ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ ಇತ್ತು. ಫೈಟ್ ಅನ್ನು ಇಷ್ಟ ಪಡುವ ಪ್ರಭಾಕರ್ ಅದ್ಭುತವಾಗಿ ಫೈಟ್ ಮಾಡೋದು ಇನ್ನೊಂದು ವಿಶೇಷ. ತನಗೂ ಸೇರಿದಂತೆ ಹಲವಾರು ಸ್ಟಾರ್ ಗಳಿಗೂ ಫೈಟ್ ಅನ್ನು ಕಂಪೋಸ್ ಮಾಡುತ್ತಿದ್ದರು. ತನ್ನ 14ನೇ ವಯಸ್ಸಿನಲ್ಲಿಯೇ ಬಾಕ್ಸರ್ ಅನ್ನು ಎರಡು ಬಾರಿ ನೆಲಕ್ಕೆ ಕೆಡುವಿಹಿದ ಬಲಿಷ್ಠ ದೇಹಿ ಅವರಾಗಿದ್ದರು.
ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಭಾಕರ್ ಕನ್ನಡ ಸಿನಿಮಾ ರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಹೀಗೆ ಸ್ಟಂಟ್ ಮಾಸ್ಟರ್ ಆಗಿ ಖ್ಯಾತರಾಗಿದ್ದರು. ತನ್ನ ಫೈಟ್ಸ್ ನೋಡಲಿಕ್ಕಾಗಿಯೇ ಪ್ರೇಕ್ಷಕರು ತನ್ನ ಸಿನಿಮಾ ನೋಡಲು ಬರುತ್ತಾರೆ ಎಂಬ ಹೆಮ್ಮೆ ಪ್ರಭಾಕರ್ ಅವರಿಗೆ ಇತ್ತಂತೆ. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರಭಾಕರ್ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಎಲ್ಲಾ ಫೈಟ್ ದೃಶ್ಯಗಳನ್ನು ತಾನೇ ಖುದ್ದಾಗಿ ಮಾಡುತ್ತಿದ್ದರು. ಇದರಿಂದಾಗಿಯೇ ತಾನು ಇಂದು ಸೋತು ಹೋದ ವ್ಯಕ್ತಿಯಾಗಿದ್ದೇನೆ. ನನ್ನೆಲ್ಲಾ ಮುರಿದ ಮೂಳೆಗಳು ಸರ್ಜರಿಯಲ್ಲಿ ನಿಂತಿವೆ ಎಂದು ಸಂದರ್ಶನವೊಂದರಲ್ಲಿ ಪ್ರಭಾಕರ್ ಹೇಳಿದ್ದರು.
ಟೈಗರ್ ಪ್ರಭಾಕರ್ ಖಳನಟ, ನಿರ್ದೇಶಕ, ನಿರ್ಮಾಪಕ, ಹೀರೋ ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಹೃದಯವಂತ ವ್ಯಕ್ತಿ. ಕನ್ನಡ, ತೆಲುಗು, ತಮಿಳು ಸೇರಿ 450 ಸಿನಿಮಾಗಳಲ್ಲಿ ನಟಿಸಿದ್ದ ಅವರು ಬಹುತೇಕರಿಂದ ಮೋಸಕ್ಕೊಳಗಾಗಿದ್ದ ವ್ಯಕ್ತಿ ಟೈಗರ್. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಅನೇಕ ಕಲಾವಿದರಿಗೆ, ಅನಾಥಾಶ್ರಮಗಳಿಗೆ, ಸಂಘ, ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಬೈಕ್ ಅಪಘಾತದ ಬಳಿಕ ಪ್ರಭಾಕರ್ ಆರೋಗ್ಯ ಹದಗೆಡ ತೊಡಗಿತ್ತು..ನಿಧಾನಕ್ಕೆ ಸ್ಟಾರ್ ವ್ಯಾಲ್ಯೂ ಕೂಡಾ ಕಡಿಮೆಯಾಗತೊಡಗಿತ್ತು.
ಅಧಿಕೃತವಾಗಿ ಮೂರು ಮದುವೆಯಾಗಿದ್ದ ಟೈಗರ್ ಗೆ ಇಬ್ಬರು ಪುತ್ರಿಯರು ಭಾರತಿ ಮತ್ತು ಗೀತಾ ಹಾಗೂ ಪುತ್ರ ವಿನೋದ್(ಮೊದಲ ಹೆಂಡತಿ ಮಕ್ಕಳು), 2ನೇ ವಿವಾಹವಾಗಿದ್ದು ನಟಿ ಜಯಮಾಲಾ ಜೊತೆ. ಇವರಿಗೆ ಸೌಂದರ್ಯ ಎಂಬ ಮಗಳು ಹುಟ್ಟಿದ್ದಳು. ಮೂರನೆಯ ಮದುವೆ ಅಂಜು ಜೊತೆ..ಈಕೆಗೆ ಅರ್ಜುನ್ ಎಂಬ ಮಗ ಜನಿಸಿದ್ದ. 2 ಮದುವೆಗಳು ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ತಾನೇನಿದ್ದರೂ ನೇರವಾಗಿ ಮಾತನಾಡುವ ಮನುಷ್ಯ ಎಂದೇ ಹೇಳಿಕೊಳ್ಳುತ್ತಿದ್ದ ಪ್ರಭಾಕರ್ ಅದೇ ರೀತಿ ಬದುಕಿದ್ದರು. ತನ್ನ ವೈಯಕ್ತಿಕ ಸೇರಿದಂತೆ ಎಲ್ಲಾ ವಿಚಾರವನ್ನು ಮುಚ್ಚಿಡದೇ ಹೇಳುತ್ತಿದ್ದ ನಟ ಅವರಾಗಿದ್ದರು. ವಿಪರ್ಯಾಸ ಎಂಬಂತೆ ಟೈಗರ್ ಕೊನೆಗಾಲದಲ್ಲಿ ಅವರ ಜೊತೆ ಮಗ ವಿನೋದ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲವಾಗಿತ್ತು. ತನಗೆ ಎಲ್ಲಾ ಮೋಸ ಮಾಡಿಬಿಟ್ಟರು ಎಂಬುದಾಗಿ ಕೊನೆಯ ದಿನಗಳಲ್ಲಿ ಮಗನ ಜೊತೆ ಟೈಗರ್ ಹೇಳಿಕೊಂಡಿದ್ದರಂತೆ. ಕೊನೆಗೆ 1948ರಲ್ಲಿ ಜನಿಸಿದ್ದ ಟೈಗರ್ ಬಹುಅಂಗಾಂಗ ವೈಫಲ್ಯದಿಂದ ತನ್ನ 52ನೇ ವಯಸ್ಸಿನಲ್ಲಿ (2001ರ ಮಾರ್ಚ್ 25ರಂದು ) ವಿಧಿವಶರಾಗಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಟೈಗರ್ ನಿರ್ದೇಶಿಸಿದ್ದ ಗುಡ್ ಬ್ಯಾಡ್ ಅಂಡ್ ಅಗ್ಲಿ ಸಿನಿಮಾ ತೆರೆಕಂಡಿತ್ತು..ಅದು ಪ್ರಭಾಕರ್ ಅವರ ಬದುಕು ಮತ್ತು ಅಂತ್ಯಕ್ಕೆ ಮುನ್ನುಡಿ ಬರೆದಂತೆ ಇತ್ತು..ಇವೆಲ್ಲದರ ನಡುವೆ ಟೈಗರ್ ಇನ್ನೂ ಚಿತ್ರರಸಿಕರ ಮನದಲ್ಲಿ ಉಳಿದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.
ಹಿಂದೊಂದು ದಿನ ಊಟ ಇಲ್ಲದೆ, ಮಲಗೋಕೆ ಜಾಗ ಇಲ್ಲದೆ ಚೆನ್ನೈನ ಫುಟ್ಪಾತ್ ಮೇಲೆ ಇದ್ದ ಈ ಹುಡುಗನ ಇವತ್ತಿನ ಸಾಧನೆ ಕೇಳಿದ್ರೆ ನೀವೆಲ್ಲ ಹುಬ್ಬೇರುಸ್ತೀರಾ. ಜೀವನ ಒಂದೇ ರೀತಿಯಲ್ಲಿ ಯಾವತ್ತೂ ಇರೋದಿಲ್ಲ ಅನ್ನೋದಕ್ಕೆ ಈ ಹುಡುಗನೇ ಸ್ಪಷ್ಟ ಉದಾಹರಣ..
ಭಾರತವು ವಿಭಿನ್ನ ಧರ್ಮಗಳ, ನಂಬಿಕೆಗಳು, ಆಚರಣೆಗಳ ನೆಲೆಬೀಡಾಗಿದ್ದು, ಇಲ್ಲಿ ಎಷ್ಟೋ ಸಾಧು,ಸಂತರು,ಮಹಾನ್ ದಾರ್ಶನಿಕರು ಜನಿಸಿದ್ದಾರೆ. ತಮ್ಮ ಸಾಮಾನ್ಯ ಜೀವನ ಕ್ರಮದಿಂದ ಧರ್ಮವನ್ನು ಭೋದಿಸಿ,ಪವಾಡಗಳನ್ನು ಮಾಡಿ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ.
ರಚಿತಾ ರಾಮ್ ‘ಅನುಬಂಧ ಅವಾರ್ಡ್ಸ್2019’ರಲ್ಲಿ ಮೊದಲ ಬಾರಿಗೆ ನಿರೂಪಣೆಮಾಡುತ್ತಿದ್ದಾರೆ. ಚೆನ್ನಾಗಿದೆ ಅಂದ್ರೆ ಚೆನ್ನಾಗಿದೆ ಹೇಳಿ,ತಪ್ಪಿದ್ರೆ ಡಿಂಪಲ್ ನೋಡಿ ಕ್ಷಮಿಸಿಎಂದಿದ್ದರು. ಈಗ ಅವರು ಕೋಟ್ಯಧಿಪತಿಯಲ್ಲಿ ಪುನೀತ್ ಜಾಗವನ್ನು ಆಕ್ರಮಿಸಿಕೊಂಡರಾ? ಅಥವಾ ಅಪ್ಪು ಅವರೇಆ ಹುದ್ದೆ ಬಿಟ್ಟುಕೊಟ್ಟರಾ?ಎಂಬ ಪ್ರಶ್ನೆ ಮೂಡಬಹುದು. ಪುನೀತ್ ರಾಜ್ಕುಮಾರ್ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ನಿರೂಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ರಚಿತಾ ರಾಮ್ ಅಪ್ಪು ಜಾಗದಲ್ಲಿ ಕೂತು ಅಪ್ಪುಗೆ ಪ್ರಶ್ನೆ ಕೇಳುತ್ತಾರೆ, ಅದರ ಜೊತೆಗೆ ನಾಲ್ಕು ಆಪ್ಶನ್ ಕೊಡ್ತಾರೆ. ಹಾಟ್ಸೀಟ್ ಅಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳಿಗೆ ಹೇಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆಯೋ ಅದೇ…
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದಕ್ಕೆ ಕಾರಣ. ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು
ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