ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಸಿ ಬಿಸಿ ತಿಂಡಿ ಟೇಬಲ್ ಮೇಲೆ ರೆಡಿ ಇದ್ದರೂ ತಿನ್ನುವಷ್ಟು ವ್ಯವಧಾನ ನಮ್ಮ ಜನರಿಗೆ ಇರುವುದಿಲ್ಲ. ಹರಿಬಿರಿ ಮಾಡಿಕೊಂಡು ಬ್ಯಾಗ್ ನೇತಾಕಿಕೊಂಡು, ನಾನು ಆಫೀಸ್ ನಲ್ಲೇ ತಿನ್ನುತ್ತೇನೆ ಎಂದು ಹೊರಡುವವರೇ ಹೆಚ್ಚು. ಕೆಲವರು ಹಾಸಿಗೆಯಿಂದ ಏಳುವುದು ತಡ ಮಾಡಿಕೊಂಡು ತಿನ್ನದೆ ಹಾಗೆ ಹೊರಟರೆ, ಇನ್ನು ಕೆಲವರಿಗೆ ಬೆಳಗ್ಗೆ ತಿನ್ನಬೇಕೆಂದರೆ ಅಲರ್ಜಿ. ಆದರೆ ನೀವು ಬೆಳಗಿನ ಹೊತ್ತು ಉಪಹಾರ (ಬ್ರೇಕ್ ಫಾಸ್ಟ್) ಸೇವಿಸಿದಿದ್ದರೆ ಮುಂದೆ ಏನೆಲ್ಲಾ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ ಗೊತ್ತಾ? ಇಲ್ಲಿ ನೋಡಿ.

ಹೃದಯಾಘಾತದ ಸಾಧ್ಯತೆ
ಜಾಮಾ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರವನ್ನು ತ್ಯಜಿಸುವ ಪುರುಷರಲ್ಲಿ ಹೃದಯಾಘಾತದ ಸಾಧ್ಯತೆ ಶೇ.27ಕ್ಕಿಂತ ಹೆಚ್ಚಿರುತ್ತದೆ. ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಡಾ. ಲೇಹ್ ಕಾಹಿಲ್, ನೀವು ಆರೋಗ್ಯಕರವಾದ ಉಪಹಾರ ಸೇವಿಸಿದರೆ ಹೃದಯಾಘಾತದ ಅಪಾಯ ತಡೆಯಬಹುದು. ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ ಜನರು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.

ತೂಕ ಹೆಚ್ಚಾಗುತ್ತದೆ
ಬೆಳಗಿನ ಸಮಯದಲ್ಲಿ ಉಪಹಾರವನ್ನು ಸೇವಿಸದಿರುವವರ ಕುರಿತು ನಡೆಸಿದ ಅಧ್ಯಯನಗಳ ಪ್ರಕಾರ, ಬೆಳಗ್ಗೆ ತಿಂಡಿ ತಿನ್ನದವರು ಕ್ರಮೇಣ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹಸಿವಿನ ಮಟ್ಟ ಹೆಚ್ಚಾದಷ್ಟೂ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ. ತಿಂಡಿ ತ್ಯಜಿಸುವ ನಿರಂತರ ಅಭ್ಯಾಸವು ಅಂತಿಮವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಹೊರತು ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ ಎನ್ನುವುದನ್ನು ಮರೆಯಬೇಡಿ.
ದೇಹದ ಶಕ್ತಿ ಕುಗ್ಗುತ್ತದೆ
1999 ರಲ್ಲಿ ಫಿಸಿಯೋಲಾಜಿಕಲ್ ಬಿಹೇವಿಯರ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಪಹಾರವನ್ನು ತ್ಯಜಿಸುವುದರಿಂದ ದೇಹದ ಶಕ್ತಿ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕ್ಯಾನ್ಸರ್ ಬರಬಹುದು!!
ಬೆಳಗಿನ ಸಮಯದಲ್ಲಿ ಉಪಹಾರ ತ್ಯಜಿಸಿ, ಆ ನಂತರ ಆಹಾರವನ್ನು ಅತಿಯಾಗಿ ಸೇವಿಸಿದರೆ ಸ್ಥೂಲಕಾಯತೆ ಬರಲು ದಾರಿ ಮಾಡಿ ಕೊಟ್ಟಂತಾಗುತ್ತದೆ. ಕ್ಯಾನ್ಸರ್ ರಿಸರ್ಚ್ ಯುಕೆ ನಡೆಸಿದ ಸಂಶೋಧನೆಯ ಪ್ರಕಾರ, ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ವ್ಯಕ್ತಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಿಳಿದುಬಂದಿದೆ.
ವಿಶುಯಲ್ ಸರ್ಚ್ ಟೆಸ್ಟ್
12 ರಿಂದ 15 ವರ್ಷದೊಳಗಿನ ಮಕ್ಕಳ ಮೇಲೆ ಒಂದು ಅಧ್ಯಯನ ನಡೆಸಲಾಯಿತು. ಮೊದಲನೆ ಪ್ರಯೋಗದಲ್ಲಿ ಇವರಿಗೆ ಉಪಹಾರ ನೀಡಲು ಅವಕಾಶ ನೀಡಲಾಯಿತು. ಎರಡನೇ ಪ್ರಯೋಗದಲ್ಲಿ ಉಪಹಾರ ಕೊಡಲಿಲ್ಲ. ಆಗ ಬಂದ ಫಲಿತಾಂಶ ಹೀಗಿತ್ತು. ಉಪಹಾರ ಸೇವಿಸಿದಾಗ ವಿಶುಯಲ್ ಸರ್ಚ್ ಟೆಸ್ಟ್ ರಿಸಲ್ಟ್ ಉತ್ತಮವಾಗಿತ್ತು. ಉಪಹಾರದ ಸೇವಿಸದಿದ್ದಾಗ ರಿಸಲ್ಟ್ ಶೂನ್ಯ. ಹದಿಹರೆಯದವರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದ್ದರೂ ಇದು ವಯಸ್ಕರಿಗೂ ಅನ್ವಯವಾಗುತ್ತದೆ.

