ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟ್ಯಾಟೂ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ, ಈಗಿನ ಕಾಲದಲ್ಲಿ ಎಲ್ಲರಿಗೂ
ಟ್ಯಾಟೂ ಹುಚ್ಚು ಹಾಗೆಯೇ ಇಲ್ಲೊಬ್ಬ ಮಾಡೆಲ್. ದೇಹವನ್ನು ಬಗೆಬಗೆಯಾಗಿ ಮಾರ್ಪಾಡು ಮಾಡಿ ಮಿಂಚುವುದೆಂದರೆ ಈಕೆಗೆ ಬಲು ಇಷ್ಟವಂತೆ. ಇದಕ್ಕಾಗಿಯೇ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಳು . ಆದರೆ, ಇದೀಗ ಇದೇ ಹುಚ್ಚು ಇವಳನ್ನು ಮೂರು ವಾರಗಳ ಕಾಲ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.
ನ್ಯೂ ಸೌತ್ ವೇಲ್ಸ್‌ನ ಬಾಡಿ ಮಾಡಿಫಯರ್ ಅಂಬೇರ್ ಲೂಕ್ 24 ಎಂಬಾಕೆ ಈ ಸಂಕಷ್ಟ ಅನುಭವಿಸಿದ್ದವಳು. ಈಕೆ ತನ್ನ ದೇಹವನ್ನು ವಿಭಿನ್ನವಾಗಿ ಅಂದಗಾಣಿಸಲು ಹೋಗಿ ಮೈತುಂಬ ಬಗೆಬಗೆ ಟ್ಯಾಟೂ ಹಾಕಿಸಿಕೊಂಡಿದ್ದಳು. ಬರೀ ಮೈಗಲ್ಲ. ಕಣ್ಣನ್ನೂ ಈಕೆ ನೀಲಿ ಮಾಡಿದ್ದಳು… ಇದಕ್ಕಾಗಿ ಈಕೆ ವ್ಯಯಿಸಿದ್ದು ಬರೋಬ್ಬರಿ 26 ಸಾವಿರ ಅಮೇರಿಕನ್ ಡಾಲರ್. ಅಂದರೆ ಭಾರತದ ಸುಮಾರು 18 ಲಕ್ಷ ರೂಪಾಯಿ…! ಹೀಗೆ ದೇಹವನ್ನು ಮಾರ್ಪಾಡು ಮಾಡಿದ್ದ ಈಕೆಗೆ ನಂತರ ಕಷ್ಟಕಾಲ ಎದುರಾಗಿತ್ತು. ಅಂದರೆ, ಕಣ್ಣಿಗೆ ಹಾಕಿದ್ದ ನೀಲಿ ಟ್ಯಾಟೂ ಕಾರಣದಿಂದಾಗಿ ಈಕೆ ಮೂರು ವಾರಗಳ ಕಾಲ ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು…! ಇದನ್ನು ಸ್ವತಃ ಈಕೆ ಹೇಳಿಕೊಂಡಿದ್ದಾಳೆ.
ದೇಹವನ್ನು ಸಂಪೂರ್ಣ ನೀಲಿ ಬಣ್ಣಕ್ಕೆ ಬದಲಾಯಿಸಿಕೊಂಡಿದ್ದ ಈಕೆ ತನ್ನ ದೇಹದ ತುಂಬಾ ಇನ್ನೂರಕ್ಕೂ ಅಧಿಕ ಟ್ಯಾಟೂಗಳನ್ನು ಹಾಕಿಕೊಂಡಿದ್ದಳು. ಇದರಲ್ಲಿ ಕಣ್ಣಿಗೆ ಹಾಕಿದ್ದ ಟ್ಯಾಟೂ ಕೂಡಾ ಒಂದಾಗಿತ್ತು. ಈಕೆ ತನ್ನನ್ನು ತಾನು `ಬ್ಲೂ ಐಡ್ ವೈಟ್ ಡ್ರ್ಯಾಗನ್’ ಎಂದು ಕರೆದುಕೊಳ್ಳುತ್ತಿದ್ದಳು.
