ರಾಜಕೀಯ

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯಗೆ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡ ತೇಜಸ್ವಿನಿ ಅನಂತ್ ಕುಮಾರ್..!

470

ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು ಮನೆಯಲ್ಲೇ ಪ್ರತಿಕ್ರಿಯೆ ನೀಡಲು ಮುಂದಾಗಿದ್ದರು. ಇದರಿಂದ ಸ್ವಲ್ಪ ಗರಂ ಆದ ತೇಜಸ್ವಿನಿ, ಪ್ರಬುದ್ಧರಾಗಿ ವರ್ತಿಸಿ. ಇಲ್ಲಿ ಮಾತಾಡೋದು ಬೇಡ. ಕ್ಯಾಮರಾ ಮುಂದೆ ಬೇಡ, ಏನ್ ಹೇಳ್ಬೇಕು ಅದನ್ನ ನಿಮಗೆ ಹೇಳ್ತೇನೆ ಎಂದು ಹೇಳಿದರು.

ಇದು ಒಬ್ಬರಿಗೊಬ್ಬರು ಚರ್ಚೆ ಮಾಡುವ ಸ್ಥಳ ಅಲ್ಲ. ಇದರಿಂದ ನೀವೇನೂ ಸಾಧನೆ ಮಾಡಲು ಆಗಲ್ಲ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಪ್ರಬುದ್ಧತೆಯನ್ನು ಎಲ್ಲರ ಮುಂದೆ ತೋರಿಸಿ. ನಾವು ಒಂದು ಸಿದ್ಧಾಂತದ ಪರವಾಗಿದ್ದೇವೆ. ಹಾಗೆಯೇ ನರೇಂದ್ರ ಮೋದಿ ಮತ್ತು ದೇಶದ ಪರವಾಗಿದ್ದೇವೆ. ಸಪೂರ್ಣವಾಗಿ ಪ್ರಚಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ರು.

 ಇದೇ ವೇಳೆ ತೇಜಸ್ವಿ ಸೂರ್ಯ ಅವರು ಮನೆಯೊಳಗಡೆಯೇ ಭೋಲೋ ಭಾರತ್ ಮಾತಾಕಿ, ಅನಂತ್ ಕುಮಾರ್ ಜೀ ಕಿ ಜೈ ಅಂದ್ರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ತೇಜಸ್ವಿ ಸೂರ್ಯ ಅವರಿಗೆ ದನಿಯಾಗಿ ಜೈಕಾರ ಕೂಗಿದ್ರು. ಆದರೆ ಅದರಲ್ಲೊಬ್ಬ ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational, ಸುದ್ದಿ

    ಹಾಲರುವೆ ಉತ್ಸವದ ಸಂಭ್ರಮ- ಹರ್ಷೋದ್ಘಾರದ ಮಧ್ಯೆ ಮಾದಪ್ಪನ ಜಾತ್ರೆ..!ಇದರ ವಿಶೇಷ, ಹಿನ್ನೆಲೆಯೇನು?

    ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ….

  • ವಿಚಿತ್ರ ಆದರೂ ಸತ್ಯ

    ಉತ್ತರ ಕೊರಿಯಾದ ಕಿಮ್ ಜಂಗ್’ನ ನೀಚ ನಿಯಮಗಳು ಹಾಗೊ ಕಾಯ್ದೆಗಳ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ…

    ಈ ಹಿಂದೆ ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ಮಿಲಿಟರಿ ಮುಖ್ಯಸ್ಥನನ್ನೇ ಗಲ್ಲಿಗೇರಿಸಿ ಭಾರೀ ಸುದ್ಧಿಯಾಗಿದ್ದು ಕಿಮ್‌ ಜಂಗ್‌, ಇದೀಗ ಹೊಸ ಕಾಯ್ದೆ ಜಾರಿ ಮಾಡುವ ಮತ್ತೊಮ್ಮೆ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸಿದ್ದಾನೆ. ಭೂಮಿಯ ಮೇಲೆ ನರಕ ಇದೆ ಅಂದ್ರೆ ನೀವು ನಂಬುತ್ತಿರಾ.ಪ್ರಜೆಗಳನ್ನ ವಿವಿಧ ರೀತಿ ಹಿಂಸೆ ಕೊಡುವ ದೇಶಗಳು ಈ ಪ್ರಪಂಚದಲ್ಲಿ ಇದೆ.. ಏಷ್ಯಾದಲ್ಲಿ ಉತ್ತರ ಕೊರಿಯಾ ವಿಚಿತ್ರ ರೂಲ್ಸ್ ಮೂಲಕ ಜನರಿಗೆ ಇಲ್ಲೇ ನರಕ ತೋರಿಸುತ್ತಿದೆ. ಈ ದೇಶದಲ್ಲಿ ಸರ್ಕಾರ ಅನುಮೋದಿಸಿರುವ ೨೮ ರೀತಿಯ ಹೇರ್ ಕಟ್…

