ಸುದ್ದಿ

ಮನೆಯಲ್ಲೆ ರಕ್ಷಣೆ ಇಲ್ಲದ್ದಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ,ಇದನ್ನೊಮ್ಮೆ ಓದಿ …!

32

2017ರಲ್ಲಿಇಡೀ ಜಗತ್ತಿನಲ್ಲಿ ಕೊಲೆಯಾದ ಒಟ್ಟು ಮಹಿಳೆಯರು 87 ಸಾವಿರ. ಇದರಲ್ಲಿ ಕುಟುಂಬ ಸದಸ್ಯರು ಇಲ್ಲವೆ ಗಂಡ, ಪ್ರಿಯಕರ, ಪರಿಚಿತರಿಂದ ಹತ್ಯೆಯಾದ ಮಹಿಳೆಯರ ಸಂಖ್ಯೆಯೇ 50 ಸಾವಿರ.

ಈ ಬೆಚ್ಚಿಬೀಳಿಸುವ ಅಂಕಿಅಂಶವನ್ನು ಬಯಲು ಮಾಡಿರುವುದು ವಿಶ್ವಸಂಸ್ಥೆಯು ಮೊನ್ನೆ 25ರಂದು ಬಿಡುಗಡೆಮಾಡಿರುವ ಅಧ್ಯಯನ ವರದಿ. ನವೆಂಬರ್ 25, ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗೆ ಗೊತ್ತು ಮಾಡಲಾದ ಅಂತರರಾಷ್ಟ್ರೀಯ ದಿನವೂ ಹೌದು. ಈ 87 ಸಾವಿರವಾಗಲೀ 50 ಸಾವಿರವಾಗಲೀ ಸರ್ಕಾರಿ ಲೆಕ್ಕದಿಂದ ತೆಗೆದುಕೊಂಡದ್ದುಮಾತ್ರ ಎಂಬುದನ್ನು ಗ್ರಹಿಸಿದರೆ, ಇದರಾಚೆಗಿನ ಸತ್ಯದ ಭೀಕರತೆಯನ್ನು ಊಹಿಸಬಹುದು.

ಮಹಿಳೆಯ ವಿರುದ್ಧದ ಮನೆಯೊಳಗಿನದ್ದೇ ಹಿಂಸೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿರುವ ವಿಶ್ವಸಂಸ್ಥೆಯ ಈ ಅಧ್ಯಯನ, ಮಹಿಳೆಯನ್ನುಸುತ್ತುವರಿಸಿರುವ ಹಂತಕ ಪಹರೆಯ ಕುರಿತ ಒಂದು ಸ್ಥೂಲ ಚಿತ್ರ ಮಾತ್ರ.ಈ ಅಂಕಿಅಂಶ ಮನೆಯವರಿಂದಲೇ,ಪರಿಚಿತರಿಂದಲೇ ಕೊಲೆಯಾಗಿ ಹೋಗುತ್ತಿರುವ ಮಹಿಳೆಯ ಎದುರಿನ ಪ್ರತಿಕ್ಷಣದ ಆತಂಕಕಾರಿ ಸ್ಥಿತಿಯ ಸೂಚಕವಷ್ಟೆ. ಯಾರನ್ನೋ ಮದುವೆಯಾಗಿ, ಯಾರದೋ ಹಿಂದೆ ಓಡಿಹೋಗಿ ತಮ್ಮ ಮರ್ಯಾದೆ ಕಳೆದಳೆಂದು ಮನೆಮಗಳನ್ನೇ ಕೊಲ್ಲುವ ‘ಮರ್ಯಾದಸ್ಥ’ರಿಗೆ ಬಲಿಯಾದವರೂ ಈ ಲೆಕ್ಕದಲ್ಲಿದ್ದಾರೆ.

