ಸುದ್ದಿ

ಸುಧಾ ಮೂರ್ತಿ ದಂಪತಿಯ ಮಗನ ಮದುವೆ ಯಾವಾಗ,ಎಲ್ಲಿ,ಹೇಗೆ ಗೊತ್ತಾ?ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ನೋಡಿ..!

85

ಇನ್ಫೋಸಿಸ್ ದಂಪತಿ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರ ಮಗನ ಮದುವೆ ಡಿ. 2ರಂದು ಬೆಂಗಳೂರಿನ ಹೋಟೆಲಿನಲ್ಲಿ ಸರಳವಾಗಿ ನಡೆಯಲಿದೆ. ಸುಧಾಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರು ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮದುವೆ ಸರಳವಾಗಿ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಲಾಗಿದೆ. ರೋಹನ್ ಹಾಗೂ ಅರ್ಪಣಾ ಸ್ನೇಹಿತರೊಬ್ಬರ ಮೂಲಕ ಮೂರು ವರ್ಷಗಳಿಂದ ಪರಿಚಯವಾಗಿದ್ದರು.

ಅರ್ಪಣಾ ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಮಗಳು. ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿರುವ ಅರ್ಪಣಾ ಹೆಚ್ಚಿನ ಶಿಕ್ಷಣಕ್ಕಾಗಿ ಕೆನೆಡಾಗೆ ಹೋಗಿದ್ದರು. ಅರ್ಪಣಾ ಅಮೆರಿಕದ ಡಾರ್ಟ್ಮೌತ್ ಕಾಲೇಜಿನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಅರ್ಪಣಾ ಈಗ ಬೆಂಗಳೂರಿನ ನಿವಾಸಿಯಾಗಿದ್ದು, ಮೊದಲು ಮೆಕಿನ್ಸೆ ಹಾಗೂ ಸಿಕ್ವೊಯ ಕ್ಯಾಪಿಟಲ್‍ನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ರೋಹನ್ ‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ’ವನ್ನು ಸ್ಥಾಪಿಸಿದ್ದರು. ರೋಹನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2013 ರಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು.

2015ರ ಎಪ್ರಿಲ್ ನಲ್ಲಿ ರೋಹನ್- ಲಕ್ಷ್ಮಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರ ನವೆಂಬರಿನಲ್ಲಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ 2014ರ ಸೆಪ್ಟೆಂಬರ್‍ನಲ್ಲಿ ಲಕ್ಷ್ಮಿಯ ಸಹೋದರ ಸುದರ್ಶನ್ ಅವರ ವಿವಾಹ ಸಮಾರಂಭದಲ್ಲಿ ನಾರಾಯಣ ಮೂರ್ತಿ ಕುಟುಂಬ ಗೈರು ಹಾಜರಾದಾಗ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಇರುವ ವಿಚಾರ ಬೆಳಕಿಗೆ ಬಂದಿತ್ತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ವಿಡಿಯೋದಲ್ಲಿ ಬಟ್ಟೆ ಬಿಚ್ಚಿ ಶ್ರಿರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡದ ನಟಿ..!ಯಾರು?ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಕೆಲವು ದಿನಗಳ ಹಿಂದಯೇ ನಟಿ ಶ್ರೀರೆಡ್ಡಿ,  ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಾಗಿ ಹೇಳಿಕೆ ನೀಡಿದ್ದರು. ‘ನೇನು ನಾನಾ ಅಪದ್ಧಂ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶ್ರೀರೆಡ್ಡಿ, ಮಂಚ ಹಂಚಿಕೊಳ್ಳಲು ಸಿದ್ಧವಿರುವವರಿಗೆ ಮಾತ್ರ ಚಾನ್ಸ್ ಕೊಡಲಾಗ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಲ್ಲದೆ ತೆಲುಗು ಸಿನಿಮ ಕಲಾವಿದರ ಸಂಘದಿಂದ ಗುರುತಿನ ಚೀಟಿ ನೀಡದ ಸಂಭಂದ ಶ್ರೀರೆಡ್ಡಿ,ಹೈದರಾಬಾದ್’ನ ಫಿಲ್ಮ್ ಚೇಂಬರ್ ಎದುರು ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ವಿವಾದವಾಗಿದ್ದರು. ಶ್ರಿರೆಡ್ಡಿಗೆ ಕೌಂಟರ್ ಕೊಡಲು ಬಟ್ಟೆ…

  • govt, ಉದ್ಯೋಗ

    IFFCO ನೇಮಕಾತಿ 2020

    ಇಫ್ಕೊ ನೇಮಕಾತಿ 2020 ಅಧಿಸೂಚನೆ ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ iffco.in ಇಫ್ಕೊ ನೇಮಕಾತಿ 2020: ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಭಾರತೀಯ ರೈತ ರಸಗೊಬ್ಬರ ಸಹಕಾರಿ (ಇಫ್ಕೊ) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಕೃಷಿ ಪದವೀಧರ ತರಬೇತಿ, ಪದವೀಧರ ಎಂಜಿನಿಯರ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಇಫ್ಕೊ ಅಧಿಕೃತ ಅಧಿಸೂಚನೆ ಸೆಪ್ಟೆಂಬರ್ -2020 ಮೂಲಕ ಆಹ್ವಾನಿಸಿದೆ….

  • ಸುದ್ದಿ

    ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

    ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…

  • ಆರೋಗ್ಯ

    ಕಿತ್ತಳೆ ಹಣ್ಣಿನ ಉಪಯೋಗಗಳನ್ನು ತಿಳಿಯ ಬೇಕಾ..? ಹಾಗದ್ರೆ ಈ ಲೇಖನವನ್ನು ಓದಿ…

    ಕಿತ್ತಳೆ ಹಣ್ಣು ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಇಂಥ ಸಿಹಿ ಕಿತ್ತಳೆ ಹಣ್ಣಿನಿಂದ ದೇಹಕ್ಕೆ ಹಲವು ಉಪಯೋಗಗಳಿವೆ. ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.

  • ವಿಸ್ಮಯ ಜಗತ್ತು

    ಆಕಾಶದಲ್ಲಿ ವಿಮಾನದ ಮೇಲೆ ದಾಳಿ ಮಾಡಿದ ಹದ್ದುಗಳು..!ತಿಳಿಯಲು ಇದನ್ನು ಓದಿ..

    ಆಕಾಶದಲ್ಲಿ ಅತೀ ವೇಗವಾಗಿ ಚಲಿಸುತ್ತಿದ್ದ ಒಂದು ವಿಮಾನದ ಮೇಲೆ ಹದ್ದುಗಳು ಒಮ್ಮೆಲೇ ದಾಳಿಮಾಡಿದವು. ಅದೂ ಸಹ ಒಂದಲ್ಲ ಎರಡಲ್ಲ ಹತ್ತಾರು ಸಂಖ್ಯೆಯಲ್ಲಿ ದಾಳಿ ಮಾಡಿ ಪೈಲೆಟ್ ಅನ್ನು ತಬ್ಬಿಬ್ಬುಗೊಳಿಸಿದವು. ಆತಂಕ ಗೊಂಡ ಪೈಲೆಟ್ ವಿಮಾನವನ್ನು ಆಕಡೆ, ಈಕಡೆ ಓಡಿಸತೊಡಗಿದ.