ಉಪಯುಕ್ತ ಮಾಹಿತಿ

ಅಟಲ್ ಪಿಂಚಣಿ ಯೋಜನೆ ಮೂಲಕ ಪ್ರತೀ ತಿಂಗಳು 5000 ಪಡೆಯಿರಿ.!ಹೆಚ್ಚಿನ ಮಾಹಿತಿಗೆ ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

3185

ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣಕ್ಕಾಗಿ ಮುತ್ತು ಅವರ ವೃದ್ಯಾಪ್ಯ ವೇತನದ ಭದ್ರತೆಗಾಗಿ ಭಾರತ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರನ್ನು ಸ್ವಪ್ರೇರಣೆಯಿಂದ ತಮ್ಮ ನಿವೃತ್ತಿಗಾಗಿ ಉಳಿಸಲು  ಪ್ರೋತ್ಸಾಹಿಸುತ್ತದೆ. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ನಿವೃತ್ತಿ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ಆಟಲ್ ಪಿಂಚಣಿ ಯೋಜನೆಯ ಪ್ರಮುಖ ಉದ್ದೇಶ.

ಏನಿದು ಅಟಲ್ ಪಿಂಚಣಿ ಯೋಜನೆ..?

ಪ್ರತಿ ತಿಂಗಳು ಒಂದಿಷ್ಟು ಹಣವನ್ನು ಬ್ಯಾಂಕ್ ಗೆ ಕಟ್ಟಿದರೆ.. ನಾವು ಎಷ್ಟು ಹಣ ಕಟ್ಟುತ್ತೇವೆಯೋ ಅದರ ಆಧಾರದ ಮೇಲೆ ನಮಗೆ 60 ವರ್ಷವಾದಮೇಲೆ ಪಿಂಚಣಿ ದೊರೆಯುತ್ತದೆ.. ಅಕಸ್ಮಾತ್ ನಾವು ಸತ್ತರೇ ನಮ್ಮ ಸಂಗಾತಿಗಳಿಗೆ ಪಿಂಚಣಿ ದೊರೆಯುತ್ತದೆ.. ಅಕಸ್ಮಾತ್ ಅವರೂ ಕೂಡ ಸತ್ತರೆ.. ನಾಮಿನಿ ಗಳಿಗೆ ಒಂದಿಷ್ಟು ಲಕ್ಷ ರೂಪಾಯಿಗಳು ಸಿಗುತ್ತದೆ..

ಎಪಿವೈ ಯೋಜನೆ

ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲಿ ಯೋಜನೆ ಬಗ್ಗೆ ವಿಚಾರಿಸಿ ಅರ್ಜಿ ಪಡೆದುಕೊಳ್ಳಬೇಕು. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಕೆ ಮಾಡಬೇಕು. ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಕೆ ಮಾಡಬಹುದು.

ಎಪಿವೈ ಯೋಜನೆ ಮಾಡಿಸಿಕೊಂಡವರಿಗೆ 60 ವರ್ಷವಾದ ಬಳಿಕ ಮಾಸಿಕ ₨ 1 ಸಾವಿರದಿಂದ ₨ 5 ಸಾವಿರದವರೆಗೆ ಪಿಂಚಣಿ ಸಿಗುತ್ತದೆ.

ಅರ್ಹತೆ

* ಬ್ಯಾಂಕ್ ಖಾತೆ ಹೊಂದಿದ 18 ರಿಂದ 40 ವರ್ಷದವರು ಈ ಯೋಜನೆಗೆ ಸೇರಬಹುದು.

*ಬೇಕಾಗುವುದು ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ಮಾತ್ರ. ಆಧಾರ್‌ ಸಂಖ್ಯೆ ದೊರೆತಿಲ್ಲವಾದರೆ ಮುಂದಿನ ದಿನಗಳಲ್ಲೂ ಅದನ್ನು ನೀಡಬಹುದು.

ಪಿಂಚಣಿ ಪಡೆಯುವದು ಹೇಗೆ..?

*ವ್ಯಕ್ತಿಗೆ 60 ವರ್ಷವಾದ ತಕ್ಷಣ ಎಷ್ಟು ಮಾಸಿಕ ಪಿಂಚಣಿಗೆ ನೋಂದಾಯಿಸಲಾಗಿತ್ತೋ, ಅಷ್ಟು ಪಿಂಚಣಿ ಬರುತ್ತಲೇ ಇರುತ್ತದೆ.

