ಸುದ್ದಿ

ಕಾಲಿನಿಂದಲೇ ಮತದಾನ ಮಾಡಿ ಎಲ್ಲರಿಗೂ ಸ್ಪರ್ತಿಯಾದ ಲಕ್ಷ್ಮೀ…

215

ಮತದಾನ ಪ್ರತಿಯೊಬ್ಬರ ಹಕ್ಕು. ಆದರೆ ಎಲ್ಲಾ ಸರಿಯಿದ್ದರೂ ತಮ್ಮ ಹಕ್ಕು ಚಲಾಯಿಸದೇ ಅವರು ಸರಿ ಇಲ್ಲ ಇವರು ಸರಿ ಇಲ್ಲ ಅಂತ ಮಾತನಾಡುವವರೇ ಹೆಚ್ಚು. ಆದರೆ ತನ್ನ ಎರಡೂ ಕೈ ಇಲ್ಲದಿದ್ದರೂ ಕಾಲಿನಿಂದಲೇ ಯುವತಿಯೊಬ್ಬರು ಮತದಾನ ಮಾಡಿದ್ದಾರೆ. 

ಹೌದು, ಕಾನಹೊಸಳ್ಳಿಯ ಲಕ್ಷ್ಮಿಯವರಿಗೆ ಎರಡೂ ಕೈಗಳಿಲ್ಲ. ಆದ್ರೆ ಆ ಬಗ್ಗೆ ತಲೆಕೆಡಿಸಿಕೊಳ್ಳದ ಲಕ್ಷ್ಮಿ ಕಾಲುಗಳಿಂದಲೇ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಂಡಮುಣುಗಿಯ ಮತಗಟ್ಟೆ ಸಂಖ್ಯೆ 118 ರಲ್ಲಿ ಮತ ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಎರಡೂ ಕೈಯಿಲ್ಲದ ಲಕ್ಷ್ಮಿಯವರಿಗೆ ಚುನಾವಣಾ ಸಿಬ್ಬಂದಿ ಎಡಗಾಲಿಗೆ ಶಾಹಿ ಹಾಕಿದ್ರು. ಬಳಿಕ ಮಾತನಾಡಿದ ಲಕ್ಷ್ಮೀ ಒಂದೊಂದು ಮತವೂ ಅಮೂಲ್ಯವಾದದು ಅಂತಾ ಹೇಳಿದ್ರು. ವಿಶೇಷ ಅಂದ್ರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿಯ ರಾಯಭಾರಿಯಾಗಿದ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