಮ್ಮ ಜೀವನವೇ ಸತ್ಯ ನಿಜವಾದ ಸತ್ಯ. ಯಶ್ ನಮ್ಮ ಪಕ್ಷವನ್ನೇ ಕಳ್ಳರ ಪಕ್ಷ ಅಂತಾನೇ. ನಮ್ಮ ಕಾರ್ಯಕರ್ತರು ಕುಮಾರಣ್ಣನಿಗೆ ತೋಂದರೆಯಾದೀತೆಂದು ಬಾಯಿಮುಚ್ಚಿಕೊಂಡು ಇದ್ದಾರೆ ಎಂದು ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಇವನ ಒಂದು ಸೆಲ್ಪಿ ಫೋಟೋಗಾಗಿ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಿಲ್ತಾರೆ!ಈ ಪುಣ್ಯಾತ್ಮ ಯಾರೂ ಗೊತ್ತಾ?

    ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.

  • ರಾಜಕೀಯ

    ಕೋಲಾರದಲ್ಲಿ ಜೆಡಿಎಸ್ vs ಪಕ್ಷೇತರ- ಈ ಬಾರಿ ಜೆಡಿಎಸ್ ಅಭ್ಯರ್ಥಿ ಯಾರು? ವರ್ತೂರ್ ಪ್ರಕಾಶರ ಕೊನೆಯ ಎರಡು ಚುನಾವಣೆ ಫಲಿತಾಂಶ ನೋಡಿ

    ಜೆಡಿಎಸ್ ಪ್ರಭಾವ ಮತ್ತು ಅತಿಹೆಚ್ಚು ಒಕ್ಕಲಿಗ ಜಾತಿ ಬೆಂಬಲ ಈ ಭಾರಿ ಜೆಡಿಎಸ್? ಅಥವಾ ಕಳೆದ ಭಾರಿಯ ರೀತಿ ಈ ಭಾರಿಯೂ ಪಕ್ಷೇತರ ನ?

  • ಸುದ್ದಿ

    ಅಧಿಕಾರಕ್ಕೆ ಬರ್ತಿದ್ದಂತೆ ಬಿಗ್​ ಶಾಕ್​ ಕೊಟ್ಟ ಬಿಜೆಪಿ…!

    ಬೆಂಗಳೂರು,  ಟಿಪ್ಪು ಜಯಂತಿ ಪ್ರತಿ ವರ್ಷವೂ ಒಂದಲ್ಲಾ ಒಂದು ವಿವಾದದಿಂದ್ಲೇ ಸುದ್ದಿಯಾಗೋ ವಿಷ್ಯವಿದು. ಇದನ್ನೇ ಮುಂದಿಟ್ಕೊಂಡು ಹಲವರು ವೋಟ್​ ಬ್ಯಾಂಕ್​ ರಾಜಕೀಯ ಮಾಡಿದ್ದೂ ಇದೆ. ಮೂರು ವರ್ಷದ ಹಿಂದೆ ಆಚರಣೆಗೆ ಬಂದಿದ್ದ ಟಿಪ್ಪು ಜಯಂತಿಗೀಗ ಬ್ರೇಕ್​ ಬಿದ್ದಿದೆ. ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೇರ್ತಿದ್ದಂತೆ ವಿವಾದಿತ ಟಿಪ್ಪು ಜಯಂತಿಗೆ ಬ್ರೇಕ್​ಹಾಕಿದ್ದಾರೆ. ಇನ್ಮುಂದೆ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಅಂತಾ ಹುಕುಂ ಹೊರಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಜಯಂತಿಗೆ ಮುನ್ನುಡಿ ಇಟ್ಟಿತ್ತು. ಇದ್ರಂತೆಯೇ…

  • ಸಿನಿಮಾ, ಸುದ್ದಿ

    ಮಜಾಟಾಕೀಸ್ ಅಂತೂ ಬೇಡವೇ ಬೇಡ, ಕಾಮಿಡಿ ಚಿತ್ರಗಳಿಂದ ಬಹುದೂರ ಉಳಿದ ಅಪರ್ಣಾ.

    ದಶಕಗಳ ಹಿಂದೆ ಅಪರ್ಣಾ ಎಂದರೇ ನೆನಪಾಗುವುದು ಅಚ್ಚ ಕನ್ನಡದಲ್ಲಿ ಮಾತನಾಡುವ ಹೆಮ್ಮೆಯ ಕನ್ನಡತಿ. 90ರ ದಶದಲ್ಲಿ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಕಾರ್ಯಕ್ರಮಗಳ ನಿರೂಪಕರಾಗಿ ಕೆಲಸ ಮಾಡಿ ತಮ್ಮನ್ನು ತಾವು ಸ್ಥಾಪಿಸಿಕೊಂಡ್ಡಿದ್ದರು. ಅವರ ಅಚ್ಛ ಕನ್ನಡದ ನಿರೂಪಣೆ ಎಲ್ಲರಿಗೂ ಬಹಳ ಇಷ್ಟುವಾಗುತ್ತಿತ್ತು. ಅದೆಷ್ಟೋ ಜನರಿಗೆ ತಿಳಿದಿಲ್ಲ ಬೆಂಗಳೂರು ಮೆಟ್ರೊದಲ್ಲಿ ಮಾಡಿದ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್‌ನ ದಾಖಲೆಯ ಪ್ರಕಟಣೆಗಳಿಗಾಗಿ ಅಪರ್ಣಾ ಧ್ವನಿ ನೀಡಿದ್ದಾರೆ ಎಂಬುದು. ಕನ್ನಡದ ದಿಗ್ಗಜ ನಟರಾದ  ಡಾ.ವಿಷ್ಣುವರ್ಧನ್, ಅಂಬರೀಶ್, ಆರತಿ, ಜೈಜಗದೀಶ್, ವಜ್ರಮುನಿ,…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀದಿನ ಊಟದ ಜೊತೆಗೆ ತುಪ್ಪ ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…

  • ಸುದ್ದಿ

    12 ಕಿರು ಬಂದರುಗಳನ್ನು ಅಭಿವೃದ್ಧಿಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

    ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು…