ಸ್ಪೂರ್ತಿ

ಜೀವನ ನಡೆಸಲು ವಿದ್ಯೆ ಒಂದೇ ಮಾತ್ರ ಮುಖ್ಯ ಎನ್ನುವವರು ಯುವಕನ ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ…

387

ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ.

ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸರಿ ಎಂಬುದು ಕೆಲವರ ವಾದವಾಗಿತ್ತು ಆದರೆ ಒಬ್ಬ ಸಾಮಾನ್ಯ ಹುಡುಗ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ತನ್ನ ಜೀವನವನ್ನ ರೂಪಿಸಿಕೊಂಡ.

ಆ ವ್ಯಕ್ತಿಯೇ ರಘುವೀರ್ ಚೌದ್ರಿ ಇವನು ಹುಟ್ಟಿ ಬೆಳೆದದ್ದೆಲ್ಲ ರಾಜಸ್ಥಾನದ ಜೈಪುರ್ ಅಲ್ಲಿ, ಮನೆಯಲ್ಲಿ ಬಹಳ ಬಡತನವಿದ್ದ ಕಾರಣ ತನ್ನ ವಿದ್ಯಾಭ್ಯಾಸವನ್ನ ಅರ್ಧದಲ್ಲೇ ನಿಲ್ಲಿಸಬೇಕಾಯಿತು. ದುಡ್ಡಿನ ಅವಶ್ಯಕತೆ ಬಹಳಷ್ಟಿದಿದ್ದರಿಂದ ಅಮೆಜಾನ್ ಕಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ಆದ್ರೆ ಅವನ್ ಬಳಿ ಬೈಕ್ ಇಲ್ಲದ ಕಾರಣ ಸೈಕಲ್ ಬಳಸಿ ಸಾಮಾನುಗಳನ್ನ ಗ್ರಾಹಕರಿಗೆ ಸಾಗಿಸುತ್ತಿದ್ದ.

ಸೈಕಲ್ ತುಳಿದು ತುಳಿದು ಸುಸ್ತಾಗಿ ಟೀ ಕುಡಿಯಲು ಹೋಗುತಿದ್ದ ಆದರೆ ಯಾವ ಅಂಗಡಿಯಲ್ಲೂ ಚನ್ನಾಗಿ ರುಚಿಕರವಾದ ಟೀ ಸಿಗುತ್ತಿರಲಿಲ್ಲ, ಆಗ ನನ್ನ ಹಾಗೆಯೇ ದಿನವಿಡೀ ಕಷ್ಟಪಟ್ಟು ದುಡಿದು ಒಂದು ಲೋಟ ರುಚಿಯಾದ ಟೀಗೋಸ್ಕರ ಹಪಹಪಿಸುವ ಎಷ್ಟೋ ಜನ ಇರುತ್ತಾರೆ ಎಂದು ಯೋಚಿಸಿದ.

ಟೀ ಮಾಡುವುದನ್ನೇ ಒಂದು ಬ್ಯುಸಿನೆಸ್ ಮಾಡಬೇಕು ಅಂತ ರಘುವೀರ್ ಗೆ ಅನಿಸಿತು. ತನ್ನ 3 ಜನ ಸ್ನೇಹಿತರ ಜೊತೆ ಸೇರಿ ಟೀ ಬ್ಯುಸಿನೆಸ್ ಪ್ರಾರಂಭಿಸಿದ ರಘುವೀರ್. ತನಗೆ ಗೊತ್ತಿರೋ ಜನರ ಮೂಲಕ 100 ಟೀ ಅಂಗಡಿ ಮಾಲೀಕರನ್ನ ಕಲೆಹಾಕಿಕೊಂಡ.

ಅವನ ಈ ಬ್ಯುಸಿನೆಸ್ ಎಷ್ಟು ಲಾಭ ತಂದಿದೆ ಎಂದರೆ ಈಗ ಅವನು ತಾನು ಸಂಪಾದಿಸಿದ ದುಡ್ಡಿನಲ್ಲಿಯೇ ಒಂದು ಬೈಕ್ ಕೊಂಡುಕೊಂಡಿದ್ದಾನೆ. ಅವನ್ ಬ್ಯುಸಿನೆಸ್ ಈಗ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ ಅವನ ಕಂಪನಿ ದಿನಕ್ಕೆ 500 ರಿಂದ 700 ಆರ್ಡರ್ಗಳನ್ನ ಪೂರೈಸುತ್ತದೆ. ಇವನು ಈಗ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಪಾದಿಸುತ್ತಾನೆ, ಹಾಗೂ ಈ ಬ್ಯುಸಿನೆಸ್ಗಾಗಿ ೪ ಬೈಕ್ಗಳನ್ನ ಸಹ ತೆಗೆದುಕೊಂಡಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನೆಲ್ಲಿಕಾಯಿಯಲ್ಲಿದೆ ಇಷ್ಟೆಲ್ಲಾ ಪರಿಹಾರ ಗೊತ್ತಾದರೆ ಶಾಕ್ ಆಗ್ತೀರಾ,..!!

