ಸುದ್ದಿ

ಗಂಡನಿಗೆ ಸರ್ ಪ್ರೈಸ್ ಹಾಗಿ ಸ್ಪೆಷಲ್ ಗಿಫ್ಟ್ ನೀಡಿದ ಹೆಂಡತಿ..! ಆ ಗಿಫ್ಟ್ ಏನು ಗೋತ್ತಾ.

276

ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿ ಗಿಫ್ಟ್ ನೀಡುವುದು ವಾಡಿಕೆ. ಮದುವೆ ವಾರ್ಷಿಕೋತ್ಸವ ಅಥವಾ ಬೇರೆ ವಿಶೇಷ ಸಂದರ್ಭಗಳಲ್ಲಿ ಈ ರೀತಿಯ ಗಿಫ್ಟ್ ಗಳನ್ನು ನೀಡಲಾಗುತ್ತದೆ. ಈಗ ಹೆಂಡತಿಯೊಬ್ಬರು ತಮ್ಮ ಪತಿಗೆ ಗಿಫ್ಟ್ ನೀಡುತ್ತಿರುವ ಸಂದರ್ಭ ವೈರಲ್ ಆಗಿದೆ.

ಈ ಹಿಂದೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಜಾವಾ ಕಂಪನಿಯು ಮರಳಿ ಬಂದ ನಂತರ ಭಾರತದ ಯುವ ಜನತೆಯನ್ನು ಹೆಚ್ಚು ಆಕರ್ಷಿಸುತ್ತಿದೆ. ತಮ್ಮ ಪತಿಗಾಗಿ ಜಾವಾ ಕ್ಲಾಸಿಕ್ ಬೈಕ್ ಅನ್ನು ಬುಕ್ಕಿಂಗ್ ಮಾಡಿದ್ದರು. ಬೈಕಿನ ವಿತರಣೆಯನ್ನು ಪಡೆದ ನಂತರ ಅದನ್ನು ತಮ್ಮ ಪತಿಗೆ ಸರ್‍‍ಪ್ರೈಸ್ ಗಿಫ್ಟ್ ನೀಡಿದ್ದಾರೆ. ಇದಕ್ಕಾಗಿ ತಮ್ಮ ಪತಿಯನ್ನು ಅವರ ಊರಿನಿಂದ ಕರೆಯಿಸಿ, ಗೋವಾದ ಲಾಡ್ಜ್ ನಲ್ಲಿ ತಂಗಿದ್ದಾರೆ. ಆ ಲಾಡ್ಜ್ ಗೆ ಜಾವಾ ಕ್ಲಾಸಿಕ್ ಬೈಕ್ ಅನ್ನು ತಂದಿದ್ದಾರೆ

ಬೈಕ್ ಅನ್ನು ಪೂರ್ತಿಯಾಗಿ ಮುಚ್ಚಿ ಲಾಡ್ಜ್ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದಾರೆ. ನಂತರ ತಮ್ಮ ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಪಾರ್ಕಿಂಗ್ ಏರಿಯಾಗೆ ಕರೆದುಕೊಂಡು ಹೋಗಿ, ತಮ್ಮ ಪತಿಯ ನೆಚ್ಚಿನ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಮೊದಲು ಸಹ ಈ ರೀತಿಯ ಹಲವಾರು ಸರ್‍‍ಪ್ರೈಸ್ ಗಿಫ್ಟ್ ಗಳನ್ನು ನೋಡಲಾಗಿತ್ತು. ಆದರೆ ಈ ಗಿಫ್ಟ್ ಅವುಗಳಿಗಿಂತ ವಿಭಿನ್ನವಾಗಿದೆ. ಮಹಿಳೆಯು ತನ್ನ ಗಂಡನ ನೆಚ್ಚಿನ ಬೈಕ್ ಅನ್ನು ಬುಕ್ ಮಾಡಿ ಹಲವು ದಿನಗಳವರೆಗೂ ಕಾದು, ಬೈಕಿನ ವಿತರಣೆಯನ್ನು ಪಡೆದು ಸರ್‍‍ಪ್ರೈಸ್ ಗಿಫ್ಟ್ ಆಗಿ ನೀಡಿರುವುದು ವಿಶೇಷ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