ಸುದ್ದಿ

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಹೋಗದೇ ಮನೆಯಲ್ಲಿ ಕೂತಿದ್ದಾರೆ ಮಾಜಿ ಸಿಎಂ!ಕಾರಣ ಏನು ಗೊತ್ತಾ?ಈ ಸುದ್ದಿ ನೋಡಿ

237

ಲೋಕಸಭಾ ಚುನಾವಣೆಯಲ್ಲಿ ತಾವು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಮಣೆ ಹಾಕಿರುವುದರಿಂದ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳದೆ ಕಳೆದ ಮೂರು ದಿನಗಳಿಂದ ಮನೆಯಲ್ಲಿಯೇ ಇದ್ದಾರೆಂದು ಹೇಳಲಾಗಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಕತ್ತಿ ಅವರ ಬದಲಿಗೆ ಅಣ್ಣಾ ಸಾಹೇಬ ಜೊಲ್ಲೆಯವರಿಗೆ ಟಿಕೆಟ್ ನೀಡಿರುವುದು ಯಡಿಯೂರಪ್ಪನವರಿಗೆ ಇರುಸು ಮುರುಸು ಉಂಟು ಮಾಡಿದೆ ಎಂದು ಹೇಳಲಾಗಿದೆ.

ಅದರಲ್ಲೂ ತಮ್ಮ ಆಪ್ತ ವಲಯದಲ್ಲಿರುವ ಶಾಸಕ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಯವರಿಗೆ ಟಿಕೆಟ್ ನೀಡದಿರುವುದು ಯಡಿಯೂರಪ್ಪನವರ ಮುನಿಸಿಗೆ ಕಾರಣವೆಂದು ಹೇಳಲಾಗಿದ್ದು, ಈಗಲೂ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮುಂದುವರಿಸಿದ್ದಾರೆನ್ನಲಾಗಿದೆ.

ಆದರೆ ಇದಕ್ಕೆ ಪಕ್ಷದ ವರಿಷ್ಠರು ಮಣಿಯುವುದು ಕಷ್ಟ ಸಾಧ್ಯವೆನ್ನಲಾಗಿದ್ದು, ಹೀಗಾಗಿ ಯಡಿಯೂರಪ್ಪನವರು ತೀವ್ರ ಅಸಮಾಧಾನಗೊಂಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ಮೋದಿ ವಿಚಾರದಲ್ಲಿ ಶುರುವಾದ ವಾದದಿಂದ,ಇವರ ಮದುವೆಯೇ ರದ್ದಾಯಿತು..!

    ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.

  • ಕ್ರೀಡೆ, ಸಾಧನೆ, ಸುದ್ದಿ

    1500 ಮೀ. ಓಡಿ ಚಿನ್ನ ಗೆದ್ದು ಮೈದಾನದಲ್ಲೇ ಮೃತಪಟ್ಟ 78 ವರ್ಷದ ವೃದ್ಧ.

    78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ. ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. 1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ…

  • ಸುದ್ದಿ

    ಹುಲ್ಲು ಮೆಯಾದ ಹಸುವಿನ ಹೊಟ್ಟೆಯಲ್ಲಿ ಸಿಕ್ಕಿದ್ದೇನು? ಅದನ್ನು ನೋಡಿ ಬೆರಗಾದ ವೈದ್ಯರು…

    ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ…

  • ಜ್ಯೋತಿಷ್ಯ

    ಈ ದಿನದ ಭವಿಷ್ಯ ಹೇಗಿದೆ ಇಲ್ಲಿ ನೋಡಿ ತಿಳಿಯಿರಿ…

    ಬುಧವಾರ, 28/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅರಣ್ಯ ಇಲಾಖೆ ಸಿಬ್ಬಂದಿಗೆ ಮನ್ನಣೆ ಸಿಗುವುದು. ಎಲ್ಲಾ ವಿಚಾರಗಳಲ್ಲಿ ಗೆಲುವು ನಿಮ್ಮದೆ ಆಗುವುದು. ಆದರೆ ಅದಕ್ಕೆ ಕ್ರಮಬದ್ಧ ಯೋಚನೆಯನ್ನು ರೂಪಿಸಿಕೊಳ್ಳಬೇಕಾಗುವುದು. ನಿಮ್ಮ ಆಶಾವಾದವು ನಿಮ್ಮ ಕಾರ್ಯಯೋಜನೆಗೆ ಸಹಕಾರಿಯಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.  ಸತ್ಕಾರ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ವಾಹನ ಮತ್ತು ಯಂತ್ರಗಳ ಬಿಡಿಭಾಗಗಳ ವ್ಯಾಪಾರದಿಂದಾಗಿ ವಿಶೇಷ ಲಾಭ ಹೊಂದುವಿರಿ. ವೃಷಭ:- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಸತ್ಯದ ಅರಿವು ಇದ್ದರೂ ಎಲ್ಲರನ್ನು ನಂಬಿ ಎಲ್ಲರೂ ವಿಶ್ವಾಸಿಗರು ಎಂದು…

  • ಸುದ್ದಿ

    ಔಟ್ ಡೇಟೆಡ್ ನೂಡಲ್ಸ್ ನಿಂದ ಮನೆ ಕಟ್ಟಿ ಮಲಗಿದ ಭೂಪ..!

    ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ. ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ. ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ…

  • ಸುದ್ದಿ

    ಇರುವೆ ಬಗೆಗಿನ ಈ 15 ವಿಷಯಗಳು ನಮ್ಮನ್ನ ರೋಮಾಂಚನಗೊಳಿಸುತ್ತೆ..!

    ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.