ಸುದ್ದಿ

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯಿಂದ ನನಗೆ ಭಯ ಆಗ್ತಿದೆ ಎಂದ ಸುಮಲತಾ ಅಂಬರೀಶ್!ಸಿಎಂ ಹೇಳಿದ್ದೇನು?

304

ದಿನೇ ದಿನೇ ಮಂಡ್ಯ ಲೋಕಸಭಾ ಚುನಾವಣಾ ಕಣಾ ರಂಗೆರುತ್ತಿದ್ದು ಚುನಾವಣೆಗೆ ಎರಡು ದಿನ ಇರುವಾಗ ಅವರ ಕಡೆಯವರಿಂದಲೇ ಕಲ್ಲು ಹೊಡೆಸಿಕೊಂಡು ನಮ್ಮ ಮೇಲೆ ಹಾಕಲು ಯತ್ನಿಸ್ತಿದ್ದಾರೆ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸುಮಲತಾ, ಒಬ್ಬ ಮುಖ್ಯಮಂತ್ರಿ ಆದವರು ತಮ್ಮ ಪದವಿಯನ್ನು ಮರೆತು ಹೇಗೆಲ್ಲಾ ಮಾತನಾಡುತ್ತಿದ್ದಾರೆ. ನಿಜವಾಗಲೂ ಕಲ್ಲು ಹೊಡೆಸಿ ನಮ್ಮ ಮೇಲೆಯೇ ಗೂಬೆ ಕೂರಿಸಲು ಈ ತರಹದ ಹೇಳಿಕೆ ನೀಡಿದ್ದಾರೆ ಎಂದು ನಮಗೆ ಅನುಮಾನವಾಗುತ್ತಿದ್ದು,  ಮುಖ್ಯಮಂತ್ರಿಯವರ ಹೇಳಿಕೆಗಳಿಂದ ನನಗೆ ಭಯವಾಗ್ತಿದೆ ಎಂದು ಹೇಳಿದರು.

ನಾನು ಸೇರಿದಂತೆ ದರ್ಶನ್, ಯಶ್, ಅಭಿಷೇಕ್  ಪ್ರಚಾರ ಮಾಡುತ್ತಿರುತ್ತೇವೆ. ಕಲ್ಲು ತೂರುತ್ತಾರೆ ಎನ್ನುವ ಕುಮಾರಸ್ವಾಮಿಯವರ ಹೇಳಿಕೆಯಿಂದ ನಮಗೆ ಭಯವಾಗಿದೆ. ಏಕೆಂದರೆ ಮಾಧ್ಯಮದವರ ಮೇಲೆ ಯಾರಾದರೂ ಹಲ್ಲೆ ನಡೆಸಿದರೆ ನಾವು ಹೊಣೆಯಲ್ಲ ಎಂದು ಹೇಳುತ್ತಾರೆ. ಹೀಗಾಗಿ ಎಲೆಕ್ಷನ್ ಕಮೀಷನ್, ಐಜಿ ಮತ್ತು ಎಸ್‍ಪಿಗೆ ಸಿಎಂ ವಿರುದ್ಧ ದೂರು ನೀಡುವುದಾಗಿ ಸುಮಲತಾ ಹೇಳಿದರು.

ನನಗೆ ತುಂಬಾ ಭಯವಾಗುತ್ತಿದೆ. ಇಲ್ಲಿ ಇರುವ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಸಿಆರ್ ಪಿಎಫ್ ರಕ್ಷಣೆ ಒದಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸುಮಲತಾ ತಿಳಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