ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು ವಾರ್ಡಿಗೆ ಸೇರಿಸಿದ್ದಾರೆ.

ಚಿಕಿತ್ಸೆಯ ನಂತರ ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಾ ಪತ್ನಿ ಬೇಬಿ, ಮೊರಾದಾಬಾದ್ ನಿವಾಸಿಯಾದ ನನ್ನ ಪತಿ ನನ್ನನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಅವನು ರೈಲಿನಿಂದ ಹಾರಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಒಂದು ದಿನದ ಹಿಂದೆ ಹಿರಾ ಜೊತೆ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದೇವು ಎಂದು ಹೇಳಿದ್ದಾಳೆ.

ನನಗೆ ಕೆಳದ ಮೂರು ತಿಂಗಳಿನಿಂದ ಅಪರಿಚಿತ ಸಂಖ್ಯೆಯಿಂದ ಹಿರಾ ಕರೆ ಮಾಡುತ್ತಿದ್ದ. ನಂತರ ನಾನು ಅವರ ಜೊತೆ ಮಾತನಾಡುತ್ತಿದ್ದೆ. ನಮ್ಮಿಬ್ಬರ ನಡುವೆ ಪ್ರೀತಿ ಬೆಳೆಯಿತು. ಇಬ್ಬರು ಸೇರಿ ಮದುವೆಯಾಗಲು ತೀರ್ಮಾನ ಮಾಡಿ, ಮನೆಯಿಂದ ಓಡಿಹೋದೆವು. ಜುಲೈ 26 ರಂದು ಹಿರಾ ಟೆನ್ಸುಕಿಯನಗೆ ಬಂದು ನನ್ನನ್ನು ಕರೆದುಕೊಂಡು ಬಂದ. ನಂತರ ಅಲ್ಲಿಂದ ಪಾಟ್ನಾ ತಲುಪಿದೆವು. ಎರಡು ದಿನಗಳ ಕಾಲ ಹೋಟೆಲ್ನಲ್ಲಿ ಉಳಿದುಕೊಂಡು ಜುಲೈ 29 ರಂದು ದೇವಾಲಯವೊಂದರಲ್ಲಿ ಮದುವೆಯಾದೆವು ಎಂದು ಬೇಬಿ ಪೊಲೀಸರಿಗೆ ತಿಳಿಸಿದ್ದಾಳೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಸಿಂಗ್, ಬೇಬಿ ಗಂಭೀರ ಸ್ಥಿತಿಯಲ್ಲಿಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ರೈಲ್ವೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ..
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ…
ಭಾರಿ ಚರ್ಚೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಪ್ರಣಯ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನವೇ ನಿವೇದಿತಾ ಗೌಡ ಗುಡ್ ನ್ಯೂಸ್ ನೀಡಿದ್ದಾರೆ. ಬಿಗ್ ಬಾಸ್ ಮನೆಯ ಬೇಬಿ ಡಾಲ್ ಎಂದೇ ಹೆಸರಾದ ನಿವೇದಿತಾ ಗೌಡರನ್ನು ಯಾರು ತಾನೇ ಮರೆಯುವುದುಂಟ ಹೇಳಿ. ತನ್ನ ಮುದ್ದು-ಮುದ್ದಾದ ಮಾತುಗಳನ್ನಾಡುತ್ತ ಸೋಷಿಯಲ್ ಮೀಡಿಯಾದಿಂದ ಬಿಗ್ ಬಾಸ್ ಮನೆಯ ತನಕ ಹೆಜ್ಜೆಯಿಟ್ಟ ಚೆಲುವೆ ನಿವೇದಿತಾ. ಬಿಗ್ ಬಾಸ್ ಮನೆಯಲ್ಲಿ ಕನ್ನಡದ ರ್ಯಾಪ್…
ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು….
ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್…
ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…