ಸುದ್ದಿ

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್,.!!

93

ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್  ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ  ಜೋಡಿ. ರಾಧಿಕಾ ಪಂಡಿತ್ ಅವರು  ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು  ಮಗು ಇಬ್ಬರು  ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದವರು ತಿಳಿಸಿದ್ದಾರೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್  ಮನೆಯವರು  ಮತ್ತು  ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ತುಂಬಾ  ಖುಷಿಯಾಗಿದ್ದಾರೆ.

ಇತ್ತೀಚೆಗೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.

ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ಅವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.

ರಾಧಿಕಾ ಪಂಡಿತ್  ಗಂಡು ಮಗುವಿಗೆ ಜನ್ಮ  ನೀಡಿದ ಸಂತೋಷದಲ್ಲಿದ್ದರೆ  ಯಶ್ ಅವರು  ಮತ್ತು ಅವರ ಕುಟುಂಬದವರು ಸಹ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