*ಪಿಂಚಣಿ ಯೋಜನೆ ಮಾಡಿಸಿಕೊಂಡ ವ್ಯಕ್ತಿ ಮೃತಪಟ್ಟರೆ, ಆತನ ಪತ್ನಿಗೆ ಪೂರ್ತಿ ಹಣ ಸಂದಾಯವಾಗುತ್ತದೆ. ಪತ್ನಿ ಮೃತಪಟ್ಟರೆ ಪತಿಗೆ ಹಣ ದೊರೆಯುತ್ತದೆ. ಇಬ್ಬರೂ ಮೃತಪಟ್ಟರೆ ನಾಮನಿರ್ದೇಶಕರಿಗೆ ಹಣ ದೊರೆಯುತ್ತದೆ.

*ಈ ಯೋಜನೆಯಂತೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರುವುದು ಸಾಧ್ಯವಿಲ್ಲ. ಆದರೆ ಫಲಾನುಭವಿ ಮೃತಪಟ್ಟರೆ ಅಥವಾ ಕೆಲವೊಂದು ಕಾಯಿಲೆಗಳು ಸಂಭವಿಸಿದರೆ 60 ವರ್ಷಕ್ಕಿಂತ ಮೊದಲಾಗಿಯೇ ಯೋಜನೆಯಿಂದ ಹೊರಬರಬಹುದು.

ವ್ಯಕ್ತಿಗೆ 60 ವರ್ಷ ಪೂರ್ಣಗೊಂಡಾಗ ಆತನ ಎಪಿವೈ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನಗದು ಮಾಡಿಕೊಳ್ಳಬಹುದು ಅಥವಾ ಮಾಸಿಕ ಪಿಂಚಣಿ ಪಡೆಯಬಹುದು. ವ್ಯಕ್ತಿಗೆ 40 ವರ್ಷ ಪೂರ್ಣಗೊಂಡಾಗ ಪಿಂಚಣಿ ಯೋಜನೆಯಿಂದ ಹೊರಬರಲು ಬಯಸಿದ್ದೇ ಆದರೆ ಅವರಿಗೆ ಅವರ ಖಾತೆಯಲ್ಲಿ ಸಂಚಯವಾದ ಹಣವನ್ನು ಒಮ್ಮೆಲೇ ನೀಡಲಾಗುತ್ತದೆ. 40 ವರ್ಷ ಮೇಲ್ಪಟ್ಟವರು ಈ ಯೋಜನೆಯಂತೆ ಹಣ ಉಳಿತಾಯ ಮಾಡುತ್ತ ಹೋದರೆ 60 ವರ್ಷದ ಬಳಿಕ ಅವರು ಪಿಂಚಣಿ ಅಥವಾ ಏಕ ಗಂಟಿನ ನಗದು ವಾಪಸ್‌ ಪಡೆಯಬಹುದು.

ವಯಸ್ಸಿನ ಮಿತಿ

18-40 ವಯಸ್ಸಿನ ಎಲ್ಲಾ ಭಾರತೀಯರು ಈ ಯೋಜನೆ ಸೌಲಭ್ಯ ಪಡೆಯಬಹುದು. ಯೋಜನೆ ಅನ್ವಯ ತಿಂಗಳಿಗೆ 1000 ದಿಂದ 5000 ವರೆಗೆ ಪಡೆದುಕೊಳ್ಳಲು ಸಾಧ್ಯವಿದೆ. 60 ವರ್ಷದ ನಂತರ ಪೆನ್ಶನ್ ದೊರೆಯಲಿದ್ದು, ನೀವು ಕಟ್ಟುವ ಹಣದ ಆಧಾರದ ಮೇಲೆ ಪೆನ್ಶನ್ ಹಣ ನಿರ್ಧರಿತವಾಗಿರುತ್ತದೆ.

ಇಲ್ಲಿ ಓದಿ:ಬೋರ್’ವೆಲ್ ಕೊರೆಸುವ ರೈತರಿಗೆ, ಸರ್ಕಾರದಿಂದ 2.5ಲಕ್ಷದ ಸಬ್ಸಿಡಿ ಭಾಗ್ಯ…

ಡಿಪಾಸಿಟ್ ಮಾಡುವುದು ಹೇಗೆ..?

