ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಹಾಗೂ ಜನಾನುರಾಗಿ ಸುಧಾ ಮೂರ್ತಿ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ 11’ರ (ಕೆಬಿಸಿ) ಹಾಟ್ ಸೀಟ್ ಅಲಂಕರಿಸುತ್ತಿದ್ದು ಈ ಎಪಿಸೋಡ್ ಕಿರುತೆರೆ ವೀಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದೆ. ಕೆಬಿಸಿ ಸೆಟ್ನಲ್ಲಿ ಬಿಗ್ ಬಿಯನ್ನು ಸುಧಾ ಮೂರ್ತಿ ಭೇಟಿಯಾಗಿರುವ ಫೋಟೋಗಳನ್ನು ಬಿಗ್ ಬಿ ತಮ್ಮ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, “ನಾನು ಸಿನಿಮಾ ಪ್ರೇಮಿ ಹಾಗಾಗಿ ಅಮಿತಾಭ್ ಬಚ್ಚನ್ ಅವರಂತಹ ಮೇರು ಪ್ರತಿಭೆಯನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಗಿದೆ. ಸೋಲು, ಗೆಲುವು ದೊಡ್ಡದಲ್ಲ, ನಾವು ಮಾಡುವ ಕೆಲಸದ ಮೂಲಕ ಜನರನ್ನು ತಲುಪುವುದು ನಮ್ಮ ಉದ್ದೇಶ ಮುಖ್ಯ” ಎಂದಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಜೊತೆಗೆ ಕಳೆದ 23 ವರ್ಷಗಳಿಂದ ತೊಡಗಿಕೊಂಡಿದ್ದೇನೆ. ಬರಗಾಲ, ನೆರೆ, ಸುನಾಮಿ ಹಾಗೂ ಭೂಕಂಪದಂತಹ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಜನರಿಗೆ ಸಹಾಯ ಮಾಡಿದ್ದೇವೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಕೆಲಸ ಮಾಡಿದ್ದೇವೆ. ಶಾಲೆ, ಆಸ್ಪತ್ರೆ, ಗ್ರಂಥಾಲಯಗಳ ಜತೆಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯವನ್ನು ಒದಗಿಸಿದ್ದೇವೆ.

ಹೈದರಾಬಾದ್ ಬಳಿ ಭಾರತದಲ್ಲೇ ಅತಿದೊಡ್ಡದಾದ ಅಡುಗೆ ಕೋಣೆಯನ್ನು ನಿರ್ಮಿಸಿದ್ದು ಅಲ್ಲಿ 1 ಲಕ್ಷ ಮಕ್ಕಳಿಗೆ ಊಟ ತಯಾರಾಗುತ್ತಿದೆ. ಅಕ್ಷಯಪಾತ್ರೆ ಊಟವನ್ನು ತಯಾರಿಸಲು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇವೆ” ಎಂದು ತಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ನೆನಪಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ಧರ್ಮ ಹಾಗೂ ಹಿಂದೂ ಪೂಜಾ ವಿಧಾನದ ಪ್ರಕಾರ ಬಾಳೆ ಎಲೆಗೆ ಮಹತ್ವದ ಸ್ಥಾನವಿದೆ. ಬಾಳೆ ಎಲೆ ಇಲ್ಲದೆ ಸತ್ಯನಾರಾಯಣನ ಪೂಜೆ ನಡೆಯೋದಿಲ್ಲ. ಹಾಗೂ ಹಲವು ಪೂಜೆ ವಿಧಾನಗಳಲ್ಲಿ ಬಾಳೆ ಎಳೆಯನ್ನೇ ಬಳಸುತ್ತಾರೆ. ಬಾಳೆ ಎಲೆಗೆ ಎಷ್ಟು ಧಾರ್ಮಿಕ ಮಹತ್ವವಿದೆಯೋ ಅಷ್ಟೇ ಆಯುರ್ವೇದದಲ್ಲಿಯೂ ಮಹತ್ವ ಪಡೆದಿದೆ. ಸರ್ವ ರೋಗಗಳನ್ನ ಗುಣಪಡಿಸುವ ಶಕ್ತಿ ಬಾಳೆ ಎಲೆಗಿದೆ.
