ಸುದ್ದಿ

ದೇವಸ್ತಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅನಾರೋಗ್ಯ…!

55

ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ.

ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಆಗಿದ್ದೇನು?:

ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಶಿರಾ ಮೂಲದ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ತೊಟ್ಟಿಯ ನೀರು ಬಳಸಿ ಹರಿಸೇವೆ ಪ್ರಸಾದ ತಯಾರಿಸಿದ್ದಾರೆ.

ಕರಿಕಡಬು, ಪಲ್ಯ, ಬೆಳೆಕಾಳು ಸಾರು, ಚಿತ್ರಾನ್ನ ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ವೀರಭದ್ರ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಆತನನ್ನು ಬರಗೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಬಾಲಕನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ವೀರಭದ್ರ ಪ್ರಾಣ ಬಿಟ್ಟಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಪಾರು’ ಧಾರಾವಾಹಿಯ ನಟಿ ಮೋಕ್ಷಿತಾ ಪೈ ಮಾಡಿದ ಕೆಲಸಕ್ಕೆ ಎಲ್ಲರು ಮೆಚ್ಚಲೇಬೇಕು…

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು‘ ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್. ಧಾರಾವಾಹಿಯಲ್ಲಿ ಮನೆ ಕೆಲಸದವಳ ಪಾತ್ರದಲ್ಲಿ ಕಾಣಿಸಿಕೊಂಡ ಮೋಕ್ಷಿತಾಗೆ ಇತ್ತೀಚೆಗೆ ನಡೆದ ‘ಜೀ ಕುಟುಂಬ ಅವಾರ್ಡ್ಸ್‌’ನಲ್ಲಿ ಬೆಸ್ಟ್ ಲೀಡ್ ಫಿಮೇಲ್ ಪ್ರಶಸ್ತಿ ಸಿಕ್ಕಿತ್ತು. ಅಷ್ಟೇ ಅಲ್ಲದೆ ಧಾರಾವಾಹಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಗೆ ಭಾರೀ ಜನಮನ್ನಣೆ ಕೂಡ ಲಭಿಸಿತ್ತು. ಪಾರು ಪಾತ್ರಧಾರಿ ಮೋಕ್ಷಿತಾ ಪೈ ಅಕ್ಟೋಬರ್ 22ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸರ್ಜಾಪುರದಲ್ಲಿರುವ ‘ತಾಯಿಮನೆ’ ಅನಾಥಾಶ್ರಮದಲ್ಲಿ 100ಕ್ಕೂ ಅಧಿಕ ಮಕ್ಕಳಿಗೆ ಬೆಳಿಗ್ಗಿನ ತಿಂಡಿಯನ್ನು ತಮ್ಮ ಕೈಯ್ಯಾರೆ ಬಡಿಸಿ ಖುಷಿಯಿಂದ ಬರ್ತಡೇ ಆಚರಿಸಿಕೊಂಡಿದ್ದಾರೆ….

  • ಸುದ್ದಿ

    ಸಾಲು ಸಾಲು ರಜೆ – 11 ದಿನ ಬ್ಯಾಂಕ್ ಬಾಗಿಲು ಬಂದ್ : ಬ್ಯಾಂಕ್ ಗ್ರಾಹಕರಿಗೊಂದು ಮುಖ್ಯ ಮಾಹಿತಿ….!

    ಅಕ್ಟೋಬರ್ ನಲ್ಲಿ ಹಬ್ಬದ ಕಾರಣ ರಜೆ ಇರುವುದರಿಂದ ಬ್ಯಾಂಕ್ ವಹಿವಾಟುಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 11 ದಿನ ರಜೆ ಇದೆ. ದಸರಾ ನಂತರ ದೀಪಾವಳಿ ಇರುವುದರಿಂದ ಬ್ಯಾಂಕ್ 11 ದಿನ ಕೆಲಸ ಮಾಡುವುದಿಲ್ಲ. ಆರ್.ಬಿ.ಐ. ವತಿಯಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ. ಅಕ್ಟೋಬರ್ 6 ಭಾನುವಾರ. ಅಕ್ಟೋಬರ್ 7 ನವಮಿ. ಅಕ್ಟೋಬರ್ 8 ರಂದು ದಶಮಿ. ಹಾಗಾಗಿ 3 ದಿನ…

  • ಉಪಯುಕ್ತ ಮಾಹಿತಿ

    ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ..

    KA-01 ಬೆಂಗಳೂರು ಕೇಂದ್ರ , ಕೋರಮಂಗಲ KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ KA-03 ಬೆಂಗಳೂರು ಪೂರ್ವ, ಇಂದಿರಾನಗರ KA-04 ಬೆಂಗಳೂರು ಉತ್ತರ, ಯಶವಂತಪುರ KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್ KA-06 ತುಮಕೂರು KA-07 ಕೋಲಾರ KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF) KA-09 ಮೈಸೂರು ಪಶ್ಚಿಮ KA-10 ಚಾಮರಾಜ್ನಗರ KA-11 ಮಂಡ್ಯ KA-12 ಮಡಿಕೇರಿ KA-13 ಹಾಸನ KA-14 ಶಿವಮೊಗ್ಗ KA-15 ಸಾಗರ KA-16 ಚಿತ್ರದುರ್ಗ KA-17 ದಾವಣಗೆರೆ KA-18 ಚಿಕ್ಕಮಗಳೂರು KA-19 ಮಂಗಳೂರು…

  • ವಿಚಿತ್ರ ಆದರೂ ಸತ್ಯ

    ಈ ಮಗುವಿನ ತೂಕ ಇದ್ದಕ್ಕಿದ್ದಂತೆ ದಿಢೀರನೆ ಜಾಸ್ತಿಯಾಗುತ್ತಾ ಹೋಗುತ್ತೆ..!ಏಕೆ ಗೊತ್ತಾ..???

    ಈ ಮಗು ತಿಂಗಳಿಗೆ 2 ಕೆಜಿ ಜಾಸ್ತಿ ಆಗ್ತಾ ಇದೆಯಂತೆ! ಮಗುವಿನ ತೂಕ ಹೆಚ್ಚಾಗದಂತೆ ತಡೆಯಲು ಹೆತ್ತವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಕಿತ್ಸೆಗಾಗಿಯೇ ತಿಂಗಳಿಗೆ ಬರೋಬ್ಬರಿ 2.5 ಇಂದ 3 ಲಕ್ಷ ರೂಪಾಯಿ ಖರ್ಚಾಗುತ್ತಿದೆಯಂತೆ.

  • ಸುದ್ದಿ

    ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಕೆ ಮಾಡಿದರೆ ಪಾಲಕರಿಗೆ ದಂಡ ವಿಧಿಸಲಾಗುವುದು…!

    ಗುಜರಾತ್​ನ ಬನಸ್ಕಾಂತ ಜಿಲ್ಲೆಯ ಠಾಕೂರ್​​ ಸಮುದಾಯದಲ್ಲಿ ಯುವತಿಯರು ಮೊಬೈಲ್​​ ಪೋನ್​​ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್​​​​ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ. ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ,…