ಇನ್ನು, ಕನಿಷ್ಠ 20 ವರ್ಷಗಳ ಡಿಪಾಸಿಟ್ ಅಗತ್ಯ. 18 ವರ್ಷದವರಾಗಿದ್ದರೆ 42 ವರ್ಷಗಳ ಕಾಲ ತಿಂಗಳಿಗೆ 210 ರೂ. ಡಿಪಾಸಿಟ್ ಮಾಡಬೇಕು. 25 ವರ್ಷದವರಾಗಿದ್ದರೆ 35 ವರ್ಷ ಮಾಸಿಕ 376 ರೂ. ಕೊಡಬೇಕಾಗುತ್ತದೆ. 30 ವರ್ಷ ವಯಸ್ಸಿನವರು 30 ವರ್ಷ ಕಾಲ ತಿಂಗಳಿಗೆ 577 ರೂ. ಕಟ್ಟಬೇಕು. 40 ವರ್ಷದವರಾಗಿದ್ದರೆ 20 ವರ್ಷ ಕಾಲ ತಿಂಗಳಿಗೆ 1,454 ರೂ. ಹೂಡಿದರೆ 60ನೇ ವರ್ಷದಿಂದ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಬಹುದು.

ನಿಮ್ಗೆ ಇನ್ನೂ ಏನಾದ್ರೂ ಸಂದೇಹಗಳಿದ್ರೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ…

ಮಾಸಿಕ 1 ಸಾವಿರ ಪಿಂಚಣಿ

60 ವರ್ಷ ವಯಸ್ಸಾದ ಮೇಲೆ ಮಾಸಿಕ 1 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 1 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 1.7 ಲಕ್ಷ ಹಣ ಸಿಗಲಿದೆ..

ಮಾಸಿಕ 2 ಸಾವಿರ ಪಿಂಚಣಿ

60 ವರ್ಷವಾದಮೇಲೆ ಮಾಸಿಕ 2 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 2 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 3.4 ಲಕ್ಷ ಹಣ ಸಿಗಲಿದೆ..

ಮಾಸಿಕ 3 ಸಾವಿರ ಪಿಂಚಣಿ

60 ವರ್ಷವಾದಮೇಲೆ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 3 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 5.1 ಲಕ್ಷ ಹಣ ಸಿಗಲಿದೆ..

ಮಾಸಿಕ 4 ಸಾವಿರ ಪಿಂಚಣಿ

60 ವರ್ಷವಾದಮೇಲೆ ಮಾಸಿಕ 4 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 4 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 6.8 ಲಕ್ಷ ಹಣ ಸಿಗಲಿದೆ..

ಮಾಸಿಕ 5 ಸಾವಿರ ಪಿಂಚಣಿ

60 ವರ್ಷವಾದಮೇಲೆ ಮಾಸಿಕ 5 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ ವಯಸ್ಸಿಗನುಗುಣವಾಗಿ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಇಂತಿಷ್ಟು ಮೊತ್ತವನ್ನು ಕಟ್ಟಬೇಕು.. ಇಷ್ಟು ಹಣವನ್ನು ಪ್ರತಿ ತಿಂಗಳು ಕಟ್ಟಿದರೆ 60 ವರ್ಷವಾದ ಮೇಲೆ 5 ಸಾವಿರ ರೂಪಯಿ ಮಾಸಿಕ ಪಿಂಚಣಿ ಪಡೆಯಬಹುದು.. ನಾವೇನಾದರು ಸತ್ತರೆ ನಾಮಿನಿಗಳಿಗೆ 8.5 ಲಕ್ಷ ಹಣ ಸಿಗಲಿದೆ..

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಸಾಮಾನ್ಯವಾಗಿ ಬಾಳೆ ಬಾಳೆಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತು..ಆದರೆ ಬಾಳೆ ಸಿಪ್ಪೆಯ ಉಪಯೋಗಗಳ ಬಗ್ಗೆ ಗೊತ್ತಾ..?

    ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ

  • ಸುದ್ದಿ

    ಯಾರಿಗೆ ಒಲಿಯುತ್ತೆ ಪ್ರಧಾನಿ ಪಟ್ಟ..?ಸಮೀಕ್ಷೆಯಲ್ಲಿ ಬಯಲಾಯ್ತು ಮತದಾರ ಪ್ರಭುವಿನ ಮನದಾಳ!ಈ ಸುದ್ದಿ ನೋಡಿ…

    ಈಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಗಲ್ಲಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯದ್ದೇ ಮಾತುಕತೆ. ಅಷ್ಟೇ ಅಲ್ಲದೇ ಯಾವ ಪಕ್ಷ ಗೆಲ್ಲುತ್ತೆ? ಯಾರು ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ?ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ ಎಂಬ ವಾದ ವಿವಾದಗಳು ಜೋರಾಗಿಯೇ ನಡೆಯುತ್ತಿವೆ. ಈಗ ಹಾಲಿ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ಪ್ರಧಾನಿ ರೇಸ್ ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರ ಎಂಬುದರ ಬಗ್ಗೆ ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು ಮತದಾರ ಪ್ರಭು ಏನು…

  • ಸುದ್ದಿ

    ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಎಷ್ಟು ಎಂದು ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗೆ ಮೋದಿ ಹೇಳಿದ್ದೇನು ಗೊತ್ತಾ?

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…

  • ಸಿನಿಮಾ

    ನಟ ಯಶ್ ಮನೆ ಮುಂದೆ ಆತ್ಮಹತ್ಯಗೆ ಯತ್ನಿಸಿದ ಅಭಿಮಾನಿ..!

    ಕನ್ನಡ ಚಿತ್ರಗಳನ್ನು ಕೀಳುಮಟ್ಟದಲ್ಲಿ ನೋಡುತ್ತಿದ್ದ ಪರಭಾಷಿಕರನ್ನು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.ಇದನು ಯಶ್ ರವರ ಹುಟ್ಟು ಹಬ್ಬವಾಗಿದ್ದು ಯಶ್ ರವರನ್ನು ನೋಡಲು ಅಭಿಮಾನಿಯನ್ನು ಬಿಡದ್ದಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರವಿ ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಇಂದು ತನ್ನ ನೆಚ್ಚಿನ ನಟನ ಹುಟ್ಟುಹಬ್ಬ ಇರುವ ಕಾರಣ ಯಶ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದ. ಮನೆಗೆ ಆಗಮಿಸಿದರೂ ಭೇಟಿಗೆ…

  • ಸುದ್ದಿ

    ಬೆಳಕೇ ಇಲ್ಲದೆ ಕತ್ತಲಲ್ಲಿದ್ದ ದೊಡ್ಡಿಗಳಿಗೆ ಬೆಳಕಿನ “ಸೌಭಾಗ್ಯ”ರೂಪಿಸಿದ ಮೋದಿ…..!

    ಎಂಟೆಕ್‌ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್‌ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…

  • ಸ್ಪೂರ್ತಿ

    ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣಕ್ಕೆ ಸ್ವೀಟ್ ಕೇಕ್ ಕಂಡು ಹಿಡಿದಿದ್ದಾರೆ..!ತಿಳಿಯಲು ಈ ಲೇಖನ ಓದಿ…

    ಪ್ರಸ್ತುತ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚುತ್ತಿದ್ದು ಅದರಿಂದ ಡೆಂಗ್ಯೂ ಜ್ವರ ಮುಂತಾದ ಹಲವಾರು ಕಾಯಿಲೆಗಳು ಹೆಚ್ಚಾಗುತ್ತಿವೆ. ಇವುಗಳಿಂದ ಮನುಷ್ಯ ರಕ್ಷಣೆ ಪಡೆಯಲು ಮಾರುಕಟ್ಟೆಯಲ್ಲಿನ ವಿವಿಧ ರೀತಿಯ ಸೊಳ್ಳೆಯನ್ನು ನಿಯಂತ್ರಿಸುವ ಸಲಕರಣೆಗಳನ್ನು ಪಡೆಯಲು ಮುಂದಾಗುತ್ತಿರುವುದು ಪ್ರಸ್ತುತ ನಡೆಯುತ್ತಿದೆ.