ಕೂದಲು ಉದುರುತ್ತದೆ
ಬೆಳಗಿನ ಸಮಯ ಉಪಹಾರ ತ್ಯಜಿಸುವುದರಿಂದ ಆಗುವ ಅಡ್ಡಪರಿಣಾಮವೆಂದರೆ ಕೂದಲು ಉದುರುವುದು. ಇದು ಕೂದಲಿನ ಬೆಳವಣಿಗೆಯನ್ನು ತಪ್ಪಿಸಿ, ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಿಮಗೆ ಗೊತ್ತಿದೆಯೋ, ಇಲ್ಲವೋ ನೀವು ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ನೀವು ನಿಜಕ್ಕೂ ಸೊಂಪಾದ ಕೂದಲನ್ನು ಬಯಸಿದ್ದರೆ ಪ್ರತಿದಿನ ಪ್ರೊಟೀನ್ ಭರಿತ ಉಪಹಾರ ಸೇವಿಸಿ.

ಚಯಾಪಚಯ ಕ್ರಿಯೆ ಉಪಹಾರದಿಂದಲೇ
ಇಂಧನ ಇಲ್ಲದಿದ್ದರೆ ಕಾರು ಹೇಗೆ ಸ್ಟಾರ್ಟ್ ಆಗುವುದಿಲ್ಲವೋ ಅಂತೆಯೇ, ನಮ್ಮ ಚಯಾಪಚಯ ಕ್ರಿಯೆ ಪ್ರಾರಂಭವಾಗಲು ಉಪಹಾರ ಬೇಕು. ರಾತ್ರಿ12 ಗಂಟೆಗಳ ಕಾಲ ವಿಶ್ರಾಂತಿ ಪಡೆದ ನಂತರ ದೇಹವನ್ನು ಪೋಷಿಸುವುದು ಬೆಳಗಿನ ಉಪಾಹಾರ. ವಿವಿಧ ಅಧ್ಯಯನಗಳ ಪ್ರಕಾರ ಉಪಹಾರ ಸೇವಿಸುವ ಜನರ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ, ಪ್ರಪಂಚದ ಸೃಷ್ಟಿಕರ್ತ ಬ್ರಹ್ಮ ದೇವನಿಗೂ ಕೂಡ ಹೆಣ್ಣನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಹೆಣ್ಣು ಚಂಚಲೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಬ್ರಹ್ಮ ದೇವಾ ಹೆಣ್ಣನ್ನ ಸೃಷ್ಟಿ ಮಾಡಿದ್ದು ಯಾಕೆ ಮತ್ತು ಹೆಣ್ಣನ್ನ ಸೃಷ್ಟಿ ಮಾಡಲು ಬ್ರಹ್ಮ ದೇವನು ತುಂಬಾ ಸಮಯವನ್ನ ತೆಗೆದುಕೊಳ್ಳಲು ಕಾರಣ ಏನು ಮತ್ತು ಸ್ತ್ರೀ ರಚನೆಯ ವೇಳೆಯಲ್ಲಿ ಬ್ರಹ್ಮ ದೇವಾ ಮತ್ತು ದೇವದೂತರ ನಡುವೆ ನಡೆದ ಮಾತುಕತೆ ಏನು ಎಂದು ತಿಳಿದರೆ ನೀವು ಕೂಡ ಶಾಕ್…
ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.
ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್ ಆವಿಷ್ಕರಿಸಿದ್ದಾರೆ. ಅಹಮದಾಬಾದ್, ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(1 ಜನವರಿ 2019) ನಿಮ್ಮ ಪ್ರೀತಿ ಒಂದು ಹೊಸ ಎತ್ತರವನ್ನು…
ಜಗತ್ತಿನಾದ್ಯಂತ ಅನೇಕ ಧರ್ಮಗಳಿಗೆ ಸೇರಿದವರು ತಮ್ಮ ಆಚಾರ ಸಂಪ್ರದಾಯ ಪಾಲಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೇ ಧರ್ಮವನ್ನು ತೆಗೆದುಕೊಂಡರೂ ಅದರಲ್ಲಿ ತಮ್ಮ ಧರ್ಮದವರು ತೀರಿಕೊಂಡರೆ ಹೂಳುವುದೋ, ಸುಡುವುದನ್ನೋ ಮಾಡುತ್ತಾರೆ.
ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