Sports

ವಿರಾಟ್ ಕೊಹ್ಲಿ ಅವರ ಒಂದು ತಿಂಗಳ ಸಂಬಳ ಎಷ್ಟು ಕೋಟಿ? ನೋಡಿ.

57

ಭಾರತದ ತಂಡದ ಆಟಗಾರರಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿ ಇರುವ ಆಟಗಾರ ಅಂದರೆ ವಿರಾಟ್ ಕೊಹ್ಲಿ ಎಂದು ಹೇಳಿದರೆ ತಪ್ಪಾಗಲ್ಲ, ಸದ್ಯದ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಾಧನೆಯ ಮೇಲೆ ಸಾಧನೆಯನ್ನ ಮಾಡುತ್ತಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಪ್ರಥಮ ಸ್ಥಾನದಲ್ಲಿ ಇದ್ದಾರೆ, ಇನ್ನು ಪ್ರಪಂಚದ ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ಬಿಟ್ಟರೆ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಆಟಗಾರ ಅಂದರೆ ಅದೂ ವಿರಾಟ್ ಕೊಹ್ಲಿ ಮಾತ್ರ. ಒಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಆಟವಾಡುತ್ತಿದ್ದಾರೆ ಅಂದರೆ ರನ್ ಗಳ ಸುರಿಮಳೆ ಹರಿಯುವುದರಲ್ಲಿ ಎರಡು ಮಾತು ಇಲ್ಲ, ಅದೆಷ್ಟೋ ಸೋಲುವ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ಕೀರ್ತಿ ವಿರಾಟ್ ಕೊಹ್ಲಿ ಅವರಿಗೆ ಇದೆ.

ಇನ್ನು ಈಗ ವಿರಾಟ್ ಕೊಹ್ಲಿ ಅವರು ಭಾರತ ತಂಡದ ನಾಯಕನಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದು ತುಂಬಾ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೊಂದು ಪ್ರಖ್ಯಾತಿಯನ್ನ ಹೊಂದಿರುವ ವಿರಾಟ್ ಕೊಹ್ಲಿ ಅವರು ಒಂದು ತಿಂಗಳಿಗೆ ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲಿ ಇದ್ದೆ ಇರುತ್ತದೆ. ವಿರಾಟ್ ಕೊಹ್ಲಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇನ್ನು ಜನಪ್ರಿಯತೆ ಹೆಚ್ಚಾದಂತೆ ಅಭಿಮಾನಿಗಳು ಹೆಚ್ಚಾಗುತ್ತಲೇ ಇರುತ್ತಾರೆ. ಕೊಹ್ಲಿ ಅವರು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಕಾರಣ ಅವರನ್ನ ಹೆಚ್ಚಿನ ಜಾಹಿರಾತು ಕಂಪನಿಗಳು ತಮ್ಮ ಜಾಹೀರಾತುಗಳಲ್ಲಿ ವಿರಾಟ್ ಕೊಹ್ಲಿ ಅವರನ್ನ ಹಾಕಿಕೊಳ್ಳುತ್ತಿದೆ. ಇನ್ನು ಇತ್ತೀಚಿಗೆ ಪೆಪ್ಸಿ ಕಂಪನಿ ತಮ್ಮ ಪೆಪ್ಸಿ ಜಾಹಿರಾತಿಗೆ ವಿರಾಟ್ ಕೊಹ್ಲಿ ಅವರ ಹಾಕಿಕೊಂಡಿದ್ದು ಅವರಿಗೆ ಬರೋಬ್ಬರಿ 5 ಕೋಟಿ ಸಂಭಾವನೆಯನ್ನ ನೀಡಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಕೇವಲ ಜಾಹಿರಾತುಗಳು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾದ ಕಾರಣ ಅವರಿಗೆ ವರ್ಷಕ್ಕೆ ಸುಮಾರು 12 ರಿಂದ 15 ಕೋಟಿ ಸಂಭಾವನೆಯನ್ನ ಭಾರತೀಯ ಕ್ರಿಕೆಟ್ ಮಂಡಳಿ ನೀಡುತ್ತದೆ ಮತ್ತು ಪ್ರತಿ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅವರಿಗೆ ಸಂಭಾವನೆಯನ್ನ ನೀಡಲಾಗುತ್ತದೆ.

ಇನ್ನು ಕೇವಲ ಕೊಹ್ಲಿ ಅವರಿಗೆ ಮಾತ್ರವಲ್ಲದೆ ಭಾರತ ಎಲ್ಲಾ ಏ ದರ್ಜೆಯ ಆಟಗಾರರಿಗೆ ಸರಿಸುಮಾರು ಇಷ್ಟೇ ವೇತನವನ್ನ ಭಾರತೀಯ ಕ್ರಿಕೆಟ್ ಮಂಡಳಿ ನೀಡುತ್ತದೆ. ಇನ್ನು ಬಿ ದರ್ಜೆಯ ಆಟಗಾರರಿಗೆ 8 ಕೋಟಿ ಮತ್ತು ಸಿ ದರ್ಜೆಯ ಆಟಗಾರರಿಗೆ 4 ಕೋಟಿ ರೂಪಾಯಿಯನ್ನ ಭಾರತೀಯ ಕ್ರಿಕೆಟ್ ಮಂಡಳಿ ನೀಡುತ್ತದೆ. ಇನ್ನು ಈ ಆಟಗಾರರಿಗೆ ಕೇವಲ ಸಂಬಳ ಮಾತ್ರವಲ್ಲದೆ ಕೇಂದ್ರ ಸರ್ಕಾರದ ಹುದ್ದೆಯನ್ನ ಕೂಡ ಕೊಡಲಾಗುತ್ತದೆ, ಇನ್ನು ವಿರಾಟ್ ಕೊಹ್ಲಿ ಅವರು ಕೇವಲ ಭಾರತ ತಂಡದಲ್ಲಿ ಮಾತ್ರವಲ್ಲದೆ ಐಪಿಎಲ್ ಸಮಯದಲ್ಲಿ ಬೆಂಗಳೂರು ತಂಡವನ್ನ ಪ್ರತಿನಿಧಿಸುತ್ತಾರೆ ಮತ್ತು ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಕೋಟಿ ಕೋಟಿ ರೂಪಾಯಿ ಸಂಭಾವನೆಯನ್ನ ಕೂಡ ನೀಡಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