ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆ ನಿಶ್ಚಯವಾದ ಬಳಿಕ, ವಧು- ವರರು ಮಂಟಪಕ್ಕೆ ಬರಲಾರದೆ , ಊಟದ ವಿಚಾರವಾಗಿ, ಅಥವಾ ಮಂಟಪದಲ್ಲಿಯೇ ಮುರಿದ ಮದುವೆಗಳು, ಹೀಗೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ.
ಆದ್ರೆ ವಿಚಿತ್ರ ಎಂದರೆ ಮಂಟಪದಲ್ಲಿಯೇ ಅಣ್ಣನ ತಾಳಿ ಕಟ್ಟಬೇಕಾದ ವಧುವಿಗೆ, ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನ ವೆಲ್ಲೂರುನಲ್ಲಿ ನಡೆದಿದೆ.

ಹೌದು, ಎಲ್ಲಿ ಅಂತಿರಾ- ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು.
ಸಿನಿಮೀಯ ರೀತಿಯಲ್ಲಿ ನಡೆಯಿತು ಮದುವೆ!
ತದನಂತರ ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.

ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು ಎಂಬ ವಿಷಯ ಗೊತ್ತಾಗಿದೆ.

ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾಳಿ ಕಸಿದುಕೊಂಡು ತಾನೇ ತಾಳಿ ಕಟ್ಟಿದ್ದಾನೆ.
ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಂತೂ ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ಫಾಸ್ಟ್ ಫುಡ್, ಸ್ನಾಕ್ಸ್ ಗಳನ್ನು ತಿನ್ನುವುದೇ ಹೆಚ್ಚು.ಅದರಲ್ಲೂ ಹೊರಗಡೆ ಸಿಗುವ ಕಬಾಬ್, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ ಆಯ್ಕೆ ಮಾಡಿಕೊಳ್ತೇವೆ. ಹೊಟೇಲ್ ಇರಲಿ, ಮನೆಯಿರಲಿ, ಒಮ್ಮೆ ಕರಿದ ಎಣ್ಣೆಯನ್ನು ಎತ್ತಿಟ್ಟು ಮತ್ತೊಮ್ಮೆ ಅಡುಗೆಗೆ ಬಳಸ್ತೇವೆ. ಮನೆಯಲ್ಲಿ ನಾಲ್ಕೈದು ಬಾರಿ ಬಳಸಿದ್ರೆ ಹೊಟೇಲ್ ನಲ್ಲಿ ಅದೆಷ್ಟು ಬಾರಿ ಒಂದೇ…
ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನು ಏನು ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, “ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ….
ಬೆಂಗಳೂರು(05-01-2023): ವಸತಿ ಯೋಜನೆಗಳ ಫಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ ನೀಡುತ್ತಿದ್ದ ಸಹಾಯಧನ ಮೊತ್ತವನ್ನು 1.20 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನೀಡುತ್ತಿದ್ದ 2.70 ಲಕ್ಷ ರೂ.ನಿಂದ 4 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮಹತ್ವದ ತರ್ಮಾನಕ್ಕೆ ಸರ್ಕಾರ ಮುಂದಾಗಿದೆ. ಬಡತನರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೂರು ಕಲ್ಪಿಸುವ ಬಸವ, ಅಂಬೇಡ್ಕರ್ ಸೇರಿ ರಾಜ್ಯದಲ್ಲಿ ಜಾರಿಯಲ್ಲಿರುವ ವಸತಿ ಯೋಜನೆಗಳಿಗೆ ನೀಡುವ ಸಹಾಯಧನದ ಮೊತ್ತ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಹಾಗೂ…
ಮೊಬೈಲ್ ನ ಒಟ್ಟು SAR ಅಂಶ ಹೆಚ್ಚಿದೆ. ಅದು CNET ವೆಬ್ ಸೈಟ್ ನ ಪ್ರಕಾರ ಅತೀ ಹೆಚ್ಚಿನ ಬೆಲೆಯ ಫೋನು ಹಾಗೂ ಅದರ ಬ್ಯಾಟರಿ ಚಾರ್ಜ್ 15 ಗಂಟೆ ಬರುತ್ತಿದೆ ಎಂದು ಹೇಳಲಾಗಿದೆ. ಅದರೆ SAR ಅಂಶ ಹೆಚ್ಚಿರುವುದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಬ್ರೈನ್ ಟ್ಯೂಮರ್ ಬರುವ ಚಾನ್ಸ್ ಹೆಚ್ಚು ಇರುತ್ತದೆ.
ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ…
‘ಬಿಗ್ ಬಾಸ್ ಕನ್ನಡ ಸೀಸನ್ 7’ ಆರಂಭವಾಗಿ ಐದು ವಾರಗಳು ಕಳೆದಿವೆ.ನಾಲ್ಕು ಸ್ಫರ್ಧಿಗಳು ಎಲಿಮಿನೇಶನ್ನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಅವರಲ್ಲಿ ಗುರುಲಿಂಗ ಸ್ವಾಮೀಜಿ,ಚೈತ್ರಾ ವಾಸುದೇವನ್, ದುನಿಯಾ ರಶ್ಮಿ, ಚೈತ್ರಾಕೋಟೂರ್. ಕಳೆದ ವಾರ ಚೈತ್ರಾಕೋಟೂರ್ ಬಿಗ್ ಮನೆಯಿಂದ ಹೊರಬಂದುಶಾಕ್ ಕೊಟ್ಟಿದ್ದರು. ಈ ವಾರ ಯಾರು ಬಿಗ್ ಮನೆಯಿಂದ ಹೊರಬರುತ್ತಾರೆ. 5ನೇವಾರ ಬಿಗ್ ಮನೆಯಿಂದ ಹೊರ ಬರುವವರಾರು : ಮೂಲಗಳ ಪ್ರಕಾರ ಈ ಬಾರಿ ಜೈ ಜಗದೀಶ್ ಬಿಗ್ ಮನೆಯಿಂದ ಹೊರಬರಲಿದ್ದಾರೆ. ಆಮನೆಯಲ್ಲಿ ಜೈಜಗದೀಶ್ ಎಲ್ಲರ ಜೊತೆ ಬೆರೆತು ತಮ್ಮಕೈಲಾದಷ್ಟು ಟಾಸ್ಕ್ಗಳಲ್ಲಿ ಪಾಲ್ಗೊಂಡು…