ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್‌ನಲ್ಲಿ ವೇದಿಕೆ ಸಿದ್ಧವಾಗ್ತಿದೆ.ಜಾಗತಿಕ ಮಟ್ಟದಲ್ಲಿಕನ್ನಡ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿರುವ ಅತ್ಯಂತ ಪ್ರಮುಖರಲ್ಲಿಒಬ್ಬರಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನಾಧರಿಸಿದ ಚಿತ್ರ ನಿರ್ಮಾಣ ಮಾಡಲು ಬಾಲಿವುಡ್ ನಿರ್ಮಾಪಕರು ಮುಂದಾಗಿದ್ದಾರೆ.

ಬಾಲಿವುಡ್‌ನ ‘ಪಂಗಾ’ ಸಿನಿಮಾ ನಿರ್ದೇಶಕಿ ಅಶ್ವಿನಿ ಅಯ್ಯರ್ ಇಂತಾದೊಂದು ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದು, ಈಗಾಗಲೇ ಕಥೆ ಸಿದ್ಧವಾಗ್ತಿದೆ. ಸುಧಾ ಮೂರ್ತಿ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಅನ್ನಲಾಗ್ತಿದೆ. ಈ ಯಶಸ್ವಿ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಬದುಕಿನ ತಿರುವುಗಳನ್ನು ತೆರೆಯ ಮೇಲೆ ತರೋ ಪ್ರಯತ್ನ ನಡೀತಿದೆ.

ನಾರಾಯಣ ಮೂರ್ತಿ ದಂಪತಿಯ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದು, ಭಾರತದ ಮೊದಲ ಐಟಿ ದಂಪತಿಗಳ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಸ್ಕಿ್ರಪ್ಟ್ ವರ್ಕ್ಗಾಗಿ ರಿಸರ್ಚ್ ಕೆಲಸವನ್ನು ಪ್ರಾರಂಭಿಸಲಾಗಿದೆ. ಸ್ಟೋರಿ ಐಡಿಯಾ ಮತ್ತು ಕಾನ್ಸೆಪ್ಟ್ ಇನ್ನೊಬ್ಬ ನಿರ್ಮಾಪಕ ಸಂಜಯ್ ತ್ರಿಪತಿ ಅವರದಾಗಿದೆ. ದೇಶಕ್ಕೆ ದಂಪತಿಗಳು ನೀಡಿದ ಕೊಡುಗೆಯನ್ನು ಚಿತ್ರದಲ್ಲಿನೋಡಬಹುದಾಗಿದೆಯಂತೆ.

ಈಗ ಪಂಗ ಚಿತ್ರದಲ್ಲಿಬಿಝಿಯಾಗಿರುವ ಅಶ್ವಿನಿ ಚಿತ್ರ ರಿಲೀಸ್ ಆದ ನಂತರ ನಾರಾಯಣ ಮೂರ್ತಿ ಕುರಿತ ಸಿನಿಮಾ ಪ್ರಾರಂಭಿಸಲಿದ್ದಾರೆ. ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ. ಈ ಚಿತ್ರ ಹಿಂದಿಯೂ ಸೇರಿದಂತೆ ಬಹುಭಾಷೆಯಲ್ಲಿನಿರ್ಮಾಣವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿಕನ್ ಕಬಾಬ್ ಕಂಡ ತಕ್ಷಣ ಅಹಾ ಎಂದು ತಿನ್ನುವವರು ಈ ಸುದ್ದಿಯನ್ನು ನೋಡಲೇ ಬೇಕು. ಏಕೆಂದರೆ ರಸ್ತೆ ಬದಿಯಲ್ಲಿ ತಿನ್ನುವ ಕಲರ್ ಫುಲ್ಕಬಾಬ್ ಅನ್ನು ಕೊಳಕು ಜಾಗದಲ್ಲಿ ತಯಾರಿಸುತ್ತಾರೆ. ಹಣ ಕೊಟ್ಟು ಸಿಕ್ಕಸಿಕ್ಕ ಕಡೆ ಕಬಾಬ್ ತಿಂದರೆ ಫ್ರೀಯಾಗಿ ಕಾಯಿಲೆಗಳು ಕೂಡ ಬರುತ್ತದೆ. ಏಕೆಂದರೆ ಕಬಾಬ್ ತಯಾರಿಸುವ ವ್ಯಕ್ತಿ ಸಿಗರೇಟ್ ಸೇದಿಕೊಂಡು ಅದರ ಹೊಗೆಯನ್ನು ಕಬಾಬ್ ಮಸಾಲೆ ಪಕ್ಕ ಉಫ್ ಉಫ್ ಎಂದು ಉದುತ್ತಾನೆ.ಅಲ್ಲದೆ ಸಿಗರೇಟಿನ ವೇಸ್ಟ್ಅನ್ನು ಕಬಾಬ್ ಮಸಾಲೆಯ ಪಕ್ಕವೇ ಹಾಕುತ್ತಾನೆ. ಸಿಗರೇಟು ಸೇದಿದ ಹಾಗೂ…
ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್, ಚೀನಾ ತೈವಾನ್, ಕ್ವೀನ್ಸ್‌ಲ್ಯಾಂಡ್ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….
ವಾರ್ಟ್ ಅಥವಾ ನರುಲಿಗಳು ವೈರಲ್ ಸೋಂಕುಗಳಿಂದ ಉಂಟಾಗುತ್ತವೆ. ಈ ಗಂಟುಗಳು ದೇಹದ ಯಾವುದೇ ಭಾಗದ ಚರ್ಮದ ಹೊರಪದರದ ಮೇಲೆ ಕಾಣಿಸಿಕೊಳ್ಳುತ್ತವೆ.
ಇತ್ತೀಚೆಗಷ್ಟೇ S.S.L.C.ಪಲಿತಾಂಶ ಪ್ರಕಟವಗಿದ್ಧು ಪೇಲ್ ಆದ ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಜೂನ್ 21 ರಿಂದ 28 ರವರೆಗೆ ನಡೆಯಲಿದೆ . ಮೇ 10 ಪೂರಕ ಪರೀಕ್ಷೆ ಕಟ್ಟಲು ಕೊನೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಮೇ 15 ರ ವರೆಗೆ ಪೂರಕ ಪರೀಕ್ಷೆ ಕಟ್ಟಬಹುದಾಗಿದೆ.ಪೇಲ್ ಆಗಿರುವಂಥಹ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರು ಕೂಡ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಮೇ 13 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಛಾಯಾಪ್ರತಿಗೆ ಒಂದು…
ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಿಚ್ಚ ಸುದೀಪ್ ಅವರು ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ತೋರಿದ್ದಾರೆ. ಇಂದು ಕೆಂಗೇರಿಯ ಸರ್ಕಾರಿ ಶಾಲಾ ಮಕ್ಕಳಿಗೆ ಕಿಚ್ಚಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮಕ್ಕಳಿಗೆ ಶೂ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶೂ ವಿತರಣೆ ಕಾರ್ಯಕ್ರಮಕ್ಕೆ ಸುದೀಪ್ ಅಭಿಮಾನಿಗಳು ಸುದೀಪ್ ಅವರನ್ನು ಆಹ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ಮತ್ತು ಸಾಕ್ಸ್…