ಸುದ್ದಿ

ಸ್ಯಾಂಡಲ್ ವುಡ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಗೌರವ. ಈ ನ್ಯೂಸ್ ನೋಡಿ.

91

ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಕೂಡಾ ಸಾಹಸ ನಿರ್ದೇಶನ ಮಾಡಿ, ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ಹೆಸರು, ಖ್ಯಾತಿ ಮತ್ತು ಸ್ಥಾನವನ್ನು ಪಡೆದಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು. ದಶಕಗಳಿಂದ ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮಾಡಿರುವ ಅವರು ನಟ ಹಾಗೂ ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ರಂಗದ ಈ ಸಾಧನೆ, ಅವರ ಶ್ರಮ ಹಾಗೂ ಪರಿಶ್ರಮಕ್ಕೆ ತಕ್ಕ ಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಥ್ರಿಲ್ಲರ್ ಮಂಜು ಅವರಿಗೆ ಸಂದಿರುವ ಗೌರವ ನಿಜಕ್ಕೂ ಸಂತಸವನ್ನು ತರುವ ವಿಚಾರವಾಗಿದೆ.

ವರ್ಚವಲ್ ಆಫ್ ಯೂನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ವಿಶ್ವವಿದ್ಯಾಲಯದಿಂದ ಥ್ರಿಲ್ಲರ್ ಮಂಜು ಅವರಿಗೆ ಅವರ ಜೀವಮಾನದ ಸಾಧನೆಗಾಗಿ ಗೌರವ ಡಾಕ್ಟರೇಟ್ ಅನ್ನು ಪ್ರಧಾನ ಮಾಡಿ ಗೌರವಿಸಿದೆ. ಕಳೆದ ಮೂರು ದಶಕಗಳಿಂದ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಥ್ರಿಲ್ಲರ್ ಮಂಜು ಅವರು ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ಪಯಣ ಆರಂಭವಾಗಿದ್ದು ಸ್ಯಾಂಡಲ್ ವುಡ್ ನಿಂದ. ಶಂಕರ್ ನಾಗ್ ಅವರ ಅಭಿನಯದ ನರಸಿಂಹ ಸಿನಿಮಾ ಮೂಲಕ 1990 ರಲ್ಲಿ ಸಾಹಸ ನಿರ್ದೇಶನ ಆರಂಭಿಸಿದರು.

ಕನ್ನಡದ ಎಲ್ಲಾ ಸೂಪರ್ ಸ್ಟಾರ್ ಗಳ ಸಿನಿಮಾಗಳಿಗೂ ಇವರು ಸಾಹಸ ನಿರ್ದೇಶನವನ್ನು ಮಾಡಿದ್ದು, ಇದುವರೆವಿಗೂ ಸುಮಾರು 500 ಕ್ಕಿಂತಲೂ ಅಧಿಕ ಸಿನಿಮಾಗಳಿಗೆ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳು, ಸ್ನೇಹಿತರು ಶುಭಾಶಯಗಳನ್ನು ಕೋರುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ನೀತಿ ಕಥೆ

    ಒಬ್ಬರೊಂದಿಗೆ ಹೋಲಿಸಿಕೊಂಡು ಬದುಕಬೇಡಿ ಎಂದು ಹೇಳುವ ಸೊಗಸಾದ ಕಥೆ…!ತಿಳಿಯಲು ಈ ಲೇಖನ ಓದಿ …

    ತಮಗಿರುವ ಸೌಲಭ್ಯಗಳು, ಅವಕಾಶಗಳಿಗಿಂತ ಇತರರಿಗೆ ಉತ್ತಮವಾದ ಸೌಲಭ್ಯಗಳು ಇವೆ ಎಂದು ಕೆಲವರು ಭಾವಿಸುತ್ತಾರೆ. ಹಣ, ಸೌಂದರ್ಯ, ಓದು, ಆಸ್ತಿ, ಹುದ್ದೆ…ಹೀಗೆ ಪ್ರತಿ ವಿಷಯದಲ್ಲೂ ಇತರರ ಜತೆಗೆ ಹೋಲಿಸಿಕೊಳ್ಳುತ್ತಿರುತ್ತಾರೆ. ಈ ರೀತಿ ಇನ್ನೊಬ್ಬರ ಜತೆಗೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಒಳ್ಳೆಯದಲ್ಲ.

  • ಸುದ್ದಿ

    ಮೈಸೂರಿನ ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ….!

    ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು‌, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • ಸುದ್ದಿ

    ʼಚಿನ್ನʼ ಪ್ರಿಯರಿಗೆ ಬಿಗ್‌ ಶಾಕ್: 39 ಸಾವಿರ‌ ರೂ. ಗಡಿ ದಾಟಿದ ಚಿನ್ನದ ಬೆಲೆ

    ಚಿನ್ನ ಜನಸಾಮಾನ್ಯರಿಗೆ ಕೈಗೆಟುಕುತ್ತಿಲ್ಲ. ನಿರಂತರವಾಗಿ ಬಂಗಾರದ ಬೆಲೆ ಏರಿಕೆಯಾಗ್ತಿದೆ. ಸತತ 6ನೇ ದಿನವೂ ಬಂಗಾರದ ಬೆಲೆ ಹೆಚ್ಚಾಗಿದೆ. ಚಿನ್ನ ಈವರೆಗೆ ಶೇಕಡಾ 25 ರಷ್ಟು ಏರಿಕೆ ಕಂಡಿದ್ದು, ಸೋಮವಾರ 10 ಗ್ರಾಂ ಚಿನ್ನದ ಬೆಲೆ 39,196 ರೂಪಾಯಿಯಾಗಿದೆ. ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಶೇಕಡಾ 1ರಷ್ಟು ಹೆಚ್ಚಳ ಕಂಡಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 45,058 ರೂಪಾಯಿಗೆ ಮಾರಾಟವಾಗ್ತಿದೆ. ಶುಕ್ರವಾರ ಕೆ.ಜಿ. ಬೆಳ್ಳಿ 45,148 ರೂಪಾಯಿಯಿತ್ತು. ಇದು 2016ರ ನಂತ್ರ ಗರಿಷ್ಠ…

  • Uncategorized

    ಮಾಲೂರಿನ ಯಶವಂತಪುರ ರಾಜ್ಯದ ಮೊದಲ ಡಿಜಿಟಲ್ ಹಳ್ಳಿ

    ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.