ಸಿನಿಮಾ

TRP ರೇಟಿಂಗ್ಸ್ ನಲ್ಲೂ ಇತಿಹಾಸ ಬರೆದ ‘ದೊಡ್ಮನೆ ಹುಡುಗ’ “ಪುನೀತ್”!ಈ ಲೇಖನಿ ಓದಿ….

950

ಕನ್ನಡ ರಾಜರತ್ನ ಪುನೀತ್ ರಾಜ್ ಕುಮಾರ್ ನಟಿಸಿರುವ “ದೊಡ್ಮನೆ ಹುಡುಗ” ಚಿತ್ರವು, ಪ್ರಪ್ರಥಮ ಬಾರಿಗೆ ದೂರದರ್ಶನ(ಟೆಲಿವಿಷನ್) ಇತಿಹಾಸದಲ್ಲಿ ಹೊಸದಂದು ಐತಿಹಾಸಿಕ ದಾಖಲೆ ಮಾಡಿದೆ.

ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ  ಮೇ 28, ಭಾನುವಾರ ಸಂಜೆ 7.30 ರ ವೇಳೆ ಪ್ರಸಾರವಾದ ದೊಡ್ಮನೆ ಹುಡುಗ ಚಿತ್ರವು 12,162 (ಟಿವಿಟಿ)ರೇಟಿಂಗ್ಸ್ ಗಳಿಸಿದೆ.

  

ಇದು ದೂರದರ್ಶನ ಪ್ರದರ್ಶನ ಇತಿಹಾಸದಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಕನ್ನಡದ ಮೊದಲ ಚಿತ್ರ. ಹಾಗೂ ಈ ಚಲನಚಿತ್ರವು ನಗರ ಮಾರುಕಟ್ಟೆಯಲ್ಲಿ 4,490 ಟಿವಿಟಿ(ರೇಟಿಂಗ್ಸ್ಗ)ಳನ್ನು ಗಳಿಸಿದೆ.

ಈ ಐತಿಹಾಸಿಕ ಸಾಧನೆಯನ್ನು  ಹಂಚಿಕೊಂಡಿರುವ  ಝೀ ಕನ್ನಡ ವಾಹಿನಿ ಮುಖ್ಯಸ್ಥ “ರಾಘವೇಂದ್ರ ಹುಣಸೂರು” ರವರು ಕನ್ನಡ ದೂರದರ್ಶನ ಇತಿಹಾಸದಲ್ಲಿ ಹಿಂದೆಂದೂ ಆಗದ ದೊಡ್ಡ ದಾಖಲೆ  ಎಂದು ಹೇಳಿದ್ದಾರೆ.

ದೊಡ್ಮನೆ ಹುಡುಗ ಚಿತ್ರವೂ  ಝೀ ಕನ್ನಡದಲ್ಲಿ 20 ಟಿವಿಆರ್ಗಳನ್ನು ಪಡೆದುಕೊಂಡಿದೆ. ದೊಡ್ಮನೆ ಹುಡುಗನ  ಡಬ್ಲುಟಿಪಿಗೆ 24 ಮಿಲಿಯನ್ಗಿಂತ ಹೆಚ್ಚು ವೀಕ್ಷಕರು ಟ್ಯೂನ್ ಮಾಡಿದ್ದಾರೆ.

ಆವಾರ್ಡ್ ಶೋ ಕಾರ್ಯಕ್ರಮಗಳೂ ಕೂಡ ಇಂತಹ ರೇಟಿಂಗ್ಸ್ ಪಡೆಯಲು ಸಾಧ್ಯವಿಲ್ಲ.ಇದು ಅಷ್ಟೊಂದು ಸುಲಭದ ಮಾತಲ್ಲ.ಇಂತಹ ಸಾಧನೆ ದಕ್ಷಿಣ ಭಾರತ ಚಿತ್ರ ಮಾರುಕಟ್ಟೆಯಲ್ಲಿ ಕೂಡ ಬಲೂ ಅಪರೂಪ. ಇದು ನಮ್ಮ ಕರ್ನಾಟಕ ಚಿತ್ರ ಮಾರುಕಟ್ಟೆಯಲ್ಲಿ ಹಿಂದೆಂದಿಗೂ ಆಗದ ವಿದ್ಯಮಾನವಾಗಿದೆ.

ದೊಡ್ಮನೆ ಹುಡುಗ ಚಿತ್ರವೂ ಸುಮಾರು 100% ಹೆಚ್ಚಿನ ವೀಕ್ಷಣೆಯ ರೇಟಿಂಗ್ಗಳೊಂದಿಗೆ ಕನ್ನಡ ಚಲನಚಿತ್ರ ಮಾಸ್ಟರ್ ಪೀಸ್ (ಯಶ್ ನಟಿಸಿದ)ಚಿತ್ರದ  ದಾಖಲೆಯನ್ನು ಮೀರಿಸಿದೆ.

ಉದಯ ಟಿವಿ ಯಲ್ಲಿ ಪ್ರಸಾರವಾದ ಮಾಸ್ಟರ್ ಪೀಸ್ ಟೋಟಲ್ ಮಾರ್ಕೆಟ್ನಲ್ಲಿ 6,514 ಟಿವಿಟಿಗಳನ್ನು ಮತ್ತು ನಗರ ಮಾರುಕಟ್ಟೆಯಲ್ಲಿ 2,620 ಟಿವಿಟಿ (ರೇಟಿಂಗ್ಸ್)ಗಳನ್ನು ಪಡೆದುಕೊಂಡಿದೆ.

ದರ್ಶನ್ ಅಭಿನಯದ ಮಿ.ಐರಾವತ ಚಿತ್ರವೂ  5,965 ಟಿವಿಟಿ(ರೇಟಿಂಗ್ಸ್ಗ)ಗಳನ್ನು ಪಡೆದುಕೊಂಡಿದೆ. ಮತ್ತು ಯಶ್ ಅಭಿನಯದ  ರಾಮಚಾರಿ  ಚಿತ್ರವು ಅತಿ ಹೆಚ್ಚು ಜನರು  4 ನೇ ಚಿತ್ರವಾಗಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