ಇದು ಮಹಾದೇವ ಶಿವನ ಪಂಚಾಕ್ಷರಿ ಮಂತ್ರ, ಜಪಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಸರಿಯಾಗಿ ಮೇವು ಸೇವಿಸದೆ ಸಗಣಿ ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಆರು ವರ್ಷದ ಹಸುವಿನ ಹೊಟ್ಟೆಯಲ್ಲಿ ಆಶ್ಚರ್ಯಕರ ವಸ್ತುಗಳು ಪತ್ತೆಯಾಗಿವೆ.ಪಶುವೈದ್ಯರ ತಂಡವೊಂದು ಹಸುವಿನ ಹೊಟ್ಟೆಯಲ್ಲಿದ್ದ ಬರೋಬ್ಬರಿ 52 ಕೆ.ಜಿ ಪ್ಲಾಸ್ಟಿಕನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ಪಶುವೈದ್ಯ ಹಾಗೂ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸರ್ಜನ್ ಗಳು ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮೂಕ ಪ್ರಾಣಿಯ ಜೀವ ಉಳಿಸಿದ್ದಾರೆ. ಆರು ವರ್ಷದ ಹಸುವಿನ ಹೊಟ್ಟೆಯಿಂದ ಆಹಾರವನ್ನು ಪ್ಯಾಕ್ ಮಾಡಲು ಬಳಸುವ 52 ಕೆಜಿ…
ಮದ್ದೂರು ಕುಮಾರ ಪರ್ವ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಾಗತಿಸಿದರು. ಸುಮಾರು 5000ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಅದ್ಧೂರಿ ಬೈಕ್ ರ್ಯಾಲಿ ಮೂಲಕ ಅಭೂತಪೂರ್ವಕ ಸ್ವಾಗತ ಮಾಡಿದ್ದಲ್ಲದೆ, ಸುಮಾರು 500 ಕೆಜಿ ಸೇಬಿನ ಹಾರವನ್ನು ಕ್ರೈನ್ ಮೂಲಕ ಹಾಕುವ ಮುಖಾಂತರ ಕುಮಾರಸ್ವಾಮಿಯವರಿಗೆ ತಮ್ಮ ಅಭಿಮಾನ ಮೆರೆದರು. ಅಬ್ಬಾ..ಇಲ್ಲಿದೆ ನೋಡಿ ಬೃಹತ್ ಸೇಬಿನ ಹಾರ ಹಾಕಿದ ವಿಡಿಯೋ…
ನೀವು ಒಂದು ವೇಳೆ ಟೆನ್ಶನ್ನಿಂದ ತುಂಬಿದ ಜೀವನ ಸಾಗಿಸುತ್ತಿದ್ದೀರಿ ಎಂದಾದರೆ ನಿಮ್ಮ ಎಲ್ಲಾ ಆಲೋಚನೆಗಳ ಬಗ್ಗೆ ನೀವು ಮತ್ತೆ ವಿಚಾರಣೆ ನಡೆಸಬೇಕು. ಯಾಕೆಂದರೆ ನೀವು ವಿಪರೀತ ಟೆನ್ಶನ್ನಲ್ಲಿ ಇದ್ದರೆ , ಅದರಿಂದ ನೀವು ಹೊರ ಬರಲು ಇಷ್ಟಪಡದೆ ಇದ್ದರೆ ಮುಂದೆ ಗಂಭೀರ ಸಮಸ್ಯೆಯನ್ನುಂಟು ಮಾಡುತ್ತದೆ.
ನಮಗೆ ಬೇಕಾಗಿರೋದು ಕನ್ನಡ, ಎಲ್ಲವನ್ನೂ ಕನ್ನಡದಲ್ಲೇ ಪಡೆಯುವುದು, ಆದರೆ ಕೆಲವರ ಪ್ರಕಾರ ಕನ್ನಡಕ್ಕೆ ಅನ್ಯ ಭಾಷೆಯಿಂದ ಬರುವುದು ತಪ್ಪಂತೆ, ಡಬ್ಬಿಂಗ್ ಭೂತವಂತೆ.