ಸುದ್ದಿ

ಗದ್ದೆಯಲ್ಲಿ ಮಕ್ಕಳ ಹೆಜ್ಜೆ , “ನಮ್ಮ ನಡಿಗೆ ಕೃಷಿಯ ಕಡೆಗೆ”…!

53

ಶಂಕರಪುರ ಸೈಂಟ್ ಜೋನ್ಸ್ ಫ್ರೌಢ ಶಾಲಾ ಭಾರತ ಸೇವಾದಳ, ಸ್ಕೌಟ್, ಗೈಡ್ಸ್, ನೇಸರ ಹಸಿರುಪಡೆಯ 134 ವಿದ್ಯಾರ್ಥಿಗಳು ಶಂಕರಪುರ ಸಮೀಪದ ಕುರ್ಕಾಲು ಗರಡಿಮನೆ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರ ಗದ್ದೆಗೆ ಭೇಟಿ ನೀಡಿದರು.

ಟಿಲ್ಲರ್‍ನಲ್ಲಿ ಉಳುಮೆ ಮಾಡಿದ ಗದ್ದೆಗೆ ಇಳಿದರು. ಭಾರತ ಸೇವಾದಳದ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ “ಸಾರೇ ಜಾಹಾಂಸೆ ಅಚ್ಚಾ,,,, ಹಿಂದೂಸ್ತಾನ್ ಹಮಾರಾ..! ಗೀತೆಯನ್ನು ಸಾಮೂಹಿವಾಗಿ ಅಭಿನಯದ ಮೂಲಕ ಹಾಡಿದರು. ಗದ್ದೆಯಲ್ಲಿ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತಾ, ಸಂಭ್ರಮಿಸಿದರು. ಕೆಸರುಗದ್ದೆಯಲ್ಲಿ ಇಳಿದ ಪ್ರಥಮ ಅನುಭವದ ವಿದ್ಯಾರ್ಥಿಗಳು ಪ್ರಯಾಸ ಪಟ್ಟು ನಡೆದು ಹೊಸ ಅನುಭವ ಪಡೆದರು.

ಶಂಕರಪುರ ಚರ್ಚ್‍ನ ಸಹಾಯಕ ಧರ್ಮಗುರು ರೋಶನ್ ಡಿ ಕುನ್ಹಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತ ಸೇವಾದಳದ ಜಿಲ್ಲಾ ಸಂಘಟಕ ಪಕ್ಕೀರ ಗೌಡ, ಸೇವಾದಳದ ತಾಲೂಕು ಅಧಿನಾಯಕ ಎಸ್.ಎಸ್.ಪ್ರಸಾದ್, ತಾಲೂಕು ಸಮಿತಿ ಸದಸ್ಯ ರಾಯನ್ ಫೆರ್ನಾಂಡಿಸ್ ಸಾಥ್ ನೀಡಿದರು. ಗದ್ದೆಯ ಮಾಲಿಕ ಪ್ರಗತಿಪರ ಕೃಷಿಕ ವಸಂತ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಶಾಲುಹೊದಿಸಿ, ಹಾರಹಾಕಿ ಸ್ಮರಣಿಕೆಯೊಂದಿಗೆ ಗೌರವಿಸಿದರು. ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಭತ್ತದ ಬೆಳೆಯ ಪ್ರಾತಿಕ್ಷಕೆ ಮಾಹಿತಿಯನ್ನು ವಸಂತ ಪೂಜಾರಿಯವರು ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಅಶ್ವಿನ್ ರೊಡ್ರಿಗಸ್, ಕೃತಜ್ಞತೆ ಸಲ್ಲಿಸಿದರು. ದೈಹಿಕ ಶಿಕ್ಷಣ ಹಾಗೂ ಭಾರತ ಸೇವದಳದ ಶಿಕ್ಷಕ ಡೋಮಿಯನ್ ಆರ್ ನೊರೋನ್ಹಾ, ಸಹ ಶಿಕ್ಷಕರು ಜೊತೆಗಿದ್ದರು. ಉಪಾಹಾರದೊಂದಿಗೆ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ತನ್ನ ಬಾಡಿಗಾರ್ಡ್ ಆಗಿದ್ದವಳನ್ನೇ ಮದ್ವೆ ಆಗಿ ರಾಣಿಯನ್ನಾಗಿ ಮಾಡಿದ ರಾಜ.!?

    ಥೈಲ್ಯಾಂಡ್ ಮಹಾರಾಜ ವಜಿರಲೊಂಗ್ ಕಾರ್ನ್ ತಮ್ಮ ಅಂಗರಕ್ಷಕಿ ಯನ್ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. 66 ವರ್ಷದ ವಜಿರಲೊಂಗ್ ಕಾರ್ನ್ 40 ವರ್ಷದ ಸುಥಿದಾ ತಿಜಯ್‍ರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ರಾಜಭವನ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ಅಲ್ಲದೇ ಮದುವೆ ಸಂಬಂಧದ ವಿಡಿಯೋವನ್ನು ಬಿಡುಗಡೆ ಮಾಡಿದೆ. ಥೈಲ್ಯಾಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ವಜಿರಲೊಂಗ್ ಕಾರ್ನ್ ಅವರ ತಂದೆ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಇವರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಸದ್ಯ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು,…

  • ವಿಚಿತ್ರ ಆದರೂ ಸತ್ಯ

    ಮೊಬೈಲ್‌ನಲ್ಲಿ ಮಾತನಾಡಿದ್ರೆ ಬೀಳುತ್ತೆ ಭಾರಿ ದಂಡ..!ತಿಳಿಯಲು ಈ ಲೇಖನ ಓದಿ ..

    ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ ೨೧ ಸಾವಿರ ರೂ. ದಂಡ ವಿಧಿಸಲಾಗುವುದೆಂದು ಎಚ್ಚರಿಸಿದೆ.

  • ವಿಚಿತ್ರ ಆದರೂ ಸತ್ಯ

    ಈ 2 ವರ್ಷದ ಪುಟ್ಟ ಬಾಲಕಿಗೆ ಹಾವೇ ಫ್ರೆಂಡ್ಸ್..!ತಿಳಿಯಲು ಈ ಲೇಖನ ಓದಿ..

    ಹಾವು ಎಂದರೆ ಎಂಥವರಿಗೂ ಭಯ ಆಗುತ್ತೆ. ಅಂತಹದರಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದರೊಂದಿಗೆ ಸ್ನೇಹ ಬೆಳಸಿಕೊಂಡು ಅವುಗಳೊಂದಿಗೆ ಬೆರೆಯುತ್ತಾಳೆ ಈ ಪುಟ್ಟ ಬಾಲಕಿ.

  • ಆರೋಗ್ಯ

    ಖಾಲಿ ಹೊಟ್ಟೆಯಲ್ಲಿ Tea & Coffee ಕುಡಿಯುತ್ತಿದ್ದರೆ 1 ನಿಮಿಷದಲ್ಲಿ ಈ ಲೇಖನವನ್ನ ತಪ್ಪದೇ ಓದಿ .

    ಪ್ರೀತಿಯ ಸ್ನೇಹಿತರೇ ಮನುಷ್ಯ ಪ್ರತಿಯೊಂದನ್ನು ಮಾಡಲು ಜೀವನದಲ್ಲಿ ಆರೋಗ್ಯಕರವಾಗಿ ಬದುಕಲು ಎಷ್ಟೊಂದು ಆಹಾರವನ್ನು ಪ್ರತಿನಿತ್ಯ ನಾವು ಸೇವಿಸುತ್ತಿರುತ್ತಾರೆ ಇಂತಹ ಆಹಾರದಲ್ಲಿ ದೇಹಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವ ಸಮಯದಲ್ಲಿ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕನಿಷ್ಠ ಮಾಹಿತಿಯೂ ಕೂಡ ನಮಗೆ ಇರುವುದಿಲ್ಲ ಅಂಥದ್ದೇ ಒಂದು ಪಾನೀಯವಾದ ಟೀ ಕಾಫಿ ಇದು ದೇಹಕ್ಕೆ ಎಂತಹ ದುಷ್ಪರಿಣಾಮವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀಡುತ್ತೇನೆಂದರೆ ದೇಹವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ನಾನು…

  • ಸುದ್ದಿ, ಸ್ಪೂರ್ತಿ

    ರತನ್ ಟಾಟಾ ಕಾಲಿಗೆ ಬಿದ್ದು ನಮಸ್ಕರಿಸಿದ ಇನ್ಫೋಸಿಸ್ ನಾರಾಯಣ ಮೂರ್ತಿ.

    72 ವರ್ಷದ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರಾಯಣ ಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ…

  • Health, ಉಪಯುಕ್ತ ಮಾಹಿತಿ

    ಊಟದ ನಂತರ ಒಂದು ತುಂಡು ಬೆಲ್ಲ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಗೊತ್ತ? ತಿಳಿದರೆ ತಪ್ಪದೆ ಬೆಲ್ಲ ಉಪಯೋಗಿಸುತ್ತೀರಾ..!

    ಸಕ್ಕರೆಯ ಬದಲು ಸಿಹಿಯಾದ ಬೆಲ್ಲವನ್ನು ಬಳಸುವುದರಿಂದ ಅದೆಷ್ಟು ಆರೋಗ್ಯಕರ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು ತಿಳಿದುಕೊಳ್ಳೋಣ. ನಮ್ಮ ಪೂರ್ವಿಕರು ಹಿಂದಿನ ಕಾಲದಲ್ಲಿ ಯಾವುದೇ ರೀತಿಯ ಸಕ್ಕರೆಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಇರಲಿಲ್ಲ ಅವರುಗಳು ಕಾಫಿ ಯನ್ನಾಗಲಿ ಯಾವುದೇ ಸಿಹಿ ಪದಾರ್ಥಗಳನ್ನು ತಯಾರಿಸುವುದಕ್ಕೆ ಬೆಲ್ಲವನ್ನು ಬಳಸುತ್ತಿದ್ದರು ಯಾಕೆ ಎಂದರೆ ಬೆಲ್ಲದಲ್ಲಿ ಇರುವಂತಹ ಅಂಶಗಳು ಒಳ್ಳೆಯ ಪೋಷಕಾಂಶ ಕೊಡುವುದರ ಜೊತೆಗೆ ಆರೋಗ್ಯಕರವಾಗಿಯೂ ಕೂಡ ಇರುತ್ತದೆ ಆದ್ದರಿಂದ ಬೆಲ್ಲವನ್ನು ಉಪಯೋಗಿಸುವುದು ತುಂಬಾನೇ ಉತ್ತಮಕಾರಿ . ಊಟವಾದ ಬಳಿಕ ಒಂದು ತುಂಡು ಬೆಲ್ಲವನ್ನು…