ಸಿನಿಮಾ

ಇಲ್ಲಿದೆ ನೋಡಿ ಯಶ್ ರಾಧಿಕಾ ಪಂಡಿತ್ ರವರ ಮುದ್ದು ಮಗಳ ಫೋಟೋ…

1016

ನಟ ರಾಕಿಂಗ್ ಸ್ಟಾರ್ ಯಶ್ ರವರಿಗೆ ಅವರು ಅಂದುಕೊಂಡಂತೆ ಪತ್ನಿ ರಾಧಿಕಾ ಪಂಡಿತ್ ರವರಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ.ತಮ್ಮ ಮುದ್ದಿನ ಮಗಳು ಕೈ ಬೆರಳನ್ನು ಬಿಗಿದಪ್ಪಿದ್ದ ವೇಳೆ ಪುಳಗೊಂಡಿರುವ ನಟ ಯಶ್, ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾದ ಯಶ್ ಮಗಳ ಬಗ್ಗೆ, “ನನ್ನ ಬೆರಳುಗಳನ್ನು ಬಿಗಿಹಿಡಿದು ತಂದೆತನದೆಡೆಗೆ ದಾರಿ ತೋರಿಸಿದ ನನ್ನ ದೇವತೆಯ ಪುಟ್ಟಹಸ್ತ! ಯಾರನ್ನಾದರೂ ಕನಿಷ್ಠ ನೋಡದೆಯೇ ಪ್ರೀತಿಸುವುದು ಒಂದು ಅದ್ಭುತ ಭಾವ. ಇನ್ನು ಅವಳನ್ನು ಕಣ್ತುಂಬಿಕೊಂಡ ಮೇಲಂತೂ ಅವಳೊಂದಿಗೆ ನನ್ನ ಪ್ರೀತಿ ನೂರ್ಮಡಿಯಾಗಿದೆ” ಎಂದು ಫೇಸ್ ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಮುದ್ದಾದ ಮಗಳೊಂದಿಗೆ ಯಶ್ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.ನಟಿ ರಾಧಿಕ ಪಂಡಿತ್ ಅವರು ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಯಶ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಮಗಳನ್ನು ಒಂದೇ ನೋಟದೊಂದಿಗೆ ಸೂಕ್ಷ್ಮವಾಗಿ ಗಮನಿಸುತ್ತಿರುವ ಫೋಟೋ ಕಂಡ ಅಭಿಮಾನಿಗಳು ಸಂತಸಗೊಂಡು ಶುಭ ಕೋರಿದ್ದಾರೆ.

ಯಶ್ ತಾವು ಮೊದಲೇ ಅಂದುಕೊಂಡಂತೆ ಹೆಣ್ಣು ಮಗಳು ಹುಟ್ಟಿದ್ದು, ಮಗು ಹುಟ್ಟಿದಾ ಕ್ಷಣ ಹೆಣ್ಣು ಮಗು ಎಂದು ಗೊತ್ತಾದ ಕೂಡಲೇ ಆನಂದ ಭಾಷ್ಪ ಸುರಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ರಥಸಪ್ತಮಿ ಮಹತ್ವ?

