ಮನರಂಜನೆ

ಬಿಗ್ ಬಾಸ್ ಸೀಸನ್ 7 ರಲ್ಲಿ ಕಿಚ್ಚ ಸುದೀಪ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ!

209

ಬಿಗ್ ಬಾಸ್ ಕನ್ನಡ ಸೀಸನ್ 7 ಮುಗಿದಿದೆ ಮತ್ತು ಶೈನ್ ಶೆಟ್ಟಿ ಅವರು ಈ ಭಾರಿಯ ಬಿಗ್ ಬಾಸ್ ಕನ್ನಡ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ, ನಿಮಗೆ ಈ ಭಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಸ್ಪರ್ಧಿಗಳು ಎಷ್ಟು ಸಂಭಾವನೆಯನ್ನ ಪಡೆದಿದ್ದರು ಅನ್ನುವುದು ಗೊತ್ತೇ ಇದೆ, ಆದರೆ ಬಿಗ್ ಬಾಸ್ ನಿರೂಪಣೆಯನ್ನ ಮಾಡಿಕೊಡುವ ಕಿಚ್ಚ ಸುದೀಪ್ ಅವರು ಎಷ್ಟು ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಸ್ನೇಹಿತರೆ ಬಿಗ್ ಬಾಸ್ ಇತಿಹಾಸದಲ್ಲಿ ಅತೀ ಹೆಚ್ಚು ಸಂಭಾವನೆಯನ್ನ ಪಡೆಯುವ ನಟ ಅಂದರೆ ಅದೂ ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಬಿಗ್ ಬಾಸ್ ಸೀಸನ್ 13 ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್ ಅವರು ಒಂದು ವಾರಕ್ಕೆ 31 ಕೋಟಿ ಸಂಭಾವನೆಯನ್ನ ಪಡೆಯುತ್ತಾರಂತೆ, ಇನ್ನು ಸಲ್ಮಾನ್ ಖಾನ್ ಅವರು ಒಂದು ಸೀಸನ್ ನಲ್ಲಿ 13 ವಾರಗಳ ಕಾಲ ನಿರೂಪಣೆ ಮಾಡುತ್ತಿದ್ದು ಒಟ್ಟಾರೆ ಒಂದು ಸೀಸನ್ ಗೆ 400 ಕೋಟಿ ಸಂಭಾವನೆಯನ್ನ ಪಡೆಯುತ್ತಾರಂತೆ.

ಇನ್ನು ಕನ್ನಡದ ಬಿಗ್ ಬಾಸ್ ನಲ್ಲಿ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಅವರು ದುಭಾರಿ ಮೊತ್ತ ಸಂಭಾವನೆಯನ್ನ ಪಡೆಯುತ್ತಿದ್ದಾರೆ ಅನ್ನುವ ಮಾಹಿತಿ ಇದೆ, ಆದರೆ ಇದರ ಕುರಿತು ಎಲ್ಲಯೂ ಕೂಡ ಅಧಿಕೃತವಾದ ಮಾಹಿತಿ ಇಲ್ಲ ಮತ್ತು ಮಾಹಿತಿ ಸಿಗುವುದು ಇಲ್ಲ. ಇನ್ನು ಸಿಕ್ಕಿರುವ ಮಾಹಿತಿಗಳ ಪ್ರಕಾರ ಕಿಚ್ಚ ಸುದೀಪ್ ಅವರು ಐದು ಆವೃತ್ತಿಗಳಿಗೆ ಒಪ್ಪಂದವನ್ನ ಮಾಡಿಕೊಂಡು ನಿರೂಪಣೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಹಾಗಾದರೆ ಒಂದು ಆವೃತ್ತಿಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಮತ್ತು ಏಳನೇ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ಅವರು ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ನಡೆವೆ ಐದು ವರ್ಷಗಳ ಕಾಲ ಒಪ್ಪಂದ ನಡೆದಿದೆ, ಇನ್ನು ಐದು ಆವೃತ್ತಿಗಳಿಗಾಗಿ ಕಿಚ್ಚ ಸುದೀಪ್ ಅವರು ದೊಡ್ಡ ಮೊತ್ತದ ಸಂಭಾವನೆಯನ್ನ ಪಡೆದುಕೊಂಡಿದ್ದಾರಂತೆ, ಇನ್ನು ಮೂಲಗಳ ಪ್ರಕಾರ ಐದು ಆವೃತ್ತಿಗಾಗಿ ಕಿಚ್ಚ ಸುದೀಪ್ ಅವರು 20 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಾರದ ಎರಡು ದಿನ ಸುದೀಪ್ ಅವರು ಕಾಣಿಸಿಕೊಳ್ಳುತ್ತಾರೆ, ಶನಿವಾರ ವಾರದ ಕಥೆ ಕಿಚ್ಚನ ಜೊತೆ ಮತ್ತು ಭಾನುವಾರ ಸಂಡೇ ಸ್ಪೆಷಲ್ ನಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ಐದು ಆವೃತ್ತಿಗೆ 20 ಕೋಟಿ ಅಂದರೆ ಒಂದು ಆವೃತ್ತಿಗೆ 4 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆಯುತ್ತಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಕಳೆದ ಆರು ಆವೃತ್ತಿಗಳಲ್ಲಿ ನಿರೂಪಣೆಯನ್ನ ಮಾಡಿರುವ ಕಿಚ್ಚ ಸುದೀಪ್ ಅವರು ಈಗ ಏಳನೇ ಆವೃತ್ತಿಯನ್ನ ಮುಗಿಸಿದ್ದಾರೆ.

ಇನ್ನು 2015 ರಿಂದ 2020 ರ ವರೆಗೆ ಅಗ್ರಿಮೆಂಟ್ ಮಾಡಲಾಗಿದ್ದು 2020 ರ ತನಕ ಕಿಚ್ಚ ಸುದೀಪ್ ಅವರು ಕಾಲ್ ಶೀಟ್ ಕೊಟ್ಟಿದ್ದಾರಂತೆ. ಇನ್ನು 2020 ರ ಬಳಿಕ ಕಿಚ್ಚ ಸುದೀಪ್ ಅವರ ಸಂಭಾವನೆ ಇನ್ನಷ್ಟು ಹೆಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಕಿಚ್ಚ ಸುದೀಪ್ ಅವರನ್ನ ಬಿಟ್ಟರೆ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡಲು ಕನ್ನಡದ ಯಾವ ನಟ ಕೂಡ ಸೂಟ್ ಆಗುತ್ತಿಲ್ಲ, ಇನ್ನು ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ನಡುವೆ ಒಲವು ಜಾಸ್ತಿ ಇದೆ. ಇನ್ನು ಎಲ್ಲಾ ಭಾಷೆಯ ಬಿಗ್ ಬಾಸ್ ನಿರೂಪಕರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಅವರು ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ, ಸ್ನೇಹಿತರೆ ನಿಮ್ಮ ಪ್ರಕಾರ ಮುಂದಿನ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಯಾರು ಯಾರು ಬರಬೇಕು ಅನ್ನುವುದರ ಬಗ್ಗೆ ನಿಮ್ಮ ಅಭಿಪಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಿಗ್ ಬಾಸ್ ಅಭಿಮಾನಿಗೆ ತಲುಪಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