    ಸಹಜವಾಗಿ ಎಲ್ಲರಲ್ಲೂ  ಕಾಣಿಸಿಕೊಳ್ಳುವ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿಕಾಯಿ ರಾಮಬಾಣ ಎಂದರೆ ಹೇಳಿದರೆ  ತಪ್ಪಾಗಲಾರದು. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ನೈಸರ್ಗಿಕ ಸೌಂದರ್ಯ ವರ್ಧಕ ಎನ್ನಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ  ನೆಲ್ಲಿಕಾಯಿ ಮನೆಮದ್ದು ಎಂದರೆ ತಪ್ಪಾಗಲಾರದು . ಹೀಗೆ ಹಲವಾರು ಗುಣಗಳಿರುವ  ಬೆಟ್ಟದ  ನೆಲ್ಲಿಕಾಯಿಂದ ಸಿಗುವ ಇನ್ನಷ್ಟು  ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತ್ವಚೆಯ ಸೌಂದರ್ಯವನ್ನು ಸಹ  ಹೆಚ್ಚಿಸುತ್ತದೆ: ವಾರದಲ್ಲಿ ಮೂರರಿಂದ ನಾಲ್ಕು ಬಾರಿ ನೆಲ್ಲಿಕಾಯಿಯ ನೀರಿನಿಂದ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದರಿಂದ ಚರ್ಮವು…

  • ಸಿನಿಮಾ

    ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ದೀಪಿಕಾ ಜೊತೆ ಇಲ್ಲಿವರೆಗೂ ಸಿನಿಮಾ ಮಾಡಿಲ್ಲ ಯಾಕೆ.?ಸಲ್ಮಾನ್ ಕೊಟ್ಟ ಉತ್ತರ ಏನ್ ಗೊತ್ತಾ?

    ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಭಾರತದ ಅನೇಕ ನಾಯಕಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಅವರೊಂದಿಗೆ ಮೂವಿ ಮಾಡಿಲ್ಲ. ಯಾಕೆ? ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು, ನನಗೂ ನಿಜಕ್ಕೂ ಅಚ್ಚರಿ ಆಗುತ್ತಿದೆ.. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ…

  • ಸಿನಿಮಾ

    ದರ್ಶನ್ ಅಭಿಮಾನಿಗಳಿಗೆ ಸಖತ್ ಸಿಹಿ ಸುದ್ದಿ!ಫಿಕ್ಸ್ ಆಯ್ತು ಕುರುಕ್ಷೇತ್ರ ಚಿತ್ರದ ರಿಲೀಜ್ ಡೇಟ್…ಯಾವಾಗ ಗೊತ್ತಾ?

    ಚಂದನವನದಲ್ಲಿ ಸ್ಟಾರ್ ನಟರ ಹೈ ಬಜೆಟ್ ಚಿತ್ರಗಳು ಒಂದರ ಮುಂದೆ ಒಂದು ಬಿಡುಗಡೆಯಾಗುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಇದೇ ತಿಂಗಳ ಫೆಬ್ರುವರಿ ೧೧ರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟಸಾರ್ವಭೌಮ ತೆರೆಗೆ ಅಪ್ಪಳಿಸಲಿದ್ದು ಚಿತ್ರ ರಸಿಕರು ಈ ಚಿತ್ರವನ್ನು ಕಣ್ತುಂಬಿ ಕೊಳ್ಳಲು ತುದಿ ಗಾಲಲ್ಲಿ ನಿಂತಿದ್ದಾರೆ….

  • ಸುದ್ದಿ

    ತನ್ನ ಪ್ರೊಫೆಸರ್ ಮದುವೆಗೆ ಹೋದ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಟೇಜ್ ಮೇಲೆ ಮಾಡಿದ್ದೇನು. ಶಾಕ್ ಆದ ಹೆಣ್ಣು.

    ಸಮಯ ಮತ್ತು ಸಂದರ್ಭದ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿಮಾಡಿ ಕೊಡುತ್ತದೆ. ಇಂತಹದ್ದೇ ಒಂದು ಕೆಲಸವನ್ನ ಇಂಜಿನಿಯರಿಂಗ್ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ಮಾಡಿದ್ದಾನೆ ಮತ್ತು ಈತ ಮಾಡಿದ ಕೆಲಸಕ್ಕೆ ಒಂದು ಕ್ಷಣ ಎಲ್ಲರೂ ಬೆರಗಾಗಿದ್ದಾರೆ. ಇನ್ನು ಇದೂ ದೊಡ್ಡ ಸುದ್ದಿ ಅಲ್ಲದೆ ಇರಬಹುದು ಆದರೆ ಇದು ವಿಭಿನ್ನ ಅನ್ನುವ ಕಾರಣಕ್ಕೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ…

  • ಸುದ್ದಿ

    ‘ನಿಯಮ ಉಲ್ಲಂಗಿಸಲಿಲ್ಲ’ ‘ಯಾವುದೆ ವಿದೇಶೀಯ ಫಂಡ್ಸ್ ಪಡೆದಿಲ್ಲ’ ; ಇನ್ಫೋಸಿಸ್

    ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…

  • ಸುದ್ದಿ

    ರೆಫ್ರಿಜರೇಟರ್ ಸ್ಫೋಟಗೊಂಡು ಮೂವರ ದುರ್ಮರಣ…..!

    ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ. ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಗುರುವಾರ ಬೆಳಗ್ಗೆ ಪಕ್ಕದ…