ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ನಟಿಸಿರುವ “ದೊಡ್ಮನೆ ಹುಡುಗ” ಚಿತ್ರವು, ಪ್ರಪ್ರಥಮ ಬಾರಿಗೆ ದೂರದರ್ಶನ(ಟೆಲಿವಿಷನ್) ಇತಿಹಾಸದಲ್ಲಿ ಹೊಸದಂದು ಐತಿಹಾಸಿಕ ದಾಖಲೆ ಮಾಡಿದೆ.
ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ ಮೇ 28, ಭಾನುವಾರ ಸಂಜೆ 7.30 ರ ವೇಳೆ ಪ್ರಸಾರವಾದ ದೊಡ್ಮನೆ ಹುಡುಗ ಚಿತ್ರವು 12,162 (ಟಿವಿಟಿ)ರೇಟಿಂಗ್ಸ್ ಗಳಿಸಿದೆ.
ಇದು ದೂರದರ್ಶನ ಪ್ರದರ್ಶನ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಕನ್ನಡದ ಮೊದಲ ಚಿತ್ರ. ಹಾಗೂ ಈ ಚಲನಚಿತ್ರವು ನಗರ ಮಾರುಕಟ್ಟೆಯಲ್ಲಿ 4,490 ಟಿವಿಟಿ(ರೇಟಿಂಗ್ಸ್ಗ)ಳನ್ನು ಗಳಿಸಿದೆ.
ಈ ಐತಿಹಾಸಿಕ ಸಾಧನೆಯನ್ನು ಹಂಚಿಕೊಂಡಿರುವ ಝೀ ಕನ್ನಡ ವಾಹಿನಿ ಮುಖ್ಯಸ್ಥ “ರಾಘವೇಂದ್ರ ಹುಣಸೂರು” ರವರು ಕನ್ನಡ ದೂರದರ್ಶನ ಇತಿಹಾಸದಲ್ಲಿ ಹಿಂದೆಂದೂ ಆಗದ ದೊಡ್ಡ ದಾಖಲೆ ಎಂದು ಹೇಳಿದ್ದಾರೆ.
ದೊಡ್ಮನೆ ಹುಡುಗ ಚಿತ್ರವೂ ಝೀ ಕನ್ನಡದಲ್ಲಿ 20 ಟಿವಿಆರ್ಗಳನ್ನು ಪಡೆದುಕೊಂಡಿದೆ. ದೊಡ್ಮನೆ ಹುಡುಗನ ಡಬ್ಲುಟಿಪಿಗೆ 24 ಮಿಲಿಯನ್ಗಿಂತ ಹೆಚ್ಚು ವೀಕ್ಷಕರು ಟ್ಯೂನ್ ಮಾಡಿದ್ದಾರೆ.
ಆವಾರ್ಡ್ ಶೋ ಕಾರ್ಯಕ್ರಮಗಳೂ ಕೂಡ ಇಂತಹ ರೇಟಿಂಗ್ಸ್ ಪಡೆಯಲು ಸಾಧ್ಯವಿಲ್ಲ.ಇದು ಅಷ್ಟೊಂದು ಸುಲಭದ ಮಾತಲ್ಲ.ಇಂತಹ ಸಾಧನೆ ದಕ್ಷಿಣ ಭಾರತ ಚಿತ್ರ ಮಾರುಕಟ್ಟೆಯಲ್ಲಿ ಕೂಡ ಬಲೂ ಅಪರೂಪ. ಇದು ನಮ್ಮ ಕರ್ನಾಟಕ ಚಿತ್ರ ಮಾರುಕಟ್ಟೆಯಲ್ಲಿ ಹಿಂದೆಂದಿಗೂ ಆಗದ ವಿದ್ಯಮಾನವಾಗಿದೆ.
ದೊಡ್ಮನೆ ಹುಡುಗ ಚಿತ್ರವೂ ಸುಮಾರು 100% ಹೆಚ್ಚಿನ ವೀಕ್ಷಣೆಯ ರೇಟಿಂಗ್ಗಳೊಂದಿಗೆ ಕನ್ನಡ ಚಲನಚಿತ್ರ ಮಾಸ್ಟರ್ ಪೀಸ್ (ಯಶ್ ನಟಿಸಿದ)ಚಿತ್ರದ ದಾಖಲೆಯನ್ನು ಮೀರಿಸಿದೆ.