ಆದರೆ, ಈ ಟ್ಯಾಟೂ ಹಾಕಿಕೊಂಡ ಬಳಿಕ ಈಕೆಗೆ ಕಣ್ಣಿನ ನೋವು ಶುರುವಾಗಿತ್ತು. `ನಾನು ಅನುಭವಿಸಿದ್ದ ನೋವನ್ನು ನಿಮಗೆ ಹೇಳಲು ಸಾಧ್ಯವೇ ಇಲ್ಲ’ ಎಂದು ಈಕೆ ಈಗ ಹೇಳಿಕೊಂಡಿದ್ದಾಳೆ. ಈಕೆ ಅದೆಷ್ಟರ ಮಟ್ಟಿಗೆ ಹೆದರಿಕೊಂಡಿದ್ದಾಳೆ ಎಂದರೆ ಇನ್ನೆಂದೂ ನಾನು ಬಾಡಿ ಮಾಡಿಫಿಕೇಷನ್ ಮಾಡಿಕೊಳ್ಳುವುದಿಲ್ಲ ಎಂದು ಈಕೆ ತಿಳಿಸಿದ್ದಾಳೆ. ಮಗಳ ಈ ಸ್ಥಿತಿಗೆ ತಾಯಿಯೂ ಕಣ್ಣೀರಿಟ್ಟಿದ್ದಾರೆ. ಈಕೆಯೇ ಹೇಳುವಂತೆ ಎರಡು ಕಣ್ಣಿಗೆ ಟ್ಯಾಟೂ ಹಾಕಿಕೊಳ್ಳಲು ಸುಮಾರು 40 ನಿಮಿಷ ಹಿಡಿದಿತ್ತಂತೆ. ಜೊತೆಗೆ, ಇನ್ನೂ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಈಕೆ ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇತ್ತಂತೆ…!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅನುವಂಶೀಯವಾಗಿಯೋ, ಅಸಂಬದ್ಧ ಆಹಾರ ಕ್ರಮದಿಂದಾಗಿಯೊ ಅಥವಾ ಆರೋಗ್ಯ ಏರುಪೇರಿನಿಂದಲೋ ನೀವು ತುಂಬಾ ದಪ್ಪಗಾಗಿರುತ್ತೀರಿ. ಮತ್ತು ಸಣ್ಣಗೆ ಆಗಲು ಹಲವು ಪ್ರಯತ್ನ ಮಾಡಿ ವಿಫಲರಾಗಿದ್ದಿರಿ. ಈಗ ಈ ಒಂದು ಪ್ರಯತ್ನವನ್ನೂ ಮಾಡಿಬಿಡಿ. ಏಕೆಂದರೆ ಇದು ತುಂಬಾ ಸುಲಭ ವಿಧಾನ ಮತ್ತು ಇದರಿಂದ ತುಂಬಾ ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಬೇಕಾಗುವ ಪಾರ್ಥಗಳು ನಿಂಬೆ ರಸ ಎರಡು ಚಮಚ, ಬಿಸಿ ನೀರು ಒಂದು ಕಪ್, ಅರ್ಧ ಇಂಚು ಶುಂಠಿ ಮಾಡುವ ವಿಧಾನ ಒಂದು ಕಪ್ ಬಿಸಿ ನೀರಿಗೆ ಎರಡು ಚಮಚ ನಿಂಬೆ ರಸ ಮಿಶ್ರಣ…
ಚಳಿಗಾಲ ಬಂದಾಗಿದೆ. ಚಳಿಗಾಲದಲ್ಲಿ ತಿನ್ನೋ ಹ್ಯಾಬಿಟ್ ಸ್ಪಲ್ಪ ಜಾಸ್ತಿಯಾಗೋದು ಸಹಜ. ಪದೇಪದೆ ಏನಾದ್ರೂ ತಿನ್ನಬೇಕು ಅನ್ನಿಸ್ತಾ ಇರತ್ತೆ.ಅದರಲ್ಲೂ ಸಂಜೆ ಚಳಿ ದೂರ ಮಾಡಿಕೊಳ್ಳಲು ಏನಾದ್ರೂ ಸರಿ ಬಿಸಿಬಿಸಿಯಾಗಿ ಕುರುಕಲು ತಿಂಡಿ ಬೇಕೇಬೇಕು. ಅದರಲ್ಲೂ ಪಕೋಡಾ, ಬಜ್ಜಿಯಂತಹ ಕುರುಕುಲ ಜತೆಗೆ ಒಂದು ಕಪ್ ಚಹಾನೋ, ಕಾಫಿನೋ ಇದ್ದುಬಿಟ್ಟರೆ ಅದಕ್ಕಿಂತ ಆಹ್ಲಾದಕರ ಇನ್ನೊಂದಿಲ್ಲ.ಆದರೆ ಹೀಗೆ ಚಳಿಗಾಲದಲ್ಲಿ ಆಹಾರ ಸೇವನೆಗೆ ಸಂಬಂಧಪಟ್ಟಂತೆ ಕೆಲವು ತಪ್ಪು ಕಲ್ಪನೆಗಳೂ ಇವೆ. ಆ ತಪ್ಪು ಕಲ್ಪನೆಗಳು ಏನು? ಚಳಿಗಾಲದಲ್ಲಿ ಏನು ಆಹಾರ ಸೇವಿಸಬಹುದು? ಎಷ್ಟು ತಿನ್ನಬೇಕು…
ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು. ಅಮೆರಿಕಾದ ಅರ್ಕನ್ಸಾಸ್ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ…
ಮುಂಬೈ: ಆಟೋ ಚಾಲಕರೊಬ್ಬರು ಬರ್ಗರ್ ಕಿಂಗ್‍ನಲ್ಲಿ ಬರ್ಗರ್ ತಿಂದ ತಕ್ಷಣವೇ ಬಾಯಿಂದ ರಕ್ತ ಹೊರಬಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.ಸಾಜಿತ್ ಪಠಾಣ್(31) ಬರ್ಗರ್ ತಿಂದ ಆಟೋ ಚಾಲಕ. ಇವರು ಕಳೆದ ಬುಧವಾರ ತನ್ನ ಸ್ನೇಹಿತರ ಜೊತೆ ಬರ್ಗರ್ ಕಿಂಗ್‍ಗೆ ಬಂದಿದ್ದರು. ಅಲ್ಲಿ ಅವರು ಬರ್ಗರ್, ಫ್ರೈಂಚ್ ಫ್ರಯಿಸ್ ಹಾಗೂ ಸಾಫ್ಟ್ ಡ್ರಿಂಕ್ ಆರ್ಡರ್ ಮಾಡಿದ್ದರು. ಸಾಜಿತ್ ಬರ್ಗರ್ ತಿಂದ ತಕ್ಷಣವೇ ಗಂಟಲಿನಲ್ಲಿ ನೋವುಂಟಾಗಿ ರಕ್ತ ಹೊರ ಬಂದಿದೆ. ಸಾಜಿತ್ ಗಂಟಲಿನಲ್ಲಿ ಏನೋ ಸಿಲುಕಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ…
ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಂಗವಾಗಿ ಹಾಲರುವೆ ಉತ್ಸವ ನಡೆಯಿತು. ಬೇಡಗಂಪಣ ಜನಾಂಗಕ್ಕೆ ಸೇರಿದ 101 ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು 9 ಕಿ.ಮೀ ದೂರದ ಹಾಲರೆ ಹಳ್ಳದಿಂದ ಬಲಿಗಾಲಲ್ಲಿ ನೀರು ಹೊತ್ತು ತಂದು ಮಾದಪ್ಪನಿಗೆ ಅಭಿಷೇಕ ಮಾಡುವುದು ಹಾಲರುವೆ ಉತ್ಸವದ ವಿಶೇಷವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ದೀಪಾವಳಿ ಜಾತ್ರೆ ನಡೆಯುತ್ತದೆ. ಮಾದಪ್ಪನಿಗೆ ಎಣ್ಣೆಮಜ್ಜನಸೇವೆ, ಹಾಲರವೆ ಉತ್ಸವ ಮೂರನೇ ದಿನ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ….
ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…