ಜಗತ್ತಿನಾದ್ಯಂತ ಪ್ರತಿ ತಾಸಿಗೆ 6 ಮಹಿಳೆಯರು ತಮಗೆ ಗೊತ್ತಿರುವ ವ್ಯಕ್ತಿಯಿಂದಲೇ ಕೊಲೆಯಾಗುತ್ತಿದ್ದಾರೆ.ವಿಶ್ವಸಂಸ್ಥೆಯ ಅಧ್ಯಯನವು ಎತ್ತಿಹೇಳುತ್ತಿರುವ ಮತ್ತೊಂದು ಅಂಶ, ಮನೆಯೊಳಗಿನವರು ಅಥವಾ ಪರಿಚಿತರ ಕೈಯಲ್ಲಿ ಮಹಿಳೆಯರು ಸಾಯುತ್ತಿರುವುದು ಜಗತ್ತಿನ ಬೇರೆ ಭಾಗಗಳಿಗೆ ಹೋಲಿಸಿದರೆ ಏಷ್ಯಾದಲ್ಲೇ ಹೆಚ್ಚು ಎಂಬುದು. ಮನೆಯೊಳಗೇ ಹಂತಕರಿದ್ದರೆ ಮಹಿಳೆ ಇನ್ನೆಲ್ಲಿ ಹೋಗಬೇಕು ಎಂಬುದೇ ದೊಡ್ಡ ಪ್ರಶ್ನೆ. ಬಹಳಷ್ಟು ಮಹಿಳೆಯರ ಪಾಲಿಗೆ ತಪ್ಪಿಸಿಕೊಳ್ಳುವುದಕ್ಕೊಂದು ತಾಣವೇ ಇಲ್ಲ. ಎಂಥ ರಕ್ಕಸರ ಮಧ್ಯೆ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಲೇ ಇದ್ದಾಳಲ್ಲ ಹೆಣ್ಣು!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ, ಸುದ್ದಿ

    ಅಪ್ಪನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಐರಾ.

    ಕೆಜಿಫ್ ಸ್ಟಾರ್ ಯಶ್ ಅವರು 34ನೇ ವರ್ಷಕ್ಕೆ ಕಾಲಿಟ್ಟು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಯಶ್ ಮುದ್ದಿನ ಮಗಳು ಐರಾ ತನ್ನ ಅಪ್ಪನ ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸಿದ್ದಾಳೆ. ರಾಧಿಕಾ ತನ್ನ ಮಗಳು ಐರಾ ಜೊತೆ ಕೇಕ್ ತಯಾರಿಸುತ್ತಿರುವ ವಿಡಿಯೋವನ್ನು ಯಶ್ ಅವರ ಇನ್‍ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ ರಾಧಿಕಾ ಅವರು ಸರ್ಪ್ರೈಸ್ ಹಾಗಿ ಯಶ್ ಗೆ ನಿಮ್ಮ ಜೀವನವನ್ನು ನಾವು ಪಡೆದುಕೊಂಡಂತೆ, ನಿಮ್ಮ ಖಾತೆಯನ್ನು ಸಹ ಪಡೆದುಕೊಂಡಿದ್ದೇವೆ ಎಂದು ನಿಮ್ಮ ದೊಡ್ಡ ಅಭಿಮಾನಿಯಾಗಿ ನಮ್ಮ…

  • ಸುದ್ದಿ

    ಪ್ರಾಣಿಗಳು ವಾಸಿಸುವ ಗುಹೆಯೊಳಗೆ ಶಿವಲಿಂಗದ ದರ್ಶನ, ಶಿವಭಕ್ತರ ಯಾತ್ರೆ! ಕರಾವಳಿಯಲ್ಲೊಂದು ವಿಶೇಷ ಗುಹಾ ದೇವಾಲಯ…!

    ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ‌ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ…

  • ಮನರಂಜನೆ

    ಬಿಗ್ ಬಾಸ್’ನಿಂದ ಮಧ್ಯರಾತ್ರಿ ಶಾಕಿಂಗ್ ಎಲಿಮನೇಷನ್..!ರಾತ್ರೋರಾತ್ರಿ ಮನೆಯಿಂದ ಹೊರಹೋದವರು ಯಾರು?ತಿಳಿಯಲು ಮುಂದೆ ಓದಿ…

    ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ‌ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.