    *ರಥಸಪ್ತಮಿಯಂದು ಎಕ್ಕದ ಎಲೆಗಳ ಸ್ನಾನ ಮಾಡುವುದರ ಮಹತ್ವ ಏನು ಗೊತ್ತಾ?* ಮಾಘಮಾಸ ಶುಕ್ಲ ಪಕ್ಷದ ಸಪ್ತಮಿಯಂದು ರಥಸಪ್ತಮಿ ಹಬ್ಬವನ್ನು ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಒಂದೊಂದು ಮಹತ್ವವಿದ್ದು, ರಥ ಸಪ್ತಮಿಯನ್ನು ಭಗವಾನ್ ಸೂರ್ಯನಾರಾಯಣನಿಗೆ ಅರ್ಪಿಸಲಾಗಿದೆ. ಸೂರ್ಯ ಸಮಸ್ತ ಜೀವಕೋಟಿಗೆ ಆಧಾರವಾಗಿದ್ದು, ಈ ದಿನ ಒಳ್ಳೆಯ ಆರೋಗ್ಯಕ್ಕಾಗಿ ಸೂರ್ಯನಲ್ಲಿ ಬೇಡುವುದು ರಥಸಪ್ತಮಿಯ ಮಹತ್ವಗಳಲ್ಲಿ ಒಂದಾಗಿದೆ. ಸೂರ್ಯದೇವ ಎಂದು ಕರೆಯಲ್ಪಡುವ ಸೂರ್ಯನು ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಒಬ್ಬನು. 9 ಗ್ರಹಗಳ ಅಧಿಪತಿ ಕೂಡ ಸೂರ್ಯದೇವನೇ ಆಗಿದ್ದಾನೆ. ಈತನನ್ನು ಸೌರಮಂಡಲದ ರಾಜ…

  • ವಿಸ್ಮಯ ಜಗತ್ತು

    ಪುರುಷ ಪುಂಗವರಿಲ್ಲದ ಜಗತ್ತಿನ ಏಕೈಕ ಗ್ರಾಮ ಇದು.!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಪುರಷರು ಇಲ್ಲದೆ ಇರಲು ಸಾಧ್ಯನಾ ಹೌದು ಇದು ನಿಜಕ್ಕೂ ನಮ್ಮನೂ ನಿಬ್ಬೆರಗೊಳಿಸುವ ಸ್ಟೋರಿ. ಯಾವುದೇ ಒಂದು ಕುಟುಂಬ ಅಥವಾ ಒಂದು ಊರು ಅಂದ್ಮೇಲೆ ಅಲ್ಲಿ ಪುರುಷ ಇರಲೇಬೇಕು. ಆದರೆ ಈ ಗ್ರಾಮದಲ್ಲಿ ಪುರುಷ ಅನ್ನೋ ಒಬ್ಬ ಮಾನವನು ನಿಮಗೆ ಕಾಣಸಿಗಲ್ಲ.ಕೀನ್ಯಾದ ಅಮೋಜಾ ಗ್ರಾಮ, ಇದು ಮಹಿಳೆಯರ ಒಂದು ಅದ್ಬುತ ಗ್ರಾಮ ಯಾಕೆ ಅಂದ್ರೆ ಇಲ್ಲಿ ಮಹಿಳೆಯರೇ ಇರೋದು ಇಲ್ಲಿ ಒಬ್ಬ ಪುರುಷನು ಇಲ್ಲ. ಮಹಿಳೆಯರು ಹಾಗೂ ಹುಡುಗಿಯರಿಗೆ ಸ್ವರ್ಗ….

  • ಸುದ್ದಿ

    ಶಿವೈಕ್ಯರಾದ ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ….

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶತಾಯುಷಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿರುವ ಶ್ರೀಗಳನ್ನೂ ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಭಕ್ತ ಸಾಗರದಿಂದ ಬಹದೂರಕ್ಕೆ ಒಯ್ದಿದೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ…

  • ಸುದ್ದಿ

    36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್…!

    ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…

  • ಸ್ಪೂರ್ತಿ

    ಈ ಪುಟ್ಟ ಬಾಲಕ ಮನೆಯಲ್ಲೇ ಕೂತು ಸಂಪಾದಿಸುತ್ತಾನೆ ಲಕ್ಷ ಲಕ್ಷ.!ಅಷ್ಟಕ್ಕೂ ಇವನು ಮಾಡುವ ಕೆಲಸ ಏನ್ ಗೊತ್ತಾ.?ಇದನ್ನು ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ತಮ್ಮ ಕನಸು ಈಡೇರಿಸಿಕೊಳ್ಳಲು  ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ.  ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ:- ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್ …

  • ಕರ್ನಾಟಕ

    ರಾಜ್ಯದ 6000 ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ..!

    ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.