ಸುದ್ದಿ

ಕಡ್ಡಾಯವಾಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಇರಲೇಬೇಕು:ಇಲ್ಲ ಎಂದಲ್ಲಿ ಎರಡರಷ್ಟು ಟೋಲ್ ಕಟ್ಟಿ….!

50

ಇನ್ನುಮುಂದೆ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಒಂದೊಮ್ಮೆ ನಿಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ. ಹೌದು ಇದು ಸತ್ಯ, ಡಿಸೆಂಬರ್‌ನಲ್ಲಿ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ.ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಲ್ನ ಎಲ್ಲ ಲೇನ್‌ಗಳನ್ನೂ ಫಾಸ್ಟ್‌ಟ್ಯಾಗ್‌ ಲೇನ್‌ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಡಿಸೆಂಬರ್‌ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್‌ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್‌ ಲೇನ್‌ ಕೂಡ ಇರಲಿದ್ದು, ಇದರಲ್ಲಿ ಫಾಸ್ಟ್‌ಟ್ಯಾಗ್‌ ಜೊತೆಗೆ ನಗದು ರೂಪದಲ್ಲೂ ಹಣ ಪಡೆಯಲಾಗುತ್ತದೆಮುಂದಿನ ದಿನಗಳಲ್ಲಿ ಈ ಲೇನ್‌ಗಳಲ್ಲಿ ಕೇವಲ ಫಾಸ್ಟ್‌ಟ್ಯಾಗ್‌ಗಳನ್ನು ಮಾತ್ರ ಸಮ್ಮತಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳು ಈ ಲೇನ್‌ಗಳ ಮೂಲಕ ಹಾದುಹೋಗುವುದಾದರೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಟೋಲ್ ಬಳಿ ವಾಹನವನ್ನು ನಿಲ್ಲಿಸಿ ಹಣ ನೀಡಿ ರಸೀದಿ ತೆಗೆದುಕೊಳ್ಳುವ ಕಿರಿಕಿರಿಯನ್ನು ಇದು ನಿವಾರಿಸುತ್ತದೆ.

ಸದ್ಯ ಎಲ್ಲ ಟೋಲ್‌ಗಳಲ್ಲೂ ಕೆಲವು ಲೇನ್‌ಗಳನ್ನು ಫಾಸ್ಟ್‌ಟ್ಯಾಗ್‌ ಸಿದ್ಧವಾಗಿಸಿದ್ದು, ಇಂತಹ ಲೇನ್‌ಗಳಲ್ಲಿ ನಗದು ಪಾವತಿ ಮಾಡುವವರೂ ಆಗಮಿಸುವುದರಿಂದಾಗಿ ಫಾಸ್ಟ್‌ಟ್ಯಾಗ್‌ನ ಮೂಲ ಉದ್ದೇಶವೇ ವಿಫ‌ಲವಾಗಿದೆ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸಲೂ ಸಚಿವಾಲಯ ಮುಂದಾಗಿದೆ. ಹಾಗೆಯೇ ಟೋಲ್‌ ಪ್ಲಾಜಾದ ಕೊನೆಯ ಒಂದು ಲೈನನ್ನು ಫಾಸ್ಟ್‌ಟ್ಯಾಗ್ ರಹಿತ ವಾಹನಗಳಿಗಾಗಿ ಮೀಸಲಿಡಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಾರು, ಜೀಪು, ಲಘು ವಾಹನಗಳು, ಮಿನಿ ಬಸ್ ಏಕಮುಖ ಪ್ರಯಾಣ ದರ ಅಷ್ಟೇ ಇರಲಿದೆ. ಆದರೆ ನಿತ್ಯದ ಬಸ್‌ ಪಾಸಿನ ದರ ಮಾತ್ರ ಐದು ರೂ ಹೆಚ್ಚಳವಾಗಿದೆ. ಕಾರು, ಜೀಪುಗಳ ತಿಂಗಳ ಪಾಸಿನ ದರ 50 , ಲಘು ವಾಹನಗಳು, ಮಿನಿಬಸ್ ಪಾಸಿನ ದರ 75 ರೂ, ಬಸ್, ಟ್ರಕ್‌ಗಳ ದರವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇಲ್ಲ. ಬೆಂಗಳೂರಿನ ನವಯುಗ ಟೋಲ್ ಪ್ರೈವೇಟ್ ಲಿಮಿಟೆಡ್ ಭಾನುವಾರ ಟೋಲ್ ದರ ಪ್ರಕಟಿಸಿದೆ. 19.5 ಕಿ.ಮೀಗೆ ದರ ಪರಿಷ್ಕರಣೆ ಮಾಡಿದೆ.

ನಿತ್ಯ 45,000 ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಮಾರ್ಗದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್‌, ಬಸ್‌ಗಗಳಿಗೆ 120 ರೂ ನೀಡಬೇಕಿದೆ.

ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್‌ ಗಳು 3,930 ರೂ ಪಾವತಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್‌ ಸಿಟಿ, ಅತ್ತಿಬೆಲೆ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಜುಲೈ 1 ರಿಂದ ಟೋಲ್ ದರ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ಸ್‌ ಸಿಟಿಯಿಂದ ನಗರಕ್ಕೆ ಬರುವವರು ಹೋಗುವ ಮಾರ್ಗದಲ್ಲಿ 5 ರೂ, ಹಿಂದಿರುಗುವಾಗ 5 ರೂ ಒಟ್ಟು 10 ರೂ ಹೆಚ್ಚಿಗೆ ಹಣ ಪಾವತಿಸಬೇಕಿದೆ. ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ. ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್‌, ಬಸ್‌ಗಳಿಗೆ 120 ರೂ ನೀಡಬೇಕಿದೆ.

ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್‌ ಗಳು 3,930 ರೂ ಪಾವತಿಸುತ್ತಿದ್ದಾರೆ. ಐಟಿ ಸಿಬ್ಬಂದಿಗಳು ಬೆಂಗಳೂರು ನಗರದಿಂದ ನಿತ್ಯ ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಹೋಗುತ್ತಾರೆ. 18 ಕಿ.ಮೀ ರಸ್ತೆಯಲ್ಲಿ 55,000 -60 ಸಾವಿರ ವಾಹನಗಳು ಸಂಚರಿಸುತ್ತವೆ. ಹೋಲ್‌ಸೇಲ್ ಇಂಡೆಕ್ಸ್ ಪ್ರೈಸ್ ಪ್ರಕಾರ ಟೋಲ್ ಮೊತ್ತವನ್ನು ಏರಿಕೆ ಮಾಡಲಾಗುತ್ತಿದೆ. ಟೋಲ್ ದರ ಹೆಚ್ಚಾದರೆ ಆ ಮಾರ್ಗದಲ್ಲಿ ಸಂಚರಿಸುವ ಬಸ್‌ ಟಿಕೆಟ್ ದರ ಕೂಡ ಹೆಚ್ಚಾಗಲಿದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಗ್ಯಾಜೆಟ್

    ಮೊಬೈಲ್ ನಿರ್ಮಾಣ ಕಂಪೆನಿಗಳಲ್ಲಿ ನಡುಕ ಹುಟ್ಟಿಸಿದ ನೂತನ ಈ ಜಿಯೋ ಫೋನ್ ಬೆಲೆ!ಈ ಲೇಖನಿ ಓದಿ ಶಾಕ್ ಆಗ್ತೀರಾ…

    ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.

  • ಸುದ್ದಿ

    ಝೊಮ್ಯಾಟೋ ಮೇಲೆ 55 ಸಾವಿರ ದಂಡ ವಿಧಿಸಿದ ಕೋರ್ಟ್…ಸಸ್ಯಾಹಾರಿ ಕೇಳಿದಕ್ಕೆ ಮಾಂಸಹಾರಿ ಡೆಲಿವರಿ

    ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…

  • ರೆಸಿಪಿ

    ಮೈಸೂರು ಶೈಲಿಯಲ್ಲಿ ಬಿಸಿ ಬಿಸಿ ‘ಚಿಲ್ಲಿ ಚಿಕನ್’ ಮಾಡಿ…

    ಚಿಲ್ಲಿ ಚಿಕನ್ ಹೆಸರು ಕೇಳದವರೇ ಇಲ್ಲ. ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುವ ಚಿಲ್ಲಿ ಚಿಕನ್ ಕಣ್ಣ ಮುಂದೆ ಬರುತ್ತದೆ. ನಿಮಗಾಗಿ ಬಾಯಿಲ್ಲಿ ನೀರಿರುವ, ಮೈಸೂರು ಶೈಲಿಯ ಚಿಲ್ಲಿ ಚಿಕನ್ ರೆಸಿಪಿ …

  • ಸುದ್ದಿ

    ಟೈಗರ್ ಪ್ರಭಾಕರ್ ಅವರ ಮೂರು ಹೆಂಡತಿಯರನ್ನು ಮೊದಲ ಬಾರಿಗೆ ತೋರಿಸ್ತೀವಿ ನೋಡಿ.

    ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ…

  • ಸುದ್ದಿ

    ಸರ್ಕಾರಿ ನೌಕರರಿಗೆ ನವೆಂಬರ್ ತಿಂಗಳಿನಲ್ಲಿ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ..! ಏನದು ಗೊತ್ತಾ?

    ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಕೆಲವರ್ಗದ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಹಾಗೂ ಸಾರಿಗೆ ಭತ್ಯೆ(TA) ಲಭ್ಯವಾಗಿದೆ. ಈಗ ನವೆಂಬರ್ ತಿಂಗಳಿನಲ್ಲಿ ಬಂಪರ್ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರಿ ನೌಕರರ ಸಂಬಳ ಏರಿಕೆ ಬಗ್ಗೆ ನವೆಂಬರ್ ತಿಂಗಳಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಅಧಿಕೃತ ಆದೇಶ ಹೊರಬರಲಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(30 ನವೆಂಬರ್, 2018) ನೀವು ತ್ವರಿತ ಹಣ ಪಡೆಯುವ ಬಯಕೆ ಹೊಂದಿರುತ್ತೀರಿ. ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮಸುತ್ತಮುತ್ತಲಿನ ಪರಿಸರವನ್ನು ಬೆಳಗಿಸುತ್ತದೆ. ಪ್ರೀತಿಗಾಗಿ ವಿಶೇಷ…