  • ಗ್ಯಾಜೆಟ್

    ಹುಷಾರ್!ನೀವು ಚೀನಾ ಮೊಬೈಲ್ ಬಳುಸುತ್ತಿದ್ದರೆ ತಪ್ಪದೆ ಈ ಲೇಖನಿ ಓದಿ…

    ಭಾರತವು ಚೀನಾದ ಒಪ್ಪೋ, ಷಿಯಾಮಿ, ಜಿಯೋನಿ, ಕಂಪನಿಗಳಿಗೆ ನೋಟಿಸ್ ನೀಡಿದೆ. ಮತ್ತು ಕೇಂದ್ರ ಸರ್ಕಾರವು , ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ಕಂಪನಿಗಳಲ್ಲಿ ವಿವರಣೆ ಕೇಳಿದೆ.

  • ಉಪಯುಕ್ತ ಮಾಹಿತಿ

    ನೀವು ನಿಂಬೆ ಹಣ್ಣಿನ ರಸ ತೆಗೆದು ಬಿಸಾಡುತ್ತಿರಾ..!ಈ ಲೇಖನ ಓದಿ..

    ಸಾಮಾನ್ಯವಾಗಿ ನಾವು ಎಲ್ಲಾರ ಮನೆಯಲ್ಲಿ ನಿಂಬೆ ಹಣ್ಣು ರಸ ತೆಗೆದು ಕೊಂಡು ಬಿಸಾಡುವುದು ಸಾಮಾನ್ಯವಾಗಿದೆ. ಆದ್ರೆ ನೀವು ಈ ಸ್ಟೋರಿ ನೋಡಿದ್ರೆ ಬಿಸಾಕಲ್ಲ ಬಿಡಿ. ಯಾಕೆ ಅಂದ್ರೆ ಈ ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು ಉಂಟುಗುವುತದೆ ಯಾವುಅಂತೀರಾ ಇಲ್ಲಿವೆ ನೋಡಿ.

  • inspirational

    ಹವಾ ಮಹಲ್

      ಇದು ಭಾರತದ ಜೈಪುರ್‌ನಲ್ಲಿರುವ ಒಂದು ಅರಮನೆ. ಇದನ್ನು 1799ರಲ್ಲಿ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಕಟ್ಟಿಸಿದ್ದರು, ಮತ್ತು ಲಾಲ್ ಛಂದ್ ಉಸ್ತಾರವರು ಹಿಂದೂ ದೇವರಾದ ಕೃಷ್ಣ ನ ಕಿರೀಟದ ಆಕಾರದಲ್ಲಿ ಇದರ ವಿನ್ಯಾಸಗೊಳಿಸಿದ್ದರು. ಜಟಿಲ ಜಾಲರಿ ಕಾಮಗಾರಿಯಿಂದ ಅಲಂಕೃತ ಝರೊಕಾ ಎಂದು ಕರೆಯಲಾದ 953 ಚಿಕ್ಕ ಕಿಟಕಿಗಳು ಒಳಗೊಂಡಇದರ ಅದ್ವಿತೀವಾದ ಐದು-ಅಂತಸ್ತಿನ ಹೊರರೂಪ ಜೇನುಗೂಡಿನ ಜೇನುಹಟ್ಟಿಗೆ ಕೂಡ ಸದೃಶ್ಯವಾಗಿದೆ. ಈ ಜಲರಿಯ ಮುಖ್ಯ ಉದ್ದೇಶವೆಂದರೆ ರಾಜ ಮನೆತನದ ಮಹಿಳೆಯರಿಗೆ ಅವರು ಕಾಣದಂತೆ ಕೆಳಗಿನ ರಸ್ತೆಯ ದಿನನಿತ್ಯದ ಜೀವನವನ್ನು ನೋಡಲು ಸಾಧ್ಯವಾಗಬೇಕೆಂದು,…