  • ಮನರಂಜನೆ

    ನಂಗೆ ಹೊಟೆ ಹಸಿದಿದ್ದಾಗ ಊಟ ಹಾಕಿದ ಮೊದಲ ವ್ಯಕ್ತಿ ರೆಬೆಲ್ ಸ್ಟಾರ್ ಎಂದ ಬಿಗ್ ಬಾಸ್ ಸ್ಪರ್ಧಿ..!

    ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ವಿಧಿವಶರಾಗಿ ಈಗಾಗಲೇ ಹತ್ತು ದಿನಗಳು ಕಳೆದಿದ್ದು, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಮಾತ್ರ ಈ ವಿಷಯ ಶನಿವಾರ ತಿಳಿದಿದೆ.ಈ ವೇಳೆ ಸೋನು ಪಾಟೀಲ್ ಅಂಬರೀಶ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹೊರ ಜಗತ್ತಿನ ಯಾವುದೇ ಸಂಪರ್ಕವಿರದ ಕಾರಣ, ನವೆಂಬರ್ 24ರ ಶನಿವಾರದಂದು ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದರೂ ವಾರದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿದೆ. ಭಾನುವಾರದ ಸಂಚಿಕೆಯಲ್ಲಿ…

  • ದೇಶ-ವಿದೇಶ, ವಿಸ್ಮಯ ಜಗತ್ತು

    ಮಹಿಳೆಯರಿಗೆ ವಾಸಿಸಲು ಅತ್ಯಂತ ಕಷ್ಟಕರವಾದ ದೇಶಗಳು ಯಾವುದು ಗೊತ್ತಾ..? ತಿಳಿಯಲು ಈ ಲೇಖನ ಓದಿ…

    ಇದು ಬಹುಶಃ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲ ದಾಳಿಯನ್ನು (Acid Attack )ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ನ್ಯಾಯವನ್ನು ಪಡೆಯುವುದಿಲ್ಲ .ಈ ದೇಶದಲ್ಲಿ 2015 ರಲ್ಲಿ ಸುಮಾರು 45,000 ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.

  • ಜ್ಯೋತಿಷ್ಯ

    ದಿನ ಭವಿಷ್ಯ …..ಪಂಡಿತ್ ವಿಶ್ವರೂಪ ಆಚಾರ್ಯರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಯಾವುದು ಎದುರಿಗಿಲ್ಲವೋ ಅದರ ಬಗ್ಗೆ ಚಿಂತೆ ಮಾಡುವುದು ತರವಲ್ಲ. ಸದ್ಯಕ್ಕೆ ನಿಮ್ಮ ಎದುರಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ. ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಮನ್ನಣೆ ದೊರೆಯುವುದು..ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…

  • ಸುದ್ದಿ

    ಪ್ರೇಯಸಿಯಾ ತಂದೆಗೆ ಗುಂಡು ಹಾರಿಸಿದ ಯೋಧ!

    ಪ್ರೀತಿಯ ವಿಚಾರವಾಗಿ ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದಲ್ಲಿ ನಡೆದಿದೆ. ದೇವರಾಜ್ (27) ಗುಂಡು ಹಾರಿಸಿದ ಯೋಧ. ದೇವರಾಜ್ ಅದೇ ಗ್ರಾಮದ ಪ್ರಕಾಶ್ ಎಂಬವರ ಮಗಳನ್ನು ಪ್ರೀತಿಸುತ್ತಿದ್ದರು. ಯೋಧ ಕೆಲವು ದಿನಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರೀತಿಯ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಹಾಗೂ ದೇವರಾಜ್ ನಡುವೆ ವಾಗ್ವಾದ ನಡೆದಿದೆ. ಜಗಳದಲ್ಲಿ ಕೋಪಗೊಂಡ ದೇವರಾಜ್, ಯುವತಿಯ ತಂದೆ ಪ್ರಕಾಶ್ ಮೇಲೆ…