ಉದಯ ಟಿವಿ ಯಲ್ಲಿ ಪ್ರಸಾರವಾದ ಮಾಸ್ಟರ್ ಪೀಸ್ ಟೋಟಲ್ ಮಾರ್ಕೆಟ್ನಲ್ಲಿ 6,514 ಟಿವಿಟಿಗಳನ್ನು ಮತ್ತು ನಗರ ಮಾರುಕಟ್ಟೆಯಲ್ಲಿ 2,620 ಟಿವಿಟಿ (ರೇಟಿಂಗ್ಸ್)ಗಳನ್ನು ಪಡೆದುಕೊಂಡಿದೆ.
ದರ್ಶನ್ ಅಭಿನಯದ ಮಿ.ಐರಾವತ ಚಿತ್ರವೂ 5,965 ಟಿವಿಟಿ(ರೇಟಿಂಗ್ಸ್ಗ)ಗಳನ್ನು ಪಡೆದುಕೊಂಡಿದೆ. ಮತ್ತು ಯಶ್ ಅಭಿನಯದ ರಾಮಚಾರಿ ಚಿತ್ರವು ಅತಿ ಹೆಚ್ಚು ಜನರು 4 ನೇ ಚಿತ್ರವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ. ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ ಮಹಿಮೆ ಹೇಳಬೇಕೆಂದರೆ ಒಂದು ಥೀಸಸ್ ಬರೆಯಬೇಕಾಗುತ್ತದೆ. ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ…
ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಬದಲಾವಣೆಯಗಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು, ಆಗಸ್ಟ್ 1ರಿಂದ ಹಲವಾರು ನಿಯಮಗಳು ಬದಲಾವಣೆಯಾಗಲಿವೆ. ಬ್ಯಾಂಕ್ನಲ್ಲಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಇದು ಸಿಹಿಸುದ್ದಿ. ದೇಶವನ್ನು ನಗದುರಹಿತ ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ಹಣ ವರ್ಗಾವಣೆ ಶುಲ್ಕವನ್ನು ಹಿಂಪಡೆಯಲು ಆರ್ಬಿಐ ನಿರ್ಧರಿಸಿದ ಬೆನ್ನಲ್ಲೇ, ಎಸ್ಬಿಐ ಜು.1ರಿಂದ ಅನ್ವಯವಾಗುವಂತೆ ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.ಬ್ಯಾಂಕ್ನಲ್ಲಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ…
ಭಾರತದ ಹೆಮ್ಮೆಯ ಪಿವಿ ಸಿಂಧೂ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆದ್ದು ನೂತನ ಇತಿಹಾಸ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಜಪಾನ್ನ ನಜೊಮಿ ಮಣಿಸಿ ವಿಶ್ವ ಚಾಂಪಿಯನ್ಶಿಪ್ಗೆ ಮುತ್ತಿಕ್ಕಿದರು, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್ನ ಜಪಾನ್ನ ನಜೊಮಿ ಒಕುಹರಾ ವಿರುದ್ಧ21-7, 21-7ರ…
ಉತ್ತಮ ಆರೋಗ್ಯಕ್ಕೆ ನೀರು ಅತ್ಯಾವಶ್ಯಕ ಅಂಶ.ನೀರಿನ ಆವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀವು ಸಾಕಷ್ಟು ದ್ರವಾಹಾರ ಸೇವಿಸುತ್ತಿರುವಿರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಲೇಖನವು ನಿಮಗೆ ಸಹಾಯ ಮಾಡಲಿದೆ.
ಕಳೆದ 21 ವರ್ಷಗಳಿಂದ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರವನ್ನು ನಡೆಸುವ ಮೂಲಕ ಸಾವಿರಾರು ಬಡ ಜನರ ಬಾಳಿನ್ನು ಹಸನುಗೊಳಿಸಿವ,ಸಮಾಜದ ಬಡ ವರ್ಗಗಳ ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ.
ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಟಾಲಿವುಡ್ ನಲ್ಲಿ ತುಂಬಾ ಜೋರಾಗಿದೆ.ಗೀತಾ ಗೋವಿಂದಂ ಚಿತ್ರದ ಯಶಸ್ವಿ ನಂತರ ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿವರೆಗೂ ರಷ್ಮಿಕಾರವರೆ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಹವಾ ಕ್ರಿಯೇಟ್ ಆಗಿದೆ.